GT vs CSK Highlights, IPL 2023: ಗುಜರಾತ್ ಗೆಲುವಿನ ಶುಭಾರಂಭ; ಚೆನ್ನೈಗೆ ಹ್ಯಾಟ್ರಿಕ್ ಸೋಲು

|

Updated on: Mar 31, 2023 | 11:46 PM

Gujarat Titans vs Chennai Super Kings Highlights: ಅಹಮದಾಬಾದ್‌ನಲ್ಲಿ ನಡೆದ ಐಪಿಎಲ್ 2023ರ ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಗುಜರಾತ್ ಟೈಟಾನ್ಸ್ ತಂಡ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ 5 ವಿಕೆಟ್‌ಗಳ ರೋಚಕ ಜಯ ಸಾಧಿಸಿದೆ.

GT vs CSK Highlights, IPL 2023: ಗುಜರಾತ್ ಗೆಲುವಿನ ಶುಭಾರಂಭ; ಚೆನ್ನೈಗೆ ಹ್ಯಾಟ್ರಿಕ್ ಸೋಲು
ಚೆನ್ನೈ- ಗುಜರಾತ್ ಮುಖಾಮುಖಿ

16ನೇ ಆವೃತ್ತಿಯ ಐಪಿಎಲ್​ಗೆ ನಿರೀಕ್ಷಿತ ಆರಂಭ ಸಿಕ್ಕಿದೆ. ತನ್ನ ಮೊದಲ ಪಂದ್ಯದಲ್ಲೇ ಚಾಂಪಿಯನ್ ತಂಡ ಗೆಲುವಿನೊಂದಿಗೆ ಶುಭಾರಂಭ ಮಾಡಿದೆ. ಅಹಮದಾಬಾದ್‌ನಲ್ಲಿ ನಡೆದ ಐಪಿಎಲ್ 2023ರ ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಗುಜರಾತ್ ಟೈಟಾನ್ಸ್ ತಂಡ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ 5 ವಿಕೆಟ್‌ಗಳ ರೋಚಕ ಜಯ ಸಾಧಿಸಿದೆ. ಇದರೊಂದಿಗೆ ಸಿಎಸ್​ಕೆ ವಿರುದ್ಧ ಗುಜರಾತ್​ನ ಗೆಲುವಿನ ಓಟ ಕೂಡ ಮುಂದುವರಿದಿದೆ. ಶುಭ್​ಮನ್ ಗಿಲ್ ಅವರ ಅಮೋಘ ಇನಿಂಗ್ಸ್ ಹಾಗೂ ರಶೀದ್ ಖಾನ್ ಅವರ ಆಲ್ ರೌಂಡ್ ಪ್ರದರ್ಶನದ ಆಧಾರದ ಮೇಲೆ ಹಾರ್ದಿಕ್ ಪಾಂಡ್ಯ ತಂಡ 20ನೇ ಓವರ್​ನ ಎರಡನೇ ಎಸೆತದಲ್ಲಿ ಜಯ ಸಾಧಿಸಿ ಚೆನ್ನೈ ವಿರುದ್ಧ ಹ್ಯಾಟ್ರಿಕ್ ಗೆಲುವನ್ನು ಪೂರೈಸಿತು.

LIVE NEWS & UPDATES

The liveblog has ended.
  • 31 Mar 2023 11:43 PM (IST)

    ಗುಜರಾತ್ ಟೈಟಾನ್ಸ್​ಗೆ ಗೆಲುವು

    ಚೆನ್ನೈ ನೀಡಿದ್ದ 178 ರನ್​ಗಳ ಗುರಿಯನ್ನು ಗುಜರಾತ್ ತಂಡ ಕೊನೆಯ ಓವರ್​ನಲ್ಲಿ ಸಾಧಿಸಿತು. ತಂಡದ ಪರ ಗಿಲ್ ಅರ್ಧಶತಕ ಬಾರಿಸಿದರೆ, ಸುದರ್ಶನ್, ಶಂಕರ್, ಕೊನೆಯಲ್ಲಿ ರಶೀದ್ ಖಾನ್ ಅದ್ಭುತ ಬ್ಯಾಟಿಂಗ್ ಮಾಡಿದರು.

  • 31 Mar 2023 11:37 PM (IST)

    19 ಓವರ್‌ ಅಂತ್ಯ

    ಗುಜರಾತ್ ಪರ ರಾಹುಲ್ ತೆವಾಟಿಯಾ 5 ರನ್ ಮತ್ತು ರಶೀದ್ 10 ರನ್ ಗಳಿಸಿ ಆಡುತ್ತಿದ್ದಾರೆ. ಗುಜರಾತ್ ಟೈಟಾನ್ಸ್ ಗೆಲುವಿಗೆ 8 ಎಸೆತಗಳಲ್ಲಿ 6 ರನ್ ಅಗತ್ಯವಿದೆ. ಈ ಓವರ್​ನಲ್ಲಿ ರಶೀದ್ 1 ಬೌಂಡರಿ ಹಾಗೂ 1 ಸಿಕ್ಸರ್ ಬಾರಿಸಿದರು.

  • 31 Mar 2023 11:31 PM (IST)

    ಗುಜರಾತ್‌ನ ಐದನೇ ವಿಕೆಟ್ ಪತನ

    ಗುಜರಾತ್​ನ ಐದನೇ ವಿಕೆಟ್ ಪತನ, ಶಂಕರ್ 27 ರನ್ ಗಳಿಸಿ ಹಂಗರ್ಗೇಕರ್ ಓವರ್​ನಲ್ಲಿ ಕ್ಯಾಚಿತ್ತು ಔಟಾದರು.

  • 31 Mar 2023 11:30 PM (IST)

    17 ಓವರ್‌ಗಳ ನಂತರ ಗುಜರಾತ್ ಸ್ಕೋರ್ 149/4

    ಗುಜರಾತ್ ಪರ ರಾಹುಲ್ ತೆವಾಟಿಯಾ 3 ರನ್ ಮತ್ತು ಶಂಕರ್ 21 ರನ್ ಗಳಿಸಿ ಆಡುತ್ತಿದ್ದಾರೆ. ಗುಜರಾತ್ ಟೈಟಾನ್ಸ್ ಗೆಲುವಿಗೆ 18 ಎಸೆತಗಳಲ್ಲಿ 30 ರನ್ ಅಗತ್ಯವಿದೆ

  • 31 Mar 2023 11:09 PM (IST)

    ಗಿಲ್ ಔಟ್

    63 ರನ್ ಗಳಿಸಿದ್ದ ಶುಭ್​ಮನ್ ಗಿಲ್ ರುತುರಾಜ್​ಗೆ ಕ್ಯಾಚಿತ್ತು ಔಟಾಗಿದ್ದಾರೆ. ದೇಶ್​ಪಾಂಡೆ ಎಸೆತದಲ್ಲಿ ಸಿಕ್ಸರ್ ಬಾರಿಸುವ ಯತ್ನದಲ್ಲಿ ಗಿಲ್ ವಿಕೆಟ್ ಒಪ್ಪಿಸಿದರು.

  • 31 Mar 2023 11:07 PM (IST)

    14 ಓವರ್‌ ಅಂತ್ಯ

    ಗುಜರಾತ್ ಪರ ಗಿಲ್ 56 ರನ್ ಹಾಗೂ ಶಂಕರ್ 9 ರನ್ ಗಳಿಸಿ ಆಡುತ್ತಿದ್ದಾರೆ. ಈ ಓವರ್​ನ ಕೊನೆಯ ಎಸೆತದಲ್ಲಿ ಗಿಲ್ ಉತ್ತಮ ಬೌಂಡರಿ ಬಾರಿಸಿದರು.

  • 31 Mar 2023 11:01 PM (IST)

    ಗುಜರಾತ್‌ನ ಮೂರನೇ ವಿಕೆಟ್ ಪತನ

    ಜಡೇಜಾ ಓವರ್​ನಲ್ಲಿ ಸ್ವಿಪ್ ಶಾಟ್ ಆಡಲು ಯತ್ನಿಸಿದ ಹಾರ್ದಿಕ್ ಪಾಂಡ್ಯ ಕ್ಲೀನ್ ಬೌಲ್ಡ್ ಆಗಿದ್ದಾರೆ.

  • 31 Mar 2023 10:51 PM (IST)

    ಗಿಲ್ ಅರ್ಧಶತಕ

    ಜಡೇಜಾ ಓವರ್​ನಲ್ಲಿ ಅದ್ಭುತ ಸಿಕ್ಸರ್ ಬಾರಿಸಿದ್ದ ಗಿಲ್, ಮುಂದಿನ ಓವರ್​ನಲ್ಲಿ ಸಿಂಗಲ್ ಕದಿಯುವ ಮೂಲಕ ತಮ್ಮ ಅರ್ಧಶತಕ ಪೂರೈಸಿದ್ದಾರೆ. ಈ ಆವೃತ್ತಿಯ 2ನೇ ಅರ್ಧಶತಕ ಇದಾಗಿದೆ.

  • 31 Mar 2023 10:48 PM (IST)

    10 ಓವರ್‌ಗಳ ನಂತರ ಗುಜರಾತ್ ಸ್ಕೋರ್ 93/1

    ಗುಜರಾತ್ ಪರ ಗಿಲ್ 38 ರನ್ ಹಾಗೂ ಹಾರ್ದಿಕ್ ಪಾಂಡ್ಯ 3 ರನ್ ಗಳಿಸಿ ಆಡುತ್ತಿದ್ದಾರೆ. ಗುಜರಾತ್ ಟೈಟಾನ್ಸ್ಗೆ 10 ಓವರ್​ಗಳಲ್ಲಿ 85 ರನ್ ಬೇಕು.

  • 31 Mar 2023 10:44 PM (IST)

    ಹಂಗರ್ಗೇಕರ್​ಗೆ 2ನೇ ವಿಕೆಟ್

    ಇಂಜುರಿಗೊಂಡ ವಿಲಿಯಮ್ಸನ್ ಬದಲಿಯಾಗಿ ಬಂದ ಸಾಯಿ ಸುದರ್ಶನ್ 22 ರನ್​ಗಳ ಸ್ಫೋಟಕ ಇನ್ನಿಂಗ್ಸ್ ಆಡಿ ಹಂಗರ್ಗೇಕರ್​ಗೆ ಬಲಿಯಾಗಿದ್ದಾರೆ.

  • 31 Mar 2023 10:34 PM (IST)

    2 ಬೌಂಡರಿ

    ಸ್ಯಾಂಟ್ನರ್ ಓವರ್​ನಲ್ಲಿ 11 ರನ್​ ಬಂದವು. ಈ ಓವರ್​ನಲ್ಲಿ ಸುದರ್ಶನ್ 1 ಹಾಗೂ ಗಿಲ್ 1 ಬೌಂಡರಿ ಬಾರಿಸಿದರು.

  • 31 Mar 2023 10:33 PM (IST)

    7 ಓವರ್‌ ಅಂತ್ಯ

    ಗಿಲ್ ಮತ್ತು ಸಾಯಿ ಸುಂದರ್ 27 ರನ್ ಮತ್ತು 14 ರನ್‌ಗಳಿಸಿ ಆಡುತ್ತಿದ್ದಾರೆ. ಉತ್ತಮ ಜೊತೆಯಾಟ.

  • 31 Mar 2023 10:29 PM (IST)

    ಗಿಲ್ ಸಿಕ್ಸರ್

    ಗುಜರಾತ್ ಪರ ಗಿಲ್ 21 ರನ್ ಹಾಗೂ ಸಾಯಿ ಸುಂದರನ್ 6 ರನ್ ಗಳಿಸಿ ಆಡುತ್ತಿದ್ದಾರೆ. ಈ ಓವರ್‌ನಲ್ಲಿ ಗಿಲ್ ಅಮೋಘ ಸಿಕ್ಸರ್‌ ಕೂಡ ಬಾರಿಸಿದರು.

  • 31 Mar 2023 10:20 PM (IST)

    4 ಓವರ್‌ಗಳ ನಂತರ ಗುಜರಾತ್ ಸ್ಕೋರ್ 41/1

    ಗಿಲ್ 9 ರನ್ ಮತ್ತು ಸಾಯಿ ಸುದರ್ಶನ್ 4 ರನ್ ಗಳಿಸಿ ಗುಜರಾತ್ ಪರ ಆಡುತ್ತಿದ್ದಾರೆ. ಗುಜರಾತ್ ಟೈಟಾನ್ಸ್ ಪಾಲಿನ 4 ಓವರ್ ಆಟ ಮುಗಿದಿದೆ.

  • 31 Mar 2023 10:15 PM (IST)

    ಹಂಗರ್ಗೇಕರ್​ಗೆ ಮೊದಲ ವಿಕೆಟ್

    ಗುಜರಾತ್​ನ ಮೊದಲ ವಿಕೆಟ್ ಪತನವಾಗಿದೆ. ಚೊಚ್ಚಲ ಪಂದ್ಯವನ್ನಾಡುತ್ತಿರುವ ಹಂಗರ್ಗೇಕರ್​ ಓವರ್​ನಲ್ಲಿ ಸಾಹ ಕ್ಯಾಚಿತ್ತು ಔಟಾಗಿದ್ದಾರೆ.

  • 31 Mar 2023 10:09 PM (IST)

    ಮೊದಲ ಇಂಪ್ಯಾಕ್ಟ್ ಪ್ಲೇಯರ್

    ಈ ಆವೃತ್ತಿಯ ಮೂದಲ ಇಂಪ್ಯಾಕ್ಟ್ ಪ್ಲೇಯರ್ ಆಗಿ ತುಷಾರ್ ದೇಶಪಾಂಡೆ ದಾಖಲೆ ಬರೆದಿದ್ದಾರೆ.

  • 31 Mar 2023 10:03 PM (IST)

    ಸಹಾ ಸಿಕ್ಸರ್

    ಮೊದಲ ಓವರ್​ನಲ್ಲಿ ಹೆಚ್ಚು ರನ್ ಗಳಿಸದ ಗುಜರಾತ್ 2ನೇ ಓವರ್​ನಲ್ಲಿ 15 ರನ್ ಗಳಿಸಿತು. ಸಹಾ 1 ಸಿಕ್ಸರ್ 1 ಬೌಂಡರಿ ಬಾರಿಸಿದರೆ, ಗಿಲ್ 1 ಬೌಂಡರಿ ಬಾರಿಸಿದರು.

  • 31 Mar 2023 09:56 PM (IST)

    ಗುಜರಾತ್ ಬ್ಯಾಟಿಂಗ್ ಆರಂಭ

    178 ರನ್​ಗಳ ಗುರಿ ಬೆನ್ನಟ್ಟಿರುವ ಗುಜರಾತ್ ಪರ ಸಾಹ ಮತ್ತು ಗಿಲ್ ಬ್ಯಾಟಿಂಗ್ ಆರಂಭಿಸಿದ್ದಾರೆ. ಚೆನ್ನೈ ಪರ ದೀಪಕ್ ಬೌಲಿಂಗ್ ಆರಂಭಿಸಿದ್ದಾರೆ.

  • 31 Mar 2023 09:34 PM (IST)

    ಧೋನಿ ಸಿಕ್ಸರ್

    ಲಿಟಲ್ ಎಸೆದ ಕೊನೆಯ ಓವರ್​ನಲ್ಲಿ ಧೋನಿ ಒಂದು ಬೌಂಡರಿ ಹಾಗೂ ಸಿಕ್ಸರ್ ಬಾರಿಸಿದರು. ಅಂತಿಮವಾಗಿ ಸಿಎಸ್​ಕೆ ತಂಡ ನಿಗದಿತ 20 ಓವರ್​ಗಳಲ್ಲಿ 7 ವಿಕೆಟ್ ಕಳೆದುಕೊಂಡು 178 ರನ್ ಗಳಿಸಿತು. ತಂಡದ ಪರ ರುತುರಾಜ್ 92 ರನ್ ಬಾರಿಸಿದರು.

  • 31 Mar 2023 09:29 PM (IST)

    19 ಓವರ್‌ಗಳ ನಂತರ ಚೆನ್ನೈ ಸ್ಕೋರ್ 165/7

    ಶಮಿ ಎಸೆದ 19ನೇ ಓವರ್​ನಲ್ಲಿ ಚೆನ್ನೈ 10 ರನ್ ಗಳಿಸಿತು. ಚೆನ್ನೈ ಪರ ಧೋನಿ 2 ರನ್ ಹಾಗೂ ಸ್ಯಾಂಟ್ನರ್ 1 ರನ್ ಗಳಿಸಿ ಆಡುತ್ತಿದ್ದಾರೆ.

  • 31 Mar 2023 09:24 PM (IST)

    ದುಬೆ ಸಿಕ್ಸರ್, ಔಟ್

    ಬ್ಯಾಟಿಂಗ್​ಗೆ ಬಂದಾಗಿನಿಂದಲೂ ಶಾರ್ಟ್​ ಬಾಲ್​ಗೆ ತೊಂದರೆ ಅನುಭವಿಸುತ್ತಿದ್ದ ದುಬೆ ಅದೇ ಶಾರ್ಟ್ ಬಾಲ್​ನಲ್ಲಿ ಒಂದು ಸಿಕ್ಸರ್ ಬಾರಿಸಿ, ನಂತರದ ಬಾಲ್​ನಲ್ಲಿ ವಿಕೆಟ್ ಒಪ್ಪಿಸಿದ್ದಾರೆ.

  • 31 Mar 2023 09:18 PM (IST)

    ಜಡೇಜಾ ಔಟ್

    ರುತುರಾಜ್ ವಿಕೆಟ್ ಬಳಿಕ ಬಂದ ಜಡೇಜಾ ಕೂಡ ಕೇವಲ 1 ರನ್​ಗಳಿಸಿ ಸಿಕ್ಸರ್ ಹೊಡೆಯುವ ಯತ್ನದಲ್ಲಿ ಕ್ಯಾಚಿತ್ತು ಔಟಾಗಿದ್ದಾರೆ.

  • 31 Mar 2023 09:15 PM (IST)

    92 ರನ್​ಗೆ ರುತುರಾಜ್ ಔಟ್

    ಆರಂಭದಿಂದಲೂ ಅಬ್ಬರದ ಬ್ಯಾಟಿಂಗ್ ಮಾಡಿದ್ದ ರುತುರಾಜ್ ಶತಕದಂಚಿನಲ್ಲಿ ಎಡವಿದ್ದಾರೆ. 18ನೇ ಓವರ್ ಎಸೆಯಲು ಬಂದ ಜೋಸೆಫ್ ಫುಲ್​ಟಾಸ್ ಎಸೆತದಲ್ಲಿ ರುತುರಾಜ್ ಕ್ಯಾಚಿತ್ತು ಔಟಾಗಿದ್ದಾರೆ.

  • 31 Mar 2023 09:06 PM (IST)

    5 ಓವರ್ ಬಾಕಿ

    ಹಾರ್ದಿಕ್ ಅವರ ಓವರ್‌ನಲ್ಲಿ ಚೆನ್ನೈ 8 ರನ್ ಗಳಿಸಿತು. ಚೆನ್ನೈ ಪರ ರುತುರಾಜ್ ಗಾಯಕ್ವಾಡ್ 79 ಮತ್ತು ದುಬೆ 4 ರನ್‌ಗಳೊಂದಿಗೆ ಆಡುತ್ತಿದ್ದಾರೆ.

  • 31 Mar 2023 08:56 PM (IST)

    13 ಓವರ್‌ಗಳ ನಂತರ ಚೆನ್ನೈ ಸ್ಕೋರ್ 121/4

    ಗುಜರಾತ್ ಬೌಲರ್ ಜೋಶುವಾ ಲಿಟಲ್ ಅವರ ಓವರ್‌ನಲ್ಲಿ ಚೆನ್ನೈ 7 ರನ್ ಗಳಿಸಿತು. ಚೆನ್ನೈ ಪರ ರುತುರಾಜ್ ಗಾಯಕ್ವಾಡ್ 70 ರನ್ ಹಾಗೂ ದುಬೆ 0 ರನ್ ಗಳಿಸಿ ಆಡುತ್ತಿದ್ದಾರೆ.

  • 31 Mar 2023 08:47 PM (IST)

    ರಾಯುಡು ಔಟ್

    ಲಿಟಲ್ ಎಸೆದ 13ನೇ ಓವರ್​ನಲ್ಲಿ ರಾಯುಡು ಕ್ಲೀನ್ ಬೌಲ್ಡ್ ಆಗುವುದರೊಂದಿಗೆ ತಮ್ಮ ಇನ್ನಿಂಗ್ಸ್ ಮುಗಿಸಿದ್ದಾರೆ.

  • 31 Mar 2023 08:46 PM (IST)

    ಓವರ್‌ನಲ್ಲಿ ಎರಡು ಸಿಕ್ಸರ್‌

    ಗುಜರಾತ್ ಬೌಲರ್ ಯಶ್ ದಯಾಳ್ ಅವರ ಓವರ್‌ನಲ್ಲಿ ಚೆನ್ನೈ 14 ರನ್ ಗಳಿಸಿತು. ಚೆನ್ನೈ ಪರ ರುತುರಾಜ್ ಗಾಯಕ್ವಾಡ್ 70 ಮತ್ತು ರಾಯುಡು 11 ರನ್‌ಗಳೊಂದಿಗೆ ಆಡುತ್ತಿದ್ದಾರೆ. ಈ ಓವರ್‌ನಲ್ಲಿ ಎರಡು ಸಿಕ್ಸರ್‌ಗಳು ಬಂದವು.

  • 31 Mar 2023 08:39 PM (IST)

    ಶತಕ ಪೂರೈಸಿದ ಚೆನ್ನೈ

    ಗುಜರಾತ್ ಬೌಲರ್ ಜೋಶುವಾ ಲಿಟಲ್ ಅವರ ಓವರ್‌ನಲ್ಲಿ ಚೆನ್ನೈ 7 ರನ್ ಗಳಿಸಿತು. ಚೆನ್ನೈ ಪರ ರುತುರಾಜ್ ಗಾಯಕ್ವಾಡ್ 63 ರನ್ ಹಾಗೂ ರಾಯುಡು 4 ರನ್ ಗಳಿಸಿ ಆಡುತ್ತಿದ್ದಾರೆ.

  • 31 Mar 2023 08:33 PM (IST)

    10 ಓವರ್ ಆಟ ಅಂತ್ಯ

    10ನೇ ಓವರ್ ಎಸೆದ ರಶೀದ್ ಖಾನ್ ಕೇವಲ 3 ರನ್ ಬಿಟ್ಟುಕೊಟ್ಟರು. ಚೆನ್ನೈ ಇನ್ನಿಂಗ್ಸ್​ನ 10 ಓವರ್​ ಮುಗಿದಿದ್ದು, ತಂಡ 93 ರನ್​ ಗಳಿಸಿ 2 ವಿಕೆಟ್ ಕಳೆದುಕೊಂಡಿದೆ.

  • 31 Mar 2023 08:28 PM (IST)

    9 ಓವರ್‌ಗಳ ನಂತರ ಚೆನ್ನೈ ಸ್ಕೋರ್ 90/3

    ಜೋಸೆಫ್ ಅವರ ಓವರ್‌ನಲ್ಲಿ ಚೆನ್ನೈ 18 ರನ್ ಗಳಿಸಿತು. ಚೆನ್ನೈ ಪರ ರುತುರಾಜ್ ಗಾಯಕ್ವಾಡ್ 56 ರನ್ ಹಾಗೂ ರಾಯುಡು 1 ರನ್ ಗಳಿಸಿ ಆಡುತ್ತಿದ್ದಾರೆ. ಈ ಓವರ್‌ನಲ್ಲಿ ಅಮೋಘ 3 ಸಿಕ್ಸರ್‌ ಬಂದವು.

  • 31 Mar 2023 08:25 PM (IST)

    ರುತುರಾಜ್ 5ನೇ ಸಿಕ್ಸರ್, ಅರ್ಧಶತಕ

    ಆಂಭಿಕರಾಗಿ ಕಣಕಿಳಿದಿರುವ ರುತುರಾಜ್ ಕೇವಲ 23 ಎಸೆತಗಳಲ್ಲಿ 5 ಸಿಕ್ಸರ್ ಸಹಿತ್ ಅರ್ಧಶತಕ ಪೂರೈಸಿದ್ದಾರೆ.

  • 31 Mar 2023 08:18 PM (IST)

    ರಶೀದ್​ಗೆ 2ನೇ ವಿಕೆಟ್

    ತಮ್ಮ ಕೋಟಾದ 2ನೇ ಓವರ್ ಎಸೆಯಲು ಬಂದ ರಶೀದ್ ಮತ್ತೊಂದು ವಿಕೆಟ್ ಪಡೆದಿದ್ದಾರೆ. ಅಲಿ ವಿಕೆಟ್ ಬಳಿಕ ಬಂದಿದ್ದ ಸ್ಟೋಕ್ಸ್ ಒಂದು ಬೌಂಡರಿ ಬಾರಿಸಿ, ವಿಕೆಟ್ ಕೀಪರ್​ಗೆ ಕ್ಯಾಚಿತ್ತು ಔಟಾಗಿದ್ದಾರೆ.

  • 31 Mar 2023 08:17 PM (IST)

    ಪವರ್ ಪ್ಲೇ ಅಂತ್ಯ

    ಗುಜರಾತ್ ಬೌಲರ್ ರಶೀದ್ ಖಾನ್ ಅವರ ಓವರ್‌ನಲ್ಲಿ ಚೆನ್ನೈ 5 ರನ್ ಗಳಿಸಿತು. ಚೆನ್ನೈ ಪರ ರುತುರಾಜ್ ಗಾಯಕ್ವಾಡ್ 24 ರನ್ ಹಾಗೂ ಬೆನ್ ಸ್ಟಾಕ್ 1 ರನ್ ಗಳಿಸಿ ಆಡುತ್ತಿದ್ದಾರೆ.

  • 31 Mar 2023 08:04 PM (IST)

    ಅಲಿ ಔಟ್, ಚೆನ್ನೈ 50/2

    ಆಕ್ರಮಣಕಾರಿ ಆಟಕ್ಕೆ ಮುಂದಾಗಿದ್ದ ಮೊಯಿನ್ ಅಲಿ ರಶೀದ್ ಬೌಲಿಂಗ್​ನಲ್ಲಿ ಕೀಪರ್​ಗೆ ಕ್ಯಾಚಿತ್ತು ಔಟಾಗಿದ್ದಾರೆ.

  • 31 Mar 2023 07:59 PM (IST)

    ಶಮಿ ದುಬಾರಿ

    5ನೇ ಓವರ್ ಎಸೆಯಲು ಬಂದ ಶಾಮಿ ಓವರ್​ನಲ್ಲಿ ಬರೊಬ್ಬರಿ 17 ರನ್​ಗಳು ಹರಿದುಬಂದವು. ಈ ಓವರ್​ನಲ್ಲಿ ಒಂದು ನೋ ಬಾಲ್ ಸೇರಿದಂತೆ 2 ಬೌಂಡರಿ ಹಾಗೂ 1 ಸಿಕ್ಸರ್ ಕೂಡ ಬಂತು.

  • 31 Mar 2023 07:53 PM (IST)

    ರುತುರಾಜ್ ಸಿಕ್ಸರ್

    4ನೇ ಓವರ್ ಎಸೆದ ಲಿಟಲ್ ಅವರ ಎಸೆತದಲ್ಲಿ 2 ಬೌಂಡರಿ ಹಾಗೂ 1 ಸಿಕ್ಸರ್ ಸೇರಿದಂತೆ 15 ರನ್​ಗಳು ಬಂದವು. ಮೊದಲು ರುತುರಾಜ್ 1 ಸಿಕ್ಸರ್ 1 ಬೌಂಡರಿ ಹೊಡೆದರೆ, ಅಲಿ 1 ಬೌಂಡರಿ ಬಾರಿಸಿದರು.

  • 31 Mar 2023 07:50 PM (IST)

    ಕಾನ್ವೇ ಔಟ್

    ಚೆನ್ನೈ ಸೂಪರ್ ಕಿಂಗ್ಸ್‌ನ ಮೊದಲ ವಿಕೆಟ್ ಪತನ, ಮೊಹಮ್ಮದ್ ಶಮಿ ಓವರ್‌ನಲ್ಲಿ ಡೇವಿಡ್ ಕಾನ್ವೆ 1 ರನ್‌ಗೆ ಔಟಾದರು. ಇದು ಶಮಿ ಅವರ 100ನೇ ವಿಕೆಟ್ ಎಂಬುದು ವಿಶೇಷವಾಗಿತ್ತು.

  • 31 Mar 2023 07:46 PM (IST)

    ರುತುರಾಜ್ ಫೋರ್

    ಎರಡನೇ ಓವರ್‌ನ ನಂತರ ಚೆನ್ನೈ ಸ್ಕೋರ್ 13/0. ಗುಜರಾತ್ ಬೌಲರ್ ಹಾರ್ದಿಕ್ ಪಾಂಡ್ಯ ಓವರ್‌ನಲ್ಲಿ 11 ರನ್ ಬಂತು. ಚೆನ್ನೈ ಪರ ರುತುರಾಜ್ ಗಾಯಕ್ವಾಡ್ 10 ರನ್ ಹಾಗೂ ಡೆವೊನ್ ಕಾನ್ವೆ 0 ರನ್ ಗಳಿಸಿ ಆಡುತ್ತಿದ್ದಾರೆ. ಈ ಓವರ್‌ನಲ್ಲಿ 2 ಬೌಂಡರಿ ಬಂದವು.

  • 31 Mar 2023 07:40 PM (IST)

    ಮೊದಲ ಪಂದ್ಯ ಆರಂಭ

    ಮೊದಲ ಪಂದ್ಯ ಆರಂಭವಾಗಿದೆ. ಚೆನ್ನೈನ ಆರಂಭಿಕ ಜೋಡಿ ಡೆವೊನ್ ಕಾನ್ವೆ ಮತ್ತು ರುತುರಾಜ್ ಗಾಯಕ್ವಾಡ್ ಇನ್ನಿಂಗ್ಸ್ ಆರಂಭಿಸಿದ್ದಾರೆ.

  • 31 Mar 2023 07:34 PM (IST)

    ಗುಜರಾತ್ ಟೈಟಾನ್ಸ್ ತಂಡ

    ಹಾರ್ದಿಕ್ ಪಾಂಡ್ಯ (ನಾಯಕ), ಶುಭ್​ಮನ್ ಗಿಲ್, ಕೇನ್ ವಿಲಿಯಮ್ಸನ್, ವೃದ್ಧಿಮಾನ್ ಸಹಾ, ವಿಜಯ್ ಶಂಕರ್, ರಶೀದ್ ಖಾನ್, ಅಲ್ಜಾರಿ ಜೋಸೆಫ್, ಮೊಹಮ್ಮದ್ ಶಮಿ, ರಾಹುಲ್ ತೆವಾಟಿಯಾ, ಯಶ್ ದಯಾಲ್ ಮತ್ತು ಜೋಶ್ ಲಿಟಲ್

  • 31 Mar 2023 07:28 PM (IST)

    ಚೆನ್ನೈ ಸೂಪರ್ ಕಿಂಗ್ಸ್ ತಂಡ

    ಎಂಎಸ್ ಧೋನಿ (ನಾಯಕ), ರುತುರಾಜ್ ಗಾಯಕ್ವಾಡ್, ಡೆವೊನ್ ಕಾನ್ವೆ, ಅಂಬಟಿ ರಾಯುಡು, ಬೆನ್ ಸ್ಟೋಕ್ಸ್, ಮೊಯಿನ್ ಅಲಿ, ರವೀಂದ್ರ ಜಡೇಜಾ, ಮಿಚೆಲ್ ಸ್ಯಾಂಟ್ನರ್, ಶಿವಂ ದುಬೆ, ದೀಪಕ್ ಚಹಾರ್, ರಾಜವರ್ಧನ್ ಹಂಗರ್ಗೇಕರ್

  • 31 Mar 2023 07:17 PM (IST)

    ಟಾಸ್ ಗೆದ್ದ ಹಾರ್ದಿಕ್

    ಐಪಿಎಲ್ ಮೊದಲ ಪಂದ್ಯದ ಟಾಸ್ ಗೆದ್ದ ಗುಜರಾತ್ ನಾಯಕ ಹಾರ್ದಿಕ್ ಪಾಂಡ್ಯ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದ್ದಾರೆ. ಹೀಗಾಗಿ ಚೆನ್ನೈ ಮೊದಲು ಬ್ಯಾಟಿಂಗ್ ಮಾಡಲಿದೆ.

  • 31 Mar 2023 07:05 PM (IST)

    ರಶ್ಮಿಕಾ ಡಾನ್ಸ್

  • 31 Mar 2023 06:59 PM (IST)

    ಅರಿಜಿತ್ ಸಂಗೀತ ಕಾರ್ಯಕ್ರಮ

  • 31 Mar 2023 06:56 PM (IST)

    ತಮ್ಮನಾ ಡಾನ್ಸ್

  • 31 Mar 2023 06:54 PM (IST)

    ರಶ್ಮಿಕಾ ಡಾನ್ಸ್ ಝಲಕ್

     

  • 31 Mar 2023 06:53 PM (IST)

    ತಮ್ಮನಾ ಡಾನ್ಸ್ ಝಲಕ್

  • 31 Mar 2023 06:48 PM (IST)

    ರಶ್ಮಿಕಾ ನೃತ್ಯ

    ತೆಲುಗು ಹಾಡುಗಳಿಗೆ ಸೋಂಟ ಬಳುಕಿಸಿದ ರಶ್ಮಿಕಾ. ಪುಷ್ಪಾ ಸಿನಿಮಾದ ಹಾಡುಗಳಿಗೆ ನೃತ್ಯ ಮಾಡಿದ ನ್ಯಾಷನಲ್ ಕ್ರಶ್

  • 31 Mar 2023 06:43 PM (IST)

    ತಮ್ಮನಾ ನೃತ್ಯ

    ಹಿಂದೆ ತಮಿಳು ತೆಲುಗು ಸೇರಿದಂತೆ ಪಾಪ್ಯುಲರ್ ಹಾಡುಗಳಿಗೆ ಸೊಂಟ ಬಳುಕಿಸಿದ ತಮ್ಮನಾ ಭಾಟಿಯಾ

  • 31 Mar 2023 06:28 PM (IST)

    ಅರಿಜಿತ್ ಗಾನಕ್ಕೆ ಫ್ಯಾನ್ಸ್ ಫಿದಾ

  • 31 Mar 2023 06:18 PM (IST)

    ಅರಿಜಿತ್ ಸಿಂಗ್

     

     

  • 31 Mar 2023 06:09 PM (IST)

    ಅರಿಜಿತ್ ಸಿಂಗ್​ರಿಂದ ಸಂಗೀತ ಕಾರ್ಯಕ್ರಮ

    ಖ್ಯಾತ ಬಾಲಿವುಡ್ ಗಾಯಕ ಅರಿಜಿತ್ ಸಿಂಗ್ ಸಂಗೀತ ಕಾರ್ಯಕ್ರಮ ನೀಡುತ್ತಿದ್ದಾರೆ. ಅವರ ಹಾಡಿನೊಂದಿಗೆ ಐಪಿಎಲ್ ಉದ್ಘಾಟನಾ ಸಮಾರಂಭ ಆರಂಭವಾಗಿದೆ.

  • 31 Mar 2023 06:08 PM (IST)

    ಉದ್ಘಾಟನಾ ಸಮಾರಂಭ ಆರಂಭ

    ಉದ್ಘಾಟನಾ ಸಮಾರಂಭ ನಡೆಸಿಕೊಡುತ್ತಿರುವ ಮಂದಿರಾ ಬೇಡಿ.

  • 31 Mar 2023 05:50 PM (IST)

    ನರೇಂದ್ರ ಮೋದಿ ಕ್ರೀಡಾಂಗಣದ ಮುಂದೆ ಜನಸಾಗರ

  • 31 Mar 2023 05:50 PM (IST)

    ಡ್ರೋನ್ ಶೋ ಹೀಗಿರಲಿದೆ

  • 31 Mar 2023 05:31 PM (IST)

    Karnataka Election Live: ಬಿವೈ ವಿಜಯೇಂದ್ರ ವರುಣಾ ಕ್ಷೇತ್ರದಿಂದ ನಿಲ್ಲಲ್ಲ: ಬಿಎಸ್​ ಯಡಿಯೂರಪ್ಪ

    ಬೆಂಗಳೂರು: ಮೈಸೂರಿನ ವರುಣಾ ಕ್ಷೇತ್ರದಿಂದ ವಿಪಕ್ಷ ನಾಯಕ ಸಿದ್ದರಾಮಯ್ಯ  ಸ್ಪರ್ಧಿಸೋದು ಪಕ್ಕಾ ಆಗಿದ್ದು ಪ್ರತಿಸ್ಪರ್ಧಿಯಾಗಿ ಬಿಜೆಪಿಯಿಂದ ಬಿವೈ ವಿಜಯೇಂದ್ರ  ಸ್ಪರ್ಧಿಸುವ ಸಾಧ್ಯತೆ ಇದೆ ಎಂದು ನಿನ್ನೆ (ಮಾ.30) ಮಾಜಿ ಮುಖ್ಯಮಂತ್ರಿ ಬಿಎಸ್​ ಯಡಿಯೂರಪ್ಪ ಸುಳಿವು ನೀಡಿದ್ದರು. ಆದರೆ ಈಗ ಯಾವುದೇ ಕಾರಣಕ್ಕೂ ಬಿವೈ ವಿಜಯೇಂದ್ರ ವರುಣಾ ಕ್ಷೇತ್ರದಿಂದ ಸ್ಪರ್ಧಿಸಲ್ಲ ಎನ್ನುವ ಮೂಲಕ ಯುಟರ್ನ್​​ ಆಗಿದ್ದಾರೆ. ಆದರೆ ಅಂತಿಮ ಹಂತ, ಅಭ್ಯರ್ಥಿಗಳ ಪಟ್ಟಿ ಬಿಡುಗಡೆವರೆಗು ಕಾದು ನೋಡಬೇಕಿದೆ.

  • 31 Mar 2023 05:30 PM (IST)

    ಉದ್ಘಾಟನ ಸಮಾರಂಭದಲ್ಲಿ ತಾರೆಯರು

    ಐಪಿಎಲ್ 2023 ರ ಆರಂಭಿಕ ಪಂದ್ಯ ಇಂದು ಗುಜರಾತ್ ಟೈಟಾನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವೆ ನಡೆಯಲಿದೆ. ಇದಕ್ಕೂ ಮುನ್ನ ರಶ್ಮಿಕಾ ಮಂದಣ್ಣ, ಅರಿಜಿತ್ ಸಿಂಗ್, ತಮನ್ನಾ ಭಾಟಿಯಾ 6 ಗಂಟೆಗೆ ಉದ್ಘಾಟನ ಸಮಾರಂಭದಲ್ಲಿ ಪ್ರದರ್ಶನ ನೀಡಲಿದ್ದಾರೆ.

Published On - 5:28 pm, Fri, 31 March 23

Follow us on