ಯುವ ಆಟಗಾರನಿಗಾಗಿ ಜೆರ್ಸಿ ಸಂಖ್ಯೆ ಬದಲಿಸಿದ ಭುವನೇಶ್ವರ್ ಕುಮಾರ್..!

ಭುವನೇಶ್ವರ್ ಕುಮಾರ್ ಅವರ ಬಹುನಿರೀಕ್ಷಿತ ಕಂಬ್ಯಾಕ್ ವೆಸ್ಟ್ ಇಂಡೀಸ್ ವಿರುದ್ಧದ ಮಳೆಯಿಂದ ರದ್ದಾದ ಪಂದ್ಯದಿಂದ ಸಾಧ್ಯವಾಗಲಿಲ್ಲ. ಆದರೆ, 15 ಸಂಖ್ಯೆಯ ಜೆರ್ಸಿಯನ್ನು ತ್ಯಜಿಸಿ 78ಕ್ಕೆ ಬದಲಾಯಿಸಿದ್ದು ಅಭಿಮಾನಿಗಳ ಕುತೂಹಲ ಕೆರಳಿಸಿದೆ. ಯುವ ಆಟಗಾರ ಗುರ್ನೂರ್ ಬ್ರಾರ್‌ಗಾಗಿ ಭುವಿ ಈ ನಿರ್ಧಾರ ಕೈಗೊಂಡಿದ್ದಾರೆ. ನ್ಯೂಜಿಲೆಂಡ್ ಸರಣಿಯಲ್ಲಿ ಭುವಿ ಆಡುವ ನಿರೀಕ್ಷೆಯಿದ್ದು, ಅಭಿಮಾನಿಗಳು ಈಗ ಮುಂದಿನ ಪಂದ್ಯಗಳತ್ತ ಕಾಯುತ್ತಿದ್ದಾರೆ.

ಯುವ ಆಟಗಾರನಿಗಾಗಿ ಜೆರ್ಸಿ ಸಂಖ್ಯೆ ಬದಲಿಸಿದ ಭುವನೇಶ್ವರ್ ಕುಮಾರ್..!
ಭುವನೇಶ್ವರ್ ಕುಮಾರ್

Updated on: Oct 18, 2026 | 5:03 PM

ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ಐದನೇ ಟಿ20 ಪಂದ್ಯ ಮಳೆಯಿಂದ ರದ್ದಾಯಿತು. ಹೀಗಾಗಿ ಉಭಯ ತಂಡಗಳು ತಲಾ 2 ಪಂದ್ಯಗಳನ್ನು ಗೆದ್ದಿದ್ದರಿಂದ ಸರಣಿಯನ್ನು ಹಂಚಿಕೊಂಡವು. ಇನ್ನು ಇದೇ ಪಂದ್ಯದಲ್ಲಿ ಟೀಂ ಇಂಡಿಯಾಕ್ಕೆ ಕಂಬ್ಯಾಕ್ ಮಾಡಲು ಸಜ್ಜಾಗಿದ್ದ ಭುವನೇಶ್ವರ್ ಕುಮಾರ್​ಗೆ ಶುಭಾರಂಭ ಸಿಗಲಿಲ್ಲ. ಏಕೆಂದರೆ ಈ ಪಂದ್ಯದಲ್ಲಿ ಟೀಂ ಇಂಡಿಯಾ ಬ್ಯಾಟಿಂಗ್‌ ಮಾಡಿತ್ತಾದರೂ, ಬೌಲಿಂಗ್ ಮಾಡಲು ಮಳೆ ಅವಕಾಶ ನೀಡಲಿಲ್ಲ. ಹೀಗಾಗಿ ಭಾರತ ತಂಡದಲ್ಲಿ ಭುವನೇಶ್ವರ್ ಪ್ರದರ್ಶನವನ್ನು ಕಣ್ತುಂಬಿಕೊಳ್ಳಲು ಕಾಯ್ದಿದ್ದ ಅಭಿಮಾನಿಗಳು ನಿರಾಶೆಗೊಂಡರು. ಆದಾಗ್ಯೂ ಈ ಪಂದ್ಯದ ಸಮಯದಲ್ಲಿ ಭುವನೇಶ್ವರ್ ಕುಮಾರ್ ಧರಿಸಿದ್ದ ಜೆರ್ಸಿಯ ಸಂಖ್ಯೆ ಬದಲಾಗಿದ್ದು ಹಲವರ ಅಚ್ಚರಿಗೆ ಕಾರಣವಾಯಿತು.

ವಾಸ್ತವವಾಗಿ ಭುವನೇಶ್ವರ್ ಕುಮಾರ್ ತಮ್ಮ ವೃತ್ತಿಜೀವನದುದ್ದಕ್ಕೂ 15 ನೇ ಸಂಖ್ಯೆಯ ಜೆರ್ಸಿಯನ್ನು ಧರಿಸಿ ಆಡಿದ್ದರು. ಆದರೆ ನಾಲ್ಕು ವರ್ಷಗಳ ಬಳಿಕ ತಂಡಕ್ಕೆ ಮರಳಿದ ಭುವನೇಶ್ವರ್ ಬೆಂಗಳೂರಿನಲ್ಲಿ ನಡೆದ ಪಂದ್ಯದ ಸಮಯದಲ್ಲಿ 78 ನೇ ಸಂಖ್ಯೆಯ ಜೆರ್ಸಿಯನ್ನು ಧರಿಸಿದ್ದರು. ಇದು ಎಲ್ಲರ ಕುತೂಹಲಕ್ಕೆ ಕಾರಣವಾಯಿತು. ಆದರೆ ಭುವನೇಶ್ವರ್ ಅವರ ಜೆರ್ಸಿ ಸಂಖ್ಯೆ ಕಾರಣವೂ ಇದೆ.

Loading...

ಜೆರ್ಸಿ ಸಂಖ್ಯೆ ಬದಲಿಸಿದ ಭುವಿ

ಭುವನೇಶ್ವರ್ ಟೀಂ ಇಂಡಿಯಾದಲ್ಲಿ ಖಾಯಂ ಆಟಗಾರನಾಗಿದ್ದಾಗ, ಅವರು 15 ನೇ ಸಂಖ್ಯೆಯ ಜೆರ್ಸಿಯನ್ನು ಧರಿಸುತ್ತಿದ್ದರು. ಈಗ ನಿನ್ನೆಯ ಪಂದ್ಯದಲ್ಲಿ ಅವರು 78 ನೇ ಸಂಖ್ಯೆಯ ಜೆರ್ಸಿ ತೊಟ್ಟಿದ್ದರು. ಇದಕ್ಕೆ ಕಾರಣ, ಟೀಂ ಇಂಡಿಯಾದ ಯುವ ವೇಗಿ ಗುರ್ನೂರ್ ಬ್ರಾರ್. ಗುರ್ನೂರ್ ಪ್ರಸ್ತುತ ಭಾರತದ ಏಕದಿನ ತಂಡದ ಭಾಗವಾಗಿದ್ದು ಅವರು 15 ನೇ ಸಂಖ್ಯೆಯ ಜೆರ್ಸಿಯನ್ನು ಧರಿಸಿ ಆಡುತ್ತಿದ್ದಾರೆ. ಹೀಗಾಗಿ ಭುವನೇಶ್ವರ್ ಈ ಯುವ ಆಟಗಾರನಿಗಾಗಿ ತಮ್ಮ ನೆಚ್ಚಿನ ಜೆರ್ಸಿ ಸಂಖ್ಯೆಯನ್ನು ತ್ಯಜಿಸಿದ್ದು, 78 ಸಂಖ್ಯೆಯ ಜೆರ್ಸಿಯನ್ನು ಧರಿಸಿ ಆಡಲು ಮುಂದಾಗಿದ್ದಾರೆ.

ಭಾರತ- ವಿಂಡೀಸ್ ಕೊನೆಯ ಟಿ20 ಪಂದ್ಯ ಮಳೆಯಿಂದ ರದ್ದು; ಸರಣಿ 2-2 ರ ಡ್ರಾದಲ್ಲಿ ಅಂತ್ಯ

ಭುವಿ ಮತ್ತೆ ಕಣಕ್ಕಿಳಿಯುವುದು ಯಾವಾಗ?

ನಿನ್ನೆಯ ಪಂದ್ಯದಲ್ಲಿ, ಭುವಿ ಅವರ ಪುನರಾಗಮನಕ್ಕಾಗಿ ಅಭಿಮಾನಿಗಳು ಕಾತರರಾಗಿದ್ದರು. ಅವರಿಗೆ ಪ್ಲೇಯಿಂಗ್ ಇಲೆವೆನ್‌ನಲ್ಲಿ ಅವಕಾಶವೂ ಸಿಕ್ಕಿತು, ಆದರೆ ಮೈದಾನಕ್ಕೆ ಬರಲು ಸಾಧ್ಯವಾಗಲಿಲ್ಲ. ಆದಾಗ್ಯೂ ಭುವನೇಶ್ವರ್ ಕುಮಾರ್ ಅಕ್ಟೋಬರ್ 22 ರಂದು ಭಾರತ ಪರ ಆಡುವ ಸಾಧ್ಯತೆಯಿದೆ. ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಟಿ20 ಸರಣಿಯ ಮೊದಲ ಪಂದ್ಯ ಕ್ರೈಸ್ಟ್‌ಚರ್ಚ್‌ನಲ್ಲಿ ನಡೆಯಲಿದೆ. ಆ ಪಂದ್ಯದಲ್ಲಿ ಭುವನೇಶ್ವರ್ ಅವರಿಗೆ ಅವಕಾಶ ಸಿಗುವುದು ಖಚಿತ ಎನ್ನಬಹುದು. ನ್ಯೂಜಿಲೆಂಡ್ ಪಿಚ್‌ಗಳು ಸ್ವಿಂಗ್ ಮತ್ತು ಬೌನ್ಸ್​ಗೆ ಹೆಸರುವಾಸಿಯಾಗಿವೆ. ಆದ್ದರಿಂದ, ಭುವನೇಶ್ವರ್ ಕುಮಾರ್ ತಮ್ಮ ಪುನರಾಗಮನದ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡುವ ನಿರೀಕ್ಷೆ ಇದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಪೃಥ್ವಿಶಂಕರ

ಪೃಥ್ವಿಶಂಕರ ಅವರ ಹುಟ್ಟೂರು ಹಾಸನದ ಕೊಣನೂರು ಸಮೀಪದ ಲಕ್ಷ್ಮೀಪುರ. ಕಳೆದ 8 ವರ್ಷಗಳಿಂದ ಪತ್ರಿಕಾರಂಗದಲ್ಲಿ ಕೆಲಸ. ಟಿವಿ9 ಕನ್ನಡದಲ್ಲೇ ವೃತ್ತಿ ಜೀವನ ಆರಂಭಿಸಿದ ಇವರು, ಮೊದಲ 3 ವರ್ಷ ವಿಡಿಯೋ ಎಡಿಟರ್ ಆಗಿ ಕೆಲಸ ಮಾಡಿದ ಬಳಿಕ ಇವರ ಆಸಕ್ತಿಯ ವಿಷಯವಾದ ಕ್ರೀಡೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ವೃತ್ತಿ ಬದುಕಿನ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದೇನೆ.

Read More
Loading...
Unable to load recommendations.
Follow Us