ಟೆಸ್ಟ್ ಸರಣಿಯ ಬಳಿಕ ಭಾರತ ತಂಡ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯಲ್ಲಿ ಗೆಲುವಿನೊಂದಿಗೆ ಶುಭಾರಂಭ ಮಾಡಿದೆ. ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಬೌಲರ್ಗಳ ಆರ್ಭಟದ ನಡುವೆ ಗೆಲುವಿನ ಇನ್ನಿಂಗ್ಸ್ ಆಡಿದ ಕನ್ನಡಿಗ ಕೆಎಲ್ ರಾಹುಲ್ ಹಾಗೂ ಸಾಥ್ ನೀಡಿದ ಜಡೇಜಾ ಭಾರತವನ್ನು ಗೆಲುವಿನ ದಡ ಸೇರಿಸಿದರು. ಆಸ್ಟ್ರೇಲಿಯವನ್ನು ಕೇವಲ 188 ರನ್‌ಗಳಿಗೆ ಆಲೌಟ್ ಮಾಡಿದ ಟೀಂ ಇಂಡಿಯಾ, ರಾಹುಲ್ ಮತ್ತು ರವೀಂದ್ರ ಜಡೇಜಾ ಅವರ ಅತ್ಯುತ್ತಮ ಜೊತೆಯಾಟದ ನೆರವಿನಿಂದ 5 ವಿಕೆಟ್‌ಗಳ ರೋಚಕ ಗೆಲುವು ಸಾಧಿಸಿತು.
ರವೀಂದ್ರ ಜಡೇಜಾ ಎರಡು ಅದ್ಭುತ ಬೌಂಡರಿಗಳನ್ನು ಬಾರಿಸಿ ಟೀಂ ಇಂಡಿಯಾಗೆ ಜಯ ತಂದುಕೊಟ್ಟರು.
36ನೇ ಓವರ್‌ನ ಎರಡನೇ ಎಸೆತವನ್ನು ಬೌಂಡರಿ ಬಾರಿಸಿದ ರಾಹುಲ್, ನಾಲ್ಕನೇ ಎಸೆತದಲ್ಲಿ ಸಿಕ್ಸರ್ ಬಾರಿಸಿದರು. ಆ ಓವರ್‌ನಲ್ಲಿ 17 ರನ್‌ಗಳು ಬಂದವು.
ಭಾರತ ಇದೀಗ ಗುರಿಯ ಸಮೀಪದಲ್ಲಿದ್ದು, ಇದರಲ್ಲಿ ಕೆಎಲ್ ರಾಹುಲ್ ಪ್ರಮುಖ ಪಾತ್ರ ವಹಿಸಿದ್ದಾರೆ. ಕೆಎಲ್ ರಾಹುಲ್ ನಿರ್ಣಾಯಕ ಆಟ ಪ್ರದರ್ಶಿಸಿ ಕ್ರೀಸ್ನಲ್ಲಿ ನಿಂತು, ಕಷ್ಟಕಾಲದಲ್ಲಿ ಮಹತ್ವದ ಪ್ರದರ್ಶನ ತೋರುವ ಮೂಲಕ ಅರ್ಧಶತಕ ಪೂರೈಸಿದ್ದಾರೆ. 35ನೇ ಓವರ್‌ನಲ್ಲಿ ರಾಹುಲ್ ಸಿಂಗಲ್ ಕದಿಯುವುದರೊಂದಿಗೆ ಅರ್ಧಶತಕ ಗಳಿಸಿದರು.
ರವೀಂದ್ರ ಜಡೇಜಾ ಮತ್ತು ಕೆಎಲ್ ರಾಹುಲ್ ಭಾರತ ತಂಡವನ್ನು ನಿಧಾನವಾಗಿ ಗುರಿಯತ್ತ ತಳ್ಳಲು ಪ್ರಯತ್ನಿಸುತ್ತಿದ್ದಾರೆ. ಮೂವತ್ತು ಓವರ್‌ಗಳ ಅಂತ್ಯಕ್ಕೆ ಭಾರತ 5 ವಿಕೆಟ್ ನಷ್ಟಕ್ಕೆ 122 ರನ್ ಗಳಿಸಿದೆ.
28ನೇ ಓವರ್ ಎಸೆದ ಸ್ಟಾರ್ಕ್ ಅವರ ಕ್ರಾಸ್ ಸೀಮ್ ಬಾಲ್ ಅನ್ನು ಕೆಎಲ್ ರಾಹುಲ್ ಮಿಡ್ ಆಫ್ ಕಡೆಗೆ ಆಡಿ ಅದ್ಭುತ ಬೌಂಡರಿ ಬಾರಿಸಿದರು.
ರವೀಂದ್ರ ಜಡೇಜಾ ಬೌಂಡರಿ ಬಾರಿಸಿದ್ದಾರೆ. 25ನೇ ಓವರ್ ಎಸೆದ ಆಡಮ್ ಝಂಪಾ ಅವರ ಮೊದಲ ಎಸೆತದಲ್ಲಿ ರವೀಂದ್ರ ಜಡೇಜಾ ಬೌಂಡರಿ ಬಾರಿಸಿದರು.
ಆರಂಭಿಕ ಆಘಾತಕ್ಕೆ ಸಿಲುಕಿದ್ದ ಟೀಂ ಇಂಡಿಯಾದ ಇನ್ನಿಂಗ್ಸ್ ನಿಭಾಯಿಸಿದ್ದ ನಾಯಕ ಪಾಂಡ್ಯ ಅಂತಿಮವಾಗಿ ತಮ್ಮ ವಿಕೆಟ್ ಒಪ್ಪಿಸಿದ್ದಾರೆ. ಸ್ಟೋಯ್ನಿಸ್ ಎಸೆದ 20ನೇ ಓವರ್‌ನಲ್ಲಿ ಬಿಗ್ ಶಾಟ್ ಹೊಡೆಯಲು ಯತ್ನಿಸಿದ ಪಾಂಡ್ಯ ಕ್ಯಾಚಿತ್ತು ಔಟಾಗಿದ್ದಾರೆ.
ಹಾರ್ದಿಕ್ ಪಾಂಡ್ಯ ಬ್ಯಾಟ್ ತೆರೆದು ಭರ್ಜರಿ ಸಿಕ್ಸರ್ ಬಾರಿಸಿದರು. 17ನೇ ಓವರ್ ಎಸೆದ ಕ್ಯಾಮರೂನ್ ಗ್ರೀನ್ ಅವರ ಲೆಂಗ್ತ್ ಚೆಂಡನ್ನು ಹಿಂದಕ್ಕೆ ಸ್ಲೈಸ್ ಮಾಡಿ ಪಾಂಡ್ಯ ಸಿಕ್ಸರ್ ಹೊಡೆದರು.
14ನೇ ಓವರ್‌ನ ನಾಲ್ಕನೇ ಎಸೆತದಲ್ಲಿ ಪಾಂಡ್ಯ ಬೌಂಡರಿ ಬಾರಿಸಿದರು. ಸೀನ್ ಅಬಾಟ್ ಅವರ ಫುಲ್ಲರ್ ಎಸೆತವನ್ನು ಆನ್ ಸೈಡ್ನಲ್ಲಿ ಫ್ಲಿಕ್ ಮಾಡಿ ಬೌಂಡರಿ ಬಾರಿಸಿದರು.
ಕೆಎಲ್ ರಾಹುಲ್ 13ನೇ ಓವರ್‌ನ ನಾಲ್ಕನೇ ಎಸೆತದಲ್ಲಿ ಬೌಂಡರಿ ಬಾರಿಸಿದರು. ಕ್ಯಾಮರೂನ್ ಗ್ರೀನ್ ಎಸೆದ ಚೆಂಡನ್ನು ಥರ್ಡ್ ಮ್ಯಾನ್ ಕಡೆ ರಾಹುಲ್ ಬೌಂಡರಿ ಬಾರಿಸಿದರು.
ಹಾರ್ದಿಕ್ ಪಾಂಡ್ಯ ಕ್ರೀಸ್‌ಗೆ ಬಂದ ಮೊದಲ ಎಸೆತದಲ್ಲಿಯೇ ಬೌಂಡರಿ ಬಾರಿಸಿದರು. ಸ್ಟಾರ್ಕ್ ಅವರ ಎಸೆತವನ್ನು ಪಾಂಡ್ಯ ಬೌಂಡರಿಗಟ್ಟಿದರು.
ಮಿಚೆಲ್ ಸ್ಟಾರ್ಕ್ ಅವರ ಬೌಲಿಂಗ್ ಭಾರತೀಯ ಬ್ಯಾಟ್ಸ್‌ಮನ್‌ಗಳಿಗೆ ಭಾರವಾಗಿದೆ. ಭಾರತದ ಆರಂಭಿಕ ಆಟಗಾರ ಶುಭಮನ್ ಗಿಲ್ ಅವರು ಲಬುಶೇನ್ಗೆ ಕ್ಯಾಚಿತ್ತು ಔಟಾಗಿದ್ದಾರೆ.
10 ಓವರ್‌ಗಳ ಆಟ ಮುಗಿದಿದ್ದು ಭಾರತದ ಇನ್ನಿಂಗ್ಸ್ ಕುಂಟುತ್ತಾ ಸಾಗಿದೆ. ತಂಡ ಈಗಾಗಲೇ 3 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದೆ. ತಂಡದ ಪರ ಗಿಲ್ ಹಾಗೂ ರಾಹುಲ್ ಕ್ರೀಸ್‌ನಲ್ಲಿದ್ದಾರೆ. 10 ಓವರ್ಗಳಿಗೆ ಭಾರತ 39 ರನ್ ಗಳಿಸಿದೆ.
ಕೊಹ್ಲಿಯ ನಂತರದ ಮುಂದಿನ ಎಸೆತದಲ್ಲಿ ಸ್ಟಾರ್ಕ್ ಸೂರ್ಯಕುಮಾರ್ ಯಾದವ್ ಅವರನ್ನು ಔಟ್ ಮಾಡಿದರು. ಸ್ಟಾರ್ಕ್ ಎಸೆದ ಚೆಂಡು ಪ್ಯಾಡ್‌ಗೆ ಬಡಿದಿತು. ಅಂಪೈರ್ ನಾಟ್ ಔಟ್ ನೀಡಿದರು. ಆದರೆ ಆಸ್ಟ್ರೇಲಿಯಾ ರಿವ್ಯೂ ತೆಗೆದುಕೊಂಡಿತು. ರಿವ್ಯೂವ್ನಲ್ಲಿ ಚೆಂಡು ಸ್ಟಂಪ್‌ಗೆ ಬಡಿಯುತ್ತಿರುವುದು ಕಂಡುಬಂದಿತು. ಸೂರ್ಯಕುಮಾರ್ ಖಾತೆ ತೆರೆಯದೆ ವಾಪಸಾದರು.
ಐದನೇ ಓವರ್‌ನ ಐದನೇ ಎಸೆತದಲ್ಲಿ ವಿರಾಟ್ ಕೊಹ್ಲಿ ಎಲ್ ಬಿಡಬ್ಲ್ಯೂ ಆದರು. ಕೊಹ್ಲಿ ಚೆಂಡನ್ನು ಆಡಲು ಪ್ರಯತ್ನಿಸುತ್ತಿದ್ದರೂ ಚೆಂಡು ಪ್ಯಾಡ್‌ಗೆ ತಾಗಿತು. ಚೆಂಡು ಬ್ಯಾಟ್‌ಗೆ ತಾಗಿಲ್ಲ ಎಂದು ಕೊಹ್ಲಿಗೆ ತಿಳಿದಿತ್ತು ಹಾಗಾಗಿ ರಿವ್ಯೂ ತೆಗೆದುಕೊಳ್ಳಲಿಲ್ಲ. 9 ಎಸೆತಗಳಲ್ಲಿ ನಾಲ್ಕು ರನ್ ಗಳಿಸಿ ಕೊಹ್ಲಿ ಮರಳಿದರು.
ಮೂರನೇ ಓವರ್‌ನಲ್ಲಿ ಮಿಚೆಲ್ ಸ್ಟಾರ್ಕ್ ಎಸೆತದಲ್ಲಿ ಶುಭಮನ್ ಗಿಲ್ ಬೌಂಡರಿ ಬಾರಿಸಿದರು. ಕವರ್ ಕಡೆಗೆ ಆಡಿ ಗಿಲ್, ಬೌಂಡರಿ ಬಾರಿಸಿದರು.
ಭಾರತದ ಮೊದಲ ವಿಕೆಟ್ ಪತನವಾಗಿದೆ. ಆರಂಭಿಕ ಕಿಶನ್ ಕೇವಲ 3 ರನ್‌ಗಳಿಗೆ ತಮ್ಮ ವಿಕೆಟ್ ಒಪ್ಪಿಸಿದ್ದಾರೆ.
36ನೇ ಓವರ್‌ನ ನಾಲ್ಕನೇ ಎಸೆತದಲ್ಲಿ ಮೊಹಮ್ಮದ್ ಸಿರಾಜ್ ಆಡಂ ಝಂಪಾ ಅವರನ್ನು ಔಟ್ ಮಾಡುವ ಮೂಲಕ ತಂಡಕ್ಕೆ ಕೊನೆಯ ಯಶಸ್ಸು ತಂದುಕೊಟ್ಟರು. ಝಂಪಾ ಶಾರ್ಟ್ ಬಾಲ್‌ನಲ್ಲಿ ಡ್ರೈವ್ ಮಾಡಲು ಪ್ರಯತ್ನಿಸುತ್ತಿದ್ದರೂ ಚೆಂಡು ಹೊರ ಅಂಚಿಗೆ ಬಡಿದು ಕೆಎಲ್ ರಾಹುಲ್ ಅವರ ಕೈ ಸೇರಿತು. ಝಂಪಾ ಖಾತೆ ತೆರೆಯಲೂ ಸಾಧ್ಯವಾಗಲಿಲ್ಲ.
ಸೀನ್ ಅಬಾಟ್ ಶೂನ್ಯಕ್ಕೆ ವಿಕೆಟ್ ಒಪ್ಪಿಸಿ ಪೆವಿಲಿಯನ್‌ಗೆ ಮರಳಿದರು.
33 ಓವರ್‌ಗಳಲ್ಲಿ ಆಸ್ಟ್ರೇಲಿಯ ಎಂಟು ವಿಕೆಟ್ ನಷ್ಟಕ್ಕೆ 188 ರನ್ ಗಳಿಸಿದೆ. 33ನೇ ಓವರ್‌ನಲ್ಲಿ ಗ್ಲೆನ್ ಮ್ಯಾಕ್ಸ್‌ವೆಲ್, ಹಾರ್ದಿಕ್ ಪಾಂಡ್ಯ ಕ್ಯಾಚಿತ್ತು ಔಟಾದರು. ಮ್ಯಾಕ್ಸ್‌ವೆಲ್ ಎಂಟು ರನ್ ಗಳಿಸಲಷ್ಟೇ ಶಕ್ತರಾದರು. ಸದ್ಯ ಸೀನ್ ಅಬಾಟ್ ಮತ್ತು ಮಿಚೆಲ್ ಸ್ಟಾರ್ಕ್ ಕ್ರೀಸ್‌ನಲ್ಲಿದ್ದಾರೆ.
ಗ್ಲೆನ್ ಮ್ಯಾಕ್ಸ್‌ವೆಲ್ 10 ಎಸೆತಗಳಲ್ಲಿ 8 ರನ್ ಗಳಿಸಿ ಪೆವಿಲಿಯನ್‌ಗೆ ಮರಳಿದರು. ಜಡೇಜಾಗೆ ಎರಡನೇ ವಿಕೆಟ್
ಮಾರ್ಕಸ್ ಸ್ಟೊಯಿನಿಸ್ 8 ಎಸೆತಗಳಲ್ಲಿ 5 ರನ್ ಗಳಿಸಿ ಪೆವಿಲಿಯನ್‌ಗೆ ಮರಳಿದರು. ಆಸ್ಟ್ರೇಲಿಯಾ 32 ಓವರ್‌ಗಳಲ್ಲಿ 7 ವಿಕೆಟ್‌ಗೆ 184 ರನ್ ಗಳಿಸಿದೆ.
ಆಸ್ಟ್ರೇಲಿಯಾದ ಸ್ಕೋರ್ 31 ಓವರ್‌ಗಳಲ್ಲಿ ಆರು ವಿಕೆಟ್‌ಗೆ 184 ಆಗಿದೆ. ಸದ್ಯ ಗ್ಲೆನ್ ಮ್ಯಾಕ್ಸ್‌ವೆಲ್ ಮತ್ತು ಮಾರ್ಕಸ್ ಸ್ಟೊಯಿನಿಸ್ ಕ್ರೀಸ್‌ನಲ್ಲಿದ್ದಾರೆ.
ಕ್ಯಾಮರೂನ್ ಗ್ರೀನ್ ಪೆವಿಲಿಯನ್‌ಗೆ ಮರಳಿದ್ದಾರೆ. ಶಮಿ ಭಾರತಕ್ಕೆ ಆರನೇ ಯಶಸ್ಸು ತಂದುಕೊಟ್ಟರು. 30ನೇ ಓವರ್‌ನ ಮೂರನೇ ಎಸೆತದಲ್ಲಿ ಗ್ರೀನ್ ಕ್ಲೀನ್ ಬೌಲ್ಡ್ ಆದರು. ಆಸ್ಟ್ರೇಲಿಯಾ 30 ಓವರ್‌ಗಳಲ್ಲಿ 6 ವಿಕೆಟ್‌ಗೆ 174 ರನ್ ಗಳಿಸಿದೆ.
Four wickets fall in quick succession! Indian bowlers have taken control.
Shami takes two in as many overs. Josh Inglis and Cameron Green are OUT! After 30 overs, Australia are 174-6
Live – https://t.co/izlvUC6Fs6 #INDvAUS #TeamIndia pic.twitter.com/evKQm3Hr25— BCCI (@BCCI) March 17, 2023
ಆಸ್ಟ್ರೇಲಿಯಾ 28ನೇ ಓವರ್‌ನಲ್ಲಿ ಐದನೇ ಹಿನ್ನಡೆ ಅನುಭವಿಸಿದೆ. ಮೊಹಮ್ಮದ್ ಶಮಿ ಜೋಸ್ ಇಂಗ್ಲಿಸ್ ಅವರನ್ನು ಬೌಲ್ಡ್ ಮಾಡುವುದರೊಂದಿಗೆ ಭಾರತಕ್ಕೆ 5ನೇ ಯಶಸ್ಸು ತಂದುಕೊಟ್ಟಿದ್ದಾರೆ. ಇಂಗ್ಲಿಸ್ 27 ಎಸೆತಗಳಲ್ಲಿ 26 ರನ್ ಗಳಿಸಲಷ್ಟೇ ಶಕ್ತರಾದರು. ಸದ್ಯ ಗ್ಲೆನ್ ಮ್ಯಾಕ್ಸ್‌ವೆಲ್ ಮತ್ತು ಕ್ಯಾಮರೂನ್ ಗ್ರೀನ್ ಕ್ರೀಸ್‌ನಲ್ಲಿದ್ದಾರೆ.
ಭಾರತ ತಂಡ ಅದ್ಭುತವಾಗಿ ಫೀಲ್ಡಿಂಗ್ ಮಾಡುತ್ತಿದೆ. 28ನೇ ಓವರ್‌ನಲ್ಲಿ ಸೂರ್ಯಕುಮಾರ್ ಯಾದವ್ ಅದ್ಭುತ ಫೀಲ್ಡಿಂಗ್ ಮಾಡಿ ಬೌಂಡರಿ ತಡೆದರು.
ಮುಂಬೈ ಏಕದಿನ ಪಂದ್ಯದಲ್ಲಿ ಭಾರತ ತಂಡ ಭರ್ಜರಿ ಪುನರಾಗಮನ ಮಾಡಿದೆ. 25 ಓವರ್‌ಗಳಲ್ಲಿ ಆಸ್ಟ್ರೇಲಿಯಾ ಸ್ಕೋರ್ 151/4. ಜೋಶ್ ಇಂಗ್ಲಿಸ್ 16 ಎಸೆತಗಳಲ್ಲಿ 12 ರನ್ ಮತ್ತು ಕ್ಯಾಮರೂನ್ ಗ್ರೀನ್ 9 ಎಸೆತಗಳಲ್ಲಿ 6 ರನ್ ಗಳಿಸಿ ಕ್ರೀಸ್‌ನಲ್ಲಿದ್ದಾರೆ.
ಆಸ್ಟ್ರೇಲಿಯದ ನಾಲ್ಕನೇ ವಿಕೆಟ್ 139 ರನ್‌ಗಳಿಗೆ ಪತನಗೊಂಡಿದೆ. ಜಡೇಜಾ ಅದ್ಭುತ ಕ್ಯಾಚ್ ಪಡೆದು ಲಬುಶೇನ್ ಅವರನ್ನು ಪೆವಿಲಿಯನ್‌ಗೆ ಕಳುಹಿಸಿದರು. ಲಬುಶೇನ್ 22 ಎಸೆತಗಳಲ್ಲಿ 15 ರನ್ ಗಳಿಸಿ ಪೆವಿಲಿಯನ್ ಸೇರಿಕೊಂಡಿದ್ದಾರೆ.
21 ಓವರ್‌ಗಳಲ್ಲಿ ಆಸ್ಟ್ರೇಲಿಯಾ ಸ್ಕೋರ್ 132/3. ಕ್ರೀಸ್‌ನಲ್ಲಿರುವ ಜೋಶ್ ಇಂಗ್ಲಿಸ್ 4 ಎಸೆತಗಳಲ್ಲಿ 2 ಮತ್ತು ಮಾರ್ನಸ್ ಲಬುಶೇನ್ 17 ಎಸೆತಗಳಲ್ಲಿ 13 ರನ್ ಗಳಿಸಿದ್ದಾರೆ. ಆಸ್ಟ್ರೇಲಿಯಾ 21 ಓವರ್‌ಗಳಲ್ಲಿ 3 ವಿಕೆಟ್‌ಗೆ 132 ರನ್ ಗಳಿಸಿದೆ.
81 ರನ್ಗಳಿಸಿ ಭಾರತಕ್ಕೆ ಕಂಟಕವಾಗಿದ್ದ ಮಾರ್ಷ್ ಜಡೇಜಾ ಬೌಲಿಂಗ್ನಲ್ಲಿ ಶಾರ್ಟ್ ಥರ್ಡ್ಮ್ಯಾನ್ನಲ್ಲಿ ನಿಂತಿದ್ದ ಸಿರಾಜ್ಗೆ ಕ್ಯಾಚಿತ್ತು ಔಟಾಗಿದ್ದಾರೆ.
17ನೇ ಓವರ್ ನಂತರ ಆಸ್ಟ್ರೇಲಿಯಾ ಸ್ಕೋರ್ 103/2 ವಿಕೆಟ್ ಆಗಿದೆ. ಮಿಚೆಲ್ ಮಾರ್ಷ್ ಅರ್ಧಶತಕ ಪೂರೈಸಿದ್ದಾರೆ.
ಆಸೀಸ್ ಆರಂಭಿಕ ಮಿಚೆಲ್ ಮಾರ್ಷ್ ಅರ್ಧಶತಕ ಪೂರೈಸಿದ್ದಾರೆ. ಕುಲ್ದೀಪ್ ಎಸೆದ 17ನೇ ಓವರ್‌ನಲ್ಲಿ ಬೌಂಡರಿ ಬಾರಿಸುವ ಮೂಲಕ ಮಾರ್ಷ್ ಅರ್ಧಶತಕ ಪೂರೈಸಿದರು.
77 ರನ್ ಗಳಿಸುವಷ್ಟರಲ್ಲಿ ಆಸ್ಟ್ರೇಲಿಯಾ ಮತ್ತೊಂದು ಹಿನ್ನಡೆ ಅನುಭವಿಸಿದೆ. ಹಾರ್ದಿಕ್ ಪಾಂಡ್ಯ ಓವರ್‌ನಲ್ಲಿ, ಆಸೀಸ್ ನಾಯಕ ಸ್ಟೀವ್ ಸ್ಮಿತ್, ವಿಕೆಟ್ ಕೀಪರ್ ಲೋಕೇಶ್ ರಾಹುಲ್ಗೆ ಕ್ಯಾಚಿತ್ತು ಔಟ್ ಆಗಿದ್ದಾರೆ.
10 ಓವರ್‌ಗಳ ಆಟ ಅಂತ್ಯವಾಗಿದ್ದು, ಆಸೀಸ್ ತಂಡ 1 ವಿಕೆಟ್ ಕಳೆದುಕೊಂಡು 59 ರನ್ ಕಲೆ ಹಾಕಿದೆ. ಮಾರ್ಷ್ 28 ಎಸೆತಗಳಲ್ಲಿ 31 ರನ್ ಗಳಿಸಿ ಆಡುತ್ತಿದ್ದರೆ, ಸ್ಮಿತ್ 24 ಎಸೆತಗಳಲ್ಲಿ 17 ರನ್ ಬಾರಿಸಿದ್ದಾರೆ.
ಆರಂಭದಿಂದಲೂ ಅಬ್ಬರದ ಬ್ಯಾಟಿಂಗ್ಗೆ ಮುಂದಾಗಿರುವ ಮಾರ್ಷ್, ಸಿರಾಜ್ ಮೇಲೆ ದಾಳಿ ಆರಂಭಿಸಿದ್ದಾರೆ. 8ನೇ ಓವರ್ನಲ್ಲೂ ಪರಾಕ್ರಮ ತೋರಿದ ಮಾರ್ಷ್ 2 ಬೌಂಡರಿ ಬಾರಿಸಿದರು.
5 ಓವರ್ ಅಂತ್ಯಕ್ಕೆ ಆಸೀಸ್ ಪಡೆ 29 ರನ್ ಕಲೆ ಹಾಕಿದೆ. ಸ್ಮಿತ್ ಹಾಗೂ ಮಾರ್ಷ್ ಭಾರತೀಯ ಬೌಲರ್ಗಳನ್ನು ಸರಿಯಾಗಿ ದಂಡಿಸುತ್ತಿದ್ದಾರೆ. 5 ನೇ ಓವರ್‌ನಲ್ಲಿ ಬೌಂಡರಿ ಬಾರಿಸುವುದರೊಂದಿಗೆ ಸ್ಮಿತ್ ಕೂಡ ಖಾತೆ ತೆರೆದರು.
3ನೇ ಓವರ್‌ನಲ್ಲಿ ವಿಕೆಟ್ ಆಘಾತ ಎದುರಿಸಿದ ಆಸೀಸ್ ಇನ್ನಿಂಗ್ಸ್ಗೆ ಮಾರ್ಷ್ ಬೂಸ್ಟ್ ನೀಡಿದ್ದಾರೆ. ಸಿರಾಜ್ ಎಸೆದ 4ನೇ ಓವರ್‌ನಲ್ಲಿ ಮಾರ್ಷ್ 3 ಬೌಂಡರಿ ಬಾರಿಸಿದರು.
ಎರಡನೇ ಓವರ್‌ನ ಕೊನೆಯ ಎಸೆತದಲ್ಲಿ ಸಿರಾಜ್ ಟ್ರಾವಿಸ್ ಹೆಡ್ ಅವರನ್ನು ಬೌಲ್ಡ್ ಮಾಡಿ ಆಸ್ಟ್ರೇಲಿಯಾಕ್ಕೆ ಮೊದಲ ಪೆಟ್ಟು ನೀಡಿದರು. ಹೆಡ್ 5 ರನ್ ಗಳಿಸಲಷ್ಟೇ ಶಕ್ತರಾದರು.
ಆಸೀಸ್ ತಂಡದ ಬ್ಯಾಟಿಂಗ್ ಆರಂಭವಾಗಿದ್ದು, ತಂಡದ ಪರ ಟ್ರಾವಿಸ್ ಹೆಡ್ ಹಾಗೂ ಮಿಚೆಲ್ ಮಾರ್ಷ್ ಆರಂಭಿಕರಾಗಿ ಕಣಕ್ಕಿಳಿದಿದ್ದಾರೆ. ಭಾರತದ ಪರ ಶಮಿ ಬೌಲಿಂಗ್ ಆರಂಭಿಸಿದ್ದಾರೆ.
ಟ್ರಾವಿಸ್ ಹೆಡ್, ಮಿಚೆಲ್ ಮಾರ್ಷ್, ಸ್ಟೀವ್ ಸ್ಮಿತ್ (ನಾಯಕ), ಮಾರ್ನಸ್ ಲಬುಶೇನ್, ಜೋಶ್ ಇಂಗ್ಲಿಸ್, ಕ್ಯಾಮೆರಾನ್ ಗ್ರೀನ್, ಗ್ಲೆನ್ ಮ್ಯಾಕ್ಸ್‌ವೆಲ್, ಮಾರ್ಕಸ್ ಸ್ಟೊಯಿನಿಸ್, ಸೀನ್ ಅಬಾಟ್, ಮಿಚೆಲ್ ಸ್ಟಾರ್ಕ್, ಆಡಮ್ ಝಂಪಾ
ಶುಭ್ಮನ್ ಗಿಲ್, ಇಶಾನ್ ಕಿಶನ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ, ಕೆಎಲ್ ರಾಹುಲ್, ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ಮೊಹಮದ್ ಶಮಿ, ಮೊಹಮದ್ ಸಿರಾಜ್,ಕುಲ್ದೀಪ್ ಯಾದವ್.
1ST ODI. India XI: S Gill, I Kishan (wk), V Kohli, S Yadav, KL Rahul, H Pandya (c), R Jadeja, S Thakur, M Shami, M Siraj, K Yadav. https://t.co/BAvv2E8K6h #INDvAUS @mastercardindia
— BCCI (@BCCI) March 17, 2023
ಟಾಸ್ ಗೆದ್ದ ಭಾರತದ ನಾಯಕ ಹಾರ್ದಿಕ್ ಪಾಂಡ್ಯ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದ್ದಾರೆ.
Published On - 1:01 pm, Fri, 17 March 23