ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಭಾರತ ಹಾಗೂ ದಕ್ಷಿಣ ಆಫ್ರಿಕಾ ವನಿತಾ (India Women vs South Africa Women) ತಂಡಗಳ ನಡುವಿನ ಮೂರು ಪಂದ್ಯಗಳ ಏಕದಿನ ಸರಣಿಯ ಎರಡನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ನಾಯಕಿ ಹರ್ಮನ್ಪ್ರೀತ್ ಕೌರ್ (Harmanpreet Kaur) ತಮ್ಮ ಏಕದಿನ ವೃತ್ತಿಜೀವನದ ಆರನೇ ಶತಕ ಸಿಡಿಸಿ ಮಿಂಚಿದ್ದಾರೆ. ತಮ್ಮ ಇನ್ನಿಂಗ್ಸ್ನಲ್ಲಿ 88 ಎಸೆತಗಳನ್ನು ಎದುರಿಸಿದ ಹರ್ಮನ್ಪ್ರೀತ್ 9 ಬೌಂಡರಿ ಹಾಗೂ 3 ಸಿಕ್ಸರ್ ಸಹಿತ ಅಜೇಯ 103 ರನ್ ಬಾರಿಸಿದರು. ಈ ಶತಕದ ಇನ್ನಿಂಗ್ಸ್ ಜೊತೆಗೆ ಏಕದಿನದಲ್ಲಿ 3500 ರನ್ ಪೂರೈಸಿದ ದಾಖಲೆಯನ್ನು ನಿರ್ಮಿಸಿದರು. ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ ನಾಯಕಿ ಹರ್ಮನ್ಪ್ರೀತ್ ಕೌರ್ ಹಾಗೂ ಆರಂಭಿಕ ಆಟಗಾರ್ತಿ ಸ್ಮೃತಿ ಮಂಧಾನ (Smriti Mandhana) ಅವರ ಶತಕದ ನೆರವಿನಿಂದ ನಿಗದಿತ 50 ಓವರ್‌ಗಳಲ್ಲಿ 3 ವಿಕೆಟ್ ಕಳೆದುಕೊಂಡು ದಾಖಲೆಯ 325 ರನ್ ಕಲೆಹಾಕಿದೆ.
24ನೇ ಓವರ್‌ನಲ್ಲಿ ಕ್ರೀಸ್‌ಗೆ ಬಂದ ಹರ್ಮನ್ಪ್ರೀತ್ ಕೇವಲ 87 ಎಸೆತಗಳಲ್ಲಿ ಶತಕ ಗಳಿಸುವಲ್ಲಿ ಯಶಸ್ವಿಯಾದರು. ಇನ್ನಿಂಗ್ಸ್ನ ಕೊನೆಯ ಓವರ್‌ನಲ್ಲಿ ತಮ್ಮ ಆರನೇ ಏಕದಿನ ಶತಕವನ್ನು ಪೂರ್ಣಗೊಳಿಸಿದರು. 49.2 ಓವರ್‌ಗಳಲ್ಲಿ ಹರ್ಮನ್‌ಪ್ರೀತ್ ಸ್ಕೋರ್ 85 ಎಸೆತಗಳಲ್ಲಿ 88 ರನ್ ಆಗಿತ್ತು. ಇದಾದ ಬಳಿಕ ಒಂದು ಸಿಕ್ಸರ್ ಹಾಗೂ ಎರಡು ಬೌಂಡರಿಗಳನ್ನು ಬಾರಿಸುವ ಮೂಲಕ ಶತಕ ಪೂರೈಸಿದರು. ಆದರೆ, 88 ರನ್‌ಗಳ ಸ್ಕೋರ್‌ನಲ್ಲಿ ಹರ್ಮನ್ಪ್ರೀತ್ಗೆ ಒಂದು ಜೀವದಾನ ಕೂಡ ಸಿಕ್ಕಿತು. ಈ ಓವರ್‌ನಲ್ಲಿ ಸಿಕ್ಸರ್ ಸಿಡಿಸುವ ಯತ್ನದಲ್ಲಿ ಹರ್ಮನ್ಪ್ರೀತ್ ಕ್ರೀಸ್ನಿಂದ ತುಂಬ ಮುಂದೆ ಬಂದಿದ್ದರು. ಆದರೆ ಚೆಂಡನ್ನು ದಂಡಿಸಲು ಅವರಿಗೆ ಆಗಲಿಲ್ಲ. ಚೆಂಡು ವಿಕೆಟ್ ಕೀಪರ್ ಕಡೆಗೆ ಹೋಯಿತು. ಆದರೆ ದಕ್ಷಿಣ ಆಫ್ರಿಕಾದ ವಿಕೆಟ್‌ಕೀಪರ್, ಹರ್ಮನ್ಪ್ರೀತ್ ಅವರನ್ನು ಸ್ಟಂಪ್ ಮಾಡುವ ಅವಕಾಶವನ್ನು ಕಳೆದುಕೊಂಡರು.
Breaking: ದಕ್ಷಿಣ ಆಫ್ರಿಕಾ ವಿರುದ್ಧ ಸತತ ಎರಡನೇ ಶತಕ ಸಿಡಿಸಿದ ಸ್ಮೃತಿ ಮಂಧಾನ..!
ಕ್ರೀಸ್‌ಗೆ ಬಂದ ತಕ್ಷಣ ಸ್ಫೋಟಕ ಆಟಕ್ಕೆ ಮುಂದಾದ ಹರ್ಮನ್‌ಪ್ರೀತ್ ಕೌರ್, ಮಂಧಾನ ಜತೆಗೂಡಿ ಕೇವಲ 46 ಎಸೆತಗಳಲ್ಲಿ 50 ರನ್ ಸೇರಿಸಿದರು. ಇದರ ನಂತರ, ಇಬ್ಬರೂ 90 ಎಸೆತಗಳಲ್ಲಿ ಶತಕದ ಜೊತೆಯಾಟವನ್ನು ಮಾಡಿದರು. ಈ ವೇಳೆ ಹರ್ಮನ್ಪ್ರೀತ್ ಕೇವಲ 58 ಎಸೆತಗಳಲ್ಲಿ ತಮ್ಮ ಅರ್ಧಶತಕವನ್ನು ಪೂರೈಸಿದರು. ಅರ್ಧಶತಕ ಪೂರೈಸಿದ ನಂತರ ದೊಡ್ಡ ಹೊಡೆತಗಳನ್ನು ಆಡಲಾರಂಭಿಸಿದ ಅವರು ಮುಂದಿನ 29 ಎಸೆತಗಳಲ್ಲಿ ತಮ್ಮ ಶತಕವನ್ನು ಪೂರ್ಣಗೊಳಿಸಿದರು.
𝙅𝙪𝙨𝙩 𝙃𝙖𝙧𝙢𝙖𝙣 𝙏𝙝𝙞𝙣𝙜𝙨! 😎 💯
That was terrific from #TeamIndia captain! 💪 👏
What’s your one emoji to describe that knock 🤔
Follow The Match ▶️ https://t.co/j8UQuA5BhS#TeamIndia | #INDvSA | @ImHarmanpreet | @IDFCFIRSTBank pic.twitter.com/T6vJNkcLwz
— BCCI Women (@BCCIWomen) June 19, 2024
ಈ ಪಂದ್ಯದಲ್ಲಿ ಹರ್ಮನ್‌ಪ್ರೀತ್ ಕೌರ್ ಹೊರತುಪಡಿಸಿ ಸ್ಮೃತಿ ಮಂಧಾನ ಕೂಡ ಸ್ಫೋಟಕ ಶತಕ ಸಿಡಿಸಿದರು. ಅಂತಿಮವಾಗಿ ಸ್ಮೃತಿ 120 ಎಸೆತಗಳಲ್ಲಿ 18 ಬೌಂಡರಿ ಹಾಗೂ 2 ಸಿಕ್ಸರ್ ನೆರವಿನಿಂದ 136 ರನ್‌ಗಳ ಇನ್ನಿಂಗ್ಸ್ ಆಡಿದರು. ಅಲ್ಲದೆ ಈ ಇಬ್ಬರೂ 136 ಎಸೆತಗಳಲ್ಲಿ 171 ರನ್‌ಗಳ ಜೊತೆಯಾಟವನ್ನು ಮಾಡುವ ಮೂಲಕ ದಕ್ಷಿಣ ಆಫ್ರಿಕಾವನ್ನು ಸಂಪೂರ್ಣವಾಗಿ ಹಿಮ್ಮೆಟ್ಟಿಸಿದರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:00 pm, Wed, 19 June 24