
ವೆಸ್ಟ್ ಇಂಡೀಸ್ ವಿರುದ್ಧ ಜುಲೈ 12 ರಿಂದ ಆರಂಭವಾಗಲಿರುವ ಮೊದಲ ಟೆಸ್ಟ್ ಪಂದ್ಯಕ್ಕಾಗಿ ಟೀಂ ಇಂಡಿಯಾ (India vs West Indies) ಆಟಗಾರರು ಡೊಮಿನಿಕಾ ತಲುಪಿದ್ದಾರೆ. ವಾರದಿಂದ ಬಾರ್ಬಡೋಸ್ನಲ್ಲಿ ಅಭ್ಯಾಸ ನಡೆಸಿದ ರೋಹಿತ್ ಪಡೆ ಪೂರ್ಣ ತಯಾರಿಯೊಂದಿಗೆ ಮೊದಲ ಟೆಸ್ಟ್ಗೆ ಎಂಟ್ರಿಕೊಡುತ್ತಿದೆ. ನಿರೀಕ್ಷೆಯಂತೆ ರೋಹಿತ್ ಪಡೆಗೆ ಅದ್ಧೂರಿ ಸ್ವಾಗತ ಸಿಕ್ಕಿದೆ. ಅದರಲ್ಲೂ ಟೀಂ ಇಂಡಿಯಾದ (Team India) ಮಾಜಿ ನಾಯಕ ವಿರಾಟ್ ಕೊಹ್ಲಿ ಹಾಗೂ ಮುಖ್ಯ ಕೋಚ್ ರಾಹುಲ್ ದ್ರಾವಿಡ್ಗೆ (Virat Kohli, Rahul Dravid ) ಡೊಮಿನಿಕಾದಲ್ಲಿ (Dominica) ಭವ್ಯ ಸ್ವಾಗತ ದೊರಕಿದೆ. ಇದರ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ. ಅಷ್ಟಕ್ಕೂ ಈ ಇಬ್ಬರು ದಿಗ್ಗಜರಿಗೆ ಈ ರೀತಿಯ ಸ್ವಾಗತ ಸಿಗಲು ಇನ್ನೊಂದು ಕಾರಣವೂ ಇದೆ. ಈ ಕಾರಣವನ್ನು ಕಿಂಗ್ ಕೊಹ್ಲಿ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಇದೀಗ ಹಂಚಿಕೊಂಡಿದ್ದಾರೆ.
ಆರು ವರ್ಷಗಳ ನಂತರ ವಿಂಡ್ಸರ್ ಪಾರ್ಕ್ ಮೈದಾನದಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಇದಾಗಿದೆ. 2011 ರಲ್ಲಿ ಭಾರತ ಮತ್ತು ವೆಸ್ಟ್ ಇಂಡೀಸ್ ತಂಡಗಳು ಈ ಮೈದಾನದಲ್ಲಿ ಮೊದಲ ಪಂದ್ಯವನ್ನು ಆಡಿದ್ದವು. ಅಲ್ಲಿಂದ ಇಲ್ಲಿಯವರೆಗೆ ಈ ಮೈದಾನದಲ್ಲಿ ಕೇವಲ ಐದು ಟೆಸ್ಟ್ ಪಂದ್ಯಗಳು ಮಾತ್ರ ನಡೆದಿವೆ. 12 ವರ್ಷಗಳ ಬಳಿಕ ಇದೀಗ ಡೊಮಿನಿಕಾದಲ್ಲಿ ಟೆಸ್ಟ್ ಪಂದ್ಯವನ್ನಾಡಲು ತೆರಳಿರುವ ವಿರಾಟ್ ಕೊಹ್ಲಿ 12 ವರ್ಷಗಳ ಹಿಂದಿನ ಘಟನೆಯೊಂದನ್ನು ಸ್ಮರಿಸಿದ್ದಾರೆ.
IND vs WI: ಮೊದಲ ಟೆಸ್ಟ್ಗೆ ವಿಂಡೀಸ್ ತಂಡ ಪ್ರಕಟ; ಐತಿಹಾಸಿಕ ಟೆಸ್ಟ್ಗೆ ಉಭಯ ತಂಡಗಳು ಹೀಗಿವೆ
ಮೇಲೆ ಹೇಳಿದಂತೆ 2011ರಲ್ಲಿ ಟೀಂ ಇಂಡಿಯಾ ಡೊಮಿನಿಕಾದಲ್ಲಿ ಟೆಸ್ಟ್ ಪಂದ್ಯವನ್ನಾಡಿತ್ತು. ಆ ಟೆಸ್ಟ್ ಪಂದ್ಯದಲ್ಲಿ ಕಿಂಗ್ ಕೊಹ್ಲಿ ಟೀಂ ಇಂಡಿಯಾ ಪರ ಆಡಿದ್ದರು. ಅಲ್ಲದೆ ಆಸಕ್ತದಾಯಕವೆಂಬಂತೆ ಇಂದು ಟೀಂ ಇಂಡಿಯಾದ ಮುಖ್ಯ ಕೋಚ್ ಆಗಿ ಕಾರ್ಯನಿರ್ವಹಿಸುತ್ತಿರುವ ರಾಹುಲ್ ದ್ರಾವಿಡ್ ಕೂಡ ಟೀಂ ಇಂಡಿಯಾದ ಭಾಗವಾಗಿದ್ದರು. ಇದೀಗ ಆ ಘಟನೆಯನ್ನು ನೆನೆದಿರುವ ಕೊಹ್ಲಿ, ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಅವರೊಂದಿಗಿನ ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡು 12 ವರ್ಷಗಳ ಹಿಂದಿನ ಘಟನೆಯನ್ನು ಸ್ಮರಿಸಿದ್ದಾರೆ.
12 ವರ್ಷಗಳ ಹಿಂದೆ ಅಂದರೆ, 2011 ರಲ್ಲಿ ಡೊಮಿನಿಕಾದಲ್ಲಿ ಚೊಚ್ಚಲ ಪಂದ್ಯವನ್ನಾಡಿದ್ದ ಭಾರತ ಆ ಟೆಸ್ಟ್ ಪಂದ್ಯವನ್ನು ಡ್ರಾದಲ್ಲಿ ಅಂತ್ಯಗೊಳಿಸಿತ್ತು. ಆ ಬಳಿಕ ವಿಂಡ್ಸರ್ ಪಾರ್ಕ್ ಮೈದಾನದಲ್ಲಿ 4 ಟೆಸ್ಟ್ ಪಂದ್ಯಗಳು ನಡೆದಿದ್ದು, ಇಲ್ಲಿ ಆಸ್ಟ್ರೇಲಿಯಾ ಎರಡು ಪಂದ್ಯಗಳಲ್ಲಿ ಗೆದ್ದಿದ್ದರೆ, 2017 ರಲ್ಲಿ ಆತಿಥೇಯರ ವಿರುದ್ಧ ಪಾಕಿಸ್ತಾನ ಒಮ್ಮೆ ಜಯಗಳಿಸಿತು. ಬಳಿಕ ವೆಸ್ಟ್ ಇಂಡೀಸ್ ಈ ಸ್ಥಳದಲ್ಲಿ 2013 ರಲ್ಲಿ ಜಿಂಬಾಬ್ವೆ ವಿರುದ್ಧ 65 ರನ್ಗಳ ಇನ್ನಿಂಗ್ಸ್ ಜಯ ಸಾಧಿಸಿತ್ತು.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 12:13 pm, Mon, 10 July 23