ಹೆಚ್ಚಿನ ಚಿಕಿತ್ಸೆಗಾಗಿ ಕ್ರಿಕೆಟಿಗ ಮಯಾಂಕ್ ಅಗರ್ವಾಲ್‌ ತ್ರಿಪುರಾದಿಂದ ಬೆಂಗಳೂರಿಗೆ ಶಿಫ್ಟ್

|

Updated on: Jan 31, 2024 | 9:12 PM

cricketer Mayank Agarwal: ಕರ್ನಾಟಕ ಕ್ರಿಕೆಟ್ ತಂಡದ ಕ್ಯಾಪ್ಟನ್ ಮಯಾಂಕ್ ಅರ್ಗವಾಲ್ ಅವರನ್ನು ತ್ರಿಪುರದಿಂದ ಬೆಂಗಳೂರಿಗೆ ಶಿಫ್ಟ್ ಮಾಡಲಾಗಿದೆ. ಹೆಚ್ಚಿನ ಚಿಕಿತ್ಸೆಯನ್ನು ಬೆಂಗಳೂರಿನಲ್ಲೇ ಪಡೆದುಕೊಳ್ಳುವುದರಿಂದ ಅವರನ್ನು ತ್ರಿಪುರದಿಂದ ಶಿಫ್ಟ್ ಮಾಡಲಾಗಿದೆ.

ಹೆಚ್ಚಿನ ಚಿಕಿತ್ಸೆಗಾಗಿ ಕ್ರಿಕೆಟಿಗ ಮಯಾಂಕ್ ಅಗರ್ವಾಲ್‌ ತ್ರಿಪುರಾದಿಂದ ಬೆಂಗಳೂರಿಗೆ ಶಿಫ್ಟ್
ಮಯಾಂಕ್ ಅರ್ಗವಾಲ್
Follow us on

ನೀರು ಎಂದುಕೊಂಡು ಸ್ಪಿರಿಟಿ ಸೇವಿಸಿ ಅಸ್ವಸ್ಥರಾಗಿರುವ ಕರ್ನಾಟಕ ಕ್ರಿಕೆಟ್ ತಂಡದ ಕ್ಯಾಪ್ಟನ್ ಮಯಾಂಕ್ ಅರ್ಗವಾಲ್ (cricketer Mayank Agarwal) ಅವರನ್ನು ತ್ರಿಪುರದಿಂದ ಬೆಂಗಳೂರಿಗೆ ಶಿಫ್ಟ್ ಮಾಡಲಾಗಿದೆ. ಇಂದು(ಜನವರಿ 31) ತ್ರಿಪುರಾದಿಂದ 6E525 ಇಂಡಿಗೋ ವಿಮಾನದ ಮೂಲಕ ಬೆಂಗಳೂರಿಗೆ ಆಗಮಿಸಿದ್ದು, ಹೆಚ್ಚಿನ ಚಿಕಿತ್ಸೆಯನ್ನು ಬೆಂಗಳೂರಿನಲ್ಲೇ ಪಡೆಯಲಿದ್ದಾರೆ ಎಂದು ತಿಳಿದುಬಂದಿದೆ.

ಇನ್ನು ಮಯಾಂಕ್ ಅಗರ್ವಾಲ್ ಆರೋಗ್ಯದ ಬಗ್ಗೆ ಕರ್ನಾಟಕ ಕ್ರಿಕೆಟ್‌ ತಂಡದ ಮ್ಯಾನೇಜರ್ ರಮೇಶ್ ಪ್ರತಿಕ್ರಿಯಿಸಿದ್ದು, ಮಯಾಂಕ್ ಅರ್ಗವಾಲ್ ಅವರು ಅಪಾಯದಿಂದ ಪಾರಾಗಿದ್ದಾರೆ. ವಿಮಾನ ನಿಲ್ದಾಣದಿಂದ ಮನೆಗೆ ತೆರಳುತ್ತಿದ್ದು, ನಾಳೆ (ಫೆಬ್ರವರಿ 01) ಬೆಂಗಳೂರಿನಲ್ಲಿ ವೈದ್ಯರನ್ನ ಸಂಪರ್ಕಿಸಲಿದ್ದಾರೆ. ಥ್ರೋಟ್ ಇನ್ಪೇಕ್ಷನ್ ಆಗಿರುವ ಕಾರಣ ಅವರಿಗೆ ಮಾತನಾಡಲು ಆಗುತ್ತಿಲ್ಲ ಎಂದು ಮಾಹಿತಿ ನೀಡಿದರು.

ಇದನ್ನೂ ಓದಿ: Mayank Agarwal: ವಿಷಕಾರಿ ದ್ರವ ಸೇವನೆ: 48 ಗಂಟೆಗಳವರೆಗೆ ಮಯಾಂಕ್​ಗೆ ಮಾತನಾಡಲಾಗುವುದಿಲ್ಲ

ತ್ರಿಪುರಾದಿಂದ ಸೂರತ್ ಗೆ ಹೋಗುವಾಗ ವಿಮಾನದಲ್ಲಿ ನೀರು ಕುಡಿದ ಪರಿಣಾಮ ತೊಂದರೆಯಾಯ್ತು. ಕೂಡಲೇ ಅವರಿಗೆ ಸೂಕ್ತ ಚಿಕಿತ್ಸೆ ಕೂಡಿಸಿದ್ದರಿಂದ ಅಪಾಯದಿಂದ ಪಾರಾಗಿದ್ದಾರೆ. ಆ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ ತನಿಖೆ ನಂತರ ಏನಾಗಿತ್ತು ಎನ್ನುವುದು ಗೊತ್ತಾಗಲಿದೆ ಎಂದು ಸ್ಪಷ್ಟಪಡಿಸಿದರು.

ಘಟನೆ ಹಿನ್ನೆಲೆ

ತ್ರಿಪುರ ವಿರುದ್ಧದ ರಣಜಿ ಪಂದ್ಯದ ಬಳಿಕ ಕರ್ನಾಟಕ ತಂಡ ತನ್ನ ಮುಂದಿನ ಪಂದ್ಯವಾಡಲು ಗುಜರಾತ್​ಗೆ ತೆರಳಬೇಕಿತ್ತು. ಮಯಾಂಕ್ ಅಗರ್ವಾಲ್ ಸೇರಿದಂತೆ ಕರ್ನಾಟಕ ತಂಡದ ಆಟಗಾರರು ಸೂರತ್​ಗೆ ತೆರಳಲು ಇಂಡಿಗೋ ವಿಮಾನ ಹತ್ತಿದ್ದರು. ಈ ವೇಳೆ ವಿಮಾನದಲ್ಲಿ ಇಡಲಾಗಿದ್ದ ವಿಷಕಾರಿ ದ್ರವ ಪದಾರ್ಥವನ್ನು ನೀರು ಎಂದು ಮಯಾಂಕ್ ಅಗರ್ವಾಲ್ ಕುಡಿದಿದ್ದರು. ಇದರ ಬೆನ್ನಲ್ಲೇ ಅವರ ಗಂಟಲಿನಲ್ಲಿ ಉರಿಯ ಅನುಭವವಾಗಿದೆ. ಇದರಿಂದ ಅಸ್ವಸ್ಥಗೊಂಡ ಅವರನ್ನು ಕೂಡಲೇ ತ್ರಿಪುರದ ಎಎಲ್​ಎಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ವೈದ್ಯಕೀಯ ರಿಪೋರ್ಟ್ ವರದಿ ಬಳಿಕ ಮಯಾಂಕ್ ಅಗರ್ವಾಲ್ ತನ್ನ ಮ್ಯಾನೇಜರ್ ಮೂಲಕ ತ್ರಿಪುರದ NCCPS ಠಾಣೆಯಲ್ಲಿ ದೂರು ದಾಖಲಿಸಿದ್ದು ಈ ಬಗ್ಗೆ ಪೊಲೀಸರು ತನಿಖೆ ನಡೆಸುವುದಾಗಿ ತಿಳಿಸಿದ್ದಾರೆ.