ಟೀಂ ಇಂಡಿಯಾ 2024 ರ ತನ್ನ ಮೊದಲ ಸ್ವದೇಶಿ ಸರಣಿಯನ್ನು ಅಫ್ಘಾನಿಸ್ತಾನ ವಿರುದ್ಧ (India vs Afghanistan) ಇದೇ ಜನವರಿ 11 ರಿಂದ ಆರಂಭಿಸಲಿದೆ. ಉಭಯ ತಂಡಗಳ ನಡುವೆ 3 ಪಂದ್ಯಗಳ ಟಿ20 ಸರಣಿ ನಡೆಯಲ್ಲಿದೆ. ಟಿ20 ವಿಶ್ವಕಪ್‌ಗೂ (T20 World Cup 2024) ಮುನ್ನ ಟೀಂ ಇಂಡಿಯಾ ಆಡುತ್ತಿರುವ ಕೊನೆಯ ಟಿ20 ಸರಣಿ ಇದಾಗಿದೆ. ಹೀಗಾಗಿ ಟಿ20 ವಿಶ್ವಕಪ ತಯಾರಿಯ ದೃಷ್ಟಿಯಿಂದ ಈ ಸರಣಿ ಎರಡೂ ತಂಡಗಳಿಗೂ ಬಹಳ ಮುಖ್ಯವಾಗಿದೆ. ಈ ಸರಣಿಗೆ ಈಗಾಗಲೇ ಅಫ್ಘಾನಿಸ್ತಾನ ತಂಡವನ್ನು ಪ್ರಕಟಿಸಲಾಗಿದೆ. ಆದರೆ ಬಿಸಿಸಿಐ (BCCI) ಮಾತ್ರ ಇನ್ನೂ ತಂಡವನ್ನು ಪ್ರಕಟಿಸಿಲ್ಲ. ವರದಿ ಪ್ರಕಾರ ಇಂದು ತಂಡವನ್ನು ಪ್ರಕಟಿಸುವ ಸಾಧ್ಯತೆಗಳಿವೆ.
ಭಾರತ ಹಾಗೂ ಅಫ್ಘಾನಿಸ್ತಾನ ನಡುವಿನ ಟಿ20 ಸರಣಿ ಜನವರಿ 11 ರಿಂದ ಆರಂಭವಾಗಲಿದೆ.
ಭಾರತ ಮತ್ತು ಅಫ್ಘಾನಿಸ್ತಾನ ನಡುವಿನ ಟಿ20 ಸರಣಿಯ ಮೊದಲ ಪಂದ್ಯ ಗುರುವಾರ (ಜನವರಿ 11) ಮೊಹಾಲಿಯ ಪಂಜಾಬ್ ಕ್ರಿಕೆಟ್ ಸಂಸ್ಥೆ ಐಎಸ್ ಬಿಂದ್ರಾ ಕ್ರೀಡಾಂಗಣದಲ್ಲಿ ನಡೆಯಲಿದೆ. ಎರಡನೇ ಟಿ20 ಪಂದ್ಯ ಇಂದೋರ್‌ನ ಹೋಲ್ಕರ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿದೆ. ಅದೇ ಸಮಯದಲ್ಲಿ, ಸರಣಿಯ ಕೊನೆಯ ಪಂದ್ಯದಲ್ಲಿ ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಉಭಯ ತಂಡಗಳು ಮುಖಾಮುಖಿಯಾಗಲಿವೆ.
IND vs AFG: ಭಾರತ ವಿರುದ್ಧದ ಟಿ20 ಸರಣಿಗೆ 19 ಸದಸ್ಯರ ಅಫ್ಘಾನಿಸ್ತಾನ ತಂಡ ಪ್ರಕಟ
ಭಾರತ ಹಾಗೂ ಅಫ್ಘಾನಿಸ್ತಾನ ನಡುವಿನ ಟಿ20 ಸರಣಿಯ ಮೊದಲ ಪಂದ್ಯ ಜನವರಿ 11 ರಂದು ನಡೆದರೆ, ಎರಡನೇ ಪಂದ್ಯ ಜನವರಿ 14 ರಂದು ನಡೆಯಲ್ಲಿದೆ. ಹಾಗೆಯೇ ಅಂತಿಮ ಪಂದ್ಯ ಜನವರಿ 17 ರಂದು ನಡೆಯಲ್ಲಿದೆ.
ಭಾರತ ಮತ್ತು ಅಫ್ಘಾನಿಸ್ತಾನ ನಡುವಿನ ಎಲ್ಲಾ ಮೂರು ಟಿ20 ಪಂದ್ಯಗಳು ಭಾರತೀಯ ಕಾಲಮಾನ ರಾತ್ರಿ 7:00 ರಿಂದ ನಡೆಯಲಿವೆ. ಈ ಪಂದ್ಯಗಳ ನೇರ ಪ್ರಸಾರ ಸ್ಪೋರ್ಟ್ಸ್ 18 ನೆಟ್‌ವರ್ಕ್‌ನಲ್ಲಿ ಇರಲಿದೆ. ಹಾಗೆಯೇ ಜಿಯೋ ಸಿನಿಮಾದಲ್ಲಿ ಟಿ20 ಸರಣಿಯ ಲೈವ್ ಸ್ಟ್ರೀಮಿಂಗ್ ಅನ್ನು ಅಭಿಮಾನಿಗಳು ಉಚಿತವಾಗಿ ವೀಕ್ಷಿಸಬಹುದಾಗಿದೆ.
ಇಬ್ರಾಹಿಂ ಝದ್ರಾನ್ (ನಾಯಕ), ರಹಮಾನುಲ್ಲಾ ಗುರ್ಬಾಜ್, ಇಕ್ರಮ್ ಅಲಿಖಿಲ್, ಹಜರತುಲ್ಲಾ ಝಜೈ, ರಹಮತ್ ಷಾ, ನಜಿಬುಲ್ಲಾ ಝದ್ರಾನ್, ಮೊಹಮ್ಮದ್ ನಬಿ, ಕರೀಂ ಜನತ್, ಅಜ್ಮುಲ್ಲಾ ಉಮರ್ಜಾಯ್, ಶರಫುದ್ದೀನ್ ಅಶ್ರಫ್, ಮುಜೀಬ್ ಉರ್ ರೆಹಮಾಲ್, ಫಜಲ್ ಹಕ್ಮಾನ್ ನವೀನ್ ಉಲ್ ಹಕ್, ನೂರ್ ಅಹ್ಮದ್, ಮೊಹಮ್ಮದ್ ಸಲೀಮ್, ಖೈಸ್ ಅಹ್ಮದ್, ಗುಲ್ಬದಿನ್ ನೈಬ್ ಮತ್ತು ರಶೀದ್ ಖಾನ್.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ