IPL 2022: ಐಪಿಎಲ್ ಪ್ಲೇ ಆಫ್ ಪಂದ್ಯಗಳು ಯಾವಾಗ?, ಎಷ್ಟು ಗಂಟೆಗೆ ಆರಂಭ?: ಇಲ್ಲಿದೆ ಎಲ್ಲ ಮಾಹಿತಿ

IPL 2022 Playoffs Schedule: ಮೊದಲ ಕ್ವಾಲಿಫೈಯರ್​​​ ಮೇ 24 ರಂದು ನಡೆಯಲಿದೆ. ಮೊದಲ ಸ್ಥಾನದಲ್ಲಿರುವ​​ ಗುಜರಾತ್​​ ಟೈಟಾನ್ಸ್​​ ಮತ್ತು 2ನೇ ಸ್ಥಾನ ಪಡೆದ ರಾಜಸ್ಥಾನ್ ರಾಯಲ್ಸ್​ ನಡುವೆ ನಡೆಯಲಿದೆ. ಕೊಲ್ಕತ್ತಾದ ಈಡನ್​​ ಗಾರ್ಡನ್ಸ್​​ ನಲ್ಲಿ ಈ ಮ್ಯಾಚ್​​ ನಡೆಯಲಿದೆ.

IPL 2022: ಐಪಿಎಲ್ ಪ್ಲೇ ಆಫ್ ಪಂದ್ಯಗಳು ಯಾವಾಗ?, ಎಷ್ಟು ಗಂಟೆಗೆ ಆರಂಭ?: ಇಲ್ಲಿದೆ ಎಲ್ಲ ಮಾಹಿತಿ
IPL 2022 Playoffs
Updated By: Vinay Bhat

Updated on: May 23, 2022 | 12:28 PM

ಇಂಡಿಯನ್ ಪ್ರೀಮಿಯರ್ ಲೀಗ್​ 2022 ರಲ್ಲಿ (IPL 2022) 57 ದಿನಗಳ 69 ಪಂದ್ಯಗಳ ಬಳಿಕ ನಾಲ್ಕು ತಂಡಗಳು ಪ್ಲೇ ಆಫ್​ಗೆ ಪ್ರವೇಶ ಪಡೆದಿದೆ. ಗುಜರಾತ್ ಟೈಟಾನ್ಸ್ (Gujarat Titans) ಮೊದಲ ತಂಡವಾಗಿ ಪ್ಲೇ ಆಫ್​ಗೆ ಲಗ್ಗೆಯಿಟ್ಟಿತು. ಹಾರ್ದಿಕ್ ಪಾಂಡ್ಯ ನೇತೃತ್ವದ ಜಿಟಿ ಮೊದಲ ಸ್ಥಾನದಲ್ಲಿದ್ದು ಕ್ವಾಲಿಫೈ ಆದ ಮೊದಲ ತಂಡವಾಗಿದೆ. ಆಡಿದ ಎಲ್ಲ 14 ಪಂದ್ಯಗಳ ಪೈಕಿ ಕೇವಲ ನಾಲ್ಕರಲ್ಲಿ ಸೋಲು, ಹತ್ತರಲ್ಲಿ ಗೆಲುವು ಕಂಡು 20 ಅಂಕದೊಂದಿಗೆ ಪ್ಲೇ ಆಫ್ ಪ್ರವೇಶಿಸಿದೆ. ಸಂಜು ಸ್ಯಾಮ್ಸನ್ (Sanju Samson) ನೇತೃತ್ವದ ರಾಜಸ್ಥಾನ್ ರಾಯಲ್ಸ್ ತಂಡ ಆಡಿದ 14 ಪಂದ್ಯಗಳ ಪೈಕಿ ಒಂಬತ್ತರಲ್ಲಿ ಗೆಲುವು 5ರಲ್ಲಿ ಸೋಲುಂಡು ಒಟ್ಟು 18 ಅಂಕ ಸಂಪಾದಿಸಿದೆ.  ಮತ್ತೊಂದು ಹೊಸ ತಂಡವಾದ ಲಖನೌ ಆಡಿದ 14 ಪಂದ್ಯಗಳ ಪೈಕಿ ಒಂಬತ್ತರಲ್ಲಿ ಗೆದ್ದು ಐದು ಪಂದ್ಯಗಳಲ್ಲಿ ಸೋತು ಒಟ್ಟು 18 ಪಾಯಿಂಟ್ ಪಟೆದುಕೊಂಡಿದೆ.

ಫಾಫ್ ಡುಪ್ಲೆಸಿಸ್ ನಾಯಕತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ನಾಲ್ಕನೇ ಸ್ಥಾನಕ್ಕೇರಿದೆ. ಆಡಿದ 14 ಪಂದ್ಯಗಳಲ್ಲಿ ಆರರಲ್ಲಿ ಸೋಲು ಎಂಟರಲ್ಲಿ ಗೆಲುವು ಕಂಡಿದೆ. 16 ಅಂಕದೊಂದಿಗೆ ಆರ್​ಸಿಬಿ ನಿವ್ವಳ ರನ್ ರೇಟ್ -0.253 ಆಗಿದೆ. ಒಂದು ವೇಳೆ ಶನಿವಾರದ ಪಂದ್ಯದಲ್ಲಿ ದೆಹಲಿ ಗೆಲುವು ಸಾಧಿಸಿದ್ದರೆ ರನ್‍ರೇಟ್ ಆಧಾರದಲ್ಲಿ ಆರ್​ಸಿಬಿಯನ್ನು ಹಿಂದಿಕ್ಕಿ 4ನೇ ತಂಡವಾಗಿ ಪ್ಲೇ ಆಫ್ ಪ್ರವೇಶಿಸುತ್ತಿತ್ತು. ಆದರೆ ವಿಜಯಲಕ್ಷ್ಮಿ ರಿಷಭ್ ಪಂತ್ ಪಡೆಗೆ ಒಲಿಯಲಿಲ್ಲ. ಮುಂಬೈ ವಿರುದ್ಧ ಹೀನಾಯ ಸೋಲು ಕಾಣುವ ಮೂಲಕ ದೆಹಲಿ ತಂಡದ ನಿರಾಸೆ ಅನುಭವಿಸಿತು. ಇದರ ಲಾಭವನ್ನು ಆರ್​ಸಿಬಿ ತಂಡವು ಪಡೆದುಕೊಂಡಿತು.

ಮಂಗಳವಾರದಿಂದ ಪ್ಲೇ ಆಫ್ ಪಂದ್ಯಗಳು ಆರಂಭವಾಗಲಿದೆ. ಹೀಗಾಗಿ ಇಂದು ಎಲ್ಲಾ ತಂಡಗಳಿಗೂ ಇಂದು ಬಿಡುವಿನ ದಿನವಾಗಿದೆ. ನಾಳೆಯಿಂದ ಆರಂಭವಾಗಲಿರುವ ಪ್ಲೇ ಆಫ್ ಹಂತದ ಪಂದ್ಯಗಳು ಮೇ 27 ರವರೆಗೆ ನಡೆಯಲಿದೆ. ಅದಾದ ಬಳಿಕ ಮೇ 29 ರಂದು ಫೈನಲ್ ಪಂದ್ಯ ನಡೆಯಲಿದೆ. ರಾಜಸ್ಥಾನ್, ಗುಜರಾತ್, ಲಖನೌ, ಆರ್ ಸಿಬಿ ಇದೀಗ ಒಂದು ಪ್ರಶಸ್ತಿಗಾಗಿ ಹೋರಾಟ ನಡೆಸಲಿದೆ.

ಇದನ್ನೂ ಓದಿ
IPL 2022 Points Table: ಲೀಗ್ ಪಂದ್ಯಗಳು ಮುಕ್ತಾಯ: ಪಾಯಿಂಟ್ ಟೇಬಲ್, ಆರೆಂಜ್, ಪರ್ಪಲ್ ಕ್ಯಾಪ್ ಯಾರ ಬಳಿ ಇದೆ?
Liam Livingstone: ಐಪಿಎಲ್ 2022 ಬೆಸ್ಟ್ ಕ್ಯಾಚ್ ಇದೇ ಆಗುತ್ತಾ?: ಲಿವಿಂಗ್​ಸ್ಟೋನ್ ಹಿಡಿದ ರೋಚಕ ಕ್ಯಾಚ್ ನೋಡಿ
IND vs SA: ಟಿ20 ಸರಣಿಗೆ ಆಯ್ಕೆಯಾದ ಬೆನ್ನಲ್ಲೇ ದಿನೇಶ್ ಕಾರ್ತಿಕ್ ಮಾಡಿದ ಟ್ವೀಟ್ ಏನು ನೋಡಿ
SRH vs PBKS Highlights, IPL 2022: ಗೆಲುವಿನೊಂದಿಗೆ ಐಪಿಎಲ್ ಪ್ರಯಾಣ ಮುಗಿಸಿದ ಪಂಜಾಬ್

IND vs SA: ಐಪಿಎಲ್​ನಲ್ಲಿ ಮಿಂಚಿ ಭರ್ಜರಿ ಫಾರ್ಮ್​ನಲ್ಲಿದ್ದರೂ ಇವರಿಗಿಲ್ಲ ಅವಕಾಶ

ಮೊದಲ ಕ್ವಾಲಿಫೈಯರ್​​​ ಮೇ 24 ರಂದು ನಡೆಯಲಿದೆ. ಮೊದಲ ಸ್ಥಾನದಲ್ಲಿರುವ​​ ಗುಜರಾತ್​​ ಟೈಟಾನ್ಸ್​​ ಮತ್ತು 2ನೇ ಸ್ಥಾನ ಪಡೆದ ರಾಜಸ್ಥಾನ್ ರಾಯಲ್ಸ್​ ನಡುವೆ ನಡೆಯಲಿದೆ. ಕೊಲ್ಕತ್ತಾದ ಈಡನ್​​ ಗಾರ್ಡನ್ಸ್​​ ನಲ್ಲಿ ಈ ಮ್ಯಾಚ್​​ ನಡೆಯಲಿದೆ. ಈ ಪಂದ್ಯ ಗೆದ್ದವರು ನೇರವಾಗಿ ಫೈನಲ್​​ ಸ್ಥಾನ ಪಡೆಯಲಿದ್ದಾರೆ. ಇಲ್ಲಿ ಸೋತ ತಂಡ ಫೈನಲ್​​ ಸ್ಥಾನಕ್ಕಾಗಿ ಎಲಿಮಿನೇಟರ್​ನಲ್ಲಿ ಆಡಬೇಕಿದೆ. ಎಲಿಮಿನೇಟರ್​​ ಪಂದ್ಯ ಲೀಗ್​​​ನಲ್ಲಿ 3 ಮತ್ತು 4ನೇ ಸ್ಥಾನ ಪಡೆದ ಲಖನೌ ಸೂಪರ್​​ ಜೈಂಟ್ಸ್​​ ಮತ್ತು ರಾಯಲ್​​ ಚಾಲೆಂಜರ್ಸ್​ ಬೆಂಗಳೂರು ತಂಡದ ನಡುವೆ ನಡೆಯಲಿದೆ. ಇದು ನಾಕೌಟ್​​ ಮ್ಯಾಚ್​. ಈ ಪಂದ್ಯ ಗೆದ್ದವರು ಕ್ವಾಲಿಫೈಯರ್​​ 2ರಲ್ಲಿ ಆಡಿ ಫೈನಲ್​​ ಸ್ಥಾನ ಗಟ್ಟಿ ಮಾಡಿಕೊಳ್ಳಬೇಕು. ಸೋತ ತಂಡ ಮನೆಗೆ. ಈ ಪಂದ್ಯವೂ ಕೊಲ್ಕತ್ತಾದಲ್ಲಿ ನಡೆಯಲಿದೆ.

ಕ್ವಾಲಿಫೈಯರ್​​ 2 ಫೈನಲ್​ ಸ್ಥಾನ ಪಡೆಯಲು ಇರುವ ಅಂತಿಮ ಪಂದ್ಯ. ಇಲ್ಲಿ ಕ್ವಾಲಿಫೈಯರ್​​ 1 ರಲ್ಲಿ ಸೋತ ತಂಡ ಹಾಗೂ ಎಲಿಮಿನೇಟರ್​​ನಲ್ಲಿ ಗೆದ್ದ ತಂಡ ಮುಖಾಮುಖಿಯಾಗಲಿದೆ. ಅಹ್ಮದಾಬಾದ್​​ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಪಂದ್ಯ ನಡೆಯಲಿದೆ. ಐಪಿಎಲ್​​ನ ಅಂತಿಮ ಪಂದ್ಯ ಫೈನಲ್​​ ಮೇ 29 ರಂದು ನಡೆಯಲಿದೆ. ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಕ್ವಾಲಿಫೈಯರ್​​ 1 ಮತ್ತು ಕ್ವಾಲಿಫೈಯರ್​ 2 ರ ವಿನ್ನರ್​ ಗಳ ನಡುವೆ ನಡೆಯಲಿದೆ.

ಈ ಬಾರಿ ಬಿಸಿಸಿಐ ಫೈನಲ್ ಪಂದ್ಯದ ಸಮಯವನ್ನು ಬದಲಾವಣೆ ಮಾಡಿದೆ. ಕ್ವಾಲಿಫೈಯರ್ ಮತ್ತು ಎಲಿಮಿನೇಟರ್ ಪಂದ್ಯಗಳು ರಾತ್ರಿ 7:30ಕ್ಕೆ (ಭಾರತೀಯ ಕಾಲಮಾನ) ಪ್ರಾರಂಭವಾಗುತ್ತದೆ. ಆದರೆ ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಮೇ 29ರಂದು ನಡೆಯಲಿರುವ ಫೈನಲ್ ಪಂದ್ಯ ರಾತ್ರಿ 8:00 ಗಂಟೆಗೆ (ಭಾರತೀಯ ಕಾಲಮಾನ) ಏರ್ಪಡಿಸಲಾಗಿದೆ.

ಹೆಚ್ಚಿನ IPL 2022 ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 12:28 pm, Mon, 23 May 22