EURO 2024: ಕ್ರಿಸ್ಟಿಯಾನೊ ರೊನಾಲ್ಡೊ ರೆಕಾರ್ಡ್​ ಬ್ರೇಕ್ ಮಾಡಿದ ಗುಲರ್

EURO 2024: ಯುರೋ ಕಪ್​ನ ಗ್ರೂಪ್-ಎಫ್​ ಪಂದ್ಯದಲ್ಲಿ ಜಾರ್ಜಿಯಾ ವಿರುದ್ಧ ಟರ್ಕಿ ಭರ್ಜರಿ ಜಯ ಸಾಧಿಸಿದೆ. ಸಿಗ್ನಲ್ ಇಡುನಾ ಪಾರ್ಕ್‌ನಲ್ಲಿ ನಡೆದ ಈ ಪಂದ್ಯದಲ್ಲಿ ಜಾರ್ಜಿಯಾ ಒಂದು ಗೋಲು ದಾಖಲಿಸಿದರೆ, ಟರ್ಕಿ ತಂಡ ಬರೋಬ್ಬರಿ ಮೂರು ಗೋಲು ಬಾರಿಸಿತು. ಈ ಮೂಲಕ 3-1 ಅಂತರದಿಂದ ಗೆಲ್ಲುವಲ್ಲಿ ಟರ್ಕಿ ಪಡೆ ಯಶಸ್ವಿಯಾಗಿದೆ.

EURO 2024: ಕ್ರಿಸ್ಟಿಯಾನೊ ರೊನಾಲ್ಡೊ ರೆಕಾರ್ಡ್​ ಬ್ರೇಕ್ ಮಾಡಿದ ಗುಲರ್
Cristiano Ronaldo-Arda Guler
Follow us
ಝಾಹಿರ್ ಯೂಸುಫ್
|

Updated on:Jun 19, 2024 | 9:07 AM

EURO 2024: ಯುರೋ ಕಪ್​ನಲ್ಲಿ ಟರ್ಕಿಯ ಯುವ ಆಟಗಾರ ಅರ್ದಾ ಗುಲರ್ (Arda Guler) ಹೊಸ ಇತಿಹಾಸ ನಿರ್ಮಿಸಿದ್ದಾರೆ. ಅದು ಸಹ ದಾಖಲೆಗಳ ಸರದಾರ ಪೋರ್ಚುಗಲ್​ನ ಕ್ರಿಸ್ಟಿಯಾನೊ ರೊನಾಲ್ಡೊ (Cristiano Ronaldo) ಅವರ ದಾಖಲೆಯನ್ನು ಮುರಿಯುವ ಮೂಲಕ ಎಂಬುದು ವಿಶೇಷ. ಮಂಗಳವಾರ ಸಿಗ್ನಲ್ ಇಡುನಾ ಪಾರ್ಕ್‌ನಲ್ಲಿ ನಡೆದ ಯುರೋ ಕಪ್​ನ ಗ್ರೂಪ್ ಹಂತದ ಪಂದ್ಯದಲ್ಲಿ ಜಾರ್ಜಿಯಾ ಹಾಗೂ ಟರ್ಕಿ ತಂಡಗಳು ಮುಖಾಮುಖಿಯಾಗಿದ್ದವು. ರಣರೋಚಕ ಹೋರಾಟಕ್ಕೆ ಸಾಕ್ಷಿಯಾಗಿದ್ದ ಈ ಪಂದ್ಯದ 25ನೇ ನಿಮಿಷದಲ್ಲಿ ಮೆರ್ಟ್ ಮುಲ್ಡರ್ ಟರ್ಕಿ ಪರ ಮೊದಲ ಗೋಲು ದಾಖಲಿಸಿದರು.

ಇದರ ಬೆನ್ನಲ್ಲೇ 32ನೇ ನಿಮಿಷದಲ್ಲಿ ಜಾರ್ಜಿಯಾದ ಫಾವರ್ಡ್ ಆಟಗಾರ ಜಾರ್ಜಸ್ ಗೋಲು ಬಾರಿಸಿ ಗೋಲಿನ ಅಂತರವನ್ನು ಸಮಗೊಳಿಸಿದರು. 1-1 ಅಂತರದೊಂದಿಗೆ ಮೊದಲಾರ್ಧ ಮುಕ್ತಾಯಗೊಂಡಿತು.

ದ್ವಿತೀಯಾರ್ಧದಲ್ಲಿ ಚುರುಕಿನ ಪ್ರದರ್ಶನ ನೀಡಿದ ಟರ್ಕಿಯ ಅರ್ದಾ ಗುಲರ್ 65ನೇ ನಿಮಿಷದಲ್ಲಿ ಅತ್ಯಾಕರ್ಷಕ ಗೋಲು ಬಾರಿಸಿ ಅಂತರವನ್ನು 2-1 ಕ್ಕೆ ಏರಿಸಿದರು. ಈ ಗೋಲಿನೊಂದಿಗೆ ಅರ್ದಾ ವಿಶೇಷ ದಾಖಲೆಯನ್ನು ಸಹ ಬರೆದರು.

ರೊನಾಲ್ಡೊ ರೆಕಾರ್ಡ್ ಬ್ರೇಕ್:

ಜಾರ್ಜಿಯಾ ವಿರುದ್ಧ ಗೋಲುಗಳಿಸುವುದರೊಂದಿಗೆ ಅರ್ದಾ ಗುಲರ್ ಯುರೋಪಿಯನ್ ಚಾಂಪಿಯನ್‌ಶಿಪ್‌ನಲ್ಲಿ ಚೊಚ್ಚಲ ಗೋಲು ಬಾರಿಸಿದ ಅತ್ಯಂತ ಕಿರಿಯ ಆಟಗಾರ ಎನಿಸಿಕೊಂಡಿದ್ದಾರೆ. ಇದಕ್ಕೂ ಮುನ್ನ ಈ ದಾಖಲೆ ಕ್ರಿಸ್ಟಿಯಾನೊ ರೊನಾಲ್ಡೊ ಹೆಸರಿನಲ್ಲಿತ್ತು.

2004 ರಲ್ಲಿ 19 ವರ್ಷ, 128 ದಿನಗಳ ವಯಸ್ಸಿನಲ್ಲಿ ರೊನಾಲ್ಡೊ ಯುರೋ ಕಪ್​ನಲ್ಲಿ ಗೋಲು ಬಾರಿಸಿ ಈ ದಾಖಲೆ ನಿರ್ಮಿಸಿದ್ದರು. ಇದೀಗ ಟರ್ಕಿಯ ಫುಟ್​ಬಾಲ್ ಚತುರ ಅರ್ದಾ ಗುಲರ್ 19 ವರ್ಷ, 114 ದಿನಗಳಲ್ಲಿ ಈ ಸಾಧನೆ ಮಾಡುವ ಮೂಲಕ ರೊನಾಲ್ಡೊ ಹೆಸರಿನಲ್ಲಿದ್ದ ವಿಶೇಷ ದಾಖಲೆಯನ್ನು ಮುರಿದಿದ್ದಾರೆ.

ಇತಿಹಾಸ ನಿರ್ಮಿಸಿದ ಕ್ರಿಸ್ಟಿಯಾನೊ:

ಯುರೋ ಕಪ್ 2024 ರಲ್ಲಿ ಕಣಕ್ಕಿಳಿಯುವ ಮೂಲಕ ಪೋರ್ಚುಗಲ್ ತಾರೆ ಕ್ರಿಸ್ಟಿಯಾನೊ ರೊನಾಲ್ಡೊ ಹೊಸ ಇತಿಹಾಸ ನಿರ್ಮಿಸಿದ್ದಾರೆ. ಮಂಗಳವಾರ ನಡೆದ ಜೆಕಿಯಾ ವಿರುದ್ಧದ ಪಂದ್ಯದಲ್ಲಿ ಕಣಕ್ಕಿಳಿಯುವುದರೊಂದಿಗೆ 6 ಯುರೋ ಕಪ್ ಚಾಂಪಿಯನ್​ಶಿಪ್​ನಲ್ಲಿ ಕಣಕ್ಕಿಳಿದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ 39 ವರ್ಷದ ರೊನಾಲ್ಡೊ ಪಾತ್ರರಾಗಿದ್ದಾರೆ.

ಇದನ್ನೂ ಓದಿ: Cristiano Ronaldo: ದಿನಕ್ಕೆ 4.8 ಕೋಟಿ ರೂ..!

2004 ರಲ್ಲಿ ಯುರೋ ಕಪ್ ಅಭಿಯಾನ ಆರಂಭಿಸಿದ್ದ ಕ್ರಿಸ್ಟಿಯಾನೊ ಪ್ರಸ್ತುತ ನಡೆಯುತ್ತಿರುವ ಟೂರ್ನಿಯಲ್ಲೂ ಪೋರ್ಚುಗಲ್​ ಪರ ಕಣಕ್ಕಿಳಿಯುತ್ತಿದ್ದಾರೆ. ಅಲ್ಲದೆ ಕಳೆದ 5 ಆವೃತ್ತಿಗಳಲ್ಲಿ ಗೋಲು ಬಾರಿಸಿರುವ ರೊನಾಲ್ಡೊ 6ನೇ ಆವೃತ್ತಿಯಲ್ಲೂ ಗೋಲು ದಾಖಲಿಸಿದರೆ ಹೊಸ ಇತಿಹಾಸ ನಿರ್ಮಾಣವಾಗಲಿದೆ. ಹೀಗಾಗಿ ನಿವೃತ್ತಿ ಅಂಚಿನಲ್ಲಿರುವ ಕ್ರಿಸ್ಟಿಯಾನೊ ರೊನಾಲ್ಡೊ ಕಡೆಯಿಂದ ಈ ಬಾರಿ ಭರ್ಜರಿ ದಾಖಲೆಗಳನ್ನು ನಿರೀಕ್ಷಿಸಬಹುದು.

Published On - 9:06 am, Wed, 19 June 24

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ