EA ಸ್ಪೋರ್ಟ್ಸ್ ಭವಿಷ್ಯವಾಣಿ: ಈ ಬಾರಿ ಕಪ್ ಯಾರಿಗೆ ಗೊತ್ತಾ?

FIFA World Cup 2026: 2026ರ ಫಿಫಾ ವಿಶ್ವಕಪ್‌ನ ಮಹಾ ಫೈನಲ್ ಪಂದ್ಯವು 2026ರ ಜುಲೈ 19, ಭಾನುವಾರದಂದು ಅಮೆರಿಕದ ನ್ಯೂಜೆರ್ಸಿಯಲ್ಲಿರುವ ಪ್ರಸಿದ್ಧ ಮೆಟ್‌ಲೈಫ್ ಸ್ಟೇಡಿಯಂನಲ್ಲಿ ನಡೆಯಲಿದೆ. ಈ ಪಂದ್ಯದಲ್ಲಿ ಯುರೋಪ್ ಚಾಂಪಿಯನ್ ಸ್ಪೇನ್ ಮತ್ತು ಹಾಲಿ ವಿಶ್ವ ಚಾಂಪಿಯನ್ ಅರ್ಜೆಂಟೀನಾ ತಂಡಗಳು ಮುಖಾಮುಖಿಯಾಗಲಿದೆ.

EA ಸ್ಪೋರ್ಟ್ಸ್ ಭವಿಷ್ಯವಾಣಿ: ಈ ಬಾರಿ ಕಪ್ ಯಾರಿಗೆ ಗೊತ್ತಾ?
Argentina Vs Spain

Updated on: Jul 18, 2026 | 10:28 AM

2026ರ ಫಿಫಾ ವಿಶ್ವಕಪ್ ಚಾಂಪಿಯನ್ ಪಟ್ಟ ಯಾರಿಗೆ ಒಲಿಯಲಿದೆ? ಈ ಪ್ರಶ್ನೆಗೆ EA ಸ್ಪೋರ್ಟ್ಸ್ ಭವಿಷ್ಯವಾಣಿ ಇದೀಗ ಉತ್ತರವಾಗಿ ಸಿಗುತ್ತಿದೆ. ಕಳೆದ ನಾಲ್ಕು ವಿಶ್ವಕಪ್ ಆವೃತ್ತಿಗಳಲ್ಲಿ ಯಾರೂ ಊಹಿಸದ ನಿಖರ ಫಲಿತಾಂಶ ನೀಡಿ ಕ್ರೀಡಾಲೋಕವನ್ನು ಬೆರಗುಗೊಳಿಸಿದ್ದ ಇಎ ಸ್ಪೋರ್ಟ್ಸ್ (EA Sports) ಸೂಪರ್ ಕಂಪ್ಯೂಟರ್, ಇದೀಗ ಮತ್ತೊಮ್ಮೆ ತನ್ನ ಅಂತಿಮ ಭವಿಷ್ಯವನ್ನು ಹೊರಹಾಕಿದೆ. ಈ ಭವಿಷ್ಯವಾಣಿಯಂತೆ ಈ ಬಾರಿ ಸ್ಪೇನ್ ಚಾಂಪಿಯನ್ ಪಟ್ಟಕ್ಕೇರಲಿದೆ.

ಸತತ 4 ಬಾರಿ ನಿಖರ ಭವಿಷ್ಯ!

EA ಸ್ಪೋರ್ಟ್ಸ್‌ನ ಈ ಭವಿಷ್ಯವಾಣಿಯನ್ನು ಕ್ರೀಡಾ ಲೋಕ ಎಂದಿಗೂ ಲಘುವಾಗಿ ಪರಿಗಣಿಸುವುದಿಲ್ಲ. ಏಕೆಂದರೆ, ಕಳೆದ ನಾಲ್ಕೂ ವಿಶ್ವಕಪ್‌ಗಳ ವಿಜೇತರನ್ನು ಈ ಸಂಸ್ಥೆ ನಿಖರವಾಗಿ ಮುನ್ಸೂಚಿಸಿತ್ತು.

  •  2010: ಸ್ಪೇನ್ (ನಿಖರ ಭವಿಷ್ಯ)
  • 2014: ಜರ್ಮನಿ (ನಿಖರ ಭವಿಷ್ಯ)
  •  2018: ಫ್ರಾನ್ಸ್ (ನಿಖರ ಭವಿಷ್ಯ)
  •  2022: ಅರ್ಜೆಂಟೀನಾ (ನಿಖರ ಭವಿಷ್ಯ)
  • 2026: ಸ್ಪೇನ್ (ಭವಿಷ್ಯವಾಣಿ)

ಈ ನಿಖರ ಭವಿಷ್ಯದ ಇತಿಹಾಸದ ಹಿನ್ನೆಲೆಯಲ್ಲಿ, ಈಗ 2026ರ ಟೂರ್ನಿಗೂ ಸ್ಪೇನ್ ಗೆಲ್ಲಲಿದೆ ಎಂದು ಹೇಳಿರುವುದು ಫುಟ್‌ಬಾಲ್ ವಲಯದಲ್ಲಿ ಭಾರೀ ಸಂಚಲನ ಮೂಡಿಸಿದೆ.

ಈ ಭವಿಷ್ಯವಾಣಿ ಹೇಗೆ ಕೆಲಸ ಮಾಡುತ್ತದೆ?

EA ಸ್ಪೋರ್ಟ್ಸ್ ತನ್ನ EA Sports FC 26 ಗೇಮ್‌ನ ಸುಧಾರಿತ ತಂತ್ರಜ್ಞಾನವನ್ನು ಇದಕ್ಕೆ ಬಳಸಿದೆ. ಆಟಗಾರರ ನೈಜ ಸಾಮರ್ಥ್ಯ, ವೇಗ, ತಂಡಗಳ ಪ್ರಸ್ತುತ ಫಾರ್ಮ್ ಮತ್ತು ಐತಿಹಾಸಿಕ ಡೇಟಾಗಳನ್ನು ಕಂಪ್ಯೂಟರ್‌ಗೆ ನೀಡಿ, ಒಟ್ಟು 104 ಪಂದ್ಯಗಳನ್ನು ಕೃತಕವಾಗಿ ಆಡಿಸಿ ಈ ಅಂತಿಮ ಫಲಿತಾಂಶವನ್ನು ಹೊರಹಾಕಲಾಗಿದೆ.

ಫಲಿತಾಂಶ ಹೊರಹಾಕಿದ್ದು ಯಾವಾಗ?

ಇಎ ಸ್ಪೋರ್ಟ್ಸ್ ತನ್ನ ಅಧಿಕೃತ ಭವಿಷ್ಯವಾಣಿಯ ಫಲಿತಾಂಶವನ್ನು 2026ರ ಜೂನ್ 11 ರಂದು, ಅಂದರೆ ವಿಶ್ವಕಪ್ ಟೂರ್ನಿ ಅಧಿಕೃತವಾಗಿ ಆರಂಭವಾಗುವ ದಿನದಂದು ಹೊರಹಾಕಿತು.

ಗೇಮಿಂಗ್ ಸಂಸ್ಥೆಯು ಮೇ ತಿಂಗಳ ಕೊನೆಯಲ್ಲಿ ತಂದ ತನ್ನ ‘ದಿ ವರ್ಲ್ಡ್ಸ್ ಗೇಮ್’ ಅಪ್ಡೇಟ್ ಬಳಿಕ, ಜೂನ್ ಆರಂಭದಲ್ಲಿ ಗೇಮ್‌ನ ಸಿಮ್ಯುಲೇಶನ್ ಇಂಜಿನ್ ಮೂಲಕ ಎಲ್ಲಾ 104 ಪಂದ್ಯಗಳನ್ನು ರನ್ ಮಾಡಿ, ಜೂನ್ 11 ರಂದು ಈ ಅಂತಿಮ ವರದಿಯನ್ನು ಜಗತ್ತಿನ ಮುಂದೆ ಇಟ್ಟಿತ್ತು.

ಇದನ್ನೂ ಓದಿ: ರೋಹಿತ್-ವಿರಾಟ್ ಇಲ್ಲದೆ ಭಾರತ 2027ರ ವಿಶ್ವಕಪ್ ಗೆಲ್ಲಲು ಸಾಧ್ಯವೇ ಇಲ್ಲ!

ಫೈನಲ್​ನಲ್ಲಿ ಸ್ಪೇನ್:

ಒಂದು ತಿಂಗಳ ಮುಂಚಿತವಾಗಿ ನುಡಿದ ಭವಿಷ್ಯದಂತೆ ಇದೀಗ ಸ್ಪೇನ್ ತಂಡವು 2026ರ ಫಿಫಾ ವಿಶ್ವಕಪ್‌ನ ಫೈನಲ್ ತಲುಪಿದ್ದು, ಮತ್ತೊಂದು ಐತಿಹಾಸಿಕ ವಿಶ್ವವಿಜಯದ ಹೊಸ್ತಿಲಲ್ಲಿ ಬಂದು ನಿಂತಿದೆ. ಹೀಗಾಗಿಯೇ ಈ ಬಾರಿ ಸ್ಪೇನ್ ತಂಡ ಚಾಂಪಿಯನ್ ಪಟ್ಟಕ್ಕೇರಲಿದೆಯಾ ಕಾದು ನೋಡಬೇಕಿದೆ.

 

Published On - 10:27 am, Sat, 18 July 26

ಝಾಹಿರ್ ಯೂಸುಫ್

ಟಿವಿ9 ಡಿಜಿಟಲ್ ಮುಖ್ಯ ಉಪ ಸಂಪಾದಕ. 10 ವರ್ಷಗಳಿಂದ ಕನ್ನಡ ಡಿಜಿಟಲ್​ ಮಾಧ್ಯಮದಲ್ಲಿ ಪತ್ರಿಕಾ ವೃತ್ತಿ. ಕ್ರೀಡಾ ಸುದ್ದಿ, ದೀರ್ಘ ಲೇಖನ, ವಿಶ್ಲೇಷಣೆ, ಹೀಗೆ ಎಲ್ಲ ತರಹದ ಬರಹದಲ್ಲೂ ಅನುಭವ. ಪ್ರಸ್ತುತ ವಿದ್ಯಮಾನಗಳ ವ್ಯಾಖ್ಯಾನ, ಚರ್ಚೆಯಲ್ಲಿ ನೈಪುಣ್ಯ. ಈ ಹಿಂದೆ ಉದಯವಾಣಿ, ನ್ಯೂಸ್ 18 ಕನ್ನಡ ಡಿಜಿಟಲ್​​ನಲ್ಲಿ ಕೆಲಸ ಮಾಡಿದ ಅನುಭವ. ಆಸಕ್ತಿದಾಯಕ ವಿಷಯ ಕ್ರೀಡೆ, ಸಿನಿಮಾ ಮತ್ತು ರಾಜಕೀಯ.

Read More
Loading...
Unable to load recommendations.
Follow Us