ಪಾಕ್ ತಂಡದಲ್ಲಿ 4 ಬದಲಾವಣೆ; ಮೂವರಿಗೆ ಚೊಚ್ಚಲ ಅವಕಾಶ

ಇಂಗ್ಲೆಂಡ್-ಪಾಕಿಸ್ತಾನ ಮೂರನೇ ಟೆಸ್ಟ್ ಎಡ್ಜ್‌ಬಾಸ್ಟನ್‌ನಲ್ಲಿ ಆರಂಭ. 2-0 ಮುನ್ನಡೆ ಸಾಧಿಸಿರುವ ಇಂಗ್ಲೆಂಡ್ ಕ್ಲೀನ್ ಸ್ವೀಪ್ ಗುರಿಯಲ್ಲಿದೆ. ಸರಣಿ ಸೋತಿರುವ ಪಾಕಿಸ್ತಾನ ತಂಡದಲ್ಲಿ 4 ಬದಲಾವಣೆಗಳಿದ್ದು, ಮೂವರು ಚೊಚ್ಚಲ ಆಟಗಾರರು ಕಣಕ್ಕಿಳಿದಿದ್ದಾರೆ. ಉಭಯ ತಂಡಗಳೂ ಎಡ್ಜ್‌ಬಾಸ್ಟನ್‌ನಲ್ಲಿ ಕಳಪೆ ದಾಖಲೆ ಹೊಂದಿದ್ದು, ಈ ಪಂದ್ಯ ಕುತೂಹಲ ಮೂಡಿಸಿದೆ. ಪಾಕಿಸ್ತಾನ ಕ್ಲೀನ್ ಸ್ವೀಪ್ ಭೀತಿಯಲ್ಲಿದೆ.

ಪಾಕ್ ತಂಡದಲ್ಲಿ 4 ಬದಲಾವಣೆ; ಮೂವರಿಗೆ ಚೊಚ್ಚಲ ಅವಕಾಶ
ಇಂಗ್ಲೆಂಡ್ Vs ಪಾಕಿಸ್ತಾನ
Image Credit source: England Cricket x

Updated on: Sep 09, 2026 | 4:49 PM

ಇಂಗ್ಲೆಂಡ್‌ ಹಾಗೂ ಪಾಕಿಸ್ತಾನ ನಡುವಿನ ಮೂರು ಪಂದ್ಯಗಳ ಟೆಸ್ಟ್ ಸರಣಿಯ ಮೂರನೇ ಹಾಗೂ ಕೊನೆಯ ಟೆಸ್ಟ್ ಪಂದ್ಯ ಇಂದಿನಿಂದ ಆರಂಭವಾಗಿದೆ. ಎಡ್ಜ್‌ಬಾಸ್ಟನ್‌ನಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿಟಾಸ್ ಗೆದ್ದ ಇಂಗ್ಲೆಂಡ್ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ. ಮೂರು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 2-0 ಅಂತರದಿಂದ ಮುನ್ನಡೆ ಪಡೆದುಕೊಂಡಿರುವ ಇಂಗ್ಲೆಂಡ್ ಈ ಟೆಸ್ಟ್​ಗೆ ತನ್ನ ಪ್ಲೇಯಿಂಗ್ XI ನಲ್ಲಿ ಯಾವುದೇ ಬದಲಾವಣೆಗಳನ್ನು ಮಾಡಿಲ್ಲ. ಇತ್ತ ಈಗಾಗಲೇ ಸರಣಿ ಸೋತಿರುವ ಪಾಕಿಸ್ತಾನ ತಂಡದಲ್ಲಿ ನಾಲ್ಕು ಬದಲಾವಣೆಗಳನ್ನು ಮಾಡಲಾಗಿದೆ. ಅದರಲ್ಲಿ ಮೂವರು ಆಟಗಾರರು ತಮ್ಮ ಚೊಚ್ಚಲ ಅಂತರರಾಷ್ಟ್ರೀಯ ಪಂದ್ಯವನ್ನು ಆಡುತ್ತಿದ್ದಾರೆ.

ಪಾಕ್ ತಂಡದಲ್ಲಿ  4 ಬದಲಾವಣೆ

ಪಾಕಿಸ್ತಾನದ ಪ್ಲೇಯಿಂಗ್ XI ನಲ್ಲಿ ಸ್ಯಾಮ್ ಅಯೂಬ್​ಗೆ ಅವಕಾಶ ನೀಡಲಾಗಿದೆ. ಉಳಿದಂತೆ ವಿಕೆಟ್ ಕೀಪರ್ ಘಾಜಿ ಘೋರಿ, ಮೊಹಮ್ಮದ್ ಇಮ್ರಾನ್ ರಾಂಧವಾ ಮತ್ತು ರಜಾವುಲ್ಲಾ ಖಾನ್ ತಮ್ಮ ಚೊಚ್ಚಲ ಟೆಸ್ಟ್ ಪಂದ್ಯವನ್ನು ಆಡುತ್ತಿದ್ದಾರೆ. ಎಡ್ಜ್‌ಬಾಸ್ಟನ್‌ನಲ್ಲಿ ಇಂಗ್ಲೆಂಡ್ ಆಡಿದ ಕೊನೆಯ ಆರು ಟೆಸ್ಟ್‌ಗಳಲ್ಲಿ ನಾಲ್ಕರಲ್ಲಿ ಸೋತಿದೆ. ಪಾಕಿಸ್ತಾನ ಇಲ್ಲಿ ಆಡಿದ ಎಂಟು ಟೆಸ್ಟ್‌ಗಳಲ್ಲಿ ಒಂದನ್ನೂ ಗೆದ್ದಿಲ್ಲ. ಹೀಗಾಗಿ ಈ ಪಂದ್ಯದಲ್ಲಿ ಯಾರು ಗೆಲ್ಲುತ್ತಾರೆ ಎಂಬುದನ್ನು ಕಾದುನೋಡಬೇಕಿದೆ.

ENG vs PAK: ಟೆಸ್ಟ್ ಕ್ರಿಕೆಟ್​ನಲ್ಲಿ ದಿಗ್ಗಜರ ದಾಖಲೆ ಮುರಿದ ರೂಟ್

ಉಭಯ ತಂಡಗಳು

ಪಾಕಿಸ್ತಾನ ತಂಡ: ಅಜಾನ್ ಅವೈಸ್, ಸ್ಯಾಮ್ ಅಯೂಬ್, ಅಬ್ದುಲ್ಲಾ ಶಫೀಕ್, ಶಾನ್ ಮಸೂದ್, ಬಾಬರ್ ಆಝಂ, ಸೌದ್ ಶಕೀಲ್, ಗಾಜಿ ಘೋರಿ, ಮೊಹಮ್ಮದ್ ಇಮ್ರಾನ್ ರಾಂಧವಾ, ರಝಾವುಲ್ಲಾ, ಮೊಹಮ್ಮದ್ ಅಬ್ಬಾಸ್ ಮತ್ತು ಮೊಹಮ್ಮದ್ ಅಲಿ.

ಇಂಗ್ಲೆಂಡ್ ತಂಡ: ಬೆನ್ ಡಕೆಟ್, ಎಮಿಲಿಯೊ ಗೇ, ಜೋರ್ಡಾನ್ ಕಾಕ್ಸ್, ಜೋ ರೂಟ್ (ನಾಯಕ), ಹ್ಯಾರಿ ಬ್ರೂಕ್, ಡ್ಯಾನ್ ಲಾರೆನ್ಸ್, ಜೇಮೀ ಸ್ಮಿತ್ (ವಿಕೆಟ್ ಕೀಪರ್), ಗಸ್ ಅಟ್ಕಿನ್ಸನ್, ಒಲ್ಲಿ ರಾಬಿನ್ಸನ್, ಜೋಫ್ರಾ ಆರ್ಚರ್, ಜೋಶ್ ಟಂಗ್.

ಕ್ಲೀನ್ ಸ್ವೀಪ್ ಭಯದಲ್ಲಿ ಪಾಕ್

ಲೀಡ್ಸ್ ಮತ್ತು ಲಾರ್ಡ್ಸ್‌ನಲ್ಲಿ ನಡೆದ ಎರಡು ಟೆಸ್ಟ್ ಪಂದ್ಯಗಳಲ್ಲಿ ಪಾಕಿಸ್ತಾನ ಸೋತಿದ್ದು, ಈಗ ಎಡ್ಜ್‌ಬಾಸ್ಟನ್‌ನಲ್ಲಿ ಕ್ಲೀನ್ ಸ್ವೀಪ್ ಬೆದರಿಕೆಯನ್ನು ಎದುರಿಸುತ್ತಿದೆ. ಮೇಲೆ ಹೇಳಿದಂತೆ ಈ ಮೈದಾನದಲ್ಲಿ ಪಾಕಿಸ್ತಾನದ ದಾಖಲೆ ಕಳಪೆಯಾಗಿದೆ. ಎಡ್ಜ್‌ಬಾಸ್ಟನ್‌ನಲ್ಲಿ ಪಾಕಿಸ್ತಾನ ಇದುವರೆಗೆ ಟೆಸ್ಟ್ ಪಂದ್ಯವನ್ನು ಗೆದ್ದಿಲ್ಲ. ತಂಡವು ಎಂಟು ಟೆಸ್ಟ್‌ಗಳನ್ನು ಆಡಿದ್ದು, ಇದರಲ್ಲಿ ಐದು ಪಂದ್ಯಗಳಲ್ಲಿ ಸೋತಿದೆ ಮತ್ತು ಮೂರು ಪಂದ್ಯಗಳನ್ನು ಡ್ರಾ ಮಾಡಿಕೊಂಡಿದೆ. ಇತ್ತ ಎಡ್ಜ್‌ಬಾಸ್ಟನ್‌ನಲ್ಲಿ ನಡೆದ ಆರು ಪಂದ್ಯಗಳಲ್ಲಿ ನಾಲ್ಕರಲ್ಲಿ ಸೋತಿರುವ ಇಂಗ್ಲೆಂಡ್ ಕೂಡ ಈ ಮೈದಾನದಲ್ಲಿ ಕಳಪೆ ಪ್ರದರ್ಶನ ನೀಡಿದೆ.

Published On - 4:48 pm, Wed, 9 September 26

Loading...
Unable to load recommendations.
Follow Us