
2028 ರಲ್ಲಿ ನಡೆಯಲಿರುವ ಟಿ20 ವಿಶ್ವಕಪ್ ಟೂರ್ನಿಯ ಸ್ವರೂಪದಲ್ಲಿ ಮಹತ್ವದ ಬದಲಾವಣೆ ಮಾಡಲಾಗಿದೆ. ಈ ಬದಲಾವಣೆಯೊಂದಿಗೆ ಟಿ20 ವಿಶ್ವಕಪ್ಗೂ ಐಪಿಎಲ್ ಮಾದರಿಯ ಎಲಿಮಿನೇಟರ್ ರೌಂಡ್ ಅನ್ನು ಪರಿಚಯಿಸಲಾಗಿದೆ. ಹಾಗೆಯೇ ಈ ಹಿಂದೆ ಇದ್ದ ಸಾಂಪ್ರದಾಯಿಕ ‘ಸೂಪರ್ 8’ ಹಂತಕ್ಕೆ ಬ್ರೇಕ್ ಹಾಕಿರುವ ಐಸಿಸಿ, ಅದರ ಜಾಗದಲ್ಲಿ ಮತ್ತಷ್ಟು ರೋಮಾಂಚನಕಾರಿ ಹಾಗೂ ಕಠಿಣ ಸವಾಲಿನ ‘ಸೂಪರ್ 10’ ಹಂತವನ್ನು ಪರಿಚಯಿಸಿದೆ.
ಹೊಸ ಸಹವರ್ತಿ ರಾಷ್ಟ್ರಗಳಿಗೆ ವಿಶ್ವ ವೇದಿಕೆಯಲ್ಲಿ ಹೆಚ್ಚಿನ ಪಂದ್ಯಗಳನ್ನು ಆಡಲು ಅವಕಾಶ ಕಲ್ಪಿಸುವ ಮತ್ತು ಟೂರ್ನಿಯ ಉತ್ತರಾರ್ಧದ ಪಂದ್ಯಗಳನ್ನು ಮತ್ತಷ್ಟು ರೋಚಕಗೊಳಿಸುವ ಉದ್ದೇಶದಿಂದ ಐಸಿಸಿ ಈ ಹೊಸ ನಿಯಮಗಳನ್ನು ಜಾರಿಗೆ ತಂದಿದೆ. ಒಟ್ಟು ಪಂದ್ಯಗಳ ಸಂಖ್ಯೆ 55 ರಷ್ಟೇ ಉಳಿದಿದ್ದರೂ, ಲೀಗ್ ಹಂತ ಮತ್ತು ನಾಕೌಟ್ ಹಂತಗಳಲ್ಲಿ ಭಾರಿ ಬದಲಾವಣೆಗಳನ್ನು ಮಾಡಲಾಗಿದ್ದು, ಈ ಬದಲಾವಣೆಯ ಸಂಪೂರ್ಣ ಮಾಹಿತಿ ಇಲ್ಲಿದೆ.
ಅಂದರೆ ಈ ಬಾರಿ ಸೂಪರ್ 10 ಹಂತದಿಂದ ಒಟ್ಟು 6 ತಂಡಗಳು ಸೆಮಿಫೈನಲ್ ರೇಸ್‌ನಲ್ಲಿ ಉಳಿಯಲಿವೆ. ಮೊದಲಿಗೆ ಎರಡು ಗ್ರೂಪ್‌ಗಳ ಅಂಕ ಪಟ್ಟಿಯಲ್ಲಿ ಅಗ್ರ ಸ್ಥಾನ ಪಡೆಯುವ ತಂಡಗಳು ನೇರವಾಗಿ ಸೆಮಿಫೈನಲ್‌ಗೆ ಎಂಟ್ರಿ ಕೊಟ್ಟರೆ, ಉಳಿದ ನಾಲ್ಕು ತಂಡಗಳು ಎಲಿಮಿನೇಟರ್ ಪಂದ್ಯಗಳ ಮೂಲಕ ಸೆಮಿಫೈನಲ್‌ನ ಉಳಿದ 2 ಸ್ಥಾನಗಳಿಗಾಗಿ ಹೋರಾಡಲಿವೆ. ಇದರಿಂದಾಗಿ ಮುಂಬರುವ ಟಿ20 ವಿಶ್ವಕಪ್ನ ನಾಕೌಟ್ ಹಂತವು ಮತ್ತಷ್ಟು ರೋಚಕವಾಗಿರಲಿದೆ.
ಇದನ್ನೂ ಓದಿ: 11+3 ತಂಡಗಳು, ಸೂಪರ್-7: ಏಕದಿನ ವಿಶ್ವಕಪ್ ಸ್ವರೂಪ ಬದಲು
ಒಟ್ಟಾರೆಯಾಗಿ ಹೇಳುವುದಾದರೆ, ಐಸಿಸಿ ತಂದಿರುವ ಈ ಹೊಚ್ಚ ಹೊಸ ‘ಸೂಪರ್ 10’ ಮತ್ತು ‘ಎಲಿಮಿನೇಟರ್’ ಸ್ವರೂಪವು ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಹೊಸ ಕ್ರಾಂತಿಗೆ ನಾಂದಿ ಹಾಡಲಿದೆ. ಐಪಿಎಲ್ ಮಾದರಿಯ ಈ ನಾಕೌಟ್ ನಿಯಮದಿಂದಾಗಿ ಪ್ರತಿ ಪಂದ್ಯವೂ ಅಂತಿಮ ಓವರ್‌ನವರೆಗೂ ಕುತೂಹಲ ಕಾಯ್ದುಕೊಳ್ಳುವುದರಲ್ಲಿ ಯಾವುದೇ ಸಂಶಯವಿಲ್ಲ ಎನ್ನಬಹುದು.