6,6,6,6,6,6,6,6: ಸಿಕ್ಸರ್​ಗಳ ಸುರಿಮಳೆ, 8 ಎಸೆತಗಳಲ್ಲಿ 8 ಸಿಕ್ಸ್​

Updated on: Nov 21, 2024 | 1:05 PM

ಸ್ಪೇನ್ ಟಿ10 ಪಂದ್ಯದಲ್ಲಿ 16 ಎಸೆತಗಳನ್ನು ಎದುರಿಸಿದ ಅಲಿ ಹಸನ್ 8 ಸಿಕ್ಸ್ ಹಾಗೂ 1 ಫೋರ್​​ನೊಂದಿಗೆ ಅಜೇಯ 55 ರನ್ ಬಾರಿಸಿದ್ದಾರೆ. ಈ ಎಂಟು ಸಿಕ್ಸ್​ಗಳು ಮೂಡಿಬಂದಿರುವುದು ಸತತ ಎಂಟು ಎಸೆತಗಳಲ್ಲಿ ಎಂಬುದು ವಿಶೇಷ.

ಕ್ರಿಕೆಟ್ ಇತಿಹಾಸದಲ್ಲಿ ಒಂದೇ ಓವರ್​ನಲ್ಲಿ 14 ಆಟಗಾರರು 6 ಸಿಕ್ಸ್​ ಸಿಡಿಸಿದ್ದಾರೆ. ಈ ಪಟ್ಟಿಯಲ್ಲಿ ಮೊದಲಿಗರು ಸರ್ ಗ್ಯಾರಿ ಸೋಬರ್ಸ್. ಹಾಗೆಯೇ ಸಾಧನೆ ಮಾಡಿದ ಕೊನೆಯ ಬ್ಯಾಟರ್ ದೆಹಲಿಯ ಪ್ರಿಯಾಂಶ್ ಆರ್ಯ. ಈ ಸಾಧನೆಗಳ ನಡುವೆ ಟಿ10 ಲೀಗ್​​ನಲ್ಲಿ ಬ್ಯಾಟರ್​ ಒಬ್ಬರು 8 ಎಸೆತಗಳಲ್ಲಿ 8 ಸಿಕ್ಸ್ ಸಿಡಿಸಿ ಇಡೀ ವಿಶ್ವದ ಗಮನ ಸೆಳೆದಿದ್ದಾರೆ. ಒಂದೇ ಓವರ್​ನಲ್ಲಿ ಅದು ಹೇಗೆ ಸಾಧ್ಯ ಎಂಬ ಪ್ರಶ್ನೆ ಮೂಡುವುದು ಸಹಜ.

ಆದರೆ ಬಾರ್ಸಿಲೋನಾದ ಅಲಿ ಹಸನ್ ಈ ಸಾಧನೆ ಮಾಡಿದ್ದು 2 ಓವರ್​ಗಳ ನಡುವೆ ಎಂಬುದು ವಿಶೇಷ. ಸ್ಪೇನ್​ನಲ್ಲಿ ನಡೆದ ಟಿ10 ಪಂದ್ಯದಲ್ಲಿ ಬಾರ್ಸಿಲೋನಾ ಹಾಗೂ ಯುನೈಟೆಡ್ ಸಿಸಿ ತಂಡಗಳು ಮುಖಾಮುಖಿಯಾಗಿದ್ದವು. ಮೊದಲು ಬ್ಯಾಟ್ ಮಾಡಿದ ಬಾರ್ಸಿಲೋನಾ ತಂಡವು 6.1 ಓವರ್‌ಗಳಲ್ಲಿ 4 ವಿಕೆಟ್ ಕಳೆದುಕೊಂಡು 113 ರನ್ ಗಳಿಸಿತ್ತು.

ಈ ವೇಳೆ ಕಣಕ್ಕಿಳಿದ ಅಲಿ ಹಸನ್ 6.2 ಓವರ್​ನಿಂದ ಸತತ ಐದು ಸಿಕ್ಸ್​ಗಳನ್ನು ಸಿಡಿಸಿದರು. ಇದಾದ ಬಳಿಕ 8ನೇ ಓವರ್‌ನ 2ನೇ ಮತ್ತೆ ಸ್ಟ್ರೈಕ್ ಪಡೆದುಕೊಂಡರು. ಈ ವೇಳೆ ಬ್ಯಾಕ್ ಟು ಬ್ಯಾಕ್ ಮೂರು ಸಿಕ್ಸ್​ಗಳನ್ನು ಬಾರಿಸಿದರು. ಈ ಮೂಲಕ 8 ಎಸೆತಗಳಲ್ಲಿ ಸತತ 8 ಸಿಕ್ಸ್ ಬಾರಿಸಿ ಅಬ್ಬರಿಸಿದರು.
ಅಂತಿಮವಾಗಿ 16 ಎಸೆತಗಳನ್ನು ಎದುರಿಸಿದ ಅಲಿ ಹಸನ್ 8 ಸಿಕ್ಸ್ ಹಾಗೂ 1 ಫೋರ್​​ನೊಂದಿಗೆ ಅಜೇಯ 55 ರನ್ ಬಾರಿಸಿ ಮಿಂಚಿದರು. ಈ ಮೂಲಕ ಬಾರ್ಸಿಲೋನಾ ತಂಡ ನಿಗದಿತ 10 ಓವರ್‌ಗಳಲ್ಲಿ 4 ವಿಕೆಟ್‌ಗೆ 194 ರನ್ ಗಳಿಸಿತು. ಈ ಗುರಿ ಬೆನ್ನಟ್ಟಿದ ಯುನೈಟೆಡ್ ಸಿಸಿ ತಂಡ 9.4 ಓವರ್ ಗಳಲ್ಲಿ 95 ರನ್ ಗಳಿಗೆ ಕುಸಿದು ಹೀನಾಯ ಸೋಲನುಭವಿಸಿತು.

 

 

Loading...
Unable to load recommendations.
Follow Us
ಝಾಹಿರ್ ಯೂಸುಫ್

ಟಿವಿ9 ಡಿಜಿಟಲ್ ಮುಖ್ಯ ಉಪ ಸಂಪಾದಕ. 10 ವರ್ಷಗಳಿಂದ ಕನ್ನಡ ಡಿಜಿಟಲ್​ ಮಾಧ್ಯಮದಲ್ಲಿ ಪತ್ರಿಕಾ ವೃತ್ತಿ. ಕ್ರೀಡಾ ಸುದ್ದಿ, ದೀರ್ಘ ಲೇಖನ, ವಿಶ್ಲೇಷಣೆ, ಹೀಗೆ ಎಲ್ಲ ತರಹದ ಬರಹದಲ್ಲೂ ಅನುಭವ. ಪ್ರಸ್ತುತ ವಿದ್ಯಮಾನಗಳ ವ್ಯಾಖ್ಯಾನ, ಚರ್ಚೆಯಲ್ಲಿ ನೈಪುಣ್ಯ. ಈ ಹಿಂದೆ ಉದಯವಾಣಿ, ನ್ಯೂಸ್ 18 ಕನ್ನಡ ಡಿಜಿಟಲ್​​ನಲ್ಲಿ ಕೆಲಸ ಮಾಡಿದ ಅನುಭವ. ಆಸಕ್ತಿದಾಯಕ ವಿಷಯ ಕ್ರೀಡೆ, ಸಿನಿಮಾ ಮತ್ತು ರಾಜಕೀಯ.

Read More