India vs Pakistan Live Cricket Score: ಪಾಕ್ ತಂಡದ 3ನೇ ವಿಕೆಟ್ ಪತನ

Asian Games 2026 IND vs PAK Final Live Score: ಭಾರತ ಮತ್ತು ಪಾಕಿಸ್ತಾನ್ ನಡುವಣ ಏಷ್ಯನ್ ಗೇಮ್ಸ್ ಟಿ20 ಟೂರ್ನಿಯ ಫೈನಲ್ ಪಂದ್ಯವು ನಿಶ್ಶಿನ್‌ನಲ್ಲಿರುವ ಕೊರೋಗಿ ಸ್ಪೋರ್ಟ್ಸ್ ಪಾರ್ಕ್ ಮೈದಾನದಲ್ಲಿ ನಡೆಯುತ್ತಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದಿರುವ ಭಾರತ ತಂಡವು ಬ್ಯಾಟಿಂಗ್ ಮಾಡುತ್ತಿದೆ.

India vs Pakistan Live Cricket Score: ಪಾಕ್ ತಂಡದ 3ನೇ ವಿಕೆಟ್ ಪತನ
IND vs PAK

Updated on: Oct 03, 2026 | 12:55 PM

LIVE NEWS & UPDATES

  • 03 Oct 2026 12:55 PM (IST)

    India vs Pakistan Live Cricket Score: ಶತಕ ಪೂರೈಸಿದ ಪಾಕ್

    • ರವಿ ಬಿಷ್ಣೋಯ್ ಎಸೆತದಲ್ಲಿ ಭರ್ಜರಿ ಸಿಕ್ಸ್ ಸಿಡಿಸಿದ ಹಸನ್ ನವಾಝ್
    • ಈ ಸಿಕ್ಸರ್​ನೊಂದಿಗೆ 12.2 ಓವರ್​ಗಳಲ್ಲಿ ಶತಕ ಪೂರೈಸಿದ ಪಾಕಿಸ್ತಾನ್
    • 28 ಎಸೆತಗಳಲ್ಲಿ ಅರ್ಧಶತಕ ಬಾರಿಸಿದ ಹಸನ್ ನವಾಝ್
    • 13 ಓವರ್​ಗಳಲ್ಲಿ 117 ರನ್ ಕಲೆಹಾಕಿದ ಪಾಕಿಸ್ತಾನ್
  • 03 Oct 2026 12:40 PM (IST)

    India vs Pakistan Live Cricket Score: 10 ಓವರ್ ಮುಕ್ತಾಯ

    • 10 ಓವರ್​ಗಳಲ್ಲಿ 76 ರನ್ ಕಲೆಹಾಕಿದ ಪಾಕಿಸ್ತಾನ್
    • 3 ವಿಕೆಟ್ ಕಬಳಿಸುವಲ್ಲಿ ಯಶಸ್ವಿಯಾದ ಟೀಮ್ ಇಂಡಿಯಾ
    • ಪಾಕಿಸ್ತಾನ್ ತಂಡಕ್ಕೆ ಗೆಲ್ಲಲು 60 ಎಸೆತಗಳಲ್ಲಿ 136 ರನ್​ಗಳ ಗುರಿ
    • ಕ್ರೀಸ್​ನಲ್ಲಿ ಹಸನ್ ನವಾಝ್ ಹಾಗೂ ಸೈಮ್ ಅಯ್ಯೂಬ್ ಬ್ಯಾಟಿಂಗ್.
  • 03 Oct 2026 12:26 PM (IST)

    India vs Pakistan Live Cricket Score: ಪಾಕ್ ತಂಡದ 3ನೇ ವಿಕೆಟ್ ಪತನ

    • ಬೌಂಡರಿ ಲೈನ್​ನಲ್ಲಿ ವಾಷಿಂಗ್ಟನ್ ಸುಂದರ್ ಅತ್ಯುತ್ತಮ ಕ್ಯಾಚ್
    • 18 ಎಸೆತಗಳಲ್ಲಿ 23 ರನ್ ಬಾರಿಸಿ ವಿಕೆಟ್ ಒಪ್ಪಿಸಿದ ಮಾಝ್ ಸದಾಕತ್
    • ಟೀಮ್ ಇಂಡಿಯಾಗೆ ಮೂರನೇ ಯಶಸ್ಸು ತಂದುಕೊಟ್ಟ ಅಕ್ಷರ್ ಪಟೇಲ್
    • ಕ್ರೀಸ್​ನಲ್ಲಿ ಸೈಮ್ ಅಯ್ಯೂಬ್ ಹಾಗೂ ಹಸನ್ ನವಾಝ್ ಬ್ಯಾಟಿಂಗ್

    ಪಾಕಿಸ್ತಾನ್- 39/3 (6.1)

  • 03 Oct 2026 12:24 PM (IST)

    India vs Pakistan Live Cricket Score: ಪವರ್​ಪ್ಲೇ ಮುಕ್ತಾಯ

    • ಪವರ್​ಪ್ಲೇನಲ್ಲಿ ಕೇವಲ 39 ರನ್​ ಕಲೆಹಾಕಿದ ಪಾಕಿಸ್ತಾನ್
    • ಮೊದಲ 6 ಓವರ್​ಗಳಲ್ಲಿ 2 ವಿಕೆಟ್ ಕಬಳಿಸಿದ ಟೀಮ್ ಇಂಡಿಯಾ
    • ಕ್ರೀಸ್​ನಲ್ಲಿ ಹಸನ್ ನವಾಝ್ ಹಾಗೂ ಮಾಝ್ ಸದಾಕತ್ ಬ್ಯಾಟಿಂಗ್

    ಪಾಕಿಸ್ತಾನ್- 39/2 (6)

  • 03 Oct 2026 12:20 PM (IST)

    India vs Pakistan Live Cricket Score: ಪಾಕ್ ತಂಡದ 2ನೇ ವಿಕೆಟ್ ಪತನ

    • ಉಸ್ಮಾನ್ ಖಾನ್ (3) ವಿಕೆಟ್ ಕಬಳಿಸಿದ ಅಕ್ಷರ್ ಪಟೇಲ್
    • ಟೀಮ್ ಇಂಡಿಯಾಗೆ ಎರಡನೇ ಯಶಸ್ಸು.
    • 5 ಓವರ್​ಗಳ ಮುಕ್ತಾಯದ ವೇಳೆಗೆ ಪಾಕ್ ಸ್ಕೋರ್ 36 ರನ್​ಗಳು.
    • ಕ್ರೀಸ್​ನಲ್ಲಿ ಮಾಝ್ ಸದಾಕತ್, ಹಸನ್ ನವಾಝ್ ಬ್ಯಾಟಿಂಗ್

    ಪಾಕಿಸ್ತಾನ್ – 36/2 (5)

  • 03 Oct 2026 12:15 PM (IST)

    India vs Pakistan Live Cricket Score: ಪಾಕ್ ತಂಡದ ಮೊದಲ ವಿಕೆಟ್ ಪತನ

    • ಟೀಮ್ ಇಂಡಿಯಾಗೆ ಮೊದಲ ಯಶಸ್ಸು ತಂದುಕೊಟ್ಟ ವಾಷಿಂಗ್ಟನ್ ಸುಂದರ್
    • ಸುಂದರ್ ಎಸೆತದಲ್ಲಿ ಬೌಂಡರಿ ಲೈನ್​ನಲ್ಲಿ ಕ್ಯಾಚ್ ನೀಡಿ ಫರ್ಹಾನ್ (10)
    • ಕ್ರೀಸ್​ನಲ್ಲಿ ಮಾಝ್ ಸದಾಕತ್ ಹಾಗೂ ಉಸ್ಮಾನ್ ಖಾನ್ ಬ್ಯಾಟಿಂಗ್

    ಪಾಕಿಸ್ತಾನ್- 33/1 (3.4)

  • 03 Oct 2026 12:07 PM (IST)

    India vs Pakistan Live Cricket Score: ಪಾಕಿಸ್ತಾನ್ ಉತ್ತಮ ಆರಂಭ

    • 2 ಓವರ್​ಗಳಲ್ಲಿ 21 ರನ್ ಕಲೆಹಾಕಿದ ಪಾಕಿಸ್ತಾನ್
    • ಕ್ರೀಸ್​ನಲ್ಲಿ ಮಾಝ್ ಸದಾಕತ್ ಹಾಗೂ ಫರ್ಹಾನ್ ಬ್ಯಾಟಿಂಗ್
    • ಪಾಕಿಸ್ತಾನಕ್ಕೆ 212 ರನ್​ಗಳ ಗುರಿ ನೀಡಿದ ಟೀಮ್ ಇಂಡಿಯಾ

    ಪಾಕಿಸ್ತಾನ್- 21/0 (2)

  • 03 Oct 2026 11:41 AM (IST)

    India vs Pakistan Live Cricket Score: ಟೀಮ್ ಇಂಡಿಯಾ ಇನಿಂಗ್ಸ್ ಅಂತ್ಯ

    • 20 ಓವರ್​ಗಳಲ್ಲಿ 6 ವಿಕೆಟ್ ನಷ್ಟಕ್ಕೆ 211 ರನ್ ಕಲೆಹಾಕಿದ ಟೀಮ್ ಇಂಡಿಯಾ
    • ಪಾಕಿಸ್ತಾನ್ ತಂಡಕ್ಕೆ 20 ಓವರ್​​ಗಳಲ್ಲಿ 212 ರನ್​ಗಳ ಗುರಿ
    • ಟೀಮ್ ಇಂಡಿಯಾ ಪರ ಅರ್ಧಶತಕ ಬಾರಿಸಿದ ಅಭಿಷೇಕ್ ಶರ್ಮಾ (61), ತಿಲಕ್ ವರ್ಮಾ (51)
    • ಪಾಕಿಸ್ತಾನ್ ಪರ ತಲಾ 2 ವಿಕೆಟ್ ಪಡೆದ ಅಹ್ಮದ್ ದಾನಿಯಾಲ್ ಹಾಗೂ ಅರಾಫತ್ ಮಿನ್ಹಾಸ್.

    ಭಾರತ – 211/6 (20)

  • 03 Oct 2026 11:33 AM (IST)

    India vs Pakistan Live Cricket Score: ಹ್ಯಾಟ್ರಿಕ್ ಬೌಂಡರಿ

    • ಸೈಮ್ ಅಯ್ಯೂಬ್ ಎಸೆದ ಮೊದಲ ಎಸೆತದಲ್ಲೇ ಸಿಕ್ಸರ್ ಸಿಡಿಸಿದ ದುಬೆ
    • ಎರಡನೇ ಎಸೆತದಲ್ಲೂ ದುಬೆ ಬ್ಯಾಟ್​ನಿಂದ ಭರ್ಜರಿ ಸಿಕ್ಸರ್
    • ಮೂರನೇ ಎಸೆತದಲ್ಲಿ ಆಫ್ ಸೈಡ್​ನತ್ತ ಆಕರ್ಷಕ ಫೋರ್
    • 19ನೇ ಓವರ್​ನಲ್ಲಿ 23 ರನ್​ ಕಲೆಹಾಕಿದ ಟೀಮ್ ಇಂಡಿಯಾ
    • ಕ್ರೀಸ್​ನಲ್ಲಿ ಶಿವಂ ದುಬೆ ಹಾಗೂ ತಿಲಕ್ ವರ್ಮಾ ಬ್ಯಾಟಿಂಗ್

    ಭಾರತ- 195/5 (19)

  • 03 Oct 2026 11:28 AM (IST)

    India vs Pakistan Live Cricket Score: ವೆಲ್ಕಂ ಬೌಂಡರಿ

    • ಸುಫಿಯಾನ್ ಎಸೆದ ಮೊದಲ ಎಸೆತದಲ್ಲಿ ಸ್ಟ್ರೈಟ್ ಹಿಟ್ ಬೌಂಡರಿ ಬಾರಿಸಿದ ತಿಲಕ್ ವರ್ಮಾ
    • ಐದನೇ ಎಸೆತದಲ್ಲಿ ತಿಲಕ್ ವರ್ಮಾ ಬ್ಯಾಟ್​ನಿಂದ ಲೆಗ್ ಸೈಡ್​ನತ್ತ ಭರ್ಜರಿ ಸಿಕ್ಸ್​
    • 18 ಓವರ್​ಗಳ ಮುಕ್ತಾಯದ ವೇಳೆಗೆ 172 ರನ್​ಗಳು
    • ಕ್ರೀಸ್​ನಲ್ಲಿ ಶಿವಂ ದುಬೆ ಹಾಗೂ ತಿಲಕ್ ವರ್ಮಾ ಬ್ಯಾಟಿಂಗ್​
  • 03 Oct 2026 11:21 AM (IST)

    India vs Pakistan Live Cricket Score: ಬೌಂಡರಿ ಇಲ್ಲದ 4 ಓವರ್​!

    • ಕಳೆದ 4 ಓವರ್​ಗಳಲ್ಲಿ ಒಂದೇ ಒಂದು ಬೌಂಡರಿ ಬಾರಿಸಿದ ಟೀಮ್ ಇಂಡಿಯಾ
    • ನಿಧಾನಗತಿಯ ಬ್ಯಾಟಿಂಗ್ ಮುಂದುವರೆಸಿದ ಟೀಮ್ ಇಂಡಿಯಾ
    • ಕ್ರೀಸ್​ನಲ್ಲಿ ತಿಲಕ್ ವರ್ಮಾ ಹಾಗೂ ಶಿವಂ ದುಬೆ ಬ್ಯಾಟಿಂಗ್.
    • 16 ಓವರ್​ಗಳ ಮುಕ್ತಾಯದ ವೇಳೆಗೆ ಟೀಮ್ ಇಂಡಿಯಾ ಸ್ಕೋರ್ 142 ರನ್​ಗಳು
  • 03 Oct 2026 11:12 AM (IST)

    India vs Pakistan Live Cricket Score: ದಿಢೀರ್ ಕುಸಿತಕ್ಕೊಳಗಾದ ಟೀಮ್ ಇಂಡಿಯಾ

    • ಟೀಮ್ ಇಂಡಿಯಾದ 5ನೇ ವಿಕೆಟ್ ಪತನ
    • ಅಬ್ರಾರ್ ಎಸೆತದಲ್ಲಿ ಸುಲಭ ಕ್ಯಾಚ್ ನೀಡಿದ ಔಟಾದ ಶ್ರೇಯಸ್ ಅಯ್ಯರ್
    • 24 ಎಸೆತಗಳಲ್ಲಿ ಕೇವಲ 21 ರನ್​ ಗಳಿಸಿ ವಿಕೆಟ್ ಒಪ್ಪಿಸಿದ ಟೀಮ್ ಇಂಡಿಯಾ ನಾಯಕ
    • ಅಭಿಷೇಕ್ ಶರ್ಮಾ ಔಟಾದ ಬೆನ್ನಲ್ಲೇ ಇಶಾನ್ ಕಿಶನ್ ಹಾಗೂ ಶ್ರೇಯಸ್ ಅಯ್ಯರ್ ಔಟ್.
    • ಕ್ರೀಸ್​ನಲ್ಲಿ ತಿಲಕ್ ವರ್ಮಾ ಹಾಗೂ ಶಿವಂ ದುಬೆ ಬ್ಯಾಟಿಂಗ್

    ಭಾರತ-  133–5(14.1)

  • 03 Oct 2026 11:06 AM (IST)

    India vs Pakistan Live Cricket Score: ಟೀಮ್ ಇಂಡಿಯಾದ 4ನೇ ವಿಕೆಟ್ ಪತನ

    • ಅರಾಫತ್ ಎಸೆತದಲ್ಲಿ ಇಶಾನ್ ಕಿಶನ್ ಕ್ಲೀನ್ ಬೌಲ್ಡ್​
    • 18 ಎಸೆತಗಳಲ್ಲಿ ಕೇವಲ 20 ರನ್​ಗಳಿಸಿದ ಇಶಾನ್ ಕಿಶನ್
    • ಟೀಮ್ ಇಂಡಿಯಾದ 4 ವಿಕೆಟ್​ಗಳು ಪತನ
    • ಕ್ರೀಸ್​ನಲ್ಲಿ ಶ್ರೇಯಸ್ ಅಯ್ಯರ್ ಹಾಗೂ ತಿಲಕ್ ವರ್ಮಾ ಬ್ಯಾಟಿಂಗ್

    ಭಾರತ – 128-4(13.1)

  • 03 Oct 2026 11:02 AM (IST)

    India vs Pakistan Live Cricket Score: ಬೃಹತ್ ಮೊತ್ತದತ್ತ ಟೀಮ್ ಇಂಡಿಯಾ

    • 12 ಓವರ್​ಗಳಲ್ಲಿ 124 ರನ್ ಕಲೆಹಾಕಿದ ಟೀಮ್ ಇಂಡಿಯಾ
    • 12ನೇ ಓವರ್​ನಲ್ಲಿ ಯಾವುದೇ ಬೌಂಡರಿ ಇಲ್ಲ.
    • ಕೊನೆಯ 8 ಓವರ್​ಗಳಲ್ಲಿ ಬೃಹತ್ ಮೊತ್ತ ಪೇರಿಸುವ ಇರಾದೆಯಲ್ಲಿ ಭಾರತ
    • ಕ್ರೀಸ್​ನಲ್ಲಿ ಇಶಾನ್ ಕಿಶನ್ ಹಾಗೂ ಶ್ರೇಯಸ್ ಅಯ್ಯರ್ ಬ್ಯಾಟಿಂಗ್
  • 03 Oct 2026 10:51 AM (IST)

    India vs Pakistan Live Cricket Score: 10 ಓವರ್ ಮುಕ್ತಾಯ

    • 10 ಓವರ್​ಗಳು ಮುಕ್ತಾಯ
    • ಹತ್ತು ಓವರ್​​​ಗಳಲ್ಲಿ 114 ರನ್​ ಕಲೆಹಾಕಿದ ಟೀಮ್ ಇಂಡಿಯಾ
    • ಕ್ರೀಸ್​ನಲ್ಲಿ ಶ್ರೇಯಸ್ ಅಯ್ಯರ್ ಹಾಗೂ ಇಶಾನ್ ಕಿಶನ್ ಬ್ಯಾಟಿಂಗ್.

    ಭಾರತ – 114–3 (10)

  • 03 Oct 2026 10:46 AM (IST)

    India vs Pakistan Live Cricket Score: ಟೀಮ್ ಇಂಡಿಯಾದ 3ನೇ ವಿಕೆಟ್ ಪತನ

    • 28 ಎಸೆತಗಳಲ್ಲಿ 61 ರನ್​ ಬಾರಿಸಿ ವಿಕೆಟ್ ಒಪ್ಪಿಸಿದ ಅಭಿಷೇಕ್ ಶರ್ಮಾ
    • ಟೀಮ್ ಇಂಡಿಯಾದ ಮೂರನೇ ವಿಕೆಟ್ ಪತನ
    • 8 ಓವರ್​ಗಳಲ್ಲಿ 98 ರನ್ ಕಲೆಹಾಕಿರುವ ಟೀಮ್ ಇಂಡಿಯಾ

    ಕ್ರೀಸ್​ನಲ್ಲಿ ಶ್ರೇಯಸ್ ಅಯ್ಯರ್ ಹಾಗೂ ಇಶಾನ್ ಕಿಶನ್ ಬ್ಯಾಟಿಂಗ್.

  • 03 Oct 2026 10:37 AM (IST)

    India vs Pakistan Live Cricket Score: ಟೀಮ್ ಇಂಡಿಯಾ ಭರ್ಜರಿ ಬ್ಯಾಟಿಂಗ್

    • ಪವರ್​ಪ್ಲೇನಲ್ಲಿ ಬರೋಬ್ಬರಿ 81 ರನ್ ಕಲೆಹಾಕಿದ
    • ಮೊದಲ 6 ಓವರ್​ಗಳಲ್ಲಿ 2 ವಿಕೆಟ್ ಕಬಳಿಸಿದ ಪಾಕಿಸ್ತಾನ್
    • ಅರ್ಧಶತಕ ಸಿಡಿಸಿದ ಅಭಿಷೇಕ್ ಶರ್ಮಾ
    • ವೈಭವ್ ಸೂರ್ಯವಂಶಿ (15) ಹಾಗೂ ಸಂಜು ಸ್ಯಾಮ್ಸನ್ ಔಟ್

    ಕ್ರೀಸ್​ನಲ್ಲಿ ಅಭಿಷೇಕ್ ಶರ್ಮಾ ಹಾಗೂ ಶ್ರೇಯಸ್ ಅಯ್ಯರ್ ಬ್ಯಾಟಿಂಗ್.

    ಭಾರತ- 81–2(6)

ಜಪಾನ್​ನ ನಿಶ್ಶಿನ್‌ನಲ್ಲಿರುವ ಕೊರೋಗಿ ಸ್ಪೋರ್ಟ್ಸ್ ಪಾರ್ಕ್ ಮೈದಾನದಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್ ಟಿ20 ಟೂರ್ನಿಯ ಫೈನಲ್​ನಲ್ಲಿ ಭಾರತ ಮತ್ತು ಪಾಕಿಸ್ತಾನ್ ತಂಡಗಳು ಮುಖಾಮುಖಿಯಾಗಿವೆ. ಈ ಪಂದ್ಯದಲ್ಲಿ ಟಾಸ್ ಗೆದ್ದಿರುವ ಟೀಮ್ ಇಂಡಿಯಾ ನಾಯಕ ಶ್ರೇಯಸ್ ಅಯ್ಯರ್ ಬ್ಯಾಟಿಂಗ್ ಆಯ್ದುಕೊಂಡಿದ್ದಾರೆ.

ಭಾರತ (ಪ್ಲೇಯಿಂಗ್ XI): ವೈಭವ್ ಸೂರ್ಯವಂಶಿ, ಅಭಿಷೇಕ್ ಶರ್ಮಾ, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಶ್ರೇಯಸ್ ಅಯ್ಯರ್ (ನಾಯಕ), ಇಶಾನ್ ಕಿಶನ್, ತಿಲಕ್ ವರ್ಮಾ, ಶಿವಂ ದುಬೆ, ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್, ರವಿ ಬಿಷ್ಣೋಯ್, ಜಸ್​ಪ್ರೀತ್ ಬುಮ್ರಾ.

ಪಾಕಿಸ್ತಾನ್ (ಪ್ಲೇಯಿಂಗ್ XI): ಸಾಹಿಬ್​ಝಾದ ಫರ್ಹಾನ್ (ನಾಯಕ), ಮಾಝ್ ಸದಾಕತ್, ಉಸ್ಮಾನ್ ಖಾನ್ (ವಿಕೆಟ್ ಕೀಪರ್), ಸೈಮ್ ಅಯೂಬ್, ಹಸನ್ ನವಾಝ್, ಅಬ್ದುಲ್ ಸಮದ್, ಅರಾಫತ್ ಮಿನ್ಹಾಸ್, ಅಹ್ಮದ್ ದಾನಿಯಾಲ್, ಸಾದ್ ಮಸೂದ್, ಅಬ್ರಾರ್ ಅಹ್ಮದ್, ಸುಫ್ಯಾನ್ ಮುಖೀಮ್.

 

Published On - 10:33 am, Sat, 3 October 26

ಝಾಹಿರ್ ಯೂಸುಫ್

ಟಿವಿ9 ಡಿಜಿಟಲ್ ಮುಖ್ಯ ಉಪ ಸಂಪಾದಕ. 10 ವರ್ಷಗಳಿಂದ ಕನ್ನಡ ಡಿಜಿಟಲ್​ ಮಾಧ್ಯಮದಲ್ಲಿ ಪತ್ರಿಕಾ ವೃತ್ತಿ. ಕ್ರೀಡಾ ಸುದ್ದಿ, ದೀರ್ಘ ಲೇಖನ, ವಿಶ್ಲೇಷಣೆ, ಹೀಗೆ ಎಲ್ಲ ತರಹದ ಬರಹದಲ್ಲೂ ಅನುಭವ. ಪ್ರಸ್ತುತ ವಿದ್ಯಮಾನಗಳ ವ್ಯಾಖ್ಯಾನ, ಚರ್ಚೆಯಲ್ಲಿ ನೈಪುಣ್ಯ. ಈ ಹಿಂದೆ ಉದಯವಾಣಿ, ನ್ಯೂಸ್ 18 ಕನ್ನಡ ಡಿಜಿಟಲ್​​ನಲ್ಲಿ ಕೆಲಸ ಮಾಡಿದ ಅನುಭವ. ಆಸಕ್ತಿದಾಯಕ ವಿಷಯ ಕ್ರೀಡೆ, ಸಿನಿಮಾ ಮತ್ತು ರಾಜಕೀಯ.

Read More
Loading...
Unable to load recommendations.
Follow Us