IND vs AUS: ಬೆಂಗಳೂರಿನಲ್ಲಿ ಟಾಸ್ ಸೋತ ಭಾರತ; ತಂಡದಲ್ಲಿ 1 ಬದಲಾವಣೆ

|

Updated on: Dec 03, 2023 | 6:49 PM

IND vs AUS: ಪಂದ್ಯದಲ್ಲಿ ಟಾಸ್ ಗೆದ್ದ ಆಸ್ಟ್ರೇಲಿಯಾ ನಾಯಕ ಮ್ಯಾಥ್ಯೂ ವೇಡ್ ಮೊದಲು ಫೀಲ್ಡಿಂಗ್ ನಿರ್ಧಾರ ಕೈಗೊಂಡಿದ್ದಾರೆ. ಹೀಗಾಗಿ ಕಳೆದ ಪಂದ್ಯಗಳಂತೆ ಭಾರತ ಮೊದಲು ಬ್ಯಾಟಿಂಗ್ ಮಾಡಲಿದೆ. ಇದರೊಂದಿಗೆ ಉಭಯ ತಂಡಗಳ ಪ್ಲೇಯಿಂಗ್ ಇಲೆವೆನ್ ಕೂಡ ಹೊರಬಿದ್ದಿದೆ.

IND vs AUS: ಬೆಂಗಳೂರಿನಲ್ಲಿ ಟಾಸ್ ಸೋತ ಭಾರತ; ತಂಡದಲ್ಲಿ 1 ಬದಲಾವಣೆ
ಭಾರತ- ಆಸ್ಟ್ರೇಲಿಯಾ
Follow us on

ಭಾರತ ಹಾಗೂ ಆಸ್ಟ್ರೇಲಿಯಾ (India vs Australia) ನಡುವಿನ ಐದು ಪಂದ್ಯಗಳ ಟಿ20 ಸರಣಿಯ ಐದನೇ ಹಾಗೂ ಅಂತಿಮ ಪಂದ್ಯ ಬೆಂಗಳೂರಿನಲ್ಲಿ ( Bengaluru) ನಡೆಯುತ್ತಿದೆ. ಸರಣಿಯಲ್ಲಿ ಟೀಂ ಇಂಡಿಯಾ (Team India) 3-1 ಮುನ್ನಡೆ ಸಾಧಿಸಿದ್ದು, ಈಗಾಗಲೇ ಸರಣಿಯನ್ನು ಕೈವಶ ಮಾಡಿಕೊಂಡಿದೆ. ಇದೀಗ 4-1 ಅಂತರದಲ್ಲಿ ಕಾಂಗರೂಗಳನ್ನು ಮಣಿಸಲು ಟೀಂ ಇಂಡಿಯಾ ಕಠಿಣ ಪ್ರಯತ್ನ ನಡೆಸಲಿದೆ. ಇತ್ತ 2-3 ಅಂತರದಿಂದ ಸರಣಿ ಸೋತ ಸಮಾಧಾನದೊಂದಿಗೆ ತವರಿಗೆ ಮರಳುವ ಪ್ರಯತ್ನವನ್ನು ಆಸ್ಟ್ರೇಲಿಯಾ ಮಾಡಲಿದೆ. ಇನ್ನು ಈ ಪಂದ್ಯದ ಟಾಸ್ ಕೂಡ ಮುಗಿದಿದ್ದು, ಪಂದ್ಯದಲ್ಲಿ ಟಾಸ್ ಗೆದ್ದ ಆಸ್ಟ್ರೇಲಿಯಾ ನಾಯಕ ಮ್ಯಾಥ್ಯೂ ವೇಡ್ ಮೊದಲು ಫೀಲ್ಡಿಂಗ್ ನಿರ್ಧಾರ ಕೈಗೊಂಡಿದ್ದಾರೆ. ಹೀಗಾಗಿ ಕಳೆದ ಪಂದ್ಯಗಳಂತೆ ಭಾರತ ಮೊದಲು ಬ್ಯಾಟಿಂಗ್ ಮಾಡಲಿದೆ. ಇದರೊಂದಿಗೆ ಉಭಯ ತಂಡಗಳ ಪ್ಲೇಯಿಂಗ್ ಇಲೆವೆನ್ ಕೂಡ ಹೊರಬಿದ್ದಿದೆ.

ಇನ್ನು ಕೊನೆಯ ಟಿ20 ಪಂದ್ಯಕ್ಕೆ ಉಭಯ ತಂಡಗಳಲ್ಲೂ ತಲಾ ಒಂದೊಂದು ಬದಲಾವಣೆ ಮಾಡಲಾಗಿದೆ. ಟಾಸ್ ಬಳಿಕ ಈ ಬಗ್ಗೆ ಮಾತನಾಡಿದ ನಾಯಕ ಸೂರ್ಯಕುಮಾರ್ ಯಾದವ್, ದೀಪಕ್ ಚಹರ್ ಬದಲಿಗೆ ಅರ್ಶ್ದೀಪ್ ಸಿಂಗ್ ತಂಡಕ್ಕೆ ಮರಳಿದ್ದಾರೆ ಎಂದರು. ಹಾಗೆಯೇ ಆಸೀಸ್ ತಂಡದಲ್ಲಿ ನಾಥನ್ ಎಲ್ಲಿಸ್ ಮತ್ತೊಮ್ಮೆ ತಂಡ ಸೇರಿಕೊಂಡಿದ್ದಾರೆ.

IND vs AUS 5th T20I Live Score: ಮತ್ತೆ ಟಾಸ್ ಸೋತ ಸೂರ್ಯ; ಭಾರತ ಮೊದಲು ಬ್ಯಾಟಿಂಗ್

ಉಭಯ ತಂಡಗಳು

ಭಾರತ ತಂಡ: ಯಶಸ್ವಿ ಜೈಸ್ವಾಲ್, ರುತುರಾಜ್ ಗಾಯಕ್ವಾಡ್, ಶ್ರೇಯಸ್ ಅಯ್ಯರ್, ಸೂರ್ಯಕುಮಾರ್ ಯಾದವ್ (ನಾಯಕ), ರಿಂಕು ಸಿಂಗ್, ಜಿತೇಶ್ ಶರ್ಮಾ (ವಿಕೆಟ್ ಕೀಪರ್), ಅಕ್ಷರ್ ಪಟೇಲ್, ರವಿ ಬಿಷ್ಣೋಯ್, ಅವೇಶ್ ಖಾನ್, ಮುಖೇಶ್ ಕುಮಾರ್, ಅರ್ಶ್ದೀಪ್ ಸಿಂಗ್.

ಆಸ್ಟ್ರೇಲಿಯಾ ತಂಡ: ಟ್ರಾವಿಸ್ ಹೆಡ್, ಜೋಶ್ ಫಿಲಿಪ್, ಬೆನ್ ಮೆಕ್‌ಡರ್ಮಾಟ್, ಆರನ್ ಹಾರ್ಡಿ, ಟಿಮ್ ಡೇವಿಡ್, ಮ್ಯಾಥ್ಯೂ ಶಾರ್ಟ್, ಮ್ಯಾಥ್ಯೂ ವೇಡ್ (ನಾಯಕ), ಬೆನ್ ದ್ವಾರ್ಶುಯಿಸ್, ನಾಥನ್ ಎಲ್ಲಿಸ್, ಜೇಸನ್ ಬೆಹ್ರೆನ್‌ಡಾರ್ಫ್, ತನ್ವೀರ್ ಸಂಘ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:43 pm, Sun, 3 December 23