ಸ್ಲೀಪರ್ ಸೆಲ್‌ ಮೂಲಕ ಅರುಣ್ ಜೇಟ್ಲಿ ಕ್ರೀಡಾಂಗಣವನ್ನು ಸ್ಫೋಟಿಸುವ ಬೆದರಿಕೆ

Arun Jaitley Stadium Bomb Threat: ಪಾಕಿಸ್ತಾನದಿಂದ ಭಾರತದ ಕ್ರೀಡಾಂಗಣಗಳಿಗೆ ಬಾಂಬ್ ಬೆದರಿಕೆಗಳು ಬಂದಿವೆ. ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣ ಮತ್ತು ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣಗಳು ಗುರಿಯಾಗಿದ್ದು, ಪಾಕಿಸ್ತಾನದಿಂದ ಈ ಬೆದರಿಕೆಗಳನ್ನು ಕಳುಹಿಸಲಾಗಿದೆ ಎನ್ನಲಾಗಿದೆ. ಭದ್ರತಾ ಸಂಸ್ಥೆಗಳು ತನಿಖೆ ನಡೆಸುತ್ತಿದ್ದು, ಕ್ರೀಡಾಂಗಣಗಳ ಭದ್ರತೆಯನ್ನು ಹೆಚ್ಚಿಸಲಾಗಿದೆ.

ಸ್ಲೀಪರ್ ಸೆಲ್‌ ಮೂಲಕ ಅರುಣ್ ಜೇಟ್ಲಿ ಕ್ರೀಡಾಂಗಣವನ್ನು ಸ್ಫೋಟಿಸುವ ಬೆದರಿಕೆ
Arun Jaitley Stadium

Updated on: May 09, 2025 | 7:28 PM

ಭಾರತ ಮತ್ತು ಪಾಕಿಸ್ತಾನ ನಡುವೆ ಯುದ್ಧದ ಪರಿಸರ ಸೃಷ್ಟಿಯಾಗಿದೆ. ಪಾಕಿಸ್ತಾನ ಗಡಿಯಾಚೆಯಿಂದ ಭಾರತದ ವಸತಿ ಪ್ರದೇಶಗಳನ್ನು ನಿರಂತರವಾಗಿ ಗುರಿಯಾಗಿಸಿಕೊಂಡಿದೆ. ಈ ದಾಳಿಗೆ ಭಾರತೀಯ ಸೇನೆಯೂ ತಕ್ಕ ಪ್ರತ್ಯುತ್ತರ ನೀಡುತ್ತಿದೆ. ಇಷ್ಟೇ ಅಲ್ಲ, ಪಾಕಿಸ್ತಾನವು ಇತರ ಹಲವು ತಂತ್ರಗಳನ್ನು ಅಳವಡಿಸಿಕೊಂಡು ಭಾರತವನ್ನು ಹೆದರಿಸಲು ಪ್ರಯತ್ನಿಸುತ್ತಿದೆ, ಆದರೆ ಅದರ ಎಲ್ಲಾ ಉದ್ದೇಶಗಳು ವಿಫಲವಾಗುತ್ತಿವೆ. ಪಾಕಿಸ್ತಾನ ಮತ್ತೊಮ್ಮೆ ಹೇಡಿತನದ ಕೃತ್ಯ ಎಸಗಿದ್ದು, ಭಾರತದಲ್ಲಿ ಕ್ರೀಡಾಂಗಣವನ್ನು ಸ್ಫೋಟಿಸುವುದಾಗಿ ಮೇಲ್ ಮೂಲಕ ಬೆದರಿಕೆ ಹಾಕಿದೆ.

ಅರುಣ್ ಜೇಟ್ಲಿ ಕ್ರೀಡಾಂಗಣ ಸ್ಫೋಟಿಸುವ ಬೆದರಿಕೆ

ಡಿಡಿಸಿಎಯ ಅಧಿಕೃತ ಮೇಲ್‌ಗೆ ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣವನ್ನು ಸ್ಫೋಟಿಸುವ ಬೆದರಿಕೆ ಇರುವ ಇಮೇಲ್ ಬಂದಿತು. ಈ ಬಗ್ಗೆ ಡಿಡಿಸಿಎ ಅಧಿಕಾರಿಗಳು ದೆಹಲಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಈ ಮೇಲ್​ನಲ್ಲಿ ‘ಭಾರತದಾದ್ಯಂತ ಪಾಕಿಸ್ತಾನಕ್ಕೆ ನಿಷ್ಠರಾಗಿರುವ ಸ್ಲೀಪರ್ ಸೆಲ್‌ಗಳನ್ನು ನಾವು ಹೊಂದಿದ್ದೇವೆ. ನಾವು ಅವುಗಳನ್ನು ಆಪರೇಷನ್ ಸಿಂಧೂರ್‌ಗಾಗಿ ಸಕ್ರಿಯಗೊಳಿಸುತ್ತೇವೆ. ನಿಮ್ಮ ಕ್ರೀಡಾಂಗಣವನ್ನು ನಾವು ಸ್ಫೋಟಿಸುತ್ತೇವೆ’ ಎಂದು ಬರೆಯಲಾಗಿದೆ. ಇದಾದ ನಂತರ ಕ್ರೀಡಾಂಗಣದ ಭದ್ರತೆಯನ್ನು ಹೆಚ್ಚಿಸಲಾಗಿದ್ದು, ದೆಹಲಿ ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.

IPL 2025: ಯಾವ ತಂಡದಿಂದ ಎಷ್ಟು ವಿದೇಶಿ ಆಟಗಾರರು ತಾಯ್ನಾಡಿಗೆ ಮರಳಲಿದ್ದಾರೆ?

ಮೋದಿ ಮೈದಾನ ಸ್ಫೋಟಿಸುವ ಬೆದರಿಕೆ

ಕೆಲವು ದಿನಗಳ ಹಿಂದೆ ಪಾಕಿಸ್ತಾನದಿಂದ ಇದೇ ರೀತಿಯ ಮೇಲ್ ಬಂದಿತ್ತು. ಅಹಮದಾಬಾದ್‌ನ ನರೇಂದ್ರ ಮೋದಿ ಕ್ರಿಕೆಟ್ ಕ್ರೀಡಾಂಗಣದ ಮೇಲೆ ಬಾಂಬ್ ದಾಳಿ ಮಾಡುವ ಬೆದರಿಕೆ ಹಾಕಲಾಗಿತ್ತು. ಗುಜರಾತ್ ಕ್ರಿಕೆಟ್ ಅಸೋಸಿಯೇಷನ್‌ನ ಅಧಿಕೃತ ಇಮೇಲ್‌ಗೆ ಬಂದಿದ್ದ ಮೇಲ್​ನಲ್ಲಿ ‘ನಿಮ್ಮ ಈ ಕ್ರೀಡಾಂಗಣವನ್ನು ನಾವು ಬಸ್ ಮೂಲಕ ಸ್ಫೋಟಿಸುತ್ತೇವೆ’ ಎಂದು ಬರೆಯಲಾಗಿತ್ತು. ಪಾಕಿಸ್ತಾನದ ಹೆಸರಿನಲ್ಲಿ ಕಳುಹಿಸಲಾಗಿದ್ದ ಮೇಲ್ ಸ್ವೀಕರಿಸಿದ ನಂತರ, ಎಲ್ಲಾ ಭದ್ರತಾ ಸಂಸ್ಥೆಗಳು ಜಾಗರೂಕರಾಗಿದಲ್ಲದೆ ಮೈದಾನದ ಸುತ್ತಲೂ ಭದ್ರತೆಯನ್ನು ಹೆಚ್ಚಿಸಲಾಗಿತ್ತು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:26 pm, Fri, 9 May 25

ಪೃಥ್ವಿಶಂಕರ

ಹುಟ್ಟೂರು ಹಾಸನದ ಕೊಣನೂರು ಸಮೀಪದ ಲಕ್ಷ್ಮೀಪುರ, ಕಳೆದ 8 ವರ್ಷಗಳಿಂದ ಪತ್ರಿಕಾರಂಗದಲ್ಲಿ ನೆಲೆ. ಟಿವಿ9 ಕನ್ನಡದಲ್ಲೇ ವೃತ್ತಿ ಜೀವನ ಆರಂಭಿಸಿದ ನಾನು, ಮೊದಲ 3 ವರ್ಷ ವಿಡಿಯೋ ಎಡಿಟರ್ ಆಗಿ ಕೆಲಸ ಮಾಡಿದ ಬಳಿಕ ನನ್ನ ಆಸಕ್ತಿಯ ವಿಷಯವಾದ ಕ್ರೀಡೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ನನ್ನ ವೃತ್ತಿ ಬದುಕಿನ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದೇನೆ.

Read More
Loading...
Unable to load recommendations.
Follow Us