SL vs AFG: ಸೂಪರ್ 4 ನ ಮೊದಲ ಪಂದ್ಯ ಗೆದ್ದ ಶ್ರೀಲಂಕಾ: ರೋಚಕ ಕಾದಾಟದಲ್ಲಿ ಅಫ್ಘಾನ್​ಗೆ ಸೋಲು

Asia Cup 2022: ಶಾರ್ಜಾ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ರೋಚಕ ಪಂದ್ಯದಲ್ಲಿ ಸಿಂಹಳೀಯರು 4 ವಿಕೆಟ್​ಗಳಿಂದ ಗೆದ್ದು ಲೀಗ್ ಹಂತದಲ್ಲಿ ಅನುಭವಿಸಿದ ಹೀನಾಯ ಸೋಲಿಗೆ ಸೇಡು ತೀರಿಸಿಕೊಂಡಿದ್ದಾರೆ.

SL vs AFG: ಸೂಪರ್ 4 ನ ಮೊದಲ ಪಂದ್ಯ ಗೆದ್ದ ಶ್ರೀಲಂಕಾ: ರೋಚಕ ಕಾದಾಟದಲ್ಲಿ ಅಫ್ಘಾನ್​ಗೆ ಸೋಲು
SL vs AFG Asia Cup 2022
Edited By:

Updated on: Sep 04, 2022 | 8:15 AM

ಏಷ್ಯಾಕಪ್ 2022ರ (Asia Cup 2022) ಸೂಪರ್ 4 ಹಂತಕ್ಕೆ ಚಾಲನೆ ಸಿಕ್ಕಿದ್ದು ಮೊದಲ ಪಂದ್ಯದಲ್ಲಿ ಅಫ್ಘಾನಿಸ್ತಾನ ವಿರುದ್ಧ ಶ್ರೀಲಂಕಾ (Sri Lanka vs Afghanistan) ತಂಡ ಗೆಲುವು ಸಾಧಿಸಿದೆ. ಶಾರ್ಜಾ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ರೋಚಕ ಪಂದ್ಯದಲ್ಲಿ ಸಿಂಹಳೀಯರು 4 ವಿಕೆಟ್​ಗಳಿಂದ ಗೆದ್ದು ಲೀಗ್ ಹಂತದಲ್ಲಿ ಅನುಭವಿಸಿದ ಹೀನಾಯ ಸೋಲಿಗೆ ಸೇಡು ತೀರಿಸಿಕೊಂಡಿದ್ದಾರೆ. ಕೊನೆಯ ಓವರ್ ವರೆಗೂ ನಡೆದ ಪಂದ್ಯ ಅಭಿಮಾನಿಗಳನ್ನು ತುದಿಗಾಲಿನಲ್ಲಿ ನಿಲ್ಲಿಸಿತ್ತು. ರೆಹಮಾನುಲ್ಲಾ ಗುರ್ಬಾಜ್ (Rahmanullah Gurbaz) ಅವರ 84 ರನ್ ಹಾಗೂ ಇಬ್ರಾಹಿಂ ಝದ್ರಾನ್ ಅವರ ಆಕರ್ಷಕ ಬ್ಯಾಟಿಂಗ್​ ನೆರವಿನಿಂದ ಅಫ್ಘಾನ್ ಕಠಿಣ ಟಾರ್ಗೆಟ್ ಅನ್ನೇ ನೀಡಿತ್ತು. ಆದರೆ, ಶ್ರೀಲಂಕಾ ಸ್ಫೋಟಕ ಆರಂಭ ಪಡೆದುಕೊಳ್ಳುವ ಜೊತೆ ಮಧ್ಯಮ ಕ್ರಮಾಂಕ ಮಿಂಚಿದ ಪರಿಣಾಮ ಗೆಲುವು ಸಾಧಿಸಿತು.

ಟಾಸ್ ಸೋತು ಬ್ಯಾಟಿಂಗ್​ಗೆ ಇಳಿದ ಅಫ್ಘಾನಿಸ್ತಾನ 46 ರನ್ ಆಗುವ ಹೊತ್ತಿಗೆ 13 ರನ್ ಗಳಿಸಿದ್ದ ಹಜರತುಲ್ಲಾ ಝಜೈ ವಿಕೆಟ್ ಕಳೆದುಕೊಂಡಿತು. ಆದರೆ, ಎರಡನೇ ವಿಕೆಟ್​ಗೆ ರೆಹಮಾನುಲ್ಲಾ ಗುರ್ಬಾಜ್ ಹಾಗೂ ಇಬ್ರಾಹಿಂ ಝದ್ರಾನ್ ಬೊಂಬಾಟ್ ಬ್ಯಾಟಿಂಗ್ ಪ್ರದರ್ಶಿಸಿದರು. ಲಂಕಾ ಬೌಲರ್​​ಗಳ ಬೆವರಿಳಿಸಿದ ಈ ಜೋಡಿ ಮೈದಾನದ ಮೂಲೆ ಮೂಲೆಗೆ ಚೆಂಡನ್ನು ಅಟ್ಟಿದರು. ಅದರಲ್ಲೂ ಗುರ್ಬಾಜ್ ಸ್ಫೋಟಕ ಬ್ಯಾಟಿಂಗ್ ಮೂಲಕ ಗಮನ ಸೆಳೆದರು.

ಈ ಜೋಡಿ 93 ರನ್​ಗಳ ಅಮೋಘ ಜೊತೆಯಾಟ ಆಡಿತು. ಕೇವಲ 45 ಎಸೆತಗಳಲ್ಲಿ 4 ಫೋರ್, 6 ಸಿಕ್ಸರ್ ಸಿಡಿಸಿದ ಗುರ್ಬಾಜ್ 84 ರನ್ ಚಚ್ಚಿದರು. ಇಬ್ರಾಹಿಂ 38 ಎಸೆತಗಳಲ್ಲಿ 40 ರನ್ ಬಾರಿಸಿದರು. ಅಫ್ಘಾನಿಸ್ತಾನ 20 ಓವರ್​ಗಳಲ್ಲಿ 6 ವಿಕೆಟ್ ನಷ್ಟಕ್ಕೆ 175 ರನ್ ಕಲೆಹಾಕಿತು. ಲಂಕಾ ಪರ ದಿಲ್ಶನ್ ಮಧುಶನಕ 2 ವಿಕೆಟ್ ಕಿತ್ತರರು.

ಇದನ್ನೂ ಓದಿ
IND vs PAK: ಏಷ್ಯಾಕಪ್​ನಲ್ಲಿಂದು ಭಾರತ-ಪಾಕಿಸ್ತಾನ ನಡುವೆ ಹೈವೋಲ್ಟೇಜ್ ಕದನ: ಕೊಹ್ಲಿ ಮೇಲೆ ಎಲ್ಲರ ಕಣ್ಣು
India Playing XI: 2 ಬದಲಾವಣೆ ಖಚಿತ: ಹೀಗಿರಲಿದೆ ಟೀಮ್ ಇಂಡಿಯಾ ಪ್ಲೇಯಿಂಗ್ ಇಲೆವೆನ್
IND vs PAK: ಭಾರತದ ವಿರುದ್ಧದ ಪಂದ್ಯಕ್ಕೂ ಮುನ್ನ ಪಾಕ್ ತಂಡಕ್ಕೆ ಬಿಗ್ ಶಾಕ್..!
India vs Pakistan: ಭಾರತ-ಪಾಕ್ ನಡುವಣ ಪಂದ್ಯ ಎಷ್ಟು ಗಂಟೆಗೆ ಶುರು? ಇಲ್ಲಿದೆ ಸಂಪೂರ್ಣ ಮಾಹಿತಿ

ಟಾರ್ಗೆಟ್ ಬೆನ್ನಟ್ಟಿದ ಶ್ರೀಲಂಕಾ ಸ್ಫೋಟಕ ಆರಂಭ ಪಡೆದುಕೊಂಡಿತು. ಓಪನರ್​ಗಳಾದ ಪಥುಮ್ ನಿಸ್ಸಂಕಾ ಹಾಗೂ ಕುಸಲ್ ಮೆಂಡಿಸ್ 6 ಓವರ್ ಆಗುವ ಹೊತ್ತಿಗೆ ತಂಡದ ಮೊತ್ತವನ್ನು 60ಕ್ಕೆ ತಂದಿಟ್ಟರು. ಕುಸಲ್ ಕೇವಲ 19 ಎಸೆತಗಳಲ್ಲಿ 36 ರನ್ ಸಿಡಿಸಿದರೆ, ನಿಸ್ಸಂಕಾ 28 ಎಸೆತಗಳಲ್ಲಿ 35 ರನ್ ಬಾರಿಸಿದರು. ಧನುಶ್ಕಾ ಗುಣತಿಲಕ 20 ಎಸೆತಗಳಲ್ಲಿ 33 ರನ್ ಗಳಿಸಿ ಕಾಣಿಕೆ ನೀಡಿದರು.

ಅಂತಿಮ ಹಂತದ ವೇಳೆ ಭಾನುಕ ರಾಜಮಕ್ಷ 14 ಎಸೆತಗಳಲ್ಲಿ 4 ಫೋರ್, 1 ಸಿಕ್ಸರ್ ಬಾರಿಸಿ 31 ರನ್ ಚಚ್ಚಿ ತಂಡಕ್ಕೆ ಗೆಲುವು ಹತ್ತಿರ ಮಾಡಿದರು. ವಾನಿಂದು ಹಸರಂಗ ಅಜೇಯ 16 ರನ್ ಗಳಿಸಿ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ಶ್ರೀಲಂಕಾ 19.1 ಓವರ್​ನಲ್ಲಿ 6 ವಿಕೆಟ್ ನಷ್ಟ್ಕಕ್ಕೆ 179 ರನ್ ಗಳಿಸಿ 4 ವಿಕೆಟ್​ಗಳಿಂದ ಗೆದ್ದಿತು. ನವೀನ್ ಉಲ್ ಹಖ್ ಹಾಗೂ ಮಿಜೀಬ್ ತಲಾ 2 ವಿಕೆಟ್ ಪಡೆದರು. ರೆಹಮಾನುಲ್ಲಾ ಗುರ್ಬಾಜ್ ಪಂದ್ಯಶ್ರೇಷ್ಠ ಬಾಜಿಕೊಂಡರು.

Published On - 8:15 am, Sun, 4 September 22