ಆಂಗ್ಲರ ನಾಡಿಗೆ ಪ್ರವಾಸ ಬೆಳೆಸಿರುವ ಭಾರತ ಮಹಿಳಾ ಕ್ರಿಕೆಟ್ ತಂಡ ಇಂಗ್ಲೆಂಡ್ ವನಿತೆಯರ (England Women vs India Women) ವಿರುದ್ಧ ಟಿ20 ಸರಣಿ ಸೋತ ಬಳಿಕ ಇದೀಗ ಏಕದಿನ ಸರಣಿ ಆಡುತ್ತಿದೆ. ಹೂವಾದ ಕೌಂಟಿ ಗ್ರೌಂಡ್ನಲ್ಲಿ ಭಾನುವಾರ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಭಾರತ ತಂಡ ಭರ್ಜರಿ ಗೆಲುವು ಸಾಧಿಸಿತು. ಸ್ಮೃತಿ ಮಂದಾನ (Smriti Mandhana) ಹಾಗೂ ನಾಯಕಿ ಹರ್ಮನ್‌ಪ್ರೀತ್ ಕೌರ್ ಅವರ ಅಮೋಘ ಬ್ಯಾಟಿಂಗ್ ನೆರವಿನಿಂದ ಟೀಮ್ ಇಂಡಿಯಾ 7 ವಿಕೆಟ್ಗಳ ಜಯ ಸಾಧಿಸಿ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ 1-0 ಮುನ್ನಡೆ ಪಡೆದುಕೊಂಡಿದೆ. ಇದರ ನಡುವೆ ಹರ್ಮನ್‌ಪ್ರೀತ್ ಕೌರ್ (Harmanpreet Kaur) ಡೈವ್ ಬಿದ್ದು ಒಂದೇ ಕೈನಲ್ಲಿ ಹಿಡಿದ ರೋಚಕ ಕ್ಯಾಚ್ನ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.
ನಿಧಾನಗತಿಯ ಆರಂಭ ಪಡೆದುಕೊಂಡ ಇಂಗ್ಲೆಂಡ್ 9 ಓವರ್ ಆಗುವ ಹೊತ್ತಿಗೆ ಗಳಿಸಿದ್ದ ಕೇವಲ 21 ರನ್. 2 ವಿಕೆಟ್ ಕೂಡ ಕಳೆದುಕೊಂಡಿತ್ತು. 4ನೇ ಬ್ಯಾಟರ್ ಆಗಿ ಕಣಕ್ಕಿಳಿದ ಎಲೈಸ್ ಕ್ಯಾಪ್ಸೆ ಅವರಿಗೆ ಕೂಡ ವೇಗವಾಗಿ ರನ್ ಗಳಿಸಿಲು ಸಾಧ್ಯವಾಗಲಿಲ್ಲ. 19 ರನ್ ಗಳಿಸಿ ಔಟಾದರು. ಆದರೆ, ಇವರು ಔಟಾಗಲು ಕಾರಣವಾಗಿದ್ದು ಹರ್ಮನ್‌ಪ್ರೀತ್ ಹಿಡಿದ ರೋಚಕ ಕ್ಯಾಚ್.
18ನೇ ಓವರ್ನ ಸ್ನೇಹ್ ರಾಣ ಬೌಲಿಂಗ್ನಲ್ಲಿ ಎಲೈಸ್ ಕ್ಯಾಪ್ಸೆ ಅವರು ಶಾರ್ಟ್ ಮಿಡ್ ವಿಕೆಟ್ನಲ್ಲಿ ನಿತ್ತಿದ್ದ ಹರ್ಮನ್ ಹಿಡಿದ ಅದ್ಭುತ ಕ್ಯಾಚ್ಗೆ ಬಲಿಯಾಗಬೇಕಾಯಿತು. ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.
#ENGvIND Harmanpreet ???#CricTracker #Harmanpreet pic.twitter.com/FqQdFJk6w1
— Womenin _blue _Forever (@womenin_blue) September 18, 2022
ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಆತಿಥೇಯ ತಂಡ 50 ಓವರ್‌ಗಳಲ್ಲಿ 7 ವಿಕೆಟ್‌ಗಳಿಗೆ 227 ರನ್ ಗಳಿಸಿತು. ಇಂಗ್ಲೆಂಡ್ ಪರ ಎಮ್ಮಾ ಲ್ಯಾಂಬ್ 12, ಟಮ್ಮಿ ಬ್ಯೂಮಾಂಟ್ 7, ಸೋಫಿಯಾ ಡಂಕ್ಲಿ 29, ಆಲಿಸ್ ಕ್ಯಾಪ್ಸೆ 19, ಡೇನಿಯಲ್ ವ್ಯಾಟ್ 43, ಆಮಿ ಜೋನ್ಸ್ 3, ಡೇನಿಯಲ್ ವ್ಯಾಟ್ 43 ರನ್, ಆಲಿಸ್ ಡೇವಿಡ್ಸನ್ ರಿಚರ್ಡ್ಸ್ ಅಜೇಯ 50, ಸೋಫಿ ಎಕ್ಲೆಸ್ಟೋನ್ 31, ಷಾರ್ಲೆಟ್ ಡೀನ್ ಅಜೇಯ 24 ರನ್ ದಾಖಲಿಸಿದರು. ಭಾರತದ ಪರ ದೀಪ್ತಿ ಶರ್ಮಾ 2 ವಿಕೆಟ್, ಜೂಲನ್ ಗೋಸ್ವಾಮಿ, ಮೇಘನಾ ಸಿಂಗ್, ರಾಜೇಶ್ವರಿ ಗಾಯಕ್ವಾಡ್, ಸ್ನೇಹ ರಾಣಾ ಮತ್ತು ಹರ್ಲೀನ್ ಡಿಯೋಲ್ ತಲಾ 1 ವಿಕೆಟ್ ಪಡೆದರು.
ಸಾಧಾರಣ ಗುರಿ ಬೆನ್ನಟ್ಟಿದ ಭಾರತ ತಂಡ, ಶಫಾಲಿ ವರ್ಮ (1) ಅವರ ವಿಕೆಟ್ ಅನ್ನು ಬೇಗನೇ ಕಳೆದುಕೊಂಡಿತು. ಆದರೆ ಸ್ಮೃತಿ ಮಂದಾನ ಅವರು ಯಸ್ತಿಕಾ ಭಾಟಿಯಾ ಜತೆ ಎರಡನೇ ವಿಕೆಟ್‌ಗೆ 96 ಹಾಗೂ ಹರ್ಮನ್‌ಪ್ರೀತ್ ಕೌರ್ ಜತೆ ಮೂರನೇ ವಿಕೆಟ್‌ಗೆ 99 ರನ್ ಸೇರಿಸಿ ತಂಡದ ಜಯಕ್ಕೆ ಕಾರಣರಾದರು. ಮಂದಾನಾ 99 ಎಸೆತಗಳಲ್ಲಿ 10 ಬೌಂಡರಿ, 1 ಸಿಕ್ಸರ್ ಸಿಡಿಸಿ 91 ರನ್ ಚಚ್ಚಿದರೆ ಹರ್ಮನ್‌ಪ್ರೀತ್ 94 ಎಸೆತಗಳಲ್ಲಿ 7 ಬೌಂಡರಿ, 1 ಸಿಕ್ಸರ್ನೊಂದಿಗೆ ಅಜೇಯ 74 ರನ್ ಬಾರಿಸಿದರು. ಯಾಸ್ತಿಕಾ ಭಾಟಿಯಾ 47 ಎಸೆತಗಳಲ್ಲಿ 50 ರನ್ಗಳ ಕೊಡುಗೆ ನೀಡಿದರು.
Published On - 12:44 pm, Mon, 19 September 22