IND vs SL: ಶ್ರೀಲಂಕಾದ ಮತ್ತೊಬ್ಬ ಆಟಗಾರನ ವಿರುದ್ಧ ಐಸಿಸಿ ಕ್ರಮ

ICC fines cricketers: ಕ್ರಿಕೆಟ್ ಪಂದ್ಯಗಳ ನಡುವೆ ನಿಯಮ ಉಲ್ಲಂಘಿಸಿದ ಟೀಂ ಇಂಡಿಯಾದ ಯಶಸ್ವಿ ಜೈಸ್ವಾಲ್, ಶ್ರೀಲಂಕಾದ ಅಸಿತಾ ಫೆರ್ನಾಂಡೋ ಮತ್ತು ಪ್ರಭಾತ್ ಜಯಸೂರ್ಯ ವಿರುದ್ಧ ಐಸಿಸಿ ಕ್ರಮ ಕೈಗೊಂಡಿದೆ. ಜೈಸ್ವಾಲ್-ಫೆರ್ನಾಂಡೋ ನಡುವಿನ ಜಗಳ ಹಾಗೂ ಜಯಸೂರ್ಯ ಬ್ಯಾಟ್ ಎಸೆದ ಪ್ರಕರಣಗಳಿಗಾಗಿ ಈ ಆಟಗಾರರಿಗೆ ಪಂದ್ಯ ಶುಲ್ಕದ 25% ದಂಡ ಮತ್ತು ಒಂದು ಡಿಮೆರಿಟ್ ಪಾಯಿಂಟ್ ವಿಧಿಸಲಾಗಿದೆ. ಐಸಿಸಿ ನೀತಿ ಸಂಹಿತೆ ಪಾಲನೆ ಕಡ್ಡಾಯ ಎಂದು ಈ ಘಟನೆಗಳು ಒತ್ತಿಹೇಳುತ್ತವೆ.

IND vs SL: ಶ್ರೀಲಂಕಾದ ಮತ್ತೊಬ್ಬ ಆಟಗಾರನ ವಿರುದ್ಧ ಐಸಿಸಿ ಕ್ರಮ
Prabath Jayasuriya

Updated on: Aug 25, 2026 | 7:48 PM

ಆಟದ ನಡುವೆ ಐಸಿಸಿ (ICC) ನಿಯಮವನ್ನು ಉಲ್ಲಂಘಿಸಿದ ಕಾರಣಕ್ಕಾಗಿ ಟೀಂ ಇಂಡಿಯಾದ ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್ (Yashasvi Jaiswal) ಹಾಗೂ ಶ್ರೀಲಂಕಾದ ವೇಗದ ಬೌಲರ್ ಅಸಿತಾ ಫೆರ್ನಾಂಡೋ ವಿರುದ್ಧ ಐಸಿಸಿ ಕಠಿಣ ಕ್ರಮ ಕೈಗೊಂಡಿತ್ತು. ಇವರಿಬ್ಬರು ಪಂದ್ಯದ ನಡುವೆ ಮೈದಾನದಲ್ಲೇ ಪರಸ್ಪರ ಜಗಳ ಮಾಡಿಕೊಂಡಿದ್ದರು. ಹೀಗಾಗಿ ಐಸಿಸಿ ಇವರಿಬ್ಬರಿಗೆ ಪಂದ್ಯ ಶುಲ್ಕ ಶೇ. 25 ರಷ್ಟು ಮೊತ್ತವನ್ನು ದಂಡವಾಗಿ ಮತ್ತ ಒಂದು ಡಿಮೆರಿಟ್ ಪಾಯಿಂಟ್ ಅನ್ನು ಶಿಕ್ಷಿಯಾಗಿ ವಿಧಿಸಿತ್ತು. ಇದೀಗ ಶ್ರೀಲಂಕಾದ ಸ್ಪಿನ್ನರ್ ಪ್ರಭಾತ್ ಜಯಸೂರ್ಯ (Prabath Jayasuriya) ವಿರುದ್ಧವೂ ಐಸಿಸಿ ಕ್ರಮ ಕೈಗೊಂಡಿದೆ. ಪ್ರಭಾತ್ ಜಯಸೂರ್ಯ ಕೂಡ ಐಸಿಸಿ ನಿಯಮವನ್ನು ಉಲ್ಲಂಘಿಸಿರುವ ಕಾರಣ ಅವರಿಗೂ ಐಸಿಸಿ ಶಿಕ್ಷೆ ವಿಧಿಸಿದೆ.

ಶಿಕ್ಷೆಗೆ ಗುರಿಯಾದ ಪ್ರಭಾತ್ ಜಯಸೂರ್ಯ

ಶ್ರೀಲಂಕಾದ ಮೊದಲ ಇನ್ನಿಂಗ್ಸ್​ನಲ್ಲಿ ಎರಡನೇ ದಿನದಂದು ನೈಟ್​ ವಾಚ್​ಮನ್ ಆಗಿ ಬ್ಯಾಟಿಂಗ್​ಗೆ ಬಂದಿದ್ದ ಪ್ರಭಾತ್ ಜಯಸೂರ್ಯ, ಮಾನವ್ ಸುತಾರ್ ಬೌಲಿಂಗ್‌ನಲ್ಲಿ ಎಲ್​ಬಿಡ್ಲ್ಯೂ ಆಗಿ ವಿಕೆಟ್ ಒಪ್ಪಿಸಿದರು. ಪ್ರಭಾತ್ ಜಯಸೂರ್ಯ ಔಟಾಗುತ್ತಿದ್ದಂತೆ ತಮ್ಮ ಬ್ಯಾಟ್ ಅನ್ನು ನೆಲಕ್ಕೆ ಬಿಸಾಡುವ ಮೂಲಕ ಆಕ್ರೋಶ ಕೊರಹಾಕಿದ್ದರು. ಇದು ಐಸಿಸಿ ನಿಯಮಗಳಿಗೆ ವಿರುದ್ಧವಾಗಿದ್ದು, ಇದೇ ಕಾರಣಕ್ಕೆ ಐಸಿಸಿ ಪ್ರಭಾತ್ ಜಯಸೂರ್ಯ ಮೇಲೆ ಕ್ರಮ ಜರುಗಿಸಿದೆ.

ಪಂದ್ಯದ ರೆಫರಿ ಆಂಡಿ ಪೈಕ್ರಾಫ್ಟ್ ಅವರ ಶಿಫಾರಸ್ಸಿನ ಮೇರೆಗೆ ಈ ಕ್ರಮ ಕೈಗೊಳ್ಳಲಾಗಿದೆ. ಪ್ರಭಾತ್ ಜಯಸೂರ್ಯ ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದು ಹೆಚ್ಚಿನ ವಿಚಾರಣೆಯ ಅಗತ್ಯವಿಲ್ಲವೆಂದು ಐಸಿಸಿ ಹೇಳಿದೆ. ಪ್ರಭಾತ್‌ ಕಳೆದ 24 ತಿಂಗಳಲ್ಲಿ ಮೊದಲ ಬಾರಿಗೆ ಈ ರೀತಿಯ ತಪ್ಪನ್ನು ಮಾಡಿರುವುದರಿಂದ ಅವರಿಗೆ ಡಿಮೆರಿಟ್ ಪಾಯಿಂಟ್ ನೀಡಲಾಗಿದೆ.

ಜೈಸ್ವಾಲ್, ಫೆರ್ನಾಂಡೋ ನಡುವೆ ನಡೆದಿದ್ದೇನು?

ಎರಡನೇ ಟೆಸ್ಟ್​ ಪಂದ್ಯದ ಮೊದಲ ಇನ್ನಿಂಗ್ಸ್​ನಲ್ಲಿ ಯಶಸ್ವಿ ಜೈಸ್ವಾಲ್ 45 ರನ್​ಗಳ ಇನ್ನಿಂಗ್ಸ್ ಆಡಿ ತಮ್ಮ ವಿಕೆಟ್ ಒಪ್ಪಿಸಿದ್ದರು. ಇತ್ತ ಜೈಸ್ವಾಲ್ ವಿಕೆಟ್ ಪಡೆದ ಸಂತಸದಲ್ಲಿ ಎದುರಾಳಿ ತಂಡದ ವೇಗಿ ಅಸಿತಾ ಫೆರ್ನಾಂಡೋ ಆಕ್ರಮಣಕಾರಿಯಾಗಿ ಸಂಭ್ರಮಿಸಿದ್ದಲ್ಲದೆ ಜೈಸ್ವಾಲ್ ಪೆವಿಲಿಯನತ್ತ ಹೆಜ್ಜೆ ಹಾಕುತ್ತಿರುವಾಗ ಅವರನ್ನು ಕೆಣಕ್ಕುವ ಕೆಲಸಕ್ಕೆ ಕೈಹಾಕಿದರು. ಇದರಿಂದ ಕೆರಳಿದ ಜೈಸ್ವಾಲ್, ಫೆರ್ನಾಂಡೋ ಬಳಿಗೆ ಬಂದು ವಾಗ್ವಾದದಲ್ಲಿ ತೊಡಗಿದರು. ಇದೇ ಸಂದರ್ಭದಲ್ಲಿ ತಮ್ಮ ಹೆಲ್ಮೆಟ್​ನಿಂದ ಫೆರ್ನಾಂಡೋ ತಲೆಗೆ ಲಗುವಾಗಿ ಗುದ್ದಿದರು. ಇದು ಐಸಿಸಿ ನಿಯಮದ ಉಲ್ಲಂಘನೆಯಾಗಿದ್ದು, ಐಸಿಸಿ ಇಬ್ಬರು ಆಟಗಾರರಿಗೂ ದಂಡದ ಜೊತೆಗೆ ಡಿಮೆರಿಂಟ್ ಪಾಯಿಂಟ್ ನೀಡಿತ್ತು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:53 pm, Tue, 25 August 26

Loading...
Unable to load recommendations.
Follow Us