INDAW vs AUSAW: ಕ್ಲೀನ್ ಸ್ವೀಪ್​ನಿಂದ ಪಾರಾದ ಆಸ್ಟ್ರೇಲಿಯಾ; ಏಕದಿನ ಸರಣಿ ಗೆದ್ದ ಟೀಂ ಇಂಡಿಯಾ

AUS-A-W vs IND-A-W: ಬ್ರಿಸ್ಬೇನ್‌ನಲ್ಲಿ ನಡೆದ ಮೂರನೇ ಏಕದಿನ ಪಂದ್ಯದಲ್ಲಿ ಆಸ್ಟ್ರೇಲಿಯಾ ಎ ತಂಡವು ಭಾರತ ಎ ತಂಡವನ್ನು 9 ವಿಕೆಟ್‌ಗಳಿಂದ ಸೋಲಿಸಿತು. ಅಲಿಸಾ ಹೀಲಿ ಅವರ ಅದ್ಭುತ 137 ರನ್‌ಗಳ ಇನ್ನಿಂಗ್ಸ್‌ನಿಂದಾಗಿ ಆಸ್ಟ್ರೇಲಿಯಾ ಗೆಲುವು ಸಾಧ್ಯವಾಯಿತು. ಆದಾಗ್ಯೂ ಭಾರತ ಎ ತಂಡವು ಮೊದಲ ಎರಡು ಪಂದ್ಯಗಳನ್ನು ಗೆದ್ದು 2-1 ಅಂತರದಿಂದ ಸರಣಿಯನ್ನು ಗೆದ್ದುಕೊಂಡಿತು. ಶೆಫಾಲಿ ವರ್ಮಾ ಮತ್ತು ಯಸ್ತಿಕಾ ಭಾಟಿಯಾ ಭಾರತದ ಪರ ಉತ್ತಮ ಪ್ರದರ್ಶನ ನೀಡಿದರು.

INDAW vs AUSAW: ಕ್ಲೀನ್ ಸ್ವೀಪ್​ನಿಂದ ಪಾರಾದ ಆಸ್ಟ್ರೇಲಿಯಾ; ಏಕದಿನ ಸರಣಿ ಗೆದ್ದ ಟೀಂ ಇಂಡಿಯಾ
Aus A W Vs Ind A W

Updated on: Aug 17, 2025 | 5:44 PM

ಬ್ರಿಸ್ಬೇನ್‌ನಲ್ಲಿ ನಡೆದ ಆಸ್ಟ್ರೇಲಿಯಾ ಎ ಮತ್ತು ಭಾರತ ಎ ಮಹಿಳಾ (Australia A Women vs India A Women) ತಂಡದ ನಡುವಿನ ಮೂರನೇ ಏಕದಿನ ಪಂದ್ಯವನ್ನು ಆತಿಥೇಯ ಆಸ್ಟ್ರೇಲಿಯಾ ಎ ತಂಡವು 9 ವಿಕೆಟ್‌ಗಳಿಂದ ಗೆದ್ದುಕೊಂಡಿತು. ಆದಾಗ್ಯೂ ಸರಣಿಯ ಮೊದಲ ಎರಡು ಪಂದ್ಯಗಳನ್ನು ಗೆದ್ದುಕೊಂಡಿದ್ದ ಭಾರತ ಮಹಿಳಾ ತಂಡ 2-1 ಅಂತರದಿಂದ ಸರಣಿಯನ್ನು ಕೈವಶ ಮಾಡಿಕೊಳ್ಳುವಲ್ಲಿ ಯಶಸ್ವಿಯಾಯಿತು. ಆಸೀಸ್ ಪರ ಪಂದ್ಯ ವಿಜೇತ ಇನ್ನಿಂಗ್ಸ್ ಆಡಿದ ಆರಂಭಿಕ ಆಟಗಾರ್ತಿ ಮತ್ತು ವೇಗಿ ಮಿಚೆಲ್ ಸ್ಟಾರ್ಕ್ ಅವರ ಪತ್ನಿ ಅಲಿಸಾ ಹೀಲಿ ಸ್ಫೋಟಕ ಶತಕ ಬಾರಿಸಿದರು. ಈ ಇನ್ನಿಂಗ್ಸ್‌ನಲ್ಲಿ ಅವರು 26 ಬೌಂಡರಿಗಳು ಮತ್ತು ಸಿಕ್ಸರ್‌ಗಳನ್ನು ಸಹ ಬಾರಿಸಿದರು.

ಅಲಿಸಾ ಹೀಲಿ ಅದ್ಭುತ ಇನ್ನಿಂಗ್ಸ್

ಈ ಪಂದ್ಯದಲ್ಲಿ ಭಾರತ ಮೊದಲು ಬ್ಯಾಟಿಂಗ್ ಮಾಡಿ 216 ರನ್ ಗಳಿಸಿತು. ತಂಡದ ಪರ ಆರಂಭಿಕ ಆಟಗಾರ್ತಿ ಶೆಫಾಲಿ ವರ್ಮಾ 52 ರನ್ ಗಳಿಸಿದರೆ, ಯಸ್ತಿಕಾ ಭಾಟಿಯಾ 42 ರನ್ ಗಳಿಸಿದರು. ಯುವ ಆಟಗಾರ್ತಿ ನಂದಿನಿ ಕಶ್ಯಪ್ 28 ರನ್ ಗಳಿಸಿದರೆ, ನಾಯಕಿ ರಾಧಾ ಯಾದವ್ 18 ರನ್ ಗಳಿಸಿ ಪೆವಿಲಿಯನ್‌ಗೆ ಮರಳಿದರು. ರಾಘ್ವಿ ಬಿಶ್ತ್ ಕೂಡ 18 ರನ್ ಗಳಿಸಿದರು. ಆಸ್ಟ್ರೇಲಿಯಾ ಪರ ನಾಯಕಿ ತಹ್ಲಿಯಾ ಮೆಕ್‌ಗ್ರಾತ್ 8 ಓವರ್‌ಗಳಲ್ಲಿ 40 ರನ್‌ಗಳಿಗೆ ಮೂರು ವಿಕೆಟ್ ಪಡೆದರು. ಉಳಿದ ಬೌಲರ್‌ಗಳು ಸಹ ತಮ್ಮ ಪಾತ್ರವನ್ನು ಉತ್ತಮವಾಗಿ ನಿರ್ವಹಿಸಿದರು.

ಗುರಿಯನ್ನು ಬೆನ್ನಟ್ಟಿದ ಆಸ್ಟ್ರೇಲಿಯಾ ಎ ತಂಡದ ಪರ ಅಲಿಸಾ ಹೀಲಿ ಆರಂಭದಿಂದಲೇ ಆಕ್ರಮಣಕಾರಿಯಾಗಿ ಬ್ಯಾಟಿಂಗ್ ಆರಂಭಿಸಿ ಪಂದ್ಯವನ್ನು ಏಕಪಕ್ಷೀಯವಾಗಿಸಿದರು. ಅವರು 85 ಎಸೆತಗಳಲ್ಲಿ 23 ಬೌಂಡರಿ ಮತ್ತು ಮೂರು ಸಿಕ್ಸರ್‌ಗಳ ಸಹಾಯದಿಂದ ಅಜೇಯ 137 ರನ್ ಗಳಿಸಿದರು. ಅಲ್ಲದೆ ತಹ್ಲಿಯಾ ವಿಲ್ಸನ್ ಅವರೊಂದಿಗೆ ಮೊದಲ ವಿಕೆಟ್‌ಗೆ 137 ರನ್ ಸೇರಿಸಿದರು. ವಿಲ್ಸನ್ 59 ರನ್‌ಗಳ ಇನ್ನಿಂಗ್ಸ್ ಆಡಿದರೆ, ರಾಚೆಲ್ ಟ್ರೆನಮನ್ ಅಜೇಯ 21 ರನ್‌ಗಳ ಕೊಡುಗೆ ನೀಡಿದರು. ಭಾರತದ ಪರ ರಾಧಾ ಯಾದವ್ ಏಕೈಕ ವಿಕೆಟ್ ಪಡೆದರು.

PAK vs WI: 202 ರನ್​ಗಳಿಂದ ಸೋತ ಪಾಕಿಸ್ತಾನ; ವೆಸ್ಟ್ ಇಂಡೀಸ್​ಗೆ ಏಕದಿನ ಸರಣಿ

ಕ್ಲೀನ್ ಸ್ವೀಪ್​ನಿಂದ ಪಾರಾದ ಆಸ್ಟ್ರೇಲಿಯಾ

ಈ ಎರಡೂ ತಂಡಗಳ ನಡುವೆ ನಡೆದ ಮೊದಲ ಎರಡು ಏಕದಿನ ಪಂದ್ಯಗಳನ್ನು ರಾಧಾ ಯಾದವ್ ನಾಯಕತ್ವದ ಭಾರತ ವನಿತಾ ಪಡೆ ಗೆದ್ದುಕೊಂಡಿತು. ಹೀಗಾಗಿ ಆಸ್ಟ್ರೇಲಿಯಾ ತಂಡವು ಕ್ಲೀನ್ ಸ್ವೀಪ್ ತಪ್ಪಿಸಲು ಮೂರನೇ ಏಕದಿನ ಪಂದ್ಯವನ್ನು ಗೆಲ್ಲುವುದು ಬಹಳ ಮುಖ್ಯವಾಗಿತ್ತು. ಅದರಂತೆ ಅಲಿಸಾ ಹೀಲಿ ಅವರ ಬಲಿಷ್ಠ ಇನ್ನಿಂಗ್ಸ್‌ನಿಂದಾಗಿ, ತಂಡವು 3-0 ಅಂತರದ ಸೋಲಿನಿಂದ ಪಾರಾಯಿತು. ಆದಾಗ್ಯೂ ಆಸ್ಟ್ರೇಲಿಯಾ ಮೂರನೇ ಏಕದಿನ ಪಂದ್ಯವನ್ನು ಗೆದ್ದಿದ್ದರೂ, ಭಾರತ ಎ ತಂಡವು ಈ ಸರಣಿಯನ್ನು 2-1 ಅಂತರದಿಂದ ವಶಪಡಿಸಿಕೊಂಡಿತು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ