ಭಾರತ- ವೆಸ್ಟ್ ಇಂಡೀಸ್ ನಡುವೆ 8 ಪಂದ್ಯಗಳು; ಇಲ್ಲಿದೆ ಸಂಪೂರ್ಣ ವೇಳಾಪಟ್ಟಿ

ಭಾರತ ಮತ್ತು ವೆಸ್ಟ್ ಇಂಡೀಸ್ 21 ದಿನಗಳ ವೈಟ್ ಬಾಲ್ ಸರಣಿ ಆಡಲಿವೆ. ಸೆಪ್ಟೆಂಬರ್ 27, 2026 ರಿಂದ ಅಕ್ಟೋಬರ್ 17 ರವರೆಗೆ 3 ಏಕದಿನ ಮತ್ತು 5 ಟಿ20 ಪಂದ್ಯಗಳು ನಡೆಯಲಿವೆ. ಶುಭ್​ಮನ್ ಗಿಲ್ ಏಕದಿನ ಹಾಗೂ ಶ್ರೇಯಸ್ ಅಯ್ಯರ್ ಟಿ20 ಸರಣಿಗೆ ಭಾರತದ ನಾಯಕರಾಗಿದ್ದಾರೆ. ಶಾಯ್ ಹೋಪ್ ವೆಸ್ಟ್ ಇಂಡೀಸ್ ಅನ್ನು ಮುನ್ನಡೆಸಲಿದ್ದಾರೆ. ಸರಣಿಯ ಸಂಪೂರ್ಣ ವೇಳಾಪಟ್ಟಿ ಮತ್ತು ತಂಡಗಳ ವಿವರಗಳು ಇಲ್ಲಿವೆ.

ಭಾರತ- ವೆಸ್ಟ್ ಇಂಡೀಸ್ ನಡುವೆ 8 ಪಂದ್ಯಗಳು; ಇಲ್ಲಿದೆ ಸಂಪೂರ್ಣ ವೇಳಾಪಟ್ಟಿ
ಭಾರತ Vs ವೆಸ್ಟ್ ಇಂಡೀಸ್

Updated on: Sep 26, 2026 | 8:47 PM

ಎರಡು ವೈಟ್ ಬಾಲ್ ಸರಣಿಗಾಗಿ ವೆಸ್ಟ್ ಇಂಡೀಸ್ ಕ್ರಿಕೆಟ್ ತಂಡವು ಭಾರತಕ್ಕೆ ಆಗಮಿಸಿದೆ. ಈ ಪ್ರವಾಸದಲ್ಲಿ ಉಭಯ ತಂಡಗಳ ನಡುವೆ 3 ಏಕದಿನ ಪಂದ್ಯಗಳು ಮತ್ತು 5 ಟಿ20 ಪಂದ್ಯಗಳು ನಡೆಯಲಿವೆ. ಅಂದರೆ 21 ದಿನಗಳಲ್ಲಿ ಎರಡು ತಂಡಗಳ ನಡುವೆ ಒಟ್ಟು 8 ಪಂದ್ಯಗಳು ನಡೆಯಲಿವೆ. ಮೊದಲಿಗೆ ನಡೆಯಲಿರುವ ಏಕದಿನ ಸರಣಿಗೆ ಉಭಯ ಕ್ರಿಕೆಟ್ ಮಂಡಳಿಗಳು ತಲಾ 15 ಸದಸ್ಯರ ತಂಡಗಳನ್ನು ಘೋಷಿಸಿವೆ. ಒಂದೆಡೆ ಶುಭ್​ಮನ್ ಗಿಲ್ ಏಕದಿನ ಸರಣಿಯಲ್ಲಿ ತಂಡವನ್ನು ಮುನ್ನಡೆಸಿದರೆ, ಶ್ರೇಯಸ್ ಅಯ್ಯರ್ ಟಿ20 ಸರಣಿಯಲ್ಲಿ ತಂಡದ ನಾಯಕತ್ವವಹಿಸಿಕೊಳ್ಳಲಿದ್ದಾರೆ. ಇತ್ತ ಶೈ ಹೋಪ್ ವೆಸ್ಟ್ ಇಂಡೀಸ್ ತಂಡದ ನಾಯಕತ್ವವನ್ನು ವಹಿಸಿಕೊಂಡಿದ್ದು, ಎರಡೂ ಸರಣಿಗಳಲ್ಲೂ ಅವರೇ ತಂಡವನ್ನು ಮುನ್ನಡೆಸಲಿದ್ದಾರೆ.

ವೆಸ್ಟ್ ಇಂಡೀಸ್ ಭಾರತ ಪ್ರವಾಸವು ಸೆಪ್ಟೆಂಬರ್ 27, 2026 ರಿಂದ ಮೊದಲ ಏಕದಿನ ಪಂದ್ಯದೊಂದಿಗೆ ಪ್ರಾರಂಭವಾಗಲಿದೆ. ಇದರ ನಂತರ ಸೆಪ್ಟೆಂಬರ್ 30, 2026 ರಂದು ಎರಡನೇ ಏಕದಿನ ಮತ್ತು ಅಕ್ಟೋಬರ್ 3, 2026 ರಂದು ಮೂರನೇ ಮತ್ತು ಅಂತಿಮ ಏಕದಿನ ಪಂದ್ಯ ನಡೆಯಲಿದೆ. ಇದರ ನಂತರ ಅಕ್ಟೋಬರ್ 6 ರಿಂದ 17 ರವರೆಗೆ 5 ಪಂದ್ಯಗಳ ಟಿ20 ಸರಣಿ ನಡೆಯಲಿದೆ.

ಏಕದಿನ ಸರಣಿಯ ಸಂಪೂರ್ಣ ವೇಳಾಪಟ್ಟಿ

  • ಸೆಪ್ಟೆಂಬರ್ 27: ಮೊದಲನೇ ಏಕದಿನ ಪಂದ್ಯ, ಗ್ರೀನ್‌ಫೀಲ್ಡ್ ಅಂತರರಾಷ್ಟ್ರೀಯ ಕ್ರೀಡಾಂಗಣ, ತಿರುವನಂತಪುರಂ, (ಮಧ್ಯಾಹ್ನ 2 ಗಂಟೆಗೆ)
  • ಸೆಪ್ಟೆಂಬರ್ 30: ಎರಡನೇ ಏಕದಿನ ಪಂದ್ಯ, ಬರ್ಸಾಪರಾ ಕ್ರಿಕೆಟ್ ಕ್ರೀಡಾಂಗಣ, ಗುವಾಹಟಿ, (ಮಧ್ಯಾಹ್ನ 2 ಗಂಟೆಗೆ)
  • ಅಕ್ಟೋಬರ್ 3: ಮೂರನೇ ಏಕದಿನ ಪಂದ್ಯ, ಮಹಾರಾಜ ಯಾದವೀಂದ್ರ ಸಿಂಗ್ ಕ್ರೀಡಾಂಗಣ, ಹೊಸ ಚಂಡೀಗಢ, (ಮಧ್ಯಾಹ್ನ 2 ಗಂಟೆಗೆ)

ಉಭಯ ತಂಡಗಳು

ಭಾರತ ಏಕದಿನ ತಂಡ: ಶುಭ್​ಮನ್ ಗಿಲ್ (ನಾಯಕ), ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ರುತುರಾಜ್ ಗಾಯಕ್ವಾಡ್, ಕೆಎಲ್ ರಾಹುಲ್ (ವಿಕೆಟ್ ಕೀಪರ್), ಧ್ರುವ್ ಜುರೆಲ್ (ವಿಕೆಟ್ ಕೀಪರ್), ನಿತೀಶ್ ಕುಮಾರ್ ರೆಡ್ಡಿ, ರವೀಂದ್ರ ಜಡೇಜಾ, ಕುಲದೀಪ್ ಯಾದವ್, ಪ್ರಸಿದ್ಧ್ ಕೃಷ್ಣ, ಗುರ್ನೂರ್ ಬ್ರಾರ್, ಮೊಹಮ್ಮದ್ ಸಿರಾಜ್, ಔಕಿಬ್ ನಬಿ, ಯಶಸ್ವಿ ಜೈಸ್ವಾಲ್ ಮತ್ತು ನಮನ್ ಧೀರ್.

ವೆಸ್ಟ್ ಇಂಡೀಸ್ ಏಕದಿನ ತಂಡ: ಶಾಯ್ ಹೋಪ್ (ನಾಯಕ, ವಿಕೆಟ್ ಕೀಪರ್), ಜ್ಯುವೆಲ್ ಆಂಡ್ರ್ಯೂ, ಜಾನ್ ಕ್ಯಾಂಪ್‌ಬೆಲ್, ಕೀಸಿ ಕಾರ್ಟಿ, ರೋಸ್ಟನ್ ಚೇಸ್, ಮ್ಯಾಥ್ಯೂ ಫೋರ್ಡ್, ಜಸ್ಟಿನ್ ಗ್ರೀವ್ಸ್, ಅಮೀರ್ ಜಂಗೂ (ವಿಕೆಟ್ ಕೀಪರ್), ಅಲ್ಜಾರಿ ಜೋಸೆಫ್, ಶಮರ್ ಜೋಸೆಫ್, ವಿಟೆಲ್ ಲಾವ್ಸ್, ಗುಡಾಕೇಶ್ ಮೋಟಿ, ಕೀಮೋ ಪಾಲ್, ಶೆರ್ಫೇನ್ ರುದರ್‌ಫೋರ್ಡ್ ಮತ್ತು ಜೇಡನ್ ಸೀಲ್ಸ್.

ಟಿ20 ಸರಣಿಯ ಸಂಪೂರ್ಣ ವೇಳಾಪಟ್ಟಿ

  • ಅಕ್ಟೋಬರ್ 6: ಮೊದಲ ಟಿ20, ಏಕಾನಾ ಕ್ರೀಡಾಂಗಣ, ಲಕ್ನೋ, ಸಂಜೆ 7 ಗಂಟೆ
  • ಅಕ್ಟೋಬರ್ 9: ಎರಡನೇ ಟಿ20 ಪಂದ್ಯ, ಜೆಎಸ್‌ಸಿಎ ಕ್ರೀಡಾಂಗಣ, ರಾಂಚಿ, ಸಂಜೆ 7 ಗಂಟೆ
  • ಅಕ್ಟೋಬರ್ 11: ಮೂರನೇ ಟಿ20, ಹೋಳ್ಕರ್ ಕ್ರೀಡಾಂಗಣ, ಇಂದೋರ್, ಸಂಜೆ 7 ಗಂಟೆ
  • ಅಕ್ಟೋಬರ್ 14: ನಾಲ್ಕನೇ ಟಿ20, ರಾಜೀವ್ ಗಾಂಧಿ ಕ್ರೀಡಾಂಗಣ, ಹೈದರಾಬಾದ್, ಸಂಜೆ 7 ಗಂಟೆ
  • ಅಕ್ಟೋಬರ್ 17: ಐದನೇ ಟಿ20, M. ಚಿನ್ನಸ್ವಾಮಿ ಸ್ಟೇಡಿಯಂ, ಬೆಂಗಳೂರು, ಸಂಜೆ 7 ಗಂಟೆ

ಭಾರತ ಟಿ20 ತಂಡ: ಶ್ರೇಯಸ್ ಅಯ್ಯರ್ (ನಾಯಕ), ರವಿ ಬಿಷ್ಣೋಯ್, ಶಿವಂ ದುಬೆ, ಇಶಾನ್ ಕಿಶನ್, ನಿತೀಶ್ ಕುಮಾರ್ ರೆಡ್ಡಿ, ಅಕ್ಸರ್ ಪಟೇಲ್, ಸಂಜು ಸ್ಯಾಮ್ಸನ್, ಅಭಿಷೇಕ್ ಶರ್ಮಾ, ಅರ್ಷದೀಪ್ ಸಿಂಗ್, ವೈಭವ್ ಸೂರ್ಯವಂಶಿ, ವಾಷಿಂಗ್ಟನ್ ಸುಂದರ್, ತಿಲಕ್ ವರ್ಮಾ, ಮಯಾಂಕ್ ಯಾದವ್, ಪ್ರಿನ್ಸ್ ಯಾದವ್, ಕುಲ್ದೀಪ್ ಯಾದವ್.

ವೆಸ್ಟ್ ಇಂಡೀಸ್ ಟಿ20 ತಂಡ: ಶಾಯ್ ಹೋಪ್ (ನಾಯಕ), ಜ್ಯುವೆಲ್ ಆಂಡ್ರ್ಯೂ, ರೋಸ್ಟನ್ ಚೇಸ್, ಮ್ಯಾಥ್ಯೂ ಫೋರ್ಡ್, ಶಿಮ್ರಾನ್ ಹೆಟ್ಮೆಯರ್, ಅಕೇಲ್ ಹೊಸೈನ್, ಶಮರ್ ಜೋಸೆಫ್, ಗುಡಕೇಶ್ ಮೋತಿ, ಕೀಮೋ ಪಾಲ್, ಕಾಮಿಲ್ ಪೂರನ್, ರೋವ್‌ಮನ್ ಪೊವೆಲ್, ಶೆರ್ಫೇನ್ ರುದರ್‌ಫೋರ್ಡ್, ಕ್ವೆಂಟಿನ್ ಸ್ಯಾಂಪ್ಸನ್, ರೊಮಾರಿಯೋ ಶೆಫರ್ಡ್, ಶಮರ್ ಸ್ಪ್ರಿಂಗರ್.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಪೃಥ್ವಿಶಂಕರ

ಹುಟ್ಟೂರು ಹಾಸನದ ಕೊಣನೂರು ಸಮೀಪದ ಲಕ್ಷ್ಮೀಪುರ, ಕಳೆದ 8 ವರ್ಷಗಳಿಂದ ಪತ್ರಿಕಾರಂಗದಲ್ಲಿ ನೆಲೆ. ಟಿವಿ9 ಕನ್ನಡದಲ್ಲೇ ವೃತ್ತಿ ಜೀವನ ಆರಂಭಿಸಿದ ನಾನು, ಮೊದಲ 3 ವರ್ಷ ವಿಡಿಯೋ ಎಡಿಟರ್ ಆಗಿ ಕೆಲಸ ಮಾಡಿದ ಬಳಿಕ ನನ್ನ ಆಸಕ್ತಿಯ ವಿಷಯವಾದ ಕ್ರೀಡೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ನನ್ನ ವೃತ್ತಿ ಬದುಕಿನ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದೇನೆ.

Read More
Loading...
Unable to load recommendations.
Follow Us