
ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ಮೂರು ಪಂದ್ಯಗಳ ಏಕದಿನ ಸರಣಿಯನ್ನು ಆತಿಥೇಯ ಟೀಂ ಇಂಡಿಯಾ 2-1 ಅಂತರದಿಂದ ಗೆದ್ದುಕೊಂಡಿತು. ಈ ಮೂರು ಪಂದ್ಯಗಳಲ್ಲೂ ಉಭಯ ತಂಡಗಳ ಬ್ಯಾಟಿಂಗ್ ವಿಭಾಗ ಅಮೋಘ ಪ್ರದರ್ಶನ ನೀಡಿತು. ಬೌಲರ್‌ಗಳಿಗೆ ನರಕವಾಗಿದ್ದ ಈ ಸರಣಿಯಲ್ಲಿ ಬ್ಯಾಟರ್ಗಳಿಂದ ಶತಕಗಳ ಮಳೆಯೇ ಸುರಿಯಿತು. ವಿಂಡೀಸ್ ಆಟಗಾರರ ಶತಕಗಳಿಗೆ ಸವಾಲಾಗಿ ಭಾರತದ ಆಟಗಾರರಿಂದಲೂ ಶತಕದ ಜೊತೆಗೆ ದ್ವಿಶತಕವೂ ಮೂಡಿಬಂತು. ಆಡಿದ ಪ್ರತಿಯೊಂದು ಪಂದ್ಯದಲ್ಲೂ ಎರಡೂ ತಂಡಗಳು ಸುಲಭವಾಗಿ 300 ರನ್‌ಗಳ ಗಡಿಯನ್ನು ದಾಟಿದವು. ವಿಶೇಷವಾಗಿ ಎರಡನೇ ಪಂದ್ಯದಲ್ಲಿ ಎರಡೂ ತಂಡಗಳು ಒಟ್ಟಾಗಿ 800 ಕ್ಕೂ ಹೆಚ್ಚು ರನ್ ದಾಖಲಿಸಿದವು.
ಈ ಸರಣಿಯಲ್ಲಿ ಎರಡೂ ತಂಡಗಳ ಬ್ಯಾಟ್ಸ್‌ಮನ್‌ಗಳು ಹಿಂದೆಂದೂ ಕಾಣದ ರೀತಿಯಲ್ಲಿ ಶತಕಗಳನ್ನು ಬಾರಿಸಿದ್ದಾರೆ. ಮೂರು ಪಂದ್ಯಗಳ ಸರಣಿಯಲ್ಲಿ ನಿಖರವಾಗಿ 10 ಶತಕಗಳು ದಾಖಲಾಗಿರುವುದು ಗಮನಾರ್ಹ. ಭಾರತ ತಂಡದ ಪರವಾಗಿ ಶುಭ್ಮನ್ ಗಿಲ್ 2 ಶತಕಗಳನ್ನು ಬಾರಿಸಿದರೆ, ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಮತ್ತು ಕೆಎಲ್ ರಾಹುಲ್ ತಲಾ ಒಂದು ಶತಕಗಳನ್ನು ಸಿಡಿಸಿದರು. ಮತ್ತೊಂದೆಡೆ, ವೆಸ್ಟ್ ಇಂಡೀಸ್ ತಂಡದ ಪರವಾಗಿ ನಾಯಕ ಶಾಯ್ ಹೋಪ್ 2 ಶತಕಗಳನ್ನು ಗಳಿಸಿದರೆ, ಜಾನ್ ಕ್ಯಾಂಪ್‌ಬೆಲ್, ಅಮೀರ್ ಜಂಗು ಮತ್ತು ಜಸ್ಟಿನ್ ಗ್ರೀವ್ಸ್ ಕೂಡ ಶತಕಗಳನ್ನು ಕಲೆಹಾಕಿದರು. ಕಳೆದ ಹತ್ತು ವರ್ಷಗಳಲ್ಲಿ ಒಂದೇ ಏಕದಿನ ಸರಣಿಯಲ್ಲಿ 10 ಶತಕಗಳು ದಾಖಲಾಗಿರುವುದು ಇದೇ ಮೊದಲು ಎಂಬುದು ಗಮನಾರ್ಹ.
ದ್ವಿಪಕ್ಷೀಯ ಏಕದಿನ ಸರಣಿಯಲ್ಲಿ ಅತಿ ಹೆಚ್ಚು ಶತಕಗಳು ದಾಖಲಾದ ದಾಖಲೆ ಪ್ರಸ್ತುತ 2016 ರ ಭಾರತ-ಆಸ್ಟ್ರೇಲಿಯಾ ಸರಣಿ ಹೊಂದಿದೆ. ಆ 5 ಪಂದ್ಯಗಳ ಸರಣಿಯಲ್ಲಿ ಒಟ್ಟು 11 ಶತಕಗಳು ದಾಖಲಾಗಿದ್ದವು. ಈಗ, ವೆಸ್ಟ್ ಇಂಡೀಸ್ ಮತ್ತು ಭಾರತದ ನಡುವಿನ 3 ಪಂದ್ಯಗಳ ಸರಣಿಯಲ್ಲಿ 10 ಶತಕಗಳು ದಾಖಲಾಗಿದ್ದು ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ಉಳಿದಂತೆ 2013 ರ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಸರಣಿಯಲ್ಲಿ 9 ಶತಕಗಳು ದಾಖಲಾಗಿದ್ದವು.
ಏಕದಿನ ವೃತ್ತಿಜೀವನದ 9ನೇ ಶತಕ ಬಾರಿಸಿದ ಕನ್ನಡಿಗ ಕೆಎಲ್ ರಾಹುಲ್..!
ಶನಿವಾರ ನಡೆದ 3ನೇ ಮತ್ತು ಅಂತಿಮ ಏಕದಿನ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ನಾಯಕ ಶಾಯ್ ಹೋಪ್ ಅಜೇಯ 162 ರನ್ ಗಳಿಸಿ ತಂಡವನ್ನು 5 ವಿಕೆಟ್‌ಗಳ ಜಯಕ್ಕೆ ಕೊಂಡೊಯ್ದರು. ಹೋಪ್ ಶತಕದ ನೆರವಿನಿಂದ ಕೆರಿಬಿಯನ್ ತಂಡವು ಭಾರತ ನೀಡಿ 351 ರನ್‌ಗಳ ಬೃಹತ್ ಗುರಿಯನ್ನು ಯಶಸ್ವಿಯಾಗಿ ಬೆನ್ನಟ್ಟಿತು. ಈ ಮೂಲಕ ವಿಂಡೀಸ್ ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ಅತಿದೊಡ್ಡ ಗುರಿ ಬೆನ್ನಟ್ಟಿ ಗೆದ್ದ ದಾಖಲೆ ಬರೆಯಿತು.
Published On - 5:05 pm, Sun, 4 October 26