ಪ್ರಸ್ತುತ ವೆಸ್ಟ್ ಇಂಡೀಸ್ ಪ್ರವಾಸದಲ್ಲಿರುವ ಟೀಂ ಇಂಡಿಯಾ (India vs West Indies), ಈಗಾಗಲೇ ಆಡಿರುವ ಎರಡು ಸರಣಿಗಳನ್ನು ತನ್ನದಾಗಿಸಿಕೊಂಡಿದೆ. ಏಕದಿನ ಸರಣಿಗೂ ಮುನ್ನ ನಡೆದ ಎರಡು ಪಂದ್ಯಗಳ ಟೆಸ್ಟ್ ಸರಣಿಯನ್ನು 1-0 ಅಂತರದಿಂದ ಗೆದ್ದು ಬೀಗಿದ ಟೀಂ ಇಂಡಿಯಾ (Team India), ಇದೀಗ ಮೂರು ಪಂದ್ಯಗಳ ಏಕದಿನ ಸರಣಿಯನ್ನು 2-1 ಅಂತರದಿಂದ ತನ್ನದಾಗಿಸಿಕೊಂಡಿದೆ. ಈಗ ಈ ಪ್ರವಾಸದ ಕೊನೆಯ ಸರಣಿ ಬಾಕಿ ಉಳಿದಿದ್ದು, ಐದು ಪಂದ್ಯಗಳ ಟಿ20 ಸರಣಿಯಲ್ಲಿ ಮುಖಾಮುಖಿಯಾಗಲು ವೆಸ್ಟ್ ಇಂಡೀಸ್ ಹಾಗೂ ಭಾರತ ಸನ್ನದ್ಧವಾಗಿವೆ. ಇದಕ್ಕಾಗಿ ಆತಿಥೇಯ ವೆಸ್ಟ್ ಇಂಡೀಸ್ 15 ಸದಸ್ಯರ ಬಲಿಷ್ಠ ತಂಡವನ್ನು ಸಹ ಪ್ರಕಟಿಸಿದೆ. ಟಿ20 ಕ್ರಿಕೆಟ್ನಲ್ಲಿ (T20 Cricket) ಸಾಕಷ್ಟು ಹೆಸರು ಮಾಡಿರುವ ದಿಗ್ಗಜ ಆಟಗಾರರು ಈ ಸರಣಿಗೆ ವಿಂಡೀಸ್ ತಂಡದಲ್ಲಿ ಸ್ಥಾನ ಪಡೆದಿದ್ದು, ಇಂತಹ ಪರಿಸ್ಥಿತಿಯಲ್ಲಿ ಭಾರತಕ್ಕೆ ಟಿ20 ಸರಣಿಯಲ್ಲಿ ಗೆಲುವಿನ ಹಾದಿ ಸುಲಭವಲ್ಲ.
ಇನ್ನು ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ 5 ಪಂದ್ಯಗಳ ಟಿ20 ಸರಣಿಯು ಆಗಸ್ಟ್ 3 ರಂದು ಆರಂಭವಾಗಲಿದೆ. ಮೊದಲ ಟಿ20 ಪಂದ್ಯ, ಏಕದಿನ ಸರಣಿಯ ಅಂತಿಮ ಪಂದ್ಯ ನಡೆದ ಅದೇ ಮೈದಾನದಲ್ಲಿ ನಡೆಯಲ್ಲಿದೆ. ಮೊದಲ ಟಿ20 ಆಡಿದ ಬಳಿಕ ಉಭಯ ತಂಡಗಳು ಗಯಾನಾಗೆ ತೆರಳಲಿದ್ದು, ಅಲ್ಲಿ ಸರಣಿಯ ಎರಡು ಮತ್ತು ಮೂರನೇ ಪಂದ್ಯಗಳು ನಡೆಯಲಿವೆ. ಟಿ20 ಸರಣಿಯ ಕೊನೆಯ ಎರಡು ಪಂದ್ಯಗಳು ಆಗಸ್ಟ್ 12 ಮತ್ತು 13 ರಂದು ಅಮೆರಿಕ ನೆಲದಲ್ಲಿ ನಡೆಯಲಿವೆ.
IND vs WI: ವಿಂಡೀಸ್ ವಿರುದ್ಧ 85 ರನ್ ಸಿಡಿಸಿ ಪಾಕ್ ಆಟಗಾರನ ದಾಖಲೆ ಮುರಿದ ಶುಭ್ಮನ್ ಗಿಲ್..!
ಟಿ20 ಸರಣಿಗೆ ವೆಸ್ಟ್ ಇಂಡೀಸ್ ತಂಡ: ರೋವ್ಮನ್ ಪೊವೆಲ್, ಕೈಲ್ ಮೇಯರ್ಸ್, ನಿಕೋಲಸ್ ಪೂರನ್, ಶಿಮ್ರಾನ್ ಹೆಟ್ಮೆಯರ್, ಜೇಸನ್ ಹೋಲ್ಡರ್, ರೊಮಾರಿಯೋ ಶೆಫರ್ಡ್, ಒಶೇನ್ ಥಾಮಸ್, ಶಾಯ್ ಹೋಪ್, ಜಾನ್ಸನ್ ಚಾರ್ಲ್ಸ್, ರೋಸ್ಟನ್ ಚೇಸ್, ಅಲ್ಜಾರಿ ಜೋಸೆಫ್, ಬ್ರ್ಯಾಂಡನ್ ಕಿಂಗ್, ಅಕಿಲ್ ಹುಸೇನ್, ಓಡಿಯನ್ ಸ್ಮಿತ್, ಒಬೆಡ್ ಮೆಕಾಯ್.
ಭಾರತ ಟಿ20 ತಂಡ: ಇಶಾನ್ ಕಿಶನ್ (ವಿಕೆಟ್ ಕೀಪರ್), ಶುಭ್ಮನ್ ಗಿಲ್, ಯಶಸ್ವಿ ಜೈಸ್ವಾಲ್, ತಿಲಕ್ ವರ್ಮಾ, ಸೂರ್ಯ ಕುಮಾರ್ ಯಾದವ್ (ಉಪನಾಯಕ), ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ (ನಾಯಕ), ಅಕ್ಸರ್ ಪಟೇಲ್, ಯುಜ್ವೇಂದ್ರ ಚಾಹಲ್, ಕುಲ್ದೀಪ್ ಯಾದವ್, ರವಿ ಬಿಷ್ಣೋಯ್, ಅರ್ಷದೀಪ್ ಸಿಂಗ್, ಉಮ್ರಾನ್ ಮಲಿಕ್, ಅವೇಶ್ ಖಾನ್, ಮುಖೇಶ್ ಕುಮಾರ್.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 8:42 am, Wed, 2 August 23