IPL 2022: ಐಪಿಎಲ್ ಸೀಸನ್ 15 ನ ಮೊದಲಾರ್ಧದಲ್ಲಿ ಭರ್ಜರಿ ಪ್ರದರ್ಶನ ನೀಡಿದ್ದ ಆರ್ಸಿಬಿ (RCB) ತಂಡ ದ್ವಿತಿಯಾರ್ಧದಲ್ಲಿ 5 ಪಂದ್ಯಗಳಲ್ಲಿ 2 ಗೆಲುವು ದಾಖಲಿಸಿದೆ. ಇದರೊಂದಿಗೆ ಆರ್ಸಿಬಿ ತಂಡವು 12 ಪಂದ್ಯಗಳಲ್ಲಿ 7 ಜಯ ಸಾಧಿಸಿ 14 ಪಾಯಿಂಟ್ಸ್ ಕಲೆಹಾಕಿದೆ. ಇನ್ನು ಆರ್ಸಿಬಿ ತಂಡಕ್ಕೆ ಎರಡು ಪಂದ್ಯಗಳು ಮಾತ್ರ ಉಳಿದಿದ್ದು, ಈ 2 ಮ್ಯಾಚ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪಾಲಿಗೆ ನಿರ್ಣಾಯಕ.
ಏಕೆಂದರೆ ಆರ್ಸಿಬಿ ತಂಡವು ಮುಂದಿನ 2 ಪಂದ್ಯಗಳಲ್ಲಿ ಗೆದ್ದರೆ ಮಾತ್ರ ಪ್ಲೇಆಫ್ ಕನ್ಫರ್ಮ್ ಮಾಡಿಕೊಳ್ಳಬಹುದು. ಅಂದರೆ ಒಟ್ಟು 18 ಪಾಯಿಂಟ್ಗಳಿಸಿ ಪ್ಲೇಆಫ್ ಪ್ರವೇಶಿಸಬಹುದು. ಇನ್ನು ಒಂದರಲ್ಲಿ ಮಾತ್ರ ಗೆದ್ದರೆ ಒಟ್ಟು 16 ಪಾಯಿಂಟ್ ಆಗಲಿದೆ. ಆದರೆ ಈಗಾಗಲೇ ಗುಜರಾತ್ ಟೈಟನ್ಸ್ 16 ಪಾಯಿಂಟ್ಸ್ ಪಡೆದಿದೆ. ಹಾಗೆಯೇ ಲಕ್ನೋ ಸೂಪರ್ ಜೈಂಟ್ಸ್ 16 ಪಾಯಿಂಟ್ಸ್ನೊಂದಿಗೆ ಅಗ್ರಸ್ಥಾನದಲ್ಲಿದೆ. ಮತ್ತೊಂದೆಡೆ ರಾಜಸ್ಥಾನ್ ರಾಯಲ್ಸ್ 14 ಪಾಯಿಂಟ್ಸ್ ಹೊಂದಿದೆ. ಆದರೆ ರಾಜಸ್ಥಾನ್ ರಾಯಲ್ಸ್ ಇನ್ನೂ 3 ಮ್ಯಾಚ್ ಉಳಿದಿದೆ. ಹೀಗಾಗಿ ಆರ್ಆರ್ ಕೂಡ 16 ಪಾಯಿಂಟ್ಸ್ ಗಳಿಸುವ ಸಾಧ್ಯತೆಯಿದೆ.
ಮತ್ತೊಂದೆಡೆ ಡೆಲ್ಲಿ ಕ್ಯಾಪಿಟಲ್ಸ್ 10 ಮ್ಯಾಚ್ ಆಡಿ 10 ಪಾಯಿಂಟ್ಸ್ ಪಡೆದುಕೊಂಡಿದೆ. ಅಂದರೆ ನಾಲ್ಕು ಮ್ಯಾಚ್ನಲ್ಲಿ ಮೂರು ಗೆದ್ದರೆ 16 ಪಾಯಿಂಟ್ಸ್ ಆಗಲಿದೆ. ಹಾಗೆಯೇ ಎಸ್ಆರ್ಹೆಚ್ ಹಾಗೂ ಪಂಜಾಬ್ ಕಿಂಗ್ಸ್ ತಂಡಗಳಿಗೂ 3 ಮ್ಯಾಚ್ಗಳು ಉಳಿದಿದ್ದು, ಈ ಪಂದ್ಯಗಳಲ್ಲಿ ಈ ಎರಡು ತಂಡಗಳು ಗೆದ್ದರೆ ಆ ತಂಡಗಳ ಪಾಯಿಂಟ್ಸ್ ಕೂಡ 16 ಆಗಲಿದೆ.
ಹಾಗಾಗಿ ಆರ್ಸಿಬಿ ಮುಂದಿನ 2 ಪಂದ್ಯಗಳನ್ನೂ ಗೆಲ್ಲುವ ಮೂಲಕ ಪ್ಲೇ ಆಫ್ ಅನ್ನು ಖಚಿತಪಡಿಸಿಕೊಳ್ಳಬೇಕಿದೆ. ಒಂದು ವೇಳೆ 2 ರಲ್ಲಿ 1 ಮ್ಯಾಚ್ ಗೆದ್ದರೆ 16 ಪಾಯಿಂಟ್ಸ್ ಸಿಗಲಿದೆ. ಹಾಗೆಯೇ ಉಳಿದ ತಂಡಗಳು ಕೂಡ 16 ಪಾಯಿಂಟ್ಸ್ಗಳಿಸಿ 3ನೇ ಮತ್ತು ನಾಲ್ಕನೇ ಸ್ಥಾನ ಪಡೆದರೆ ಆರ್ಸಿಬಿ ಪ್ಲೇ ಆಫ್ ಪ್ರವೇಶಿಸಲು ನೆಟ್ ರನ್ ರೇಟ್ನ ಮೊರೆ ಹೋಗಬೇಕಾಗುತ್ತದೆ. ಹೀಗಾಗಿ ಆರ್ಸಿಬಿ ತಂಡವು ಮುಂದಿನ 2 ನಪಂದ್ಯಗಳನ್ನು ಗೆದ್ದರೆ ಮಾತ್ರ ನೇರವಾಗಿ ಪ್ಲೇಆಫ್ ಪ್ರವೇಶಿಸಬಹುದು.
ಹೀಗಾಗಿ ಪಂಜಾಬ್ ಕಿಂಗ್ಸ್ ಹಾಗೂ ಗುಜರಾತ್ ಟೈಟನ್ಸ್ ವಿರುದ್ದದ ಪಂದ್ಯದಲ್ಲಿ ಭರ್ಜರಿ ಗೆಲುವು ದಾಖಲಿಸುವ ಮೂಲಕ ಆರ್ಸಿಬಿ ತಂಡವು ಪಾಯಿಂಟ್ಸ್ ಟೇಬಲ್ನಲ್ಲಿ 1ನೇ ಅಥವಾ 2ನೇ ಸ್ಥಾನ ಅಲಂಕರಿಸಬಹುದು. ಅಲ್ಲದೆ ನೇರವಾಗಿ ಪ್ಲೇಆಫ್ ಎಂಟ್ರಿಯನ್ನು ಖಚಿತಪಡಿಸಿಕೊಳ್ಳಬಹುದಾಗಿದೆ.
RCB ತಂಡ: ಫಾಫ್ ಡು ಪ್ಲೆಸಿಸ್ (ನಾಯಕ), ವಿರಾಟ್ ಕೊಹ್ಲಿ, ಗ್ಲೆನ್ ಮ್ಯಾಕ್ಸ್ವೆಲ್, ಅನುಜ್ ರಾವತ್, ದಿನೇಶ್ ಕಾರ್ತಿಕ್, ಶಹಬಾಜ್ ಅಹ್ಮದ್, ವನಿಂದು ಹಸರಂಗ, ಹರ್ಷಲ್ ಪಟೇಲ್, ಜೋಶ್ ಹ್ಯಾಝಲ್ವುಡ್, ಮೊಹಮ್ಮದ್ ಸಿರಾಜ್, ಆಕಾಶ್ ದೀಪ್, ಸುಯಶ್ ಪ್ರಭುದೇಸಾಯಿ, ಅನೀಶ್ವರ್ ಗೌತಮ್, ಕರ್ಣ್ ಶರ್ಮಾ, ಜೇಸನ್ ಬೆಹ್ರೆಡ್ರಾರ್ಫ್, ಸಿದ್ದಾರ್ಥ್ ಕೌಲ್, ಚಾಮಾ ಮಿಲಿಂದ್, ಮಹಿಪಾಲ್ ಲೊಮ್ರೋರ್, ಶೆರ್ಫೇನ್ ರುದರ್ಫೋರ್ಡ್, ಫಿನ್ ಅಲೆನ್, ಡೇವಿಡ್ ವಿಲ್ಲಿ, ರಜತ್ ಪಾಟಿದಾರ್.
ಹೆಚ್ಚಿನ IPL 2022 ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 7:37 pm, Sun, 8 May 22