IND vs SL: ಟೀಂ ಇಂಡಿಯಾದ ಗೆಲುವಿಗೆ ಅಡ್ಡಿಯಾಗುತ್ತಾ ಮಳೆ? ಹೇಗಿರಲಿದೆ ಹವಾಮಾನ?

India vs Sri Lanka 2nd Test: ಭಾರತ-ಶ್ರೀಲಂಕಾ ಎರಡನೇ ಟೆಸ್ಟ್‌ನ ಅಂತಿಮ ದಿನ ಮಳೆಯ ಆತಂಕ ಎದುರಾಗಿದೆ. ಮೊದಲ ದಿನ ಭಾರತ ಮೇಲುಗೈ ಸಾಧಿಸಿದ್ದರೂ, ಗೆಲುವಿಗೆ ಕೊನೆಯ ದಿನದಾಟ ನಿರ್ಣಾಯಕ. ಮಳೆಯ ಮುನ್ಸೂಚನೆಯಿಂದ ಪಂದ್ಯದ ಫಲಿತಾಂಶ ಅನಿಶ್ಚಿತ. ಈ ಪಂದ್ಯ ಡ್ರಾ ಆದರೆ, ಭಾರತ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ರೇಸ್‌ನಲ್ಲಿ ಹಿನ್ನಡೆ ಅನುಭವಿಸಲಿದೆ. ಫೈನಲ್‌ಗೇರಲು ಭಾರತಕ್ಕೆ ಈ ಪಂದ್ಯದ ಗೆಲುವು ಅತ್ಯಗತ್ಯ.

IND vs SL: ಟೀಂ ಇಂಡಿಯಾದ ಗೆಲುವಿಗೆ ಅಡ್ಡಿಯಾಗುತ್ತಾ ಮಳೆ? ಹೇಗಿರಲಿದೆ ಹವಾಮಾನ?
Colombo Test

Updated on: Aug 26, 2026 | 7:39 PM

ಭಾರತ ಮತ್ತು ಶ್ರೀಲಂಕಾ (India vs Sri Lanka) ನಡುವೆ ನಡೆಯುತ್ತಿರುವ ಎರಡನೇ ಮತ್ತು ಕೊನೆಯ ಟೆಸ್ಟ್ ಪಂದ್ಯ ಅಂತಿಮ ಹಂತಕ್ಕೆ ಬಂದು ನಿಂತಿದೆ. ಪಂದ್ಯದ ಮೊದಲ ದಿನದಂದು ಟೀಂ ಇಂಡಿಯಾ ಮೇಲುಗೈ ಸಾಧಿಸಿದೆಯಾದರೂ ಪಂದ್ಯವನ್ನು ಗೆಲ್ಲಬೇಕೆಂದರೆ ಕೊನೆಯ ದಿನದಾಟ ನಡೆಯಲೇಬೇಕಿದೆ. ಈ ಸರಣಿಯಲ್ಲಿ ಮಳೆ ಆಗಾಗ್ಗೆ ಆಟಕ್ಕೆ ಅಡ್ಡಿಪಡಿಸುತ್ತಿದೆ. ಮೊದಲ ಟೆಸ್ಟ್​ಗೂ ಮಳೆಯ ಅಡ್ಡಿಪಡಿಸಿತ್ತು. ಆದರೆ ಅಂತಿಮವಾಗಿ ಪಂದ್ಯವನ್ನು ಗೆದ್ದುಕೊಳ್ಳುವಲ್ಲಿ ಟೀಂ ಇಂಡಿಯಾ ಯಶಸ್ವಿಯಾಗಿತ್ತು. ಅದರಂತೆ ಎರಡನೇ ಟೆಸ್ಟ್ ಪಂದ್ಯಕ್ಕೂ ಮಳೆ ಅಡ್ಡಿಪಡಿಸುತ್ತಿದೆ. ಆದಾಗ್ಯೂ 4 ದಿನದಾಟ ಪೂರ್ಣಗೊಂಡಿದೆ. ಆದರೆ ಪಂದ್ಯದ ಫಲಿತಾಂಶ ಹೊರಬೀಳಬೇಕಾದರೆ ಕೊನೆಯ ದಿನದಾಟ ನಡೆಯಲೇಬೇಕಿದೆ. ಆದರೆ ಈ ದಿನದಂದು ಮಳೆ ಆಟಕ್ಕೆ ಅಡ್ಡಿಪಡಿಸುವ ಆತಂಕ ಎದುರಾಗಿದೆ.

ದಿನವೀಡಿ ಮಳೆಯಾಗಲಿದೆ

ಮೇಲೆ ಹೇಳಿದಂತೆ ಗಾಲೆ ಟೆಸ್ಟ್‌ನಂತೆಯೇ, ಕೊಲಂಬೊ ಟೆಸ್ಟ್​ಗೂ ಮಳೆ ಅಡ್ಡಿಪಡಿಸುತ್ತಿದೆ. ಹವಾಮಾನ ಇಲಾಖೆ ನೀಡಿರುವ ಮಾಹಿತಿ ಪ್ರಕಾರ, ಪಂದ್ಯದ ಕೊನೆಯ ದಿನವಾದ ಆಗಸ್ಟ್ 27 ರ ಗುರುವಾರ, ಕೊಲಂಬೊದಲ್ಲಿ ಮುಂಜಾನೆಯಿಂದಲೇ ಮಳೆ ಬೀಳುವ ಮುನ್ಸೂಚನೆ ಇದೆ. ಹವಾಮಾನ ಮೇಲ್ವಿಚಾರಣಾ ವೆಬ್‌ಸೈಟ್ ಅಕ್ಯೂವೆದರ್ ಪ್ರಕಾರ, ಬೆಳಿಗ್ಗೆ 7 ಗಂಟೆಗೆ ಮಳೆಯಾಗುವ ಸಾಧ್ಯತೆ ಶೇ. 63 ರಷ್ಟು ಇದ್ದು, ನಂತರ ಬೆಳಿಗ್ಗೆ 8 ರಿಂದ 10 ರ ನಡುವೆ ಮಳೆಯಾಗುವ ಸಾಧ್ಯತೆ ಶೇ. 50 ಕ್ಕಿಂತ ಕಡಿಮೆ ಇದೆ. ಆದಾಗ್ಯೂ, ದಿನದ ಆಟ ಪ್ರಾರಂಭವಾಗುವ ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 1 ಗಂಟೆಯವರೆಗೆ ಮಳೆ ಮುಂದುವರಿಯುವ ನಿರೀಕ್ಷೆಯಿದ್ದು, ಶೇ. 80 ಕ್ಕಿಂತ ಹೆಚ್ಚು ಮಳೆಯಾಗುವ ಸಾಧ್ಯತೆ ಇದೆ. ಹಾಗೆಯೇ ಮಧ್ಯಾಹ್ನ 2 ರಿಂದ ಸಂಜೆ 5 ರವರೆಗೆ ಮಳೆ ಮುಂದುವರಿಯಬಹುದು ಎಂದು ವರದಿಯಾಗಿದೆ.

ಭಾರತಕ್ಕೆ ಈ ಗೆಲುವು ಅತ್ಯಗತ್ಯ

ಇದರರ್ಥ ಕೊಲಂಬೊ ಟೆಸ್ಟ್‌ನ ಐದನೇ ದಿನವೂ ಮಳೆ ಪೀಡಿತವಾಗಬಹುದು. ಹೀಗಾಗಿ ಟೀಂ ಇಂಡಿಯಾ ಆದಷ್ಟು ಬೇಗ ಶ್ರೀಲಂಕಾ ತಂಡವನ್ನು ಆಲೌಟ್ ಮಾಡಿ ಸಿಗುವ ಗುರಿಯನ್ನು ಬೇಗನೇ ಬೆನ್ನಟ್ಟಬೇಕಿದೆ. ಇನ್ನು ನಾಲ್ಕನೇ ದಿನದಾಟದಂತ್ಯಕ್ಕೆ ಟೀಂ ಇಂಡಿಯಾ ಗೆಲುವಿನ ಸಮೀಪಕ್ಕೆ ಬಂದಿದೆ. ಆದರೆ ಶ್ರೀಲಂಕಾ ಈ ಪಂದ್ಯದಲ್ಲಾದರೂ ಸೋಲನ್ನು ತಪ್ಪಿಸಲು ಪ್ರಯತ್ನಿಸುತ್ತಿದೆ.

ಮೂವರ ಕಂಬ್ಯಾಕ್; ಟೆಸ್ಟ್ ಸರಣಿ ನಡುವೆ ಟೀಂ ಇಂಡಿಯಾಕ್ಕೆ ಸಿಹಿ ಸುದ್ದಿ

ಫಾಲೋ ಆನ್‌ ಹೊತ್ತು ಎರಡನೇ ಇನ್ನಿಂಗ್ಸ್‌ ಆರಂಭಿಸಿದ ಶ್ರೀಲಂಕಾ 6 ವಿಕೆಟ್‌ಗಳ ನಷ್ಟಕ್ಕೆ 229 ರನ್ ಗಳಿಸಿ ಕೇವಲ 16 ರನ್‌ಗಳ ಮುನ್ನಡೆ ಸಾಧಿಸಿದೆ. ಹೀಗಾಗಿ ಭಾರತ ಲಂಕಾ ತಂಡವನ್ನು ಬೇಗನೇ ಆಲೌಟ್ ಮಾಡಬೇಕಿದೆ. ಆದಾಗ್ಯೂ ಈ ಪಂದ್ಯ ಡ್ರಾದಲ್ಲಿ ಕೊನೆಗೊಂಡರೂ ಸರಣಿ ಟೀಂ ಇಂಡಿಯಾ ಪಾಲಾಗಲಿದೆ. ಆದರೆ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್​ ರೇಸ್​ನಲ್ಲಿರುವ ಟೀಂ ಇಂಡಿಯಾಕ್ಕೆ ದೊಡ್ಡ ಹಿನ್ನಡೆಯುಂಟಾಗಲಿದೆ. ಟೀಂ ಇಂಡಿಯಾ ಫೈನಲ್​ಗೇರಬೇಕೆಂದರೆ ಉಳಿದಿರುವ ಎಲ್ಲಾ ಪಂದ್ಯಗಳನ್ನು ಗೆಲ್ಲಲೇಬೇಕಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us