Asia Cup 2025: ವಿಶೇಷ ಬ್ಯಾಟ್ ಬಳಸಿ ಪವರ್-ಹಿಟ್ಟಿಂಗ್ ಅಭ್ಯಾಸ ಮಾಡಿದ ಬಾಂಗ್ಲಾದೇಶ

Asia Cup 2025: ಏಷ್ಯಾಕಪ್ 2025ಕ್ಕಾಗಿ ಬಾಂಗ್ಲಾದೇಶ ತಂಡ ತೀವ್ರ ತಯಾರಿಯಲ್ಲಿದೆ. ಪವರ್ ಹಿಟ್ಟಿಂಗ್‌ ಸಾಮರ್ಥ್ಯ ಹೆಚ್ಚಿಸಲು ಇಂಗ್ಲೆಂಡ್‌ನ ಕೋಚ್ ಜೂಲಿಯನ್ ವುಡ್ ಅವರನ್ನು ನೇಮಿಸಿಕೊಂಡಿದೆ. ಪ್ರೊ ವೆಲಾಸಿಟಿ ಬ್ಯಾಟ್ ಬಳಕೆಯ ಮೂಲಕ ಆಟಗಾರರ ಕೈ-ಕಣ್ಣಿನ ಸಮನ್ವಯ ಸುಧಾರಿಸುವ ಪ್ರಯತ್ನ ನಡೆಯುತ್ತಿದೆ. ಈ ತರಬೇತಿಯ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಬಾಂಗ್ಲಾದೇಶ ತನ್ನ ಮೊದಲ ಪಂದ್ಯವನ್ನು ಸೆಪ್ಟೆಂಬರ್ 11 ರಂದು ಹಾಂಗ್ ಕಾಂಗ್ ವಿರುದ್ಧ ಆಡಲಿದೆ.

Asia Cup 2025: ವಿಶೇಷ ಬ್ಯಾಟ್ ಬಳಸಿ ಪವರ್-ಹಿಟ್ಟಿಂಗ್ ಅಭ್ಯಾಸ ಮಾಡಿದ ಬಾಂಗ್ಲಾದೇಶ
Bangladesh

Updated on: Aug 17, 2025 | 9:20 PM

2025 ರ ಏಷ್ಯಾಕಪ್‌ಗೆ (Asia Cup 2025) ಕ್ಷಣಗಣನೆ ಆರಂಭವಾಗಿದೆ. ಈ ಪಂದ್ಯಾವಳಿ ಸೆಪ್ಟೆಂಬರ್ 9 ರಿಂದ ಪ್ರಾರಂಭವಾಗಲಿದ್ದು, ಇದಕ್ಕಾಗಿ ತಂಡಗಳು ಕಠಿಣ ತಯಾರಿ ನಡೆಸುತ್ತಿವೆ. ಒಟ್ಟು 8 ತಂಡಗಳು ಈ ಟೂರ್ನಿಯಲ್ಲಿ ಭಾಗವಹಿಸಲಿದ್ದು, ಅದರಲ್ಲಿ ಬಾಂಗ್ಲಾದೇಶ ತಂಡ ಕೂಡ ಸೇರಿದೆ. ಈ ಬಾರಿ ಏಷ್ಯಾಕಪ್ ಅನ್ನು ಟಿ20 ಸ್ವರೂಪದಲ್ಲಿ ಆಡಲಾಗುತ್ತಿದೆ. ಹೀಗಾಗಿ ಇದನ್ನು ಗಮನದಲ್ಲಿಟ್ಟುಕೊಂಡು, ಬಾಂಗ್ಲಾದೇಶ ಇತ್ತೀಚೆಗೆ ಪವರ್-ಹಿಟ್ಟಿಂಗ್ ಕೋಚ್ ಜೂಲಿಯನ್ ವುಡ್ ಅವರನ್ನು ತಂಡಕ್ಕೆ ಸೇರಿಸಿಕೊಂಡಿದೆ. ಅದರಂತೆ ತಂಡ ಸೇರಿಕೊಂಡಿರುವ ಜೂಲಿಯನ್ ವುಡ್ ಪ್ರೊ ವೆಲಾಸಿಟಿ ಬ್ಯಾಟ್​ನೊಂದಿಗೆ ಆಟಗಾರರಿಗೆ ತರಬೇತಿ ನೀಡಿದ್ದಾರೆ.

ಬಾಂಗ್ಲಾದೇಶ ತಂಡದ ವಿಶಿಷ್ಟ ಅಭ್ಯಾಸ

ವಾಸ್ತವವಾಗಿ, ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ (BCB) ಇತ್ತೀಚೆಗೆ ಇಂಗ್ಲೆಂಡ್‌ನ ಪವರ್-ಹಿಟ್ಟಿಂಗ್ ಕೋಚ್ ಜೂಲಿಯನ್ ವುಡ್ ಅವರನ್ನು ತನ್ನ ಕ್ರಿಕೆಟಿಗರ ಪವರ್-ಹಿಟ್ಟಿಂಗ್ ಸಾಮರ್ಥ್ಯವನ್ನು ಹೆಚ್ಚಿಸಲು ನೇಮಿಸಿದೆ. ಅದರಂತೆ ಜೂಲಿಯನ್ ವುಡ್ ಈಗ ಬಾಂಗ್ಲಾದೇಶದಲ್ಲಿ ಕ್ರಿಕೆಟಿಗರಿಗೆ ಹೊಸ ಮತ್ತು ಆಧುನಿಕ ಉಪಕರಣಗಳೊಂದಿಗೆ ತರಬೇತಿ ನೀಡುತ್ತಿದ್ದಾರೆ. ಇದೀಗ ಈ ತರಬೇತಿಯ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ.

ಪ್ರೊ ವೆಲಾಸಿಟಿ ಬ್ಯಾಟ್​ನಿಂದ ಉಪಯೋಗವೇನು?

ಪ್ರೊ ವೆಲಾಸಿಟಿ ಬ್ಯಾಟ್ ಅನ್ನು ಸಾಮಾನ್ಯವಾಗಿ ಬೇಸ್‌ಬಾಲ್ ಮತ್ತು ಸಾಫ್ಟ್‌ಬಾಲ್ ಆಟಗಾರರು ಅಭ್ಯಾಸಕ್ಕಾಗಿ ಬಳಸುತ್ತಾರೆ. ಅಲ್ಲದೆ ಈ ಬ್ಯಾಟ್ ಕೈ-ಕಣ್ಣಿನ ಸಮನ್ವಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಪ್ರೊ ವೆಲಾಸಿಟಿ ಬ್ಯಾಟ್‌ನ ಉದ್ದ 32 ಇಂಚುಗಳು ಮತ್ತು ತೂಕ ಸುಮಾರು 1190 ಗ್ರಾಂ ಇರುತ್ತದೆ. ಈ ಬಗ್ಗೆ ಕ್ರಿಕ್‌ಬಜ್‌ ಜೊತೆ ಮಾತನಾಡಿರುವ ಬಾಂಗ್ಲಾದೇಶದ ಬ್ಯಾಟ್ಸ್‌ಮನ್ , ‘ಪ್ರೊವೆಲಾಸಿಟಿ ಬ್ಯಾಟ್‌ ಕಲ್ಪನೆ ನಮಗೆ ಹೊಸದು ಮತ್ತು ನಾವು ಖಂಡಿತವಾಗಿಯೂ ಜೂಲಿಯನ್ ವುಡ್ ಅವರ ಸೆಷನ್ ಅನ್ನು ಆನಂದಿಸುತ್ತಿದ್ದೇವೆ ಎಂದಿದ್ದಾರೆ.

Asia Cup 2025: ಪತ್ರಿಕಾಗೋಷ್ಠಿಯಲ್ಲಿ ಬಾಬರ್ ಆಝಂ ಮಾನ ಕಳೆದ ತಂಡದ ಹೆಡ್ ಕೋಚ್

ಜೂಲಿಯನ್ ವುಡ್ ಈ ಹಿಂದೆ ಇಂಗ್ಲೆಂಡ್ ತಂಡದ ಬ್ಯಾಟ್ಸ್‌ಮನ್‌ಗಳೊಂದಿಗೆ ಪವರ್ ಹಿಟ್ಟಿಂಗ್ ಬ್ಯಾಟಿಂಗ್‌ ಬಗ್ಗೆ ತರಬೇತಿ ನೀಡುತ್ತಿದ್ದರು. ಇದರಿಂದಾಗಿ ಇಂಗ್ಲೆಂಡ್‌ ಆಟಗಾರರ ಪ್ರದರ್ಶನ ಮೊದಲಿಗಿಂತ ಉತ್ತಮವಾಯಿತು. ಮತ್ತೊಂದೆಡೆ, ನಾವು ಏಷ್ಯಾಕಪ್ 2025 ರ ಬಗ್ಗೆ ಮಾತನಾಡಿದರೆ, ಬಾಂಗ್ಲಾದೇಶ ಸೆಪ್ಟೆಂಬರ್ 11 ರಂದು ಹಾಂಗ್ ಕಾಂಗ್ ವಿರುದ್ಧ ತನ್ನ ಮೊದಲ ಪಂದ್ಯವನ್ನು ಆಡಬೇಕಾಗಿದೆ. ಶ್ರೀಲಂಕಾ ಮತ್ತು ಅಫ್ಘಾನಿಸ್ತಾನ ಕೂಡ ಈ ತಂಡದ ಗುಂಪಿನಲ್ಲಿವೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ