
ಭಾರತ ಅಂಡರ್-19 ಮತ್ತು ಆಸ್ಟ್ರೇಲಿಯಾ ಅಂಡರ್-19 ನಡುವಿನ ಎರಡು ಪಂದ್ಯಗಳ ಅನಧಿಕೃತ ಟೆಸ್ಟ್ ಸರಣಿಯ ಮೊದಲ ಪಂದ್ಯ ರಾಜ್‌ಕೋಟ್‌ನ ನಿರಂಜನ್ ಶಾ ಕ್ರೀಡಾಂಗಣದಲ್ಲಿ ನಡೆಯುತ್ತಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ ಯುವ ಪಡೆ ಮೊದಲ ದಿನದಂದು 217 ರನ್‌ಗಳಿಗೆ ಆಲೌಟ್ ಆಗಿತ್ತು. ಇದಕ್ಕೆ ಪ್ರತಿಯಾಗಿ ಎರಡನೇ ದಿನದಂದು ಮೊದಲ ಇನ್ನಿಂಗ್ಸ್ ಆರಂಭಿಸಿದ ಭಾರತದ ಪರ ಅರಂಭಿಕ ಲಕ್ಷ್ಯ ರಾಯ್‌ಚಂದಾನಿ ದಾಖಲೆಯ ದ್ವಿಶತಕ ಬಾರಿಸಿದ್ದಾರೆ. ಲಕ್ಷ್ಯ ಅವರ ಈ ದ್ವಿಶತಕದಿಂದಾಗಿ ಟೀಂ ಇಂಡಿಯಾ ಮೊದಲ ಇನ್ನಿಂಗ್ಸ್ನಲ್ಲಿ 400 ರನ್ಗಳ ಗಡಿ ದಾಟಿದ್ದು, ಆಸ್ಟ್ರೇಲಿಯಾ ವಿರುದ್ಧ ಸಂಪೂರ್ಣ ಮೇಲುಗೈ ಸಾಧಿಸಿದೆ.
ಆರಂಭಿಕನಾಗಿ ಕಣಕ್ಕಿಳಿದಿದ್ದ ಲಕ್ಷ್ಯ ರಾಯ್‌ಚಂದಾನಿ 141 ಎಸೆತಗಳಲ್ಲಿ ಶತಕ ಬಾರಿಸಿದರು. ಅವರ ಈ ಶತಕದಲ್ಲಿ 12 ಬೌಂಡರಿ ಮತ್ತು ಎರಡು ಸಿಕ್ಸರ್‌ಗಳು ಸೇರಿದ್ದವು. ಇದು ಲಕ್ಷ್ಯ ರಾಯ್‌ಚಂದಾನಿ ಅವರ 19 ವರ್ಷದೊಳಗಿನವರ ಟೆಸ್ಟ್ ವೃತ್ತಿಜೀವನದಲ್ಲಿ ಮೂರನೇ ಶತಕವಾಗಿತ್ತು ಈ ಮೂರು ಶತಕಗಳಲ್ಲಿ ಒಂದು ದ್ವಿಶತಕವೂ ಸೇರಿತ್ತು. ಇದೀಗ ದ್ವಿಶತಕಗಳ ಸಂಖ್ಯೆ ಎರಡಕ್ಕೇರಿದೆ. ಇನ್ನು ಈ ದ್ವಿಶತಕ ಲಕ್ಷ್ಯ ರಾಯ್‌ಚಂದಾನಿ ಅವರು 19 ವರ್ಷದೊಳಗಿನವರ ಟೆಸ್ಟ್‌ನಲ್ಲಿ ಭಾರತದಲ್ಲಿ ಆಸ್ಟ್ರೇಲಿಯಾ ವಿರುದ್ಧ ದಾಖಲಿಸಿದ ಮೊದಲ ದ್ವಿಶತಕವಾಗಿದೆ.
247 ಎಸೆತಗಳಲ್ಲಿ ತಮ್ಮ ದ್ವಿಶತಕ ಪೂರೈಸಿದ ಲಕ್ಷ್ಯ ತಂಡವನ್ನು 400 ರನ್ಗಳ ಗಡಿ ದಾಟಿಸಿ ದಿನದಾಟದಂತ್ಯಕ್ಕೆ ಅಜೇಯರಾಗಿ ಉಳಿದಿದ್ದಾರೆ. ಪ್ರಸ್ತುತ 250 ಎಸೆತಗಳನ್ನು ಎದುರಿಸಿರುವ ಅವರು 20 ಬೌಂಡರಿ ಹಾಗೂ 4 ಸಿಕ್ಸರ್‌ಗಳ ಸಹಾಯದಿಂದ 210 ರನ್ ಬಾರಿಸಿ ಮೂರನೇ ದಿನದಾಟಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.
ಟೀಂ ಇಂಡಿಯಾ ಮುಂದಿನ ಟೆಸ್ಟ್ ಸರಣಿಯನ್ನು ಯಾವಾಗ, ಎಲ್ಲಿ ಆಡಲಿದೆ?
ಆದಾಗ್ಯೂ ನಾಯಕ ಯಶ್ ಬರ್ಧನ್ (54 ರನ್) ಔಟ್ ಆದ ನಂತರ, ಭಾರತ ಶೀಘ್ರದಲ್ಲೇ ಎರಡು ವಿಕೆಟ್‌ಗಳನ್ನು ಕಳೆದುಕೊಂಡಿತು. ಆದರೆ ಕೆಳ ಕ್ರಮಾಂಕದಲ್ಲಿ ಬಂದ ಮಾನವ್ ಕೃಷ್ಣ (25) ಮತ್ತು ಅಯಾನ್ ಅಕ್ರಮ್ (26) ವಿಕೆಟ್ ಪತನವನ್ನು ತಡೆದು ಭಾರತ ತನ್ನ ಮುನ್ನಡೆಯನ್ನು ಹೆಚ್ಚಿಸಲು ಸಹಾಯ ಮಾಡಿದರು. ಇವರಿಬ್ಬರು ಔಟಾದ ನಂತರ, ಕ್ರೀಸ್‌ಗೆ ಬಂದ ಮೋಹಿತ್ ಉಲ್ವಾ ಅಜೇಯ ಅರ್ಧಶತಕದೊಂದಿಗೆ ಮಿಂಚಿದ್ದಲ್ಲದೆ, ಲಕ್ಷ್ಯಗೆ ಬೆಂಬಲ ನೀಡಿ ದ್ವಿಶತಕ ತಲುಪಲು ಸಹಾಯ ಮಾಡಿದರು. ಇನ್ನು ಆಸ್ಟ್ರೇಲಿಯಾ ಪರ ಕೇಸಿ ಬಾರ್ಟನ್ 3 ವಿಕೆಟ್ ಪಡೆದರೆ, ಸ್ಪೆನ್ಸರ್ ಗ್ರೀನ್ ಮತ್ತು ಕಾನರ್ ಗ್ರೆಗೊರಿ ತಲಾ 2 ವಿಕೆಟ್ ಪಡೆದರು.
Published On - 5:04 pm, Mon, 28 September 26