IND vs AFG: ಕೆನ್ಸಿಂಗ್ಟನ್ ಓವಲ್ ಪಿಚ್ ಯಾರಿಗೆ ಸಹಕಾರಿ? ಇಲ್ಲಿದೆ ಪಿಚ್ ರಿಪೋರ್ಟ್

T20 World Cup 2024: ಭಾರತ ಮತ್ತು ಅಫ್ಘಾನಿಸ್ತಾನ್ ನಡುವಣ ಪಂದ್ಯವು ಗುರುವಾರ (ಜೂ.19) ನಡೆಯಲಿದ್ದು, ಈ ಪಂದ್ಯವು ಭಾರತೀಯ ಕಾಲಮಾನ ರಾತ್ರಿ 8 ಗಂಟೆಯಿಂದ ಶುರುವಾಗಲಿದೆ. ಹಾಗೆಯೇ ಈ ಮ್ಯಾಚ್ ಅನ್ನು ಸ್ಟಾರ್ ಸ್ಪೋರ್ಟ್ಸ್​ ಚಾನೆಲ್​ಗಳಲ್ಲಿ ಮತ್ತು ಡಿಸ್ನಿ ಹಾಟ್ ಸ್ಟಾರ್ ಆ್ಯಪ್​ನಲ್ಲಿ ವೀಕ್ಷಿಸಬಹುದು.

IND vs AFG: ಕೆನ್ಸಿಂಗ್ಟನ್ ಓವಲ್ ಪಿಚ್ ಯಾರಿಗೆ ಸಹಕಾರಿ? ಇಲ್ಲಿದೆ ಪಿಚ್ ರಿಪೋರ್ಟ್
IND vs AFG
Follow us
ಝಾಹಿರ್ ಯೂಸುಫ್
|

Updated on: Jun 19, 2024 | 1:08 PM

T20 World Cup 2024: ಟಿ20 ವಿಶ್ವಕಪ್​ನ ಸೂಪರ್-8 ಪಂದ್ಯಗಳು ಇಂದಿನಿಂದ (ಜೂ.19) ಶುರುವಾಗಲಿದೆ. ಮೊದಲ ಪಂದ್ಯದಲ್ಲಿ ಸೌತ್ ಆಫ್ರಿಕಾ ಮತ್ತು ಯುಎಸ್​ಎ ತಂಡಗಳು ಸೆಣಸಿದರೆ, ಎರಡನೇ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ಮತ್ತು ಇಂಗ್ಲೆಂಡ್ ತಂಡಗಳು ಮುಖಾಮುಖಿಯಾಗಲಿದೆ. ಇನ್ನು ಭಾರತ ತಂಡವು ಜೂನ್ 20 ರಂದು ಅಫ್ಘಾನಿಸ್ತಾನ್ ವಿರುದ್ಧ ಕಣಕ್ಕಿಳಿಯುವ ಮೂಲಕ ದ್ವಿತೀಯ ಸುತ್ತಿನ ಅಭಿಯಾನ ಆರಂಭಿಸಲಿದೆ.

ಈ ಪಂದ್ಯವು ಬಾರ್ಬಡೋಸ್​ನ ಕೆನ್ಸಿಂಗ್ಟನ್ ಓವಲ್ ಮೈದಾನದಲ್ಲಿ ನಡೆಯಲಿರುವುದು ವಿಶೇಷ. ಅಂದರೆ ಈ ಬಾರಿಯ ವಿಶ್ವಕಪ್​ನಲ್ಲಿ ಭಾರತ ತಂಡವು ತನ್ನೆಲ್ಲಾ ಪಂದ್ಯಗಳನ್ನು ಅಮೆರಿಕದಲ್ಲಿ ಆಡಿತ್ತು. ಇದೀಗ ದ್ವಿತೀಯ ಸುತ್ತಿನ ಪಂದ್ಯಗಳಿಗಾಗಿ ಟೀಮ್ ಇಂಡಿಯಾ ಕೆರಿಬಿಯನ್ ದ್ವೀಪಕ್ಕೆ ಬಂದಿಳಿದಿದೆ. ಅದರಂತೆ ಕೆನ್ಸಿಂಗ್ಟನ್ ಓವಲ್ ಮೈದಾನದಲ್ಲಿ ತನ್ನ ಮೊದಲ ಪಂದ್ಯವಾಡಲಿದೆ. ಹಾಗಿದ್ರೆ ಈ ಮೈದಾನದ ವಿಶೇಷಗಳತೇನು ಎಂದು ತಿಳಿಯೋಣ…

ಕೆನ್ಸಿಂಗ್ಟನ್ ಓವಲ್ ಮೈದಾನದಲ್ಲಿ ಎಷ್ಟು ಪಂದ್ಯಗಳು ನಡೆದಿವೆ?

ಈ ಮೈದಾನದಲ್ಲಿ ಈವರೆಗೆ ಒಟ್ಟು 27 ಟಿ20 ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಲಾಗಿದೆ. ಇದರಲ್ಲಿ 17 ಪಂದ್ಯಗಳಲ್ಲಿ ಮೊದಲು ಬ್ಯಾಟ್ ಮಾಡಿದ ತಂಡ ಗೆದ್ದಿದ್ದರೆ, 8 ರಲ್ಲಿ ಎರಡನೇ ಬ್ಯಾಟಿಂಗ್ ಮಾಡಿದ ತಂಡ ಗೆದ್ದಿದೆ. ಇನ್ನು ಎರಡು ಪಂದ್ಯಗಳು ಕಾರಣಾಂತರಗಳಿಂದ ರದ್ದಾಗಿದೆ.

ಕೆನ್ಸಿಂಗ್ಟನ್ ಪಿಚ್ ಯಾರಿಗೆ ಸಹಕಾರಿ?

ಬಾರ್ಬಡೋಸ್‌ನ ಕೆನ್ಸಿಂಗ್ಟನ್ ಓವಲ್‌ನ ಪಿಚ್​ನಲ್ಲಿ ಸ್ಪೋಟಕ ಆರಂಭ ಪಡೆಯುವುದು ಕಷ್ಟಕರ. ಏಕೆಂದರೆ ಈ ಪಿಚ್​​ ಹೊಸ ಬಾಲ್​ಗಳಲ್ಲಿ ಉತ್ತಮ ಸೀಮ್ ಚಲನೆಯನ್ನು ನೀಡುತ್ತದೆ. ಇದರಿಂದಾಗಿ ಪವರ್​ಪ್ಲೇನಲ್ಲಿ ಕ್ರೀಸ್​ನಲ್ಲಿ ನೆಲೆ ನಿಲ್ಲುವುದು ಬ್ಯಾಟರ್​ಗಳಿಗೆ ಸವಾಲಾಗಲಿದೆ.

ಹಾಗೆಯೇ ಇಲ್ಲಿನ ಪಿಚ್​ನಲ್ಲಿ ಹೆಚ್ಚುವರಿ ಬೌನ್ಸರ್ ಅನ್ನು ಕೂಡ ನಿರೀಕ್ಷಿಸಬಹುದು.​ ಇಂತಹ ಅನಿರೀಕ್ಷಿತ ಬೌನ್ಸ್ ಬ್ಯಾಟ್ಸ್‌ಮನ್‌ಗಳಿಗೆ ತೊಂದರೆ ಉಂಟುಮಾಡಬಹುದು.

ಇನ್ನು ಪರಿಸ್ಥಿತಿಗೆ ಹೊಂದಿಕೊಂಡ ಬಳಿಕ ಈ ಮೈದಾನದಲ್ಲಿ ಉತ್ತಮ ಸ್ಕೋರ್ ಕಲೆಹಾಕಬಹುದು. ಅಂದರೆ ಮೊದಲ 10 ಓವರ್​ಗಳ ಬಳಿಕ ಈ ಪಿಚ್​ನಲ್ಲಿ ಬ್ಯಾಟರ್​ಗಳ ಅಬ್ಬರವನ್ನು ನಿರೀಕ್ಷಿಸಬಹುದು.

ಸರಾಸರಿ ಸ್ಕೋರ್ ಎಷ್ಟು?

ಈ ಮೈದಾನದಲ್ಲಿ ಸರಾಸರಿ ಸ್ಕೋರ್ 150 ದಾಟಲಿದೆ. ಹೀಗಾಗಿ ಉಭಯ ತಂಡಗಳಿಂದ ಭರ್ಜರಿ ಪೈಪೋಟಿ ನಿರೀಕ್ಷಿಸಬಹುದು.

ಗರಿಷ್ಠ ಸ್ಕೋರ್ ಎಷ್ಟು?

ಕೆನ್ಸಿಂಗ್ಟನ್ ಓವಲ್ ಮೈದಾನದಲ್ಲಿ 2022ರಲ್ಲಿ ಇಂಗ್ಲೆಂಡ್ ವಿರುದ್ಧ ವೆಸ್ಟ್ ಇಂಡೀಸ್ 224 ರನ್​ ಬಾರಿಸಿರುವುದು ಗರಿಷ್ಠ ಸ್ಕೋರ್. ಹಾಗೆಯೇ ಈ ಗುರಿಯನ್ನು ಬೆನ್ನತ್ತಿದ ಇಂಗ್ಲೆಂಡ್ 204 ರನ್ ಬಾರಿಸಿತ್ತು ಎಂಬುದು ವಿಶೇಷ.

ಕೊನೆಯ ಪಂದ್ಯದ ಫಲಿತಾಂಶ?

ಈ ಮೈದಾನದಲ್ಲಿ ಕೊನೆಯ ಪಂದ್ಯವಾಡಿದ್ದು ನಮೀಬಿಯಾ ಮತ್ತು ಸ್ಕಾಟ್ಲೆಂಡ್. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ನಮೀಬಿಯಾ 156 ರನ್ ಕಲೆಹಾಕಿತ್ತು. ಈ ಗುರಿಯನ್ನು 18.3 ಓವರ್​ಗಳಲ್ಲಿ ಚೇಸ್ ಮಾಡಿ ಸ್ಕಾಟ್ಲೆಂಡ್ ತಂಡ ಜಯ ಸಾಧಿಸಿತ್ತು. ಅಂದರೆ ಈ ಮೈದಾನದಲ್ಲಿ ನಡೆಯುವ ಪಂದ್ಯಗಳಲ್ಲಿ ಕನಿಷ್ಠ 150 ರನ್​ಗಳನ್ನು ನಿರೀಕ್ಷಿಸಬಹುದು.

ಇದನ್ನೂ ಓದಿ: Lockie Ferguson: ಟಿ20 ವಿಶ್ವಕಪ್​ನಲ್ಲಿ ವಿಶ್ವ ದಾಖಲೆ ಬರೆದ ಲಾಕಿ ಫರ್ಗುಸನ್

ಭಾರತ-ಅಫ್ಘಾನಿಸ್ತಾನ್ ಮುಖಾಮುಖಿ ಯಾವಾಗ?

ಭಾರತ ಮತ್ತು ಅಫ್ಘಾನಿಸ್ತಾನ್ ನಡುವಣ ಪಂದ್ಯವು ಗುರುವಾರ (ಜೂ.19) ನಡೆಯಲಿದ್ದು, ಈ ಪಂದ್ಯವು ಭಾರತೀಯ ಕಾಲಮಾನ ರಾತ್ರಿ 8 ಗಂಟೆಯಿಂದ ಶುರುವಾಗಲಿದೆ. ಹಾಗೆಯೇ ಈ ಮ್ಯಾಚ್ ಅನ್ನು ಸ್ಟಾರ್ ಸ್ಪೋರ್ಟ್ಸ್​ ಚಾನೆಲ್​ಗಳಲ್ಲಿ ಮತ್ತು ಡಿಸ್ನಿ ಹಾಟ್ ಸ್ಟಾರ್ ಆ್ಯಪ್​ನಲ್ಲಿ ವೀಕ್ಷಿಸಬಹುದು.

ಹತ್ಯೆ ಹಿಂದಿನ ಉದ್ದೇಶ ಇನ್ನೂ ಗೊತ್ತಾಗಿಲ್ಲವೆಂದ ಚಿಕ್ಕಬಳ್ಳಾಪುರ ಎಸ್​ಪಿ
ಹತ್ಯೆ ಹಿಂದಿನ ಉದ್ದೇಶ ಇನ್ನೂ ಗೊತ್ತಾಗಿಲ್ಲವೆಂದ ಚಿಕ್ಕಬಳ್ಳಾಪುರ ಎಸ್​ಪಿ
ಟೆಸ್ಟ್ ಸ್ಪೆಷಲಿಸ್ಟ್​​ನ ಔಟ್ ಮಾಡಿದ ಕನ್ನಡಿಗ ಪ್ರಸಿದ್ಧ್ ಕೃಷ್ಣ
ಟೆಸ್ಟ್ ಸ್ಪೆಷಲಿಸ್ಟ್​​ನ ಔಟ್ ಮಾಡಿದ ಕನ್ನಡಿಗ ಪ್ರಸಿದ್ಧ್ ಕೃಷ್ಣ
ದೇವಾಲಯಗಳಲ್ಲಿ ಮುಡಿ ಕೊಡುವುದರ ಹಿಂದಿನ ರಹಸ್ಯ ತಿಳಿಯಿರಿ
ದೇವಾಲಯಗಳಲ್ಲಿ ಮುಡಿ ಕೊಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily Horoscope: ಈ ರಾಶಿಯವರು ಇಂದು ಹೊಸ ವಾಹನ ಖರೀದಿಸುವರು
Daily Horoscope: ಈ ರಾಶಿಯವರು ಇಂದು ಹೊಸ ವಾಹನ ಖರೀದಿಸುವರು
ಆವೇಶ, ಆಕ್ರೋಶ... ಸ್ಯಾಮ್ ಕೊನ್​ಸ್ಟಾಸ್ ಮುಂದೆ ಘರ್ಜಿಸಿದ ವಿರಾಟ್ ಕೊಹ್ಲಿ
ಆವೇಶ, ಆಕ್ರೋಶ... ಸ್ಯಾಮ್ ಕೊನ್​ಸ್ಟಾಸ್ ಮುಂದೆ ಘರ್ಜಿಸಿದ ವಿರಾಟ್ ಕೊಹ್ಲಿ
ಜಸ್​ಪ್ರೀತ್ ಬುಮ್ರಾ ಖಡಕ್ ಲುಕ್​ಗೆ ಸ್ಯಾಮ್​ ಕೊನ್​ಸ್ಟಾಸ್ ಗಪ್ ಚುಪ್
ಜಸ್​ಪ್ರೀತ್ ಬುಮ್ರಾ ಖಡಕ್ ಲುಕ್​ಗೆ ಸ್ಯಾಮ್​ ಕೊನ್​ಸ್ಟಾಸ್ ಗಪ್ ಚುಪ್
ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ
ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ
ಬಿಗ್ ಬಾಸ್​ಗೆ ಬಂದಿದ್ದಕ್ಕೆ ಸಾರ್ಥಕ ಆಯ್ತು: ಸುದೀಪ್ ನೀಡಿದ ಸರ್ಪ್ರೈಸ್​
ಬಿಗ್ ಬಾಸ್​ಗೆ ಬಂದಿದ್ದಕ್ಕೆ ಸಾರ್ಥಕ ಆಯ್ತು: ಸುದೀಪ್ ನೀಡಿದ ಸರ್ಪ್ರೈಸ್​
ಅಶೋಕ ಸಾರಿಗೆ ಸಚಿವರಾಗಿದ್ದಾಗ ಬಸ್ ಟಿಕೆಟ್ ದರ ಹೆಚ್ಚಿಸಿರಲಿಲ್ಲವೇ? ಸಿಎಂ
ಅಶೋಕ ಸಾರಿಗೆ ಸಚಿವರಾಗಿದ್ದಾಗ ಬಸ್ ಟಿಕೆಟ್ ದರ ಹೆಚ್ಚಿಸಿರಲಿಲ್ಲವೇ? ಸಿಎಂ
ಸಿಖ್ಖರ ಮೆರವಣಿಗೆ ವೇಳೆ ಕಾರಿನಲ್ಲಿ ಡಿಕ್ಕಿ;ಜನರಿಂದ ಪೊಲೀಸ್ ಮಗನ ವಾಹನ ಪುಡಿ
ಸಿಖ್ಖರ ಮೆರವಣಿಗೆ ವೇಳೆ ಕಾರಿನಲ್ಲಿ ಡಿಕ್ಕಿ;ಜನರಿಂದ ಪೊಲೀಸ್ ಮಗನ ವಾಹನ ಪುಡಿ