2027 ರ ಏಕದಿನ ವಿಶ್ವಕಪ್ ವೇಳಾಪಟ್ಟಿ ಪ್ರಕಟ; ಒಂದೇ ಗುಂಪಿನಲ್ಲಿ ಭಾರತ-ಪಾಕ್

ಐಸಿಸಿ 2027ರ ಏಕದಿನ ವಿಶ್ವಕಪ್‌ನ ವೇಳಾಪಟ್ಟಿ ಪ್ರಕಟಿಸಿದೆ. ದಕ್ಷಿಣ ಆಫ್ರಿಕಾ, ಜಿಂಬಾಬ್ವೆ ಮತ್ತು ನಮೀಬಿಯಾ ಜಂಟಿಯಾಗಿ ಆಯೋಜಿಸುವ ಈ ಮಹತ್ವದ ಟೂರ್ನಿಯಲ್ಲಿ 14 ತಂಡಗಳು ಭಾಗವಹಿಸಲಿವೆ. ಭಾರತವು ಆಸ್ಟ್ರೇಲಿಯಾ, ಪಾಕಿಸ್ತಾನದೊಂದಿಗೆ ಎ ಗುಂಪಿನಲ್ಲಿದೆ. ದಕ್ಷಿಣ ಆಫ್ರಿಕಾ 44 ಪಂದ್ಯಗಳನ್ನು ಆಯೋಜಿಸಲಿದ್ದು, ಉಳಿದ 10 ಪಂದ್ಯಗಳು ಜಿಂಬಾಬ್ವೆ ಮತ್ತು ನಮೀಬಿಯಾದಲ್ಲಿ ನಡೆಯಲಿವೆ.

2027 ರ ಏಕದಿನ ವಿಶ್ವಕಪ್ ವೇಳಾಪಟ್ಟಿ ಪ್ರಕಟ; ಒಂದೇ ಗುಂಪಿನಲ್ಲಿ ಭಾರತ-ಪಾಕ್
ಏಕದಿನ ವಿಶ್ವಕಪ್ 2027

Updated on: Oct 01, 2026 | 9:49 PM

ಮುಂದಿನ ವರ್ಷ ಅಂದರೆ 2027 ರ ಅಕ್ಟೋಬರ್ ತಿಂಗಳಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್ ವೇಳಾಪಟ್ಟಿಯನ್ನು ಐಸಿಸಿ ಇಂದು ಪ್ರಕಟಿಸಿದೆ. ದಕ್ಷಿಣ ಆಫ್ರಿಕಾ, ಜಿಂಬಾಬ್ವೆ ಮತ್ತು ನಮೀಬಿಯಾ ಜಂಟಿಯಾಗಿ ಆಯೋಜಿಸಲಿರುವ ಈ ಮೆಗಾ ಈವೆಂಟ್​ನಲ್ಲಿ 14 ತಂಡಗಳು ಭಾಗವಹಿಸಲಿವೆ.ಈ ಪಂದ್ಯಾವಳಿಯ ಪಂದ್ಯಗಳು ಮೂರು ದೇಶಗಳ ಒಟ್ಟು 12 ಸ್ಥಳಗಳಲ್ಲಿ ನಡೆಯಲಿವೆ. ಈ 14 ತಂಡಗಳ ಪೈಕಿ ಕೊನೆಯ 3 ಸ್ಥಾನ ಪಡೆಯುವ ತಂಡಗಳ ನಡುವೆ ಸೂಪರ್ ಸರಣಿ ನಡೆಯಲಿದೆ. ಇದರ ನಂತರ ತಲಾ 6 ತಂಡಗಳ 2 ಗುಂಪುಗಳ ನಡುವೆ ಗುಂಪು ಹಂತ ನಡೆಯಲಿದ್ದು,ಅದಾದ ನಂತರ ಸೂಪರ್ 7 ಹಂತ ನಡೆಯಲಿದೆ. ಇಲ್ಲಿ ಅಗ್ರ 4 ಸ್ಥಾನ ಪಡೆಯುವ ತಂಡಗಳು ಸೆಮಿಫೈನಲ್​ಗೆ ಮುನ್ನಡೆಯುತ್ತವೆ. ಈ ಸುತ್ತಿನಲ್ಲಿ ಗೆಲ್ಲುವ ಎರಡು ತಂಡಗಳ ನಡುವೆ ಫೈನಲ್ ಪಂದ್ಯ ನಡೆಯಲಿದೆ.

ತಲಾ 6 ತಂಡಗಳ 2 ಗುಂಪು

ಎ ಗುಂಪಿನಲ್ಲಿ ಅಫ್ಘಾನಿಸ್ತಾನ, ಆಸ್ಟ್ರೇಲಿಯಾ, ಭಾರತ, ಪಾಕಿಸ್ತಾನ, ಜಿಂಬಾಬ್ವೆ ಹಾಗೂ ಕ್ವಾಲಿಫೈಯರ್ ಎ ತಂಡಗಳು ಸ್ಥಾನ ಪಡೆದಿದ್ದರೆ, ಬಿ ಗುಂಪಿನಲ್ಲಿ ಬಾಂಗ್ಲಾದೇಶ, ಇಂಗ್ಲೆಂಡ್, ದಕ್ಷಿಣ ಆಫ್ರಿಕಾ, ಶ್ರೀಲಂಕಾ, ನ್ಯೂಜಿಲೆಂಡ್ ಹಾಗೂ ಕ್ವಾಲಿಫೈಯರ್ ಬಿ ತಂಡಗಳು ಸ್ಥಾನ ಪಡೆದಿವೆ.

2027 ರ ವಿಶ್ವಕಪ್‌ನ ಪೂರ್ಣ ವೇಳಾಪಟ್ಟಿ

ಗುಂಪು ಹಂತದ ಪಂದ್ಯಗಳು

  1. ಶನಿವಾರ, ಅಕ್ಟೋಬರ್ 2: QF1 vs QF3 — ವಿಂಡ್‌ಹೋಕ್
  2. ಸೋಮವಾರ, ಅಕ್ಟೋಬರ್ 4: QF1 vs QF2 — ವಿಂಡ್‌ಹೋಕ್
  3. ಬುಧವಾರ, ಅಕ್ಟೋಬರ್ 6: QF2 vs QF3 — ವಿಂಡ್‌ಹೋಕ್
  4. ಗುರುವಾರ, ಅಕ್ಟೋಬರ್ 7: ಭಾರತ vs ಆಸ್ಟ್ರೇಲಿಯಾ – ಕೇಪ್ ಟೌನ್
  5. ಶುಕ್ರವಾರ, ಅಕ್ಟೋಬರ್ 8: ಪಾಕಿಸ್ತಾನ vs ಅಫ್ಘಾನಿಸ್ತಾನ- ಷ್ವಾನೆ
  6. ಶುಕ್ರವಾರ, ಅಕ್ಟೋಬರ್ 8: ಇಂಗ್ಲೆಂಡ್ vs ಬಾಂಗ್ಲಾದೇಶ- ವಿಂಡ್‌ಹೋಕ್‌
  7. ಶನಿವಾರ, ಅಕ್ಟೋಬರ್ 9: ಜಿಂಬಾಬ್ವೆ vs. ಕ್ವಾಲಿಫೈಯರ್ ಎ- ಬುಲವಾಯೊ
  8. ಶನಿವಾರ, ಅಕ್ಟೋಬರ್ 9: ದಕ್ಷಿಣ ಆಫ್ರಿಕಾ vs. ನ್ಯೂಜಿಲೆಂಡ್- ಕೇಪ್ ಟೌನ್
  9. ಭಾನುವಾರ, ಅಕ್ಟೋಬರ್ 10: ಭಾರತ vs. ಪಾಕಿಸ್ತಾನ- ಜೋಹಾನ್ಸ್‌ಬರ್ಗ್
  10. ಭಾನುವಾರ, ಅಕ್ಟೋಬರ್ 10: ಶ್ರೀಲಂಕಾ vs ಕ್ವಾಲಿಫೈಯರ್ ಬಿ- ವಿಂಡ್‌ಹೋಕ್‌
  11. ಸೋಮವಾರ, ಅಕ್ಟೋಬರ್ 11: ಜಿಂಬಾಬ್ವೆ vs. ಅಫ್ಘಾನಿಸ್ತಾನ- ಬುಲವಾಯೊ
  12. ಮಂಗಳವಾರ, ಅಕ್ಟೋಬರ್ 12: ಆಸ್ಟ್ರೇಲಿಯಾ vs. ಕ್ವಾಲಿಫೈಯರ್ ಎ- ಪಾರ್ಲ್
  13. ಮಂಗಳವಾರ, ಅಕ್ಟೋಬರ್ 12: ನ್ಯೂಜಿಲೆಂಡ್ vs. ಬಾಂಗ್ಲಾದೇಶ – ಕುಗೊಂಪೊ ಸಿಟಿ
  14. ಬುಧವಾರ, ಅಕ್ಟೋಬರ್ 13: ಇಂಗ್ಲೆಂಡ್ vs ಶ್ರೀಲಂಕಾ- ವಿಂಡ್‌ಹೋಕ್‌
  15. ಬುಧವಾರ, ಅಕ್ಟೋಬರ್ 13: ದಕ್ಷಿಣ ಆಫ್ರಿಕಾ vs. ಕ್ವಾಲಿಫೈಯರ್ ಬಿ – ಪಾರ್ಲ್
  16. ಗುರುವಾರ, ಅಕ್ಟೋಬರ್ 14: ಭಾರತ vs. ಅಫ್ಘಾನಿಸ್ತಾನ- ಷ್ವಾನೆ
  17. ಶುಕ್ರವಾರ, ಅಕ್ಟೋಬರ್ 15: ಪಾಕಿಸ್ತಾನ vs ಕ್ವಾಲಿಫೈಯರ್ ಎ- ಬ್ಲೋಮ್‌ಫಾಂಟೈನ್
  18. ಶುಕ್ರವಾರ, ಅಕ್ಟೋಬರ್ 15: ಜಿಂಬಾಬ್ವೆ vs. ಆಸ್ಟ್ರೇಲಿಯಾ – ಹರಾರೆ
  19. ಶನಿವಾರ, ಅಕ್ಟೋಬರ್ 16: ಶ್ರೀಲಂಕಾ vs. ಬಾಂಗ್ಲಾದೇಶ- ಡರ್ಬನ್‌
  20. ಶನಿವಾರ, ಅಕ್ಟೋಬರ್ 16: ದಕ್ಷಿಣ ಆಫ್ರಿಕಾ vs. ಇಂಗ್ಲೆಂಡ್ – ಗ್ಕೆಬೆರ್ಹಾ
  21. ಭಾನುವಾರ, ಅಕ್ಟೋಬರ್ 17: ಭಾರತ vs. ಕ್ವಾಲಿಫೈಯರ್ ಎ- ಬ್ಲೋಮ್‌ಫಾಂಟೈನ್
  22. ಭಾನುವಾರ, ಅಕ್ಟೋಬರ್ 17: ನ್ಯೂಜಿಲೆಂಡ್ vs ಕ್ವಾಲಿಫೈಯರ್ ಬಿ – ಹರಾರೆ
  23. ಸೋಮವಾರ, ಅಕ್ಟೋಬರ್ 18: ಆಸ್ಟ್ರೇಲಿಯಾ vs. ಅಫ್ಘಾನಿಸ್ತಾನ – ಕುಗೊಂಪೊ ಸಿಟಿ
  24. ಮಂಗಳವಾರ, ಅಕ್ಟೋಬರ್ 19:  ಜಿಂಬಾಬ್ವೆ vs. ಪಾಕಿಸ್ತಾನ- ಹರಾರೆ
  25. ಮಂಗಳವಾರ, ಅಕ್ಟೋಬರ್ 19: ದಕ್ಷಿಣ ಆಫ್ರಿಕಾ vs ಬಾಂಗ್ಲಾದೇಶ- ಡರ್ಬನ್‌
  26. ಬುಧವಾರ, ಅಕ್ಟೋಬರ್ 20: ನ್ಯೂಜಿಲೆಂಡ್ vs. ಶ್ರೀಲಂಕಾ – ಜೋಹಾನ್ಸ್‌ಬರ್ಗ್
  27. ಬುಧವಾರ, ಅಕ್ಟೋಬರ್ 20: ಇಂಗ್ಲೆಂಡ್ vs ಕ್ವಾಲಿಫೈಯರ್ ಬಿ – ಹರಾರೆ
  28. ಗುರುವಾರ, ಅಕ್ಟೋಬರ್ 21: ಅಫ್ಘಾನಿಸ್ತಾನ vs. ಕ್ವಾಲಿಫೈಯರ್ ಎ – ಕುಗೊಂಪೊ ಸಿಟಿ
  29. ಶುಕ್ರವಾರ, ಅಕ್ಟೋಬರ್ 22: ಆಸ್ಟ್ರೇಲಿಯಾ vs. ಪಾಕಿಸ್ತಾನ- ಪಾರ್ಲ್
  30. ಶುಕ್ರವಾರ, ಅಕ್ಟೋಬರ್ 22: ದಕ್ಷಿಣ ಆಫ್ರಿಕಾ vs ಶ್ರೀಲಂಕಾ- ಜೋಹಾನ್ಸ್‌ಬರ್ಗ್‌
  31. ಶನಿವಾರ, ಅಕ್ಟೋಬರ್ 23: ಇಂಗ್ಲೆಂಡ್ vs. ನ್ಯೂಜಿಲೆಂಡ್ – ಗ್ಕೆಬೆರ್ಹಾ
  32. ಶನಿವಾರ, ಅಕ್ಟೋಬರ್ 23: ಬಾಂಗ್ಲಾದೇಶ vs. ಕ್ವಾಲಿಫೈಯರ್ ಬಿ – ಷ್ವಾನೆ
  33. ಭಾನುವಾರ, ಅಕ್ಟೋಬರ್ 24: ಜಿಂಬಾಬ್ವೆ vs. ಭಾರತ – ವಿಕ್ಟೋರಿಯಾ ಪಾಲ್ಸ್

ಸೂಪರ್ ಸ್ಟೇಜ್ ಪಂದ್ಯಗಳು

  1. ಸೋಮವಾರ, ಅಕ್ಟೋಬರ್ 25: A2 vs B3 — ಜೋಹಾನ್ಸ್‌ಬರ್ಗ್
  2. ಮಂಗಳವಾರ, ಅಕ್ಟೋಬರ್ 26: B1 vs. A3 — ಗ್ಕೆಬೆರ್ಹಾ
  3. ಬುಧವಾರ, ಅಕ್ಟೋಬರ್ 27: B2 vs A4 – ಷ್ವಾನೆ
  4. ಗುರುವಾರ, ಅಕ್ಟೋಬರ್ 28: A1 vs. A2 — ವಿಕ್ಟೋರಿಯಾ ಫಾಲ್ಸ್
  5. ಶುಕ್ರವಾರ, ಅಕ್ಟೋಬರ್ 29: B1 vs B3 – ಕುಗೊಂಪೊ ನಗರ
  6. ಶನಿವಾರ, ಅಕ್ಟೋಬರ್ 30: A3 vs B4 — ವಿಕ್ಟೋರಿಯಾ ಫಾಲ್ಸ್
  7. ಭಾನುವಾರ, ಅಕ್ಟೋಬರ್ 31: B2 vs A1 — ಜೋಹಾನ್ಸ್‌ಬರ್ಗ್
  8. ಸೋಮವಾರ, ನವೆಂಬರ್ 1: A2 vs B1 — ವಿಕ್ಟೋರಿಯಾ ಫಾಲ್ಸ್
  9. ಮಂಗಳವಾರ, ನವೆಂಬರ್ 2: B3 vs A4 — ಕೇಪ್ ಟೌನ್
  10. ಬುಧವಾರ, ನವೆಂಬರ್ 3: B2 vs A3 — ಡರ್ಬನ್
  11. ಗುರುವಾರ, ನವೆಂಬರ್ 4: A1 vs B1 — ಪಾರ್ಲ್
  12. ಶುಕ್ರವಾರ, ನವೆಂಬರ್ 5: A2 vs AB4 — ಡರ್ಬನ್
  13. ಶನಿವಾರ, ನವೆಂಬರ್ 6: B2 vs B3 — ಬ್ಲೋಮ್‌ಫಾಂಟೈನ್
  14. ಭಾನುವಾರ, ನವೆಂಬರ್ 7: A1 vs A3 — ಕೇಪ್ ಟೌನ್
  15. ಸೋಮವಾರ, ನವೆಂಬರ್ 8: B1 vs A4 — ಡರ್ಬನ್
  16. ಮಂಗಳವಾರ, ನವೆಂಬರ್ 9: B2 vs A2 — ಗ್ಕೆಬೆರ್ಹಾ
  17. ಬುಧವಾರ, ನವೆಂಬರ್ 10: A3 vs B3 — ಬ್ಲೋಮ್‌ಫಾಂಟೈನ್
  18. ಗುರುವಾರ, ನವೆಂಬರ್ 11: A1 vs AB4 — ಗ್ಕೆಬೆರ್ಹಾ
  19. ಶುಕ್ರವಾರ, ನವೆಂಬರ್ 12: B2 vs B1 — ಕೇಪ್ ಟೌನ್
  20. ಶನಿವಾರ, ನವೆಂಬರ್ 13: A2 vs A3 — ಬ್ಲೋಮ್‌ಫಾಂಟೈನ್
  21. ಭಾನುವಾರ, ನವೆಂಬರ್ 14: A1 vs B3 — ಡರ್ಬನ್

ನಾಕೌಟ್ ಪಂದ್ಯಗಳು

  1. ಬುಧವಾರ, ನವೆಂಬರ್ 17: ಮೊದಲ ಸೆಮಿಫೈನಲ್ — ಕೇಪ್ ಟೌನ್
  2. ಗುರುವಾರ, ನವೆಂಬರ್ 18: ಎರಡನೇ ಸೆಮಿಫೈನಲ್ – ಷ್ವಾನೆ
  3. ಭಾನುವಾರ, ನವೆಂಬರ್ 21: ಫೈನಲ್ — ಜೋಹಾನ್ಸ್‌ಬರ್ಗ್.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:18 pm, Thu, 1 October 26

ಪೃಥ್ವಿಶಂಕರ

ಹುಟ್ಟೂರು ಹಾಸನದ ಕೊಣನೂರು ಸಮೀಪದ ಲಕ್ಷ್ಮೀಪುರ, ಕಳೆದ 8 ವರ್ಷಗಳಿಂದ ಪತ್ರಿಕಾರಂಗದಲ್ಲಿ ನೆಲೆ. ಟಿವಿ9 ಕನ್ನಡದಲ್ಲೇ ವೃತ್ತಿ ಜೀವನ ಆರಂಭಿಸಿದ ನಾನು, ಮೊದಲ 3 ವರ್ಷ ವಿಡಿಯೋ ಎಡಿಟರ್ ಆಗಿ ಕೆಲಸ ಮಾಡಿದ ಬಳಿಕ ನನ್ನ ಆಸಕ್ತಿಯ ವಿಷಯವಾದ ಕ್ರೀಡೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ನನ್ನ ವೃತ್ತಿ ಬದುಕಿನ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದೇನೆ.

Read More
Loading...
Unable to load recommendations.
Follow Us