
ಭಾರತ ಮತ್ತು ಜಿಂಬಾಬ್ವೆ ಮಹಿಳಾ ತಂಡಗಳ ನಡುವಿನ ಎರಡನೇ ಟಿ20 ಪಂದ್ಯ ಇಂದು ರಾಯ್ಪುರದಲ್ಲಿ ನಡೆಯುತ್ತಿದೆ. ಮೊದಲ ಪಂದ್ಯವನ್ನು ಗೆದ್ದಿರುವ ಭಾರತ ತಂಡ, ಎರಡನೇ ಪಂದ್ಯದಲ್ಲೂ ಜಯ ಸಾಧಿಸಿ ಮೂರು ಪಂದ್ಯಗಳ ಸರಣಿಯನ್ನು ತನ್ನದಾಗಿಸಿಕೊಳ್ಳುವ ಇರಾದೆಲ್ಲಿದೆ. ಮತ್ತೊಂದೆಡೆ, ಜಿಂಬಾಬ್ವೆ ತಂಡ ಈ ಪಂದ್ಯವನ್ನು ಗೆದ್ದು ಸರಣಿಯಲ್ಲಿ ಸಮಬಲ ಸಾಧಿಸುವ ಗುರಿ ಹೊಂದಿದೆ. ಇನ್ನು ಈ ಪಂದ್ಯದ ಟಾಸ್ ಕೂಡ ಮುಗಿದಿದ್ದು ಟಾಸ್ ಗೆದ್ದ ಜಿಂಬಾಬ್ವೆ ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿದೆ. ಹೀಗಾಗಿ ಸ್ಮೃತಿ ಮಂಧಾನ ಪಡೆ ಮೊದಲು ಬೌಲಿಂಗ್ ಮಾಡಲಿದೆ. ಇದರ ಜೊತೆಗೆ ಉಭಯ ತಂಡಗಳ ಆಡುವ ಹನ್ನೊಂದರ ಬಳಗವೂ ಖಚಿತವಾಗಿದೆ.
ಮೇಲೆ ಹೇಳಿದಂತೆ ಟಾಸ್ ಗೆದ್ದ ಜಿಂಬಾಬ್ವೆ ತಂಡದ ನಾಯಕಿ ಜೋಸೆಫಿನ್ ಎನ್ಕೊಮೊ ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿದ್ದಾರೆ. ಹೀಗಾಗಿ ಸ್ಮೃತಿ ಮಂಧಾನ ನಾಯಕತ್ವದ ಭಾರತ ತಂಡ ಮೊದಲು ಬೌಲಿಂಗ್ ಮಾಡಲಿದೆ. ಇದರ ಜೊತೆಗೆ ಎರಡು ತಂಡಗಳ ಪ್ಲೇಯಿಂಗ್ 11 ಕೂಡ ಹೊರಬಿದ್ದಿದ್ದು, ಎರಡೂ ತಂಡಗಳಲ್ಲು ಯಾವುದೇ ಬದಲಾವಣೆಗಳಾಗಿಲ್ಲ. ಅಂದರೆ ಮೊದಲ ಪಂದ್ಯದಲ್ಲಿ ಕಣಕ್ಕಿಳಿದಿದ್ದ ತಂಡಗಳೇ ಈ ಪಂದ್ಯದಲ್ಲೂ ಆಡಲಿವೆ.
ಮೊದಲ ಟಿ20 ಪಂದ್ಯದಲ್ಲಿ ಗೆಲುವು ಸಾಧಿಸಿರುವ ಭಾರತ, ಈ ಪಂದ್ಯದಲ್ಲೂ ಜಯಗಳಿಸಿದರೆ ಸರಣಿಯನ್ನು 2-0 ಅಂತರದಲ್ಲಿ ವಶಪಡಿಸಿಕೊಳ್ಳಲಿದೆ. ಹೀಗಾಗಿ ಭಾರತೀಯ ಆಟಗಾರ್ತಿಯರಿಗೆ ಈ ಪಂದ್ಯ ಮಹತ್ವದ್ದಾಗಿದೆ. ಇನ್ನೊಂದೆಡೆ, ಜಿಂಬಾಬ್ವೆ ತಂಡ ಸರಣಿಯನ್ನು ಜೀವಂತವಾಗಿರಿಸಿಕೊಳ್ಳಲು ಗೆಲುವು ಸಾಧಿಸುವ ಅನಿವಾರ್ಯತೆಯಲ್ಲಿದೆ.
ಭಾರತ ತಂಡ: ಸ್ಮೃತಿ ಮಂಧಾನ (ನಾಯಕಿ), ಶಫಾಲಿ ವರ್ಮಾ, ಅನುಷ್ಕಾ ಶರ್ಮಾ, ಹರ್ಮನ್‌ಪ್ರೀತ್ ಕೌರ್, ನಿಕಿ ಪ್ರಸಾದ್, ದೀಪ್ತಿ ಶರ್ಮಾ, ರಿಚಾ ಘೋಷ್ (ವಿಕೆಟ್ ಕೀಪರ್), ಅರುಂಧತಿ ರೆಡ್ಡಿ, ಶ್ರೀ ಚರಣಿ, ನಂದಿನಿ ಶರ್ಮಾ ಮತ್ತು ಕ್ರಾಂತಿ ಗೌಡ್.
ಜಿಂಬಾಬ್ವೆ ತಂಡ: ಕೆಲಿಸ್ ಎನ್‌ಡ್ಲೋವು, ಬೆಲವ್ಡ್ ಬಿಜಾ, ಮಾಡೆಸ್ಟರ್ ಮುಪಾಚಿಕ್ವಾ (ವಿಕೆಟ್ ಕೀಪರ್), ಶಾರ್ನ್ ಮೇಯರ್ಸ್, ನ್ಯಾಶಾ ಗ್ವಾಂಜುರಾ, ಮಿಚೆಲ್ ಮಾವುಂಗಾ, ಚಿಪೋ ಮುಗೇರಿ-ಟಿರಿಪಾನೊ, ಜೋಸೆಫಿನ್ ಎನ್ಕೊಮೊ (ನಾಯಕಿ), ಫ್ರಾನ್ಸಿಸ್ಕಾ ಚಿಪಾರೆ, ತೆಂದಾಯಿ ಮಕುಷಾ ಮತ್ತು ಒಲಿಂಡರ್ ಚಾರೆ.
Published On - 6:47 pm, Sun, 18 October 26