
ಆಸ್ಟ್ರೇಲಿಯಾ ವಿರುದ್ಧದ 2ನೇ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್ನಲ್ಲಿ ಬಾಂಗ್ಲಾದೇಶ್ ತಂಡ ಕೇವಲ 64 ರನ್ಗಳಿಗೆ ಆಲೌಟ್ ಆಗಿದೆ. ಮಕೈನ ಗ್ರೇಟ್ ಬ್ಯಾರಿಯರ್ ರೀಫ್ ಅರೆನಾ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ಆಸ್ಟ್ರೇಲಿಯಾ ತಂಡದ ನಾಯಕ ಪ್ಯಾಟ್ ಕಮಿನ್ಸ್ ಬೌಲಿಂಗ್ ಆಯ್ದುಕೊಂಡಿದ್ದರು.
ಅದರಂತೆ ಮೊದಲು ಬ್ಯಾಟ್ ಮಾಡಿದ ಬಾಂಗ್ಲಾದೇಶ್ ತಂಡಕ್ಕೆ ಮಿಚೆಲ್ ಸ್ಟಾರ್ಕ್ ಮೊದಲ ಎಸೆತದಲ್ಲೇ ಆಘಾತ ನೀಡಿದ್ದರು. ಆರಂಭಿಕ ದಾಂಡಿಗ ಶಾದ್ಮನ್ ಇಸ್ಲಾಂ (0) ವಿಕೆಟ್ ಕಬಳಿಸಿ ಶುಭಾರಂಭ ಮಾಡಿದ ಸ್ಟಾರ್ಕ್ , ಮೂರನೇ ಓವರ್ನ ಮೊದಲ ಎಸೆತದಲ್ಲಿ ತಂಝಿದ್ ಹಸನ್ (0) ವಿಕೆಟ್ ಕಬಳಿಸಿದರು.
ಇದರ ಬೆನ್ನಲ್ಲೇ, ಅಂದರೆ 2ನೇ ಎಸೆತದಲ್ಲಿ ನಾಯಕ ನಜ್ಮುಲ್ ಹೊಸೇನ್ ಶಾಂತೊ (0) ಗೆ ಪೆವಿಲಿಯನ್ ಹಾದಿ ತೋರಿಸಿದರು. ಐದನೇ ಓವರ್ನಲ್ಲಿ ಮೋಮಿನುಲ್ ಹಕ್ (0) ವಿಕೆಟ್ ಕಬಳಿಸಿದ ಸ್ಟಾರ್ಕ್ ಆ ಬಳಿಕ ಲಿಟ್ಟನ್ ದಾಸ್ಗೆ (0) ಅವರನ್ನು ಎಲ್ಬಿಡಬ್ಲ್ಯೂ ಮಾಡಿದರು. ಈ ಮೂಲಕ ಕೇವಲ 22 ಎಸೆತಗಳಲ್ಲಿ 5 ವಿಕೆಟ್ ಸಾಧನೆ ಮಾಡಿದರು.
ಇದರ ನಡುವೆ ಪ್ಯಾಟ್ ಕಮಿನ್ಸ್ ಮುಷ್ಫಿಕರ್ ರಹೀಮ್ನ (5) ಕ್ಲೀನ್ ಬೌಲ್ಡ್ ಮಾಡಿದರು. ಮತ್ತೊಂದೆಡೆ ಜೋಶ್ ಹೇಝಲ್‌ವುಡ್ ಹಸನ್ ಮಹಮೂದ್ (10) ವಿಕೆಟ್ ಪಡೆದರು. ಇನ್ನು ಮೆಹದಿ ಹಸನ್ ಮಿರಾಝ್ಗೆ (11) ಪೆವಿಲಿಯನ್ ಹಾದಿ ತೋರಿಸುವಲ್ಲಿ ಕಮಿನ್ಸ್ ಯಶಸ್ವಿಯಾದರು. ಅಂತಿಮವಾಗಿ ಬಾಂಗ್ಲಾದೇಶ್ ತಂಡ ಕೇವಲ 64 ರನ್ಗಳಿಸಿ ಸರ್ವಪತನ ಕಂಡಿತು.
ಆಸ್ಟ್ರೇಲಿಯಾ ಪರ ಮಿಂಚಿನ ದಾಳಿ ಸಂಘಟಿಸಿದ ಮಿಚೆಲ್ ಸ್ಟಾರ್ಕ್ ಕೇವಲ 12 ರನ್ ನೀಡಿ 6 ವಿಕೆಟ್ ಪಡೆದರೆ, ಪ್ಯಾಟ್ ಕಮಿನ್ಸ್ 3 ವಿಕೆಟ್ ಉರುಳಿಸಿ ಮಿಂಚಿದರು.
ಬಾಂಗ್ಲಾದೇಶ್ ಪ್ಲೇಯಿಂಗ್ 11: ಶಾದ್ಮನ್ ಇಸ್ಲಾಂ , ತಂಝಿದ್ ಹಸನ್ ತಮೀಮ್ , ಮೋಮಿನುಲ್ ಹಕ್ , ನಜ್ಮುಲ್ ಹೊಸೇನ್ ಶಾಂತೊ (ನಾಯಕ) , ಮುಷ್ಫಿಕರ್ ರಹೀಮ್ , ಲಿಟ್ಟನ್ ದಾಸ್ (ವಿಕೆಟ್ ಕೀಪರ್), ಮೆಹಿದಿ ಹಸನ್ ಮಿರಾಝ್ , ಹಸನ್ ಮಹಮ್ಮದ್ , ತೈಜುಲ್ ಇಸ್ಲಾಂ , ತಸ್ಕಿನ್ ಅಹ್ಮದ್ , ಶೊರಿಫುಲ್ ಇಸ್ಲಾಂ.
ಇದನ್ನೂ ಓದಿ: WTC ಫೈನಲ್ಗೇರಲು ಪಾಕಿಸ್ತಾನ್ ತಂಡಕ್ಕೆ ಇದೆಯೇ ಅವಕಾಶ? ಇಲ್ಲಿದೆ ಲೆಕ್ಕಾಚಾರ!
ಆಸ್ಟ್ರೇಲಿಯಾ ಪ್ಲೇಯಿಂಗ್ 11: ಟ್ರಾವಿಸ್ ಹೆಡ್ , ಮ್ಯಾಟ್ ರೆನ್ಶಾ , ಮಾರ್ನಸ್ ಲಾಬುಶೇನ್ , ಸ್ಟೀವ್ ಸ್ಮಿತ್ ,
ಕ್ಯಾಮರೋನ್ ಗ್ರೀನ್ , ಅಲೆಕ್ಸ್ ಕ್ಯಾರಿ (ವಿಕೆಟ್ ಕೀಪರ್) , ಬ್ಯೂ ವೆಬ್‌ಸ್ಟರ್ , ಪ್ಯಾಟ್ ಕಮ್ಮಿನ್ಸ್ (ನಾಯಕ) , ಮಿಚೆಲ್ ಸ್ಟಾರ್ಕ್ ,
ನಾಥನ್ ಲಿಯಾನ್ , ಜೋಶ್ ಹೇಝಲ್‌ವುಡ್.