ಐಪಿಎಲ್ನ 55 ನೇ ಪಂದ್ಯದಲ್ಲಿ ಡೆಲ್ಲಿ ತಂಡವನ್ನು 27 ರನ್‌ಗಳಿಂದ ಮಣಿಸಿದ ಚೆನ್ನೈ ಪ್ಲೇ ಆಫ್ ಹಾದಿಯನ್ನು ಮತ್ತಷ್ಟು ಸುಗಮಗೊಳಿಸಿಕೊಂಡರೆ, ಡೆಲ್ಲಿ ತಂಡ ಪ್ಲೇ ಆಫ್ನಿಂದ ಭಾಗಶಃ ಹೊರಬಿದ್ದಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಚೆನ್ನೈ ತಂಡ ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿತು. ತಂಡದ ಆರಂಭಿಕರು ಉತ್ತಮ ಆರಂಭ ನೀಡಿದರ ಫಲವಾಗಿ 20 ಓವರ್‌ಗಳ ಅಂತ್ಯಕ್ಕೆ ಚೆನ್ನೈ ಸೂಪರ್ ಕಿಂಗ್ಸ್ 8 ವಿಕೆಟ್ ನಷ್ಟಕ್ಕೆ 167 ರನ್ ಗಳಿಸಿತ್ತು. 168 ರನ್‌ಗಳ ಗುರಿ ಬೆನ್ನತ್ತಿದ್ದ ಡೆಲ್ಲಿ ತಂಡಕ್ಕೆ ಆರಂಭ ಉತ್ತಮವಾಗಿರಲಿಲ್ಲ. ಹೀಗಾಗಿ 20 ಓವರ್‌ಗಳ ಅಂತ್ಯಕ್ಕೆ ಡೆಲ್ಲಿ ತಂಡ 9 ವಿಕೆಟ್ ನಷ್ಟಕ್ಕೆ 140 ರನ್ ಗಳಿಸಲಷ್ಟೇ ಶಕ್ತವಾಯಿತು.
20ನೇ ಓವರ್‌ನಲ್ಲಿ ಲಲಿತ್ ಯಾದವ್ ಸತತ 3 ಬೌಂಡರಿಗಳನ್ನು ಬಾರಿಸಿದರು.
ಆದರೆ ಆ ಬಳಿಕ ಬೌಲ್ಡ್ ಆಗಿ ವಿಕೆಟ್ ಒಪ್ಪಿಸಿದರು.
168 ರನ್‌ಗಳಿಗೆ ಉತ್ತರವಾಗಿ ಡೆಲ್ಲಿ 20 ಓವರ್‌ಗಳಲ್ಲಿ 8 ವಿಕೆಟ್‌ಗೆ 140 ರನ್ ಗಳಿಸಲಷ್ಟೇ ಶಕ್ತವಾಗಿ 27 ರನ್‌ಗಳಿಂದ ಸೋಲನುಭವಿಸಿತು.
ಈ ಸೋಲಿನೊಂದಿಗೆ ಡೆಲ್ಲಿ ಬಹುತೇಕ ಟೂರ್ನಿಯಿಂದ ಹೊರಬಿದ್ದಿದೆ.
19ನೇ ಓವರ್‌ನಲ್ಲಿ ರಿಪ್ಪಲ್ ಪಟೇಲ್ ರನೌಟ್ ಆದರು.
ಅಂತಿಮ ಓವರ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಗೆಲುವಿಗೆ 6 ಎಸೆತಗಳಲ್ಲಿ 43 ರನ್.
ಡೆಲ್ಲಿ ಕ್ಯಾಪಿಟಲ್ಸ್ ಸೋಲು ಬಹುತೇಕ ಖಚಿತವಾಗಿದೆ.
ಪತಿರಾನ ಅವರ ಓವರ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ನ ಆರನೇ ವಿಕೆಟ್ ಪತನವಾಯಿತು.
ಡೆಲ್ಲಿಯ ಕೊನೆಯ ಭರವಸೆ ಅಕ್ಷರ್ ಪಟೇಲ್ 21 ರನ್ ಗಳಿಸಿ ಕ್ಯಾಚ್ ಔಟ್ ಆದರು.
18 ಓವರ್‌ಗಳ ನಂತರ ಡೆಲ್ಲಿ ಕ್ಯಾಪಿಟಲ್ಸ್ ಸ್ಕೋರ್ – 120/6.
ಗೆಲುವಿಗೆ 12 ಎಸೆತಗಳಲ್ಲಿ 48 ರನ್‌ಗಳ ಅಗತ್ಯವಿದೆ.
ತೀಕ್ಷಣ ಬೌಲ್ ಮಾಡಿದ 17ನೇ ಓವರ್‌ನಲ್ಲಿ ಅಕ್ಷರ್ ಕವರ್ಸ್ ಮೇಲೆ ಸಿಕ್ಸರ್ ಬಾರಿಸಿದರು.
ಇದರೊಂದಿಗೆ ಡೆಲ್ಲಿ ಶತಕ ಕೂಡ ಪೂರೈಸಿದೆ,
ಗೆಲುವು ತುಂಬಾ ದೂರ ಇದೆ.
17 ಓವರ್ ಅಂತ್ಯಕ್ಕೆ ಡೆಲ್ಲಿ 108/5
ಡೆಲ್ಲಿಯ 5ನೇ ವಿಕೆಟ್ ಪತನವಾಗಿದೆ.
ಉತ್ತಮವಾಗಿ ಬ್ಯಾಟಿಂಗ್ ಮಾಡುತ್ತಿದ್ದ ರೂಸೋ 35 ರನ್ ಗಳಿಸಿ ವಿಕೆಟ್ ಒಪ್ಪಿಸಿದರು.
ಆಲ್ ರೌಂಡರ್ ಅಕ್ಷರ್ ಪಟೇಲ್ ಇದೀಗ ಫೀಲ್ಡ್ಗೆ ಎಂಟ್ರಿ ಕೊಟ್ಟಿದ್ದಾರೆ.
13ನೇ ಓವರ್ನ ಕೊನೆಯ ಎಸೆತದಲ್ಲಿ ಮನೀಶ್ ಔಟಾದರು.
33 ರನ್ ಗಳಿಸಿ ಮನೀಶ್ ಎಲ್ಬಿ ಬಲೆಗೆ ಬಿದ್ದರು.
ಡೆಲ್ಲಿ ತಂಡದ ಗೆಲುವಿಗೆ 42 ಎಸೆತಗಳಲ್ಲಿ 84 ರನ್‌ಗಳ ಅಗತ್ಯವಿದೆ.
13 ಓವರ್‌ಗಳ ನಂತರ ಡೆಲ್ಲಿ ಕ್ಯಾಪಿಟಲ್ಸ್ ಸ್ಕೋರ್ – 84/4
ಪತಿರಾನ ಬೌಲ್ ಮಾಡಿದ 13ನೇ ಮೊದಲ ಎಸೆತವನ್ನು ಮನೀಶ್ ಮಿಡ್ ವಿಕೆಟ್ ಕಡೆ ಸಿಕ್ಸರ್ಗಟ್ಟಿದರು.
ಡೆಲ್ಲಿ ಇನ್ನಿಂಗ್ಸ್ನ 11 ಓವರ್ ಮುಗಿದಿದ್ದು, ತಂಡದ ಪರ ಬಿಗ್ ಶಾಟ್ ಬರುತ್ತಿಲ್ಲ
ಡೆಲ್ಲಿ ಕ್ಯಾಪಿಟಲ್ಸ್ ಪರ ರುಸ್ಸೋ 30 ರನ್ ಹಾಗೂ ಮನೀಶ್ ಪಾಂಡೆ 18 ರನ್ ಗಳಿಸಿ ಆಡುತ್ತಿದ್ದಾರೆ.
ಡೆಲ್ಲಿ ತಂಡದ ಗೆಲುವಿಗೆ 54 ಎಸೆತಗಳಲ್ಲಿ 96 ರನ್‌ಗಳ ಅಗತ್ಯವಿದೆ.
11 ಓವರ್‌ಗಳ ನಂತರ ಡೆಲ್ಲಿ ಕ್ಯಾಪಿಟಲ್ಸ್ ಸ್ಕೋರ್ – 72/3
ಜಡೇಜಾ ಬೌಲ್ ಮಾಡಿದ ಓವರ್‌ನಲ್ಲಿ ರುಸ್ಸೋ ಕವರ್ಸ್ನಲ್ಲಿ ಬೌಂಡರಿ ಬಾರಿಸಿದರು.
ಡೆಲ್ಲಿ ಕ್ಯಾಪಿಟಲ್ಸ್ ಪರ ರುಸ್ಸೋ 24 ರನ್ ಹಾಗೂ ಮನೀಶ್ ಪಾಂಡೆ 15 ರನ್ ಗಳಿಸಿ ಆಡುತ್ತಿದ್ದಾರೆ.
9 ಓವರ್‌ಗಳ ನಂತರ ಡೆಲ್ಲಿ ಕ್ಯಾಪಿಟಲ್ಸ್ ಸ್ಕೋರ್ – 63/3
ಪವರ್ ಪ್ಲೇ ಮುಗಿದ ನಂತರ ಯಾವುದೇ ಬೌಂಡರಿ ಬಂದಿಲ್ಲ
ಡೆಲ್ಲಿ ಕ್ಯಾಪಿಟಲ್ಸ್ ಪರ ರುಸ್ಸೋ 16 ರನ್ ಹಾಗೂ ಮನೀಶ್ ಪಾಂಡೆ 8 ರನ್ ಗಳಿಸಿ ಆಡುತ್ತಿದ್ದಾರೆ.
7 ಓವರ್‌ಗಳ ನಂತರ ಡೆಲ್ಲಿ ಕ್ಯಾಪಿಟಲ್ಸ್ ಸ್ಕೋರ್ – 48/3
ದೀಪಕ್ ಬೌಲ್ ಮಾಡಿದ 5ನೇ ಓವರ್‌ನಲ್ಲಿ 15 ರನ್ ಬಂತು
ಈ ಓವರ್‌ನಲ್ಲಿ ರುಸ್ಸೋ 1 ಸಿಕ್ಸರ್ ಹಾಗೂ 2 ಬೌಂಡರಿ ಬಾರಿಸಿದರು.
ಡೆಲ್ಲಿ 42/3
ಡೆಲ್ಲಿಯ 3ನೇ ವಿಕೆಟ್ ಪತನ
ದೇಶಪಾಂಡೆ ಬೌಲ್ ಮಾಡಿದ 4ನೇ ಓವರ್‌ನಲ್ಲಿ ಮಾರ್ಷ್ ರನೌಟ್ ಆದರು
ಡೆಲ್ಲಿ 25/3
ಡೆಲ್ಲಿ 2ನೇ ವಿಕೆಟ್ ಪತನ
ಚಹರ್ ಬೌಲ್ ಮಾಡಿದ 2ನೇ ಓವರ್‌ನಲ್ಲಿ ಸಾಲ್ಟ್ ಮಿಡ್ ಆನ್ನಲ್ಲಿ ಕ್ಯಾಚಿತ್ತು ಔಟಾದರು
ಡೆಲ್ಲಿ 21/2
ದೇಶಪಾಂಡೆ ಬೌಲ್ ಮಾಡಿದ 2ನೇ ಓವರ್‌ನಲ್ಲಿ 12 ರನ್ ಬಂದವು
ಈ ಓವರ್‌ನಲ್ಲಿ ಸಾಲ್ಟ್ 1 ಸಿಕ್ಸರ್ ಹಾಗೂ ಬೌಂಡರಿ ಬಾರಿಸಿದರು.
ದೀಪಕ್ ಬೌಲ್ ಮಾಡಿದ ಮೊದಲ ಓವರ್ನಲ್ಲೇ ವಾರ್ನರ್ ಕವರ್ಸ್ನಲ್ಲಿ ಕ್ಯಾಚಿತ್ತು ಔಟಾದರು.
ವಾರ್ನರ್ಗೆ ಖಾತೆ ತೆರೆಯಲು ಸಾಧ್ಯವಾಗಲಿಲ್ಲ.
20 ಓವರ್‌ಗಳ ಅಂತ್ಯಕ್ಕೆ ಚೆನ್ನೈ ಸೂಪರ್ ಕಿಂಗ್ಸ್ 8 ವಿಕೆಟ್ ನಷ್ಟಕ್ಕೆ 167 ರನ್ ಗಳಿಸಿದೆ. ಡೆಲ್ಲಿ ಕ್ಯಾಪಿಟಲ್ಸ್ ಗೆಲುವಿಗೆ 168 ರನ್‌ಗಳ ಗುರಿ ನೀಡಿದೆ.
19ನೇ ಓವರ್‌ನಲ್ಲಿ 21 ರನ್ ಬಂದವು
ಈ ಓವರ್‌ನಲ್ಲಿ ಧೋನಿ 2 ಸಿಕ್ಸರ್ ಹಾಗೂ 1 ಬೌಂಡರಿ ಬಾರಿಸಿದರು.
19 ಓವರ್ ಅಂತ್ಯಕ್ಕೆ ಚೆನ್ನೈ 160/6
ಇದೇ ಓವರ್‌ನಲ್ಲಿ 150 ರನ್ ಕೂಡ ಪೂರ್ಣವಾಯಿತು
ಚೆನ್ನೈ ಸೂಪರ್ ಕಿಂಗ್ಸ್ ಪರ ಧೋನಿ 1 ರನ್ ಮತ್ತು ಜಡೇಜಾ 15 ರನ್‌ಗಳಿಸಿ ಆಡುತ್ತಿದ್ದಾರೆ.
ಕುಲ್ದೀಪ್ ಅವರ ಓವರ್‌ನಲ್ಲಿ ಜಡೇಜಾ ಲಾಂಗ್ ಆನ್ನಲ್ಲಿ ಸಿಕ್ಸರ್ ಬಾರಿಸಿದರು.
ಖಲೀಲ್ ಓವರ್‌ನಲ್ಲಿ ರಾಯುಡು 17 ಎಸೆತಗಳಲ್ಲಿ 23 ರನ್ ಗಳಿಸಿ ಔಟಾದರು. 17 ಓವರ್‌ಗಳ ನಂತರ ಚೆನ್ನೈ ಸೂಪರ್ ಕಿಂಗ್ಸ್ ಸ್ಕೋರ್ – 127/6
12 ಎಸೆತಗಲ್ಲಿ 25 ರನ್ ಬಾರಿಸಿದ್ದ ದುಬೆ ಔಟಾಗಿದ್ದಾರೆ
ಮಾರ್ಷ್ ಓವರ್‌ನಲ್ಲಿ ದುಬೆ ಮಿಡ್ ವಿಕೆಟ್ನಲ್ಲಿ ಕ್ಯಾಚಿತ್ತು ಔಟಾದರು.
ಚೆನ್ನೈ 5ನೇ ವಿಕೆಟ್ ಪತನ.
15 ಓವರ್ ಅಂತ್ಯಕ್ಕೆ ಚೆನ್ನೈ 117/5
ಲಲಿತ್ ಬೌಲ್ ಮಾಡಿದ 14ನೇ ಓವರ್‌ನಲ್ಲಿ 23 ರನ್ ಬಂದವು
ಈ ಓವರ್‌ನಲ್ಲಿ ದುಬೆ 2 ಸಿಕ್ಸರ್ ಬಾರಿಸಿದರೆ, ರಾಯುಡು 1 ಬೌಂಡರಿ ಹಾಗೂ ಸಿಕ್ಸರ್ ಬಾರಿಸಿದರು.
ಇದರೊಂದಿಗೆ ಚೆನ್ನೈ ಶತಕ ಕೂಡ ಪೂರೈಸಿತು.
ಚೆನ್ನೈ 4ನೇ ವಿಕೆಟ್ ಪತನ
20 ಎಸೆತಗಳಲ್ಲಿ 21 ರನ್ ಬಾರಿಸಿದ್ದ ರಹಾನೆ ಕ್ಯಾಚಿತ್ತು ಔಟಾದರು.
ಲಲಿತ್ ಯಾದವ್ಗೆ ಈ ವಿಕೆಟ್ ಸಿಕ್ಕಿದೆ
ಚೆನ್ನೈ 82/4
ಅಕ್ಷರ್ ಬೌಲ್ ಮಾಡಿದ 11ನೇ ಓವರ್‌ನಲ್ಲಿ ದುಬೆ ಲಾಂಗ್ ಆನ್ನಲ್ಲಿ ಸಿಕ್ಸರ್ ಬಾರಿಸಿದರು
10ನೇ ಓವರ್‌ನಲ್ಲಿ 3ನೇ ವಿಕೆಟ್ ಪತನ
ಕುಲ್ದೀಪ್ ಓವರ್‌ನಲ್ಲಿ ಮೋಯಿನ್ ಅಲಿ ಕ್ಯಾಚಿತ್ತು ಔಟಾದರು.
ಚೆನ್ನೈ 64/3
2 ವಿಕೆಟ್ ಉರುಳಿದ ಬಳಿಕ ಹಾಗೂ ಪವರ್ ಪ್ಲೇ ಮುಗಿದ ಬಳಿಕ ಚೆನ್ನೈ ಬ್ಯಾಟಿಂಗ್ ನಿಧಾನವಾಗಿದೆ.
ಪವರ್ ಪ್ಲೇ ಮುಗಿದ ನಂತರದ ಓವರ್ನಲ್ಲೇ ರುತುರಾಜ್ ಔಟಾಗಿದ್ದಾರೆ
ಅಕ್ಷರ್ ಬೌಲಿಂಗ್ನಲ್ಲಿ ರುತುರಾಜ್ ಲಾಂಗ್ ಆಫ್ನಲ್ಲಿ ಕ್ಯಾಚಿತ್ತು ಔಟಾದರು.
ಇಶಾಂತ್ ಬೌಲ್ ಮಾಡಿದ 6ನೇ ಓವರ್ನ 3ನೇ ಎಸೆತದಲ್ಲಿ ರುತುರಾಜ್ ಬೌಂಡರಿ ಬಾರಿಸಿದರು.
ಪವರ್ ಪ್ಲೇ ಅಂತ್ಯಕ್ಕೆ ಚೆನ್ನೈ 6 ಓವರ್‌ಗಳಲ್ಲಿ 1 ವಿಕೆಟ್ ನಷ್ಟಕ್ಕೆ 49 ರನ್ ಬಾರಿಸಿದ್ದಾರೆ.
ಕಾನ್ವೇ ವಿಕೆಟ್ ಬಳಿಕ ರಹಾನೆ ಮಿಡ್ ಆನ್ ಹಾಗೂ ಕವರ್ಸ್ನಲ್ಲಿ 2 ಬೌಂಡರಿ ಬಾರಿಸಿದರು.
5 ಓವರ್‌ಗಳ ನಂತರ ಚೆನ್ನೈ ಸ್ಕೋರ್ – 41/1
ಆಲ್‌ರೌಂಡರ್ ಅಕ್ಷರ್ ಪಟೇಲ್ ಡೆಲ್ಲಿ ಕ್ಯಾಪಿಟಲ್ಸ್‌ಗೆ ಮೊದಲ ಯಶಸ್ಸು ನೀಡಿದರು. ಡೇವಿಡ್ ಕಾನ್ವೆ 13 ಎಸೆತಗಳಲ್ಲಿ 10 ರನ್ ಗಳಿಸಿ ಔಟಾದರು.
ಲಲಿತ್ ಯಾದವ್ ಬೌಲ್ ಮಾಡಿದ 4ನೇ ಓವರ್‌ನಲ್ಲಿ ಕಾನ್ವೇ ಫೋರ್ ಬಾರಿಸಿದರು. ಚೆನ್ನೈ ಸೂಪರ್ ಕಿಂಗ್ಸ್ ಪರ ರಿತುರಾಜ್ ಗಾಯಕ್ವಾಡ್ 17 ರನ್ ಮತ್ತು ಡೆವಿನ್ ಕಾನ್ವೇ 11 ರನ್‌ಗಳೊಂದಿಗೆ ಆಡುತ್ತಿದ್ದಾರೆ. 4 ಓವರ್‌ಗಳ ನಂತರ ಚೆನ್ನೈ ಸ್ಕೋರ್ – 32/0
2ನೇ ಓವರ್ನ 2ನೇ ಎಸೆತದಲ್ಲಿ ಕೀಪರ್ ಹಿಂದೆ ರುತುರಾಜ್ ಬೌಂಡರಿ ಬಾರಿಸಿದರು.
5ನೇ ಹಾಗೂ 6ನೇ ಎಸೆತದಲ್ಲೂ ಥರ್ಡ್ಮ್ಯಾನ್ನಲ್ಲಿ ಬೌಂಡರಿ ಬಂತು
ಈ ಓವರ್‌ನಲ್ಲಿ 16 ರನ್ ಬಂತು.
ಚೆನ್ನೈ ಬ್ಯಾಟಿಂಗ್ ಆರಂಭ
ರುತುರಾಜ್ ಮತ್ತು ಕಾನ್ವೇ ಕ್ರೀಸ್ನಲ್ಲಿದ್ದಾರೆ.
ಮೊದಲ ಓವರ್‌ನಲ್ಲಿ 4 ರನ್ ಬಂದವು.
ಡೇವಿಡ್ ವಾರ್ನರ್ (ನಾಯಕ), ಫಿಲಿಪ್ ಸಾಲ್ಟ್ (ವಿಕೆಟ್ ಕೀಪರ್), ಮಿಚೆಲ್ ಮಾರ್ಷ್, ರಿಲೆ ರೊಸ್ಸೊ, ಅಕ್ಷರ್ ಪಟೇಲ್, ಅಮನ್ ಹಕೀಮ್ ಖಾನ್, ಲಲಿತ್ ಯಾದವ್, ಕುಲದೀಪ್ ಯಾದವ್, ಮುಖೇಶ್ ಕುಮಾರ್, ಖಲೀಲ್ ಅಹ್ಮದ್, ಇಶಾಂತ್ ಶರ್ಮಾ
ರುತುರಾಜ್ ಗಾಯಕ್ವಾಡ್, ಡೆವೊನ್ ಕಾನ್ವೆ, ಅಜಿಂಕ್ಯ ರಹಾನೆ, ಅಂಬಟಿ ರಾಯುಡು, ಮೊಯೀನ್ ಅಲಿ, ರವೀಂದ್ರ ಜಡೇಜಾ, ಎಂಎಸ್ ಧೋನಿ (ನಾಯಕ / ವಿಕೆಟ್ ಕೀಪರ್), ದೀಪಕ್ ಚಾಹರ್, ಮತಿಶ ಪತಿರಾಣ, ತುಷಾರ್ ದೇಶಪಾಂಡೆ, ಮಹೇಶ್ ತೀಕ್ಷಣ
ಟಾಸ್ ಗೆದ್ದ ಚೆನ್ನೈ ನಾಯಕ ಎಂಎಸ್ ಧೋನಿ ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿದ್ದಾರೆ.
Published On - 7:00 pm, Wed, 10 May 23