GT vs MI Highlights IPL 2023: ಗಿಲ್ ಶತಕ; ಸತತ 2ನೇ ಬಾರಿಗೆ ಫೈನಲ್​ಗೇರಿದ ಗುಜರಾತ್

|

Updated on: May 27, 2023 | 12:13 AM

Gujarat Titans vs Mumbai Indians IPL 2023 Highlights Qualifier-2 in Kannada: ಇಂದು ಐಪಿಎಲ್​ ಕ್ವಾಲಿಫೈಯರ್ 2ನೇ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್​ ಮತ್ತು ಮುಂಬೈ ಇಂಡಿಯನ್ಸ್​ ತಂಡಗಳು ಮುಖಾಮುಖಿಯಾಗಿವೆ.

GT vs MI Highlights IPL 2023: ಗಿಲ್ ಶತಕ; ಸತತ 2ನೇ ಬಾರಿಗೆ ಫೈನಲ್​ಗೇರಿದ ಗುಜರಾತ್
ಗುಜರಾತ್- ಮುಂಬೈ ಮುಖಾಮುಖಿ

ಶುಭ್​ಮನ್ ಗಿಲ್ ಅವರ ಅದ್ಭುತ ಶತಕ (129) ಮತ್ತು ಮೋಹಿತ್ ಶರ್ಮಾ ಅವರ ಅತ್ಯುತ್ತಮ ಬೌಲಿಂಗ್ (ಐದು ವಿಕೆಟ್) ಆಧಾರದ ಮೇಲೆ ಗುಜರಾತ್ ಟೈಟಾನ್ಸ್ ಕ್ವಾಲಿಫೈಯರ್-2 ರಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು 62 ರನ್‌ಗಳಿಂದ ಸೋಲಿಸಿ ಫೈನಲ್‌ಗೆ ಲಗ್ಗೆ ಇಟ್ಟಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಗುಜರಾತ್ 3 ವಿಕೆಟ್ ಕಳೆದುಕೊಂಡು 233 ರನ್ ಟಾರ್ಗೆಟ್ ನೀಡಿತು. ಈ ಗುರಿ ಬೆನ್ನಟಿದ ಮುಂಬೈ 18.2 ಓವರ್‌ಗಳಲ್ಲಿ 171 ರನ್‌ಗಳಿಗೆ ಆಲೌಟ್ ಆಯಿತು. ಇದರೊಂದಿಗೆ ಪ್ರಶಸ್ತಿ ಗೆಲ್ಲುವ ಮುಂಬೈ ತಂಡದ ಕನಸು ಕೂಡ ಭಗ್ನಗೊಂಡಿದೆ. ಫೈನಲ್ ನಲ್ಲಿ ಹಾಲಿ ಚಾಂಪಿಯನ್ ಗುಜರಾತ್ ತಂಡ, ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಎದುರಿಸಲಿದೆ.

LIVE NEWS & UPDATES

The liveblog has ended.
  • 27 May 2023 12:13 AM (IST)

    ಗುಜರಾತ್ ಫೈನಲ್‌ಗೆ

    ಮುಂಬೈ ತಂಡವನ್ನು ಸೋಲಿಸಿ ಗುಜರಾತ್ ಫೈನಲ್‌ಗೆ ಲಗ್ಗೆ ಇಟ್ಟಿದ್ದು, ಇದೀಗ ಈ ತಂಡ ಫೈನಲ್‌ನಲ್ಲಿ ನಾಲ್ಕು ಬಾರಿ ವಿಜೇತ ಚೆನ್ನೈ ಸೂಪರ್ ಕಿಂಗ್ಸ್ ಅನ್ನು ಎದುರಿಸಲಿದೆ.

  • 27 May 2023 12:12 AM (IST)

    ಗುಜರಾತ್‌ಗೆ ಗೆಲುವು

    19ನೇ ಓವರ್‌ನ ಎರಡನೇ ಎಸೆತದಲ್ಲಿ ಮೋಹಿತ್ ಶರ್ಮಾ ಕುಮಾರ್ ಕಾರ್ತಿಕೇಯರನ್ನು ಔಟ್ ಮಾಡುವ ಮೂಲಕ ಮುಂಬೈ ತಂಡವನ್ನು ಆಲೌಟ್ ಮಾಡಿದರು. ಇದರೊಂದಿಗೆ ಗುಜರಾತ್ ಪಂದ್ಯವನ್ನು 62 ರನ್‌ಗಳಿಂದ ಗೆದ್ದುಕೊಂಡಿತು.


  • 26 May 2023 11:34 PM (IST)

    ಸೂರ್ಯಕುಮಾರ್ ಅರ್ಧಶತಕ

    ಮಹತ್ವದ ಪಂದ್ಯದಲ್ಲಿ ಸೂರ್ಯಕುಮಾರ್ ಅದ್ಭುತ ಇನ್ನಿಂಗ್ಸ್ ಆಡಿದ್ದು, ಅರ್ಧಶತಕ ಬಾರಿಸಿದ್ದಾರೆ. 14ನೇ ಓವರ್‌ನ ನಾಲ್ಕನೇ ಎಸೆತದಲ್ಲಿ ಸೂರ್ಯಕುಮಾರ್ ಸಿಕ್ಸರ್ ಬಾರಿಸುವ ಮೂಲಕ ಅರ್ಧಶತಕ ಪೂರೈಸಿದರು.

  • 26 May 2023 11:34 PM (IST)

    ಕ್ಯಾಮರೂನ್ ಗ್ರೀನ್ ಔಟ್

    ಕ್ಯಾಮರೂನ್ ಗ್ರೀನ್ ಔಟ್ ಆಗಿದ್ದಾರೆ. ಜೋಶ್ ಲಿಟಲ್ 12ನೇ ಓವರ್ ನ ಎರಡನೇ ಎಸೆತದಲ್ಲಿ ಗ್ರೀನ್ ಅವರನ್ನು ಬೌಲ್ಡ್ ಮಾಡಿದರು.

  • 26 May 2023 11:33 PM (IST)

    ಮುಂಬೈ 100 ರನ್ ಪೂರ್ಣ

    10ನೇ ಓವರ್​ನ ಎರಡನೇ ಎಸೆತದಲ್ಲಿ ಸೂರ್ಯಕುಮಾರ್ ಬೌಂಡರಿ ಬಾರಿಸಿ ಮುಂಬೈ ಇಂಡಿಯನ್ಸ್ ಸ್ಕೋರ್ 100ರ ಗಡಿ ದಾಟಿಸಿದರು.

  • 26 May 2023 10:55 PM (IST)

    ತಿಲಕ್ ವರ್ಮಾ ಔಟ್

    ಪವರ್ ಪ್ಲೇನ ಕೊನೆಯ ಎಸೆತದಲ್ಲಿ ರಶೀದ್ ಖಾನ್ ವಿಕೆಟ್ ಪಡೆದರು.

    ರಶೀದ್ ಎಸೆತವನ್ನು ಸ್ವೀಪ್ ಮಾಡುವ ಯತ್ನದಲ್ಲಿ ತಿಲಕ್ ಕ್ಲೀನ್ ಬೌಲ್ಡ್ ಆದರು.

    ತಿಲಕ್ 14 ಎಸೆತಗಳಲ್ಲಿ 43 ರನ್ ಬಾರಿಸಿ ನಿರ್ಗಮಿಸಿದರು.

  • 26 May 2023 10:41 PM (IST)

    ರೋಹಿತ್ ಶರ್ಮಾ ಔಟ್

    ರೋಹಿತ್ ಶರ್ಮಾ ಔಟಾಗಿದ್ದಾರೆ. ಮೂರನೇ ಓವರ್‌ನ ಎರಡನೇ ಎಸೆತದಲ್ಲಿ ಶಮಿ ರೋಹಿತ್ ಅವರನ್ನು ಪೆವಿಲಿಯನ್‌ಗೆ ಕಳುಹಿಸಿದರು.

    ರೋಹಿತ್ ಶರ್ಮಾ – 8 ರನ್, 7 ಎಸೆತಗಳು 1×4

  • 26 May 2023 10:11 PM (IST)

    ಮುಂಬೈಗೆ 234 ರನ್ ಟಾರ್ಗೆಟ್

    ಗುಜರಾತ್ ನ ಇನ್ನಿಂಗ್ಸ್ ಮುಗಿದಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಗುಜರಾತ್ ಮೂರು ವಿಕೆಟ್ ಕಳೆದುಕೊಂಡು 233 ರನ್ ಗಳಿಸಿದೆ. ತಂಡದ ಪರ ಗಿಲ್ 129 ರನ್​ಗಳ ಇನಿಂಗ್ಸ್ ಆಡಿದರು.

  • 26 May 2023 09:48 PM (IST)

    ಗಿಲ್ ಔಟ್

    ಶುಭಮನ್ ಗಿಲ್ ಔಟಾಗಿದ್ದಾರೆ. ಆಕಾಶ್ ಮಧ್ವಲ್ ಎಸೆದ 17ನೇ ಓವರ್‌ನ ನಾಲ್ಕನೇ ಎಸೆತದಲ್ಲಿ ಗಿಲ್ ಟಿಮ್ ಡೇವಿಡ್ ಕ್ಯಾಚ್ ನೀಡಿದರು. ಆರಂಭದಲ್ಲಿ ಗಿಲ್ ಅವರ ಕ್ಯಾಚ್ ಅನ್ನು ಡೇವಿಡ್ ಅವರೇ ಕೈಬಿಟ್ಟಿದ್ದರು.

  • 26 May 2023 09:26 PM (IST)

    ಗಿಲ್ ಶತಕ

    15ನೇ ಓವರ್‌ನ ಆರಂಭದಲ್ಲಿ ಶುಭಮನ್ ಗಿಲ್ ಒಂದು ರನ್ ಗಳಿಸುವ ಮೂಲಕ ಶತಕ ಪೂರೈಸಿದರು. ಗಿಲ್ ಇದೇ ಓವರ್​ನಲ್ಲಿ ಎರಡು ಸಿಕ್ಸರ್ ಹಾಗೂ ಒಂದು ಬೌಂಡರಿ ಬಾರಿಸಿದರು. ಗಿಲ್ ಇನ್ನಿಂಗ್ಸ್‌ನಲ್ಲಿ 10 ಸಿಕ್ಸರ್‌ ಕೂಡ ಸೇರಿವೆ.

  • 26 May 2023 09:12 PM (IST)

    ಗಿಲ್ ಬಿರುಸಿನ ಬ್ಯಾಟಿಂಗ್

    ಶುಭಮನ್ ಗಿಲ್ ಕೊನೆಯ 2 ಓವರ್‌ಗಳಲ್ಲಿ 5 ಸಿಕ್ಸರ್‌ಗಳನ್ನು ಬಾರಿಸಿದ್ದಾರೆ. ಆಕಾಶ್ ಓವರ್‌ನಲ್ಲಿ ಮೂರು ಅದ್ಭುತ ಸಿಕ್ಸರ್‌ಗಳನ್ನು ಬಾರಿಸಿದ ಗಿಲ್, ಪಿಯೂಷ್ ಚಾವ್ಲಾ ಓವರ್‌ನಲ್ಲಿ 2 ಸಿಕ್ಸರ್ ಮತ್ತು ಒಂದು ಬೌಂಡರಿ ಬಾರಿಸಿದರು.

  • 26 May 2023 09:06 PM (IST)

    ಗುಜರಾತ್ ಶತಕ

    ಆಕಾಶ್ ಎಸೆದ 12ನೇ ಓವರ್‌ನ ಮೊದಲ ಎರಡು ಎಸೆತಗಳಲ್ಲಿ ಗಿಲ್ ಸತತ ಎರಡು ಸಿಕ್ಸರ್‌ಗಳನ್ನು ಬಾರಿಸಿದರು. ಇದರೊಂದಿಗೆ ಗುಜರಾತ್ ಸ್ಕೋರ್ 100ರ ಗಡಿ ದಾಟಿತು.

  • 26 May 2023 08:58 PM (IST)

    ಗಿಲ್ ಅರ್ಧ ಶತಕ

    10ನೇ ಓವರ್‌ನಲ್ಲಿ ಶುಭಮನ್ ಗಿಲ್ ಮೂರನೇ ಎಸೆತವನ್ನು ಸ್ಕ್ವೇರ್ ಲೆಗ್ ಕಡೆಗೆ ಫ್ಲಿಕ್ ಮಾಡಿದರು. ಇದರೊಂದಿಗೆ ಗಿಲ್ ಅರ್ಧಶತಕ ಪೂರೈಸಿದರು.

  • 26 May 2023 08:42 PM (IST)

    ಗಿಲ್ ಸಿಕ್ಸ್

    9ನೇ ಓವರ್​ನಲ್ಲಿ 16 ರನ್ ಬಂದವು

    ಓವರ್​ನ ಮೊದಲ ಎಸೆತವನ್ನು ಸುದರ್ಶನ್ ಬೌಂಡರಿಗಟ್ಟಿದರೆ, 3ನೇ ಎಸೆತವನ್ನು ಗಿಲ್ ಸಿಕ್ಸರ್​ಗಟ್ಟಿದರು.

    9 ಓವರ್ ಅಂತ್ಯಕ್ಕೆ 80/1

  • 26 May 2023 08:32 PM (IST)

    ಸಾಹ ಔಟ್

    7ನೇ ಓವರ್​ನ 3ನೇ ಎಸೆತದಲ್ಲಿ ಗುಜರಾತ್ ಮೊದಲ ವಿಕೆಟ್ ಕಳೆದುಕೊಂಡಿದೆ

    ಸಹಾ ಸ್ಟಂಪ್ ಔಟ್ ಆದರು

  • 26 May 2023 08:29 PM (IST)

    ಪವರ್ ಪ್ಲೇ ಅಂತ್ಯ

    ಜೋರ್ಡಾನ್ ಬೌಲ್ ಮಾಡಿದ 6ನೇ ಓವರ್​ನಲ್ಲಿ 12 ರನ್ ಬಂದವು

    ಈ ಓವರ್​ನಲ್ಲಿ ಗಿಲ್ 1 ಸಿಕ್ಸರ್ ಹಾಗೂ ಬೌಂಡರಿ ಬಂತು

    ಇದೇ ಓವರ್​ನಲ್ಲಿ ಗುಜರಾತ್ ಅರ್ಧಶತಕ ಪೂರೈಸಿತು

    ವೃದ್ಧಿಮಾನ್ ಸಹಾ18* (16)

    ಶುಭಮನ್ ಗಿಲ್ 31* (20)

    ಜಿಟಿ 50/0

  • 26 May 2023 08:21 PM (IST)

    ಸಾಹ ಬೌಂಡರಿ

    ಆಕಾಶ್ ಬೌಲ್ ಮಾಡಿದ 4ನೇ ಓವರ್​ನ ಕೊನೆಯ ಎಸೆತವನ್ನು ಸಾಹ ಡೀಪ್ ಪಾಯಿಂಟ್​ನಲ್ಲಿ ಬೌಂಡರಿಗಟ್ಟಿದರು

    4 ಓವರ್ ಅಂತ್ಯಕ್ಕೆ 27/0

  • 26 May 2023 08:09 PM (IST)

    ಗಿಲ್ ಫೋರ್

    2ನೇ ಓವರ್​ನಲ್ಲಿ 10 ರನ್ ಬಂದವು

    ಓವರ್​ನ 5ನೇ ಎಸೆತವನ್ನು ಗಿಲ್ ಡೀಪ್ ಬ್ಯಾಕ್ವರ್ಡ್​ ಸ್ಕ್ವೇರ್ ಲೆಗ್​ನಲ್ಲಿ ಬೌಂಡರಿಗಟ್ಟಿದರು.

    GT 13/0

  • 26 May 2023 08:05 PM (IST)

    ಗುಜರಾತ್ ಬ್ಯಾಟಿಂಗ್ ಆರಂಭ

    ಗುಜರಾತ್ ಪರ ಗಿಲ್ ಹಾಗೂ ಸಹಾ ಬ್ಯಾಟಿಂಗ್ ಆರಂಭಿಸಿದ್ದಾರೆ

    ಮೊದಲ ಓವರ್​ನಲ್ಲಿ ಕೇವಲ 3 ರನ್ ಬಂತು

  • 26 May 2023 08:03 PM (IST)

    ಗುಜರಾತ್ ಟೈಟಾನ್ಸ್

    ಹಾರ್ದಿಕ್ ಪಾಂಡ್ಯ, ವೃದ್ಧಿಮಾನ್ ಸಹಾ, ಶುಭಮನ್ ಗಿಲ್, ಸಾಯಿ ಸುದರ್ಶನ್, ವಿಜಯ್ ಶಂಕರ್, ಡೇವಿಡ್ ಮಿಲ್ಲರ್, ರಾಹುಲ್ ತೆವಾಟಿಯಾ, ರಶೀದ್ ಖಾನ್, ಮೋಹಿತ್ ಶರ್ಮಾ, ನೂರ್ ಅಹ್ಮದ್, ಮೊಹಮ್ಮದ್ ಶಮಿ

  • 26 May 2023 08:02 PM (IST)

    ಮುಂಬೈ ಇಂಡಿಯನ್ಸ್

    ರೋಹಿತ್ ಶರ್ಮಾ, ಇಶಾನ್ ಕಿಶನ್, ಕ್ಯಾಮೆರಾನ್ ಗ್ರೀನ್, ಸೂರ್ಯಕುಮಾರ್ ಯಾದವ್, ತಿಲಕ್ ವರ್ಮಾ, ಟಿಮ್ ಡೇವಿಡ್, ಕ್ರಿಸ್ ಜೋರ್ಡಾನ್, ಪಿಯೂಷ್ ಚಾವ್ಲಾ, ಜೇಸನ್ ಬೆಹ್ರೆಂಡಾರ್ಫ್, ಕುಮಾರ್ ಕಾರ್ತಿಕೇಯ, ಆಕಾಶ್ ಮಧ್ವಲ್

  • 26 May 2023 07:55 PM (IST)

    ಉಭಯ ತಂಡಗಳಲ್ಲೂ ಬದಲಾವಣೆ

    ಮುಂಬೈ ತನ್ನ ಪ್ಲೇಯಿಂಗ್-11 ರಲ್ಲಿ ಬದಲಾವಣೆ ಮಾಡಿದೆ. ಹೃತಿಕ್ ಶೋಕಿನ್ ಬದಲಿಗೆ ಕುಮಾರ್ ಕಾರ್ತಿಕೇಯ ತಂಡಕ್ಕೆ ಬಂದಿದ್ದಾರೆ. ಗುಜರಾತ್ ಎರಡು ಬದಲಾವಣೆ ಮಾಡಿದೆ. ಜೋಶ್ ಲಿಟಲ್ ಮತ್ತು ಸಾಯಿ ಸುದರ್ಶನ್ ತಂಡಕ್ಕೆ ಬಂದಿದ್ದಾರೆ. ದಾಸುನ್ ಶನಕ ಮತ್ತು ದರ್ಶನ್ ನಲ್ಕಂಡೆ ತಂಡದಿಂದ ಹೊರ ಹೋಗಿದ್ದಾರೆ.

  • 26 May 2023 07:46 PM (IST)

    ಟಾಸ್ ಗೆದ್ದ ಮುಂಬೈ

    ಟಾಸ್ ಗೆದ್ದ ಮುಂಬೈ ನಾಯಕ ರೋಹಿತ್ ಶರ್ಮಾ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದ್ದಾರೆ.

  • 26 May 2023 07:21 PM (IST)

    ಮಳೆ ನಿಂತಿದೆ

    ಅಹಮದಾಬಾದ್​ನಲ್ಲಿ ಮಳೆ ನಿಂತಿದ್ದು, 7:45ಕ್ಕೆ ಟಾಸ್ ನಡೆಯಲಿದೆ. ಆ ಬಳಿಕ 8 ಗಂಟೆಗೆ ಪಂದ್ಯ ಆರಂಭವಾಗಲಿದೆ.

  • 26 May 2023 06:55 PM (IST)

    ಅಹಮದಾಬಾದ್‌ನಲ್ಲಿ ಮಳೆ

    ಅಹಮದಾಬಾದ್‌ನಲ್ಲಿ ಮಳೆಯಾಗುತ್ತಿದ್ದು ಪಂದ್ಯ ಆರಂಭ ವಿಳಂಬವಾಗುವ ಸಾಧ್ಯತೆ ಇದೆ. ಈಗ ಪಂದ್ಯ ಯಾವಾಗ ಆರಂಭವಾಗುತ್ತದೆ ಎಂದು ನೋಡಬೇಕಿದೆ.

Published On - 6:53 pm, Fri, 26 May 23

Follow us on