ಭಾರತ ಹಾಗೂ ಇಂಗ್ಲೆಂಡ್ (India vs England) ನಡುವಣ ಬಹುನಿರೀಕ್ಷಿತ ನಾಲ್ಕನೇ ಟೆಸ್ಟ್ (4th Test) ಪಂದ್ಯ ಇಂದಿನಿಂದ ಆರಂಭವಾಗಿಲಿದೆ. ಮೂರನೇ ಟೆಸ್ಟ್‌ನಲ್ಲಿ 78 ರನ್ಗೆ ಕುಸಿದು ಹೀನಾಯ ಸೋಲು ಕಂಡಿರುವ ಟೀಮ್ ಇಂಡಿಯಾಕ್ಕೆ (Team India) ಈ ಪಂದ್ಯ ಮುಖ್ಯವಾಗಿದೆ. ಅನೇಕ ತಪ್ಪುಗಳನ್ನು ಸರಿಪಡಿಸಿ ಗೆಲುವಿನ ಟ್ರ್ಯಾಕ್ಗೆ ಮರಳಬೇಕಾದ ಅನಿವಾರ್ಯತೆ ಇದೆ. ಕಳಪೆ ಫಾರ್ಮ್ನಿಂದ ಬಳಲುತ್ತಿರುವ ಕೊಹ್ಲಿ ಪಡೆಯ ಬ್ಯಾಟ್ಸ್ಮನ್ಗಳು ಲಯಕಂಡುಕೊಳ್ಳಬೇಕಿದೆ.
ಲಾರ್ಡ್ಸ್‌ನಲ್ಲಿ ಐತಿಹಾಸಿಕ ಗೆಲುವು ದಾಖಲಿಸಿದ ಬಳಿಕ ಲೀಡ್ಸ್‌ನಲ್ಲಿ ಭಾರತ ತೋರಿದ ಕೆಟ್ಟ ನಿರ್ವಹಣೆ ಸಾಕಷ್ಟು ನಿರಾಸೆ ಮೂಡಿಸಿತ್ತು. ಮೊದಲ ದಿನವೇ ಅಲ್ಪಮೊತ್ತಕ್ಕೆ ಕುಸಿದರೂ ಪಂದ್ಯದ 3ನೇ ದಿನ ಭಾರತ ದಿಟ್ಟ ಪ್ರತಿರೋಧ ತೋರಿತ್ತು. ಆದರೆ 4ನೇ ದಿನ ಮತ್ತೆ ದಿಢೀರ್ ಕುಸಿದ ಪರಿಣಾಮ ಸೋಲಿಗೆ ಶರಣಾಗಬೇಕಾಯಿತು. ಈ ಮೂಲಕ ಇಂಗ್ಲೆಂಡ್ ಸರಣಿಯಲ್ಲಿ 1-1 ಅಂತರದ ಸಮಬಲ ಸಾಧಿಸಿತು.
ನಾಲ್ಕನೇ ಟೆಸ್ಟ್ ಪಂದ್ಯಕ್ಕೆ ಟೀಮ್ ಇಂಡಿಯಾದಲ್ಲಿ ಬದಲಾವಣೆ ಅನಿವಾರ್ಯವಾಗಿದೆ. ಉಪ ನಾಯಕ ಅಜಿಂಕ್ಯಾ ರಹಾನೆ ತಮ್ಮ ಘನತೆಗೆ ತಕ್ಕಂತೆ ಬ್ಯಾಟ್ ಬೀಸುತ್ತಿಲ್ಲ. ಇಶಾಂತ್ ಶರ್ಮಾ ಬೌಲಿಂಗ್ ಕೂಡ ಸದ್ದು ಮಾಡುತ್ತಿಲ್ಲ. ರವಿಚಂದ್ರನ್ ಅಶ್ವಿನ್ ತಂಡಕ್ಕೆ ಸೇರಿಸಿಕೊಳ್ಳಬೇಕು ಎಂಬ ಕೂಗು ಜೋರಾಗಿದೆ. ಇದರ ನಡುವೆ ಇಂಜುರಿಯಿಂದ ಬಳಲುತ್ತಿದ್ದ ರವೀಂದ್ರ ಜಡೇಜಾ ಗುಣಮುಖರಾಗಿದ್ದಾರೆ. ಹೀಗೆ ಭಾರತಕ್ಕೆ ಪ್ಲೇಯಿಂಗ್ 11 ಆಡಿಸುವುದೇ ಬಹುದೊಡ್ಡ ಚಾಜೆಂಜ್ ಆಗಿದೆ.
ಇದರ ನಡುವೆ ಮೀಸಲು ಆಟಗಾರರಾಗಿ ಕಳೆದ 3 ತಿಂಗಳಿನಿಂದ ಭಾರತ ತಂಡದ ಜತೆಗಿರುವ ಕರ್ನಾಟಕದ ವೇಗಿ ಪ್ರಸಿದ್ಧಕೃಷ್ಣ ಪ್ರಧಾನ ಟೆಸ್ಟ್ ತಂಡಕ್ಕೆ ಸೇರ್ಪಡೆಗೊಂಡಿದ್ದಾರೆ. ಕಾರ್ಯದೊತ್ತಡ ತಗ್ಗಿಸಲು ಬುಮ್ರಾ, ಶಮಿ ಅಥವಾ ಸಿರಾಜ್‌ಗೆ ವಿಶ್ರಾಂತಿ ನೀಡಿದರೆ ನಾಲ್ಕನೇ ಅಥವಾ ಐದನೇ ಟೆಸ್ಟ್‌ನಲ್ಲಿ ಪ್ರಸಿದ್ಧಕೃಷ್ಣ ಆಡುವ ಬಳಗದಲ್ಲೂ ಕಾಣಿಸಿಕೊಳ್ಳುವ ನಿರೀಕ್ಷೆ ಇದೆ.
ಇತ್ತ ಇಂಗ್ಲೆಂಡ್ ಮೊದಲ ಮೂರು ಟೆಸ್ಟ್ಗಿಂತ ಈಗ ಮತ್ತಷ್ಟು ಬಲಿಷ್ಠವಾಗಿದೆ. ತಂಡದಲ್ಲಿ ಸಾಕಷ್ಟು ಬದಲಾವಣೆ ಮಾಡಿದ್ದು, ಹೊಸ ಆಟಗಾರರನ್ನು ಸೇರಿಸಿಕೊಂಡಿದೆ. ಹ್ಯಾಟ್ರಿಕ್ ಸೆಂಚುರಿ ಬಾರಿಸಿ ಭರ್ಜರಿ ಫಾರ್ಮ್ನಲ್ಲಿರುವ ನಾಯಕ ಜೋ ರೂಟ್ ಅವರೇ ಆಂಗ್ಲರ ಬಹುದೊಡ್ಡ ಆಸ್ತಿ. ಈಗಾಗಲೇ 500 ರನ್ ಗಡಿ ದಾಟಿರುವ ರೂಟ್ ಏಕಾಂಗಿಯಾಗಿ ತಂಡವನ್ನು ಮೇಲೆತ್ತಬಲ್ಲ ಸಾಹಸಿ. ರೂಟ್ ಸ್ಪಿನ್ ನಿಭಾಯಿಸುವಲ್ಲಿ ತುಸು ಹಿಂದೆ ಎಂಬುದು ರಹಸ್ಯವೇನಲ್ಲ. ಆಗ ಅಶ್ವಿನ್ ಸೇರ್ಪಡೆ ಹೆಚ್ಚು ಅರ್ಥಪೂರ್ಣವೆನಿಸಲಿದೆ.
ಭಾರತ – ಇಂಗ್ಲೆಂಡ್ 4ನೇ ಟೆಸ್ಟ್ ಪಂದ್ಯ ಎಲ್ಲಿ?:
ಭಾರತ ಹಾಗೂ ಇಂಗ್ಲೆಂಡ್ ನಡುವಣ ನಾಲ್ಕನೇ ಟೆಸ್ಟ್ ಪಂದ್ಯ ಲಂಡನ್ನ ಕೆನ್ನಿಂಗಸ್ಟನ್ ಓವಲ್ ಮೈದಾನದಲ್ಲಿ ನಡೆಯಲಿದೆ.
ಎಷ್ಟು ಗಂಟೆಗೆ ಆರಂಭ?:
ಭಾರತದ ಕಾಲಮಾನದ ಪ್ರಕಾರ ಪಂದ್ಯ ಮಧ್ಯಾಹ್ನ 3:30ಕ್ಕೆ ಆರಂಭವಾಗಲಿದೆ.
ಓವಲ್‌ನಲ್ಲಿ ಭಾರತ ಇದುವರೆಗೆ 13 ಟೆಸ್ಟ್ ಪಂದ್ಯಗಳನ್ನು ಆಡಿದ್ದು 1ರಲ್ಲಿ ಮಾತ್ರ ಗೆದ್ದು, 5ರಲ್ಲಿ ಸೋತಿದೆ. 7 ಟೆಸ್ಟ್ ಡ್ರಾಗೊಂಡಿದೆ. 1971ರಲ್ಲಿ ಆಡಿದ ಓವಲ್ ಟೆಸ್ಟ್‌ನಲ್ಲಿ ಜಯಿಸಿದ್ದ ಭಾರತ, ಇಲ್ಲಿ ಆಡಿದ ಕೊನೇ ಮೂರೂ (2011, 2014, 2018) ಟೆಸ್ಟ್‌ಗಳಲ್ಲಿ ಸೋಲು ಅನುಭವಿಸಿದೆ.
ರಾಹುಲ್ ದ್ರಾವಿಡ್ ಗರಡಿ ಹುಡುಗನ ಆರ್ಭಟ: ಎದುರಾಳಿ ತಂಡ 69 ರನ್ಗೆ ಆಲೌಟ್
(India vs England 4th Test Preview Virat Kohli India Look To Fight Back After Big Defeat In Leeds)
Published On - 7:22 am, Thu, 2 September 21