ಇಂಗ್ಲೆಂಡ್ ತಂಡ ಪ್ರಕಟ: ಇಬ್ಬರು ಹೊಸ ಆಟಗಾರರು ಎಂಟ್ರಿ

ಇಂಗ್ಲೆಂಡ್ ಮತ್ತು ಶ್ರೀಲಂಕಾ ನಡುವಣ ಕ್ರಿಕೆಟ್ ಸರಣಿಯು ಸೆಪ್ಟೆಂಬರ್ 15 ರಿಂದ ಆರಂಭವಾಗಲಿದೆ. ಒಟ್ಟು 6 ಪಂದ್ಯಗಳ ಈ ಸರಣಿಗೆ ಇಂಗ್ಲೆಂಡ್ ಆತಿಥ್ಯ ವಹಿಸುತ್ತಿದೆ. ಸರಣಿಯ ಆರಂಭದಲ್ಲಿ ಮೊದಲು ಮೂರು ಟಿ20 ಪಂದ್ಯಗಳ ಹಣಾಹಣಿ ನಡೆಯಲಿದ್ದು, ಇದಾದ ಬಳಿಕ ಮೂರು ಪಂದ್ಯಗಳ ಏಕದಿನ ಸರಣಿ ಆಯೋಜನೆಯಾಗಲಿದೆ.

ಇಂಗ್ಲೆಂಡ್ ತಂಡ ಪ್ರಕಟ: ಇಬ್ಬರು ಹೊಸ ಆಟಗಾರರು ಎಂಟ್ರಿ
ಇಂಗ್ಲೆಂಡ್
Image Credit source: GettyImages

Updated on: Sep 05, 2026 | 10:12 AM

ಶ್ರೀಲಂಕಾ ವಿರುದ್ಧದ ಏಕದಿನ ಮತ್ತು ಟಿ20 ಸರಣಿಗಳಿಗಾಗಿ ಇಂಗ್ಲೆಂಡ್ ತಂಡವನ್ನು ಪ್ರಕಟಿಸಲಾಗಿದೆ. 16 ಸದಸ್ಯರ ಈ ತಂಡಗಳಲ್ಲಿ ದೇಶೀಯ ಕ್ರಿಕೆಟ್​ನಲ್ಲಿ ಮಿಂಚಿದ ಅನೆರಿನ್ ಡೊನಾಲ್ಡ್ ಮತ್ತು ಹೆನ್ರಿ ಕ್ರೋಕೊಂಬ್ ಸ್ಥಾನ ಪಡೆದಿದ್ದಾರೆ. ಡೆರ್ಬಿಶೈರ್ ಹಾಗೂ ಸಸೆಕ್ಸ್ ಪರ ದೇಶೀಯ ಟೂರ್ನಿಗಳಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಡೊನಾಲ್ಡ್ ಮತ್ತು ಹೆನ್ರಿ ಇದೇ ಮೊದಲ ಬಾರಿಗೆ ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾಗಿದ್ದು, ಲಂಕಾ ವಿರುದ್ಧದ ಸರಣಿಯ ಮೂಲಕ ಅಂತರರಾಷ್ಟ್ರೀಯ ಕ್ರಿಕೆಟ್ ಕೆರಿಯರ್ ಆರಂಭಿಸುವ ಇರಾದೆಯಲ್ಲಿದ್ದಾರೆ.

ಅನೆರಿನ್ ಡೊನಾಲ್ಡ್: ಡೆರ್ಬಿಶೈರ್ ತಂಡದ 29 ವರ್ಷದ ಆರಂಭಿಕ ಬ್ಯಾಟರ್ ಅನೆರಿನ್ ಡೊನಾಲ್ಡ್ ಶ್ರೀಲಂಕಾ ವಿರುದ್ಧದ ಮೂರು ಪಂದ್ಯಗಳ ಟಿ20 ಸರಣಿಗೆ ಆಯ್ಕೆಯಾಗಿದ್ದಾರೆ. ಇತ್ತೀಚೆಗೆ ಮುಕ್ತಾಯಗೊಂಡ ‘ವೈಟಾಲಿಟಿ ಬ್ಲಾಸ್ಟ್’ ಟೂರ್ನಿಯಲ್ಲಿ 37 ಸಿಕ್ಸರ್‌ಗಳ ನೆರವಿನಿಂದ ಬರೋಬ್ಬರಿ 489 ರನ್ ಚಚ್ಚಿದ್ದ ಡೊನಾಲ್ಡ್, ‘ದಿ ಹಂಡ್ರೆಡ್’ ಟೂರ್ನಿಯ ಫೈನಲ್‌ನಲ್ಲಿ ಟ್ರೆಂಟ್ ರಾಕೆಟ್ಸ್ ಪರ ಗರಿಷ್ಠ ರನ್ ಕಲೆಹಾಕಿದ್ದರು. ಇದೀಗ ಗಾಯಾಳು ಫಿಲ್ ಸಾಲ್ಟ್ ಅವರ ಬದಲಿಗೆ ಆರಂಭಿಕನಾಗಿ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಸೇರಿಕೊಂಡಿದ್ದಾರೆ.

ಹೆನ್ರಿ ಕ್ರೋಕೊಂಬ್: ಸಸೆಕ್ಸ್ ತಂಡದ 24 ವರ್ಷದ ಯುವ ವೇಗಿ ಹೆನ್ರಿ ಕ್ರೋಕೊಂಬ್ 16 ಸದಸ್ಯರ ಏಕದಿನ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಕೌಂಟಿ ಚಾಂಪಿಯನ್‌ಶಿಪ್‌ನಲ್ಲಿ ಸಸೆಕ್ಸ್ ಪರ ಕಣಕ್ಕಿಳಿಯುತ್ತಿರುವ ಹೆನ್ರಿ, ಸೋಮರ್‌ಸೆಟ್ ಮತ್ತು ಎಸೆಕ್ಸ್ ವಿರುದ್ಧ ಸತತ ಪಂದ್ಯಗಳಲ್ಲಿ ಬ್ಯಾಕ್-ಟು-ಬ್ಯಾಕ್ ಹ್ಯಾಟ್ರಿಕ್ ವಿಕೆಟ್ ಕಬಳಿಸಿ ಮಿಂಚಿದ್ದರು. ಈ ಭರ್ಜರಿ ಪ್ರದರ್ಶನದ ಫಲವಾಗಿ ಯುವ ವೇಗಿಯನ್ನು ಇಂಗ್ಲೆಂಡ್ ಏಕದಿನ ತಂಡಕ್ಕೆ ಆಯ್ಕೆ ಮಾಡಲಾಗಿದೆ.

ಮೂವರು ಗಾಯಾಳು:

ಇಂಗ್ಲೆಂಡ್ ತಂಡದ ಮೂವರು ಸ್ಟಾರ್ ಆಟಗಾರರು ಗಾಯದ ಸಮಸ್ಯೆಯಿಂದ ಬಳಲುತ್ತಿದ್ದು, ಹೀಗಾಗಿ ಶ್ರೀಲಂಕಾ ವಿರುದ್ಧದ ಸರಣಿಯಿಂದ ಹೊರಗುಳಿದಿದ್ದಾರೆ. ಆ ಆಟಗಾರರು ಯಾರೆಂದರೆ…

  • ಫಿಲ್ ಸಾಲ್ಟ್ (ಕ್ವಾಡ್ ಇಂಜುರಿ)
  • ಜೇಕಬ್ ಬೆಥೆಲ್ (ಮಂಡಿ ಶಸ್ತ್ರಚಿಕಿತ್ಸೆ)
  • ಸ್ಯಾಮ್ ಕರನ್ (ಗ್ರೋಯಿನ್ ಇಂಜುರಿ)

ಇಂಗ್ಲೆಂಡ್ ಟಿ20 ತಂಡ: ಹ್ಯಾರಿ ಬ್ರೂಕ್ (ನಾಯಕ), ಜೋಫ್ರಾ ಆರ್ಚರ್, ಗಸ್ ಅಟ್ಕಿನ್ಸನ್, ಸೋನಿ ಬೇಕರ್, ಟಾಮ್ ಬ್ಯಾಂಟನ್, ಜೋಸ್ ಬಟ್ಲರ್, ಜೇಮ್ಸ್ ಕೋಲ್ಸ್, ಜೋರ್ಡನ್ ಕಾಕ್ಸ್, ಲಿಯಾಮ್ ಡಾಸನ್, ಅನೆರಿನ್ ಡೊನಾಲ್ಡ್, ಬೆನ್ ಡಕೆಟ್, ವಿಲ್ ಜ್ಯಾಕ್ಸ್, ಸಾಕಿಬ್ ಮಹಮೂದ್, ಜೇಮೀ ಓವರ್ಟನ್, ಆದಿಲ್ ರಶೀದ್, ಜೋಶ್ ಟಂಗ್.

ಇದನ್ನೂ ಓದಿ: 40 ಎಸೆತಗಳ ದಾಖಲೆಯನ್ನು ಧೂಳೀಪಟ ಮಾಡಿದ ದಸುನ್ ಶಾನಕ!

ಇಂಗ್ಲೆಂಡ್ ಏಕದಿನ ತಂಡ: ಹ್ಯಾರಿ ಬ್ರೂಕ್ (ನಾಯಕ), ರೆಹಾನ್ ಅಹ್ಮದ್, ಜೋಫ್ರಾ ಆರ್ಚರ್, ಗಸ್ ಅಟ್ಕಿನ್ಸನ್, ಟಾಮ್ ಬ್ಯಾಂಟನ್, ಸೋನಿ ಬೇಕರ್, ಜೋಸ್ ಬಟ್ಲರ್, ಜೋರ್ಡನ್ ಕಾಕ್ಸ್, ಹೆನ್ರಿ ಕ್ರೊಕೊಂಬೆ, ಲಿಯಾಮ್ ಡಾಸನ್, ಬೆನ್ ಡಕೆಟ್, ವಿಲ್ ಜ್ಯಾಕ್ಸ್, ಜೇಮೀ ಓವರ್ಟನ್, ಆದಿಲ್ ರಶೀದ್, ಜೋ ರೂಟ್, ಜೋಶ್ ಟಂಗ್.

 

Loading...
Unable to load recommendations.
Follow Us