ಇರಾನಿ ಕಪ್​ ಪಂದ್ಯಕ್ಕೆ ತಂಡಗಳು ಪ್ರಕಟ

ಬಹುನಿರೀಕ್ಷಿತ ಇರಾನಿ ಕಪ್ ಟೆಸ್ಟ್ ಪಂದ್ಯವು ನಾಳೆಯಿಂದ (ಅಕ್ಟೋಬರ್ 1) ಆರಂಭವಾಗಲಿದೆ. ಶ್ರೀನಗರದ ಶೇರ್-ಎ-ಕಾಶ್ಮೀರ್ ಕ್ರಿಕೆಟ್ ಸ್ಟೇಡಿಯಂನಲ್ಲಿ ಜರುಗಲಿರುವ ಈ ಪಂದ್ಯದಲ್ಲಿ, ಹಾಲಿ ರಣಜಿ ಚಾಂಪಿಯನ್ ಜಮ್ಮು-ಕಾಶ್ಮೀರ ಹಾಗೂ ರೆಸ್ಟ್ ಆಫ್ ಇಂಡಿಯಾ ತಂಡಗಳು ಮುಖಾಮುಖಿಯಾಗಲಿವೆ. ಈ ಬಾರಿಯ ರಣಜ ಟೂರ್ನಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಆಟಗಾರರು ರೆಸ್ಟ್ ಆಫ್ ಇಂಡಿಯಾ ತಂಡದಲ್ಲಿ ಕಾಣಿಸಿಕೊಂಡಿದ್ದಾರೆ.

ಇರಾನಿ ಕಪ್​ ಪಂದ್ಯಕ್ಕೆ ತಂಡಗಳು ಪ್ರಕಟ
Team India
Image Credit source: GettyImages

Updated on: Sep 30, 2026 | 7:20 AM

ದೇಶೀಯ ಅಂಗಳದ ಅತ್ಯಂತ ಪ್ರತಿಷ್ಠಿತ ಪ್ರಥಮ ದರ್ಜೆ ಪಂದ್ಯ ಇರಾನಿ ಕಪ್​ಗಾಗಿ ವೇದಿಕೆ ಸಿದ್ಧವಾಗಿದೆ. ಈ ಬಾರಿ ಇರಾನಿ ಕಪ್ ಪಂದ್ಯ ನಡೆಯಲಿರುವುದು  ಜಮ್ಮು ಮತ್ತು ಕಾಶ್ಮೀರದ ಶೇರ್-ಎ-ಕಾಶ್ಮೀರ್ ಕ್ರಿಕೆಟ್ ಸ್ಟೇಡಿಯಂನಲ್ಲಿ ಎಂಬುದು ವಿಶೇಷ. ಈ ಪಂದ್ಯಕ್ಕಾಗಿ ರಣಜಿ ಟ್ರೋಫಿ ಚಾಂಪಿಯನ್ ಜಮ್ಮು ಮತ್ತು ಕಾಶ್ಮೀರ ಹಾಗೂ ರೆಸ್ಟ್ ಆಫ್ ಇಂಡಿಯಾ ತಂಡಗಳನ್ನು ಪ್ರಕಟಿಸಲಾಗಿದೆ.

ಜಮ್ಮು-ಕಾಶ್ಮೀರ ಇದೇ ಮೊದಲ ಬಾರಿಗೆ ಇರಾನಿ ಕಪ್ ಪಂದ್ಯಕ್ಕೆ ಆತಿಥ್ಯವಹಿಸುತ್ತಿದ್ದು,  ನಾಲ್ಕು ದಶಕಗಳ ಬಳಿಕ ಶ್ರೀನಗರಕ್ಕೆ ಉನ್ನತ ಮಟ್ಟದ ಕ್ರಿಕೆಟ್ ಮರಳುತ್ತಿರುವುದರಿಂದ ಕಣಿವೆಯಾದ್ಯಂತ ಕ್ರಿಕೆಟ್ ಅಭಿಮಾನಿಗಳಲ್ಲಿ ಭಾರಿ ರೋಮಾಂಚನ ಮೂಡಿದೆ.

ರೆಸ್ಟ್ ಆಫ್ ಇಂಡಿಯಾಗೆ ರಿಷಭ್ ಪಂತ್ ಸಾರಥ್ಯ:

ಈ ಬಾರಿಯ ಇರಾನಿ ಕಪ್‌ನಲ್ಲಿ ಭಾಗವಹಿಸುತ್ತಿರುವ ರೆಸ್ಟ್ ಆಫ್ ಇಂಡಿಯಾ ತಂಡವು ಅತ್ಯಂತ ಬಲಿಷ್ಠವಾಗಿ ಕಾಣಿಸುತ್ತಿದೆ. ಭಾರತ ತಂಡದ ಸ್ಟಾರ್ ವಿಕೆಟ್ ಕೀಪರ್ ಬ್ಯಾಟರ್ ರಿಷಭ್ ಪಂತ್ ತಂಡವನ್ನು ಮುನ್ನಡೆಸಲಿದ್ದು, ಭರವಸೆಯ ಬ್ಯಾಟರ್ ಸರ್ಫರಾಝ್ ಖಾನ್ ಉಪನಾಯಕರಾಗಿ ಜವಾಬ್ದಾರಿ ಹೊತ್ತಿದ್ದಾರೆ. ಇನ್ನು ಬೆನ್ನುನೋವಿನ ಗಾಯದಿಂದಾಗಿ ಏಳು ತಿಂಗಳುಗಳ ಕಾಲ ಕ್ರಿಕೆಟ್‌ನಿಂದ ದೂರವಿದ್ದ ವೇಗಿ ಆಕಾಶ್ ದೀಪ್ ಸಂಪೂರ್ಣ ಫಿಟ್ ಆಗಿ ಈ ಪಂದ್ಯದ ಮೂಲಕ ಕಣಕ್ಕಿಳಿಯುತ್ತಿರುವುದು ತಂಡದ ಬಲ ಹೆಚ್ಚಿಸಿದೆ.

ಆತ್ಮ ವಿಶ್ವಾಸದಲ್ಲಿ ಜಮ್ಮು ಪಡೆ:

ತಮ್ಮದೇ ತವರು ನೆಲದಲ್ಲಿ ಚೊಚ್ಚಲ ಬಾರಿಗೆ ಇರಾನಿ ಕಪ್ ಆಡುತ್ತಿರುವ ಜಮ್ಮು ಮತ್ತು ಕಾಶ್ಮೀರ ತಂಡವು ಇತ್ತೀಚೆಗಷ್ಟೇ ರಣಜಿ ಟ್ರೋಫಿ ಗೆದ್ದು ಇತಿಹಾಸ ನಿರ್ಮಿಸಿತ್ತು. ಇದೀಗ 41 ವರ್ಷದ ಅನುಭವಿ ಆಟಗಾರ ಪಾರಸ್ ಡೋಗ್ರಾ ಅವರ ನಾಯಕತ್ವದಲ್ಲಿ ತಂಡವು ರೆಸ್ಟ್ ಆಫ್ ಇಂಡಿಯಾಗೆ ಕಠಿಣ ಸವಾಲೊಡ್ಡಲು ಸಜ್ಜಾಗಿದೆ. ಪಾರಸ್ ಡೋಗ್ರಾ ಅವರಿಗೆ ಇದು 25ನೇ ಪ್ರಥಮ ದರ್ಜೆ ಕ್ರಿಕೆಟ್ ಸೀಸನ್ ಆಗಿರುವುದು ವಿಶೇಷ. ಆದರೆ ಈ ಪಂದ್ಯಕ್ಕೆ ಜಮ್ಮು-ಕಾಶ್ಮೀರ ತಂಡದ ಪ್ರಮುಖ ವೇಗಿ ಆಖಿಬ್ ನಬಿ ಅಲಭ್ಯರಾಗಿದ್ದಾರೆ. ನಬಿ ಪ್ರಸ್ತುತ ನಡೆಯುತ್ತಿರುವ ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿಯಲ್ಲಿ ಟೀಮ್ ಇಂಡಿಯಾದ ಭಾಗವಾಗಿದ್ದಾರೆ. ಹೀಗಾಗಿ ಆಖಿಬ್ ಇರಾನಿ ಕಪ್ ಪಂದ್ಯದಲ್ಲಿ ಕಣಕ್ಕಿಳಿಯುವುದಿಲ್ಲ.

ಜಮ್ಮು-ಕಾಶ್ಮೀರ ತಂಡ: ಪಾರಸ್ ಡೋಗ್ರಾ (ನಾಯಕ), ಅಬ್ದುಲ್ ಸಮದ್, ಶುಭಂ ಖಜುರಿಯಾ, ಕಮ್ರಾನ್ ಇಕ್ಬಾಲ್, ಶುಭಂ ಪುಂಡಿರ್, ಯಾವರ್ ಹಸನ್, ಕನ್ಹಯ್ಯಾ ವಾಧವನ್, ಆಬಿದ್ ಮುಷ್ತಾಕ್, ಸಾಹಿಲ್ ಲೋತ್ರಾ, ಲೋನ್ ನಾಸಿರ್ ಮುಜಾಫರ್, ರಿದ್ಧಮ್ ಶರ್ಮಾ, ಉಮರ್ ನಜೀರ್, ರೋಹಿತ್ ಶರ್ಮಾ, ಸುನಿಲ್ ಕುಮಾರ್, ವಂಶಜ್ ಶರ್ಮಾ, ಕವಲಪ್ರೀತ್ ಸಿಂಗ್, ವಸೀಮ್ ಬಶೀರ್.

ಇದನ್ನೂ ಓದಿ: ಏಷ್ಯನ್ ಗೇಮ್ಸ್​: ಸೆಮಿಫೈನಲ್​ನಲ್ಲಿ ಟೀಮ್ ಇಂಡಿಯಾದ ಎದುರಾಳಿ ಯಾರು ಗೊತ್ತಾ?

ರೆಸ್ಟ್ ಆಫ್ ಇಂಡಿಯಾ ತಂಡ: ರಿಷಭ್ ಪಂತ್ (ನಾಯಕ), ಸನತ್ ಸಾಂಗ್ವಾನ್, ಶಿಖರ್ ಮೋಹನ್, ಸುದೀಪ್ ಘರಾಮಿ, ಸರ್ಫರಾಜ್ ಖಾನ್ (ಉಪನಾಯಕ), ಸ್ಮರಣ್ ರವಿಚಂದ್ರನ್, ಮಾನವ್ ಸುತಾರ್, ಸರನ್ಶ್ ಜೈನ್, ಆಕಾಶ್ ದೀಪ್*, ಮುಖೇಶ್ ಕುಮಾರ್, ಮುಖೇಶ್ ಚೌಧರಿ, ಆರ್ಯನ್ ಜುಯಲ್ (ವಿಕೆಟ್ ಕೀಪರ್), ಆರ್ಯನ್ ಪಾಂಡೆ, ಅನುಕುಲ್ ರಾಯ್, ಆಯುಷ್ ದೋಸೆಜಾ.

ಪಂದ್ಯದ ಸಂಪೂರ್ಣ ವಿವರಗಳು:

  • ಪಂದ್ಯ: ಜಮ್ಮು ಮತ್ತು ಕಾಶ್ಮೀರ vs ರೆಸ್ಟ್ ಆಫ್ ಇಂಡಿಯಾ
  • ದಿನಾಂಕ: ಅಕ್ಟೋಬರ್ 1 ರಿಂದ ಅಕ್ಟೋಬರ್ 5, 2026
  • ಸಮಯ: ಪ್ರತಿದಿನ ಬೆಳಗ್ಗೆ 9:30ಕ್ಕೆ (IST) ಪಂದ್ಯ ಆರಂಭವಾಗುತ್ತದೆ.
  • ನೇರ ಪ್ರಸಾರ: ಜಿಯೋ ಹಾಟ್​ಸ್ಟಾರ್ ಆ್ಯಪ್ ಹಾಗೂ ಸ್ಪೋರ್ಟ್ಸ್ 18 ಚಾನೆಲ್​ನಲ್ಲಿ ನೇರಪ್ರಸಾರ ವೀಕ್ಷಿಸಬಹುದು.

Published On - 7:17 am, Wed, 30 September 26

ಝಾಹಿರ್ ಯೂಸುಫ್

ಟಿವಿ9 ಡಿಜಿಟಲ್ ಮುಖ್ಯ ಉಪ ಸಂಪಾದಕ. 10 ವರ್ಷಗಳಿಂದ ಕನ್ನಡ ಡಿಜಿಟಲ್​ ಮಾಧ್ಯಮದಲ್ಲಿ ಪತ್ರಿಕಾ ವೃತ್ತಿ. ಕ್ರೀಡಾ ಸುದ್ದಿ, ದೀರ್ಘ ಲೇಖನ, ವಿಶ್ಲೇಷಣೆ, ಹೀಗೆ ಎಲ್ಲ ತರಹದ ಬರಹದಲ್ಲೂ ಅನುಭವ. ಪ್ರಸ್ತುತ ವಿದ್ಯಮಾನಗಳ ವ್ಯಾಖ್ಯಾನ, ಚರ್ಚೆಯಲ್ಲಿ ನೈಪುಣ್ಯ. ಈ ಹಿಂದೆ ಉದಯವಾಣಿ, ನ್ಯೂಸ್ 18 ಕನ್ನಡ ಡಿಜಿಟಲ್​​ನಲ್ಲಿ ಕೆಲಸ ಮಾಡಿದ ಅನುಭವ. ಆಸಕ್ತಿದಾಯಕ ವಿಷಯ ಕ್ರೀಡೆ, ಸಿನಿಮಾ ಮತ್ತು ರಾಜಕೀಯ.

Read More
Loading...
Unable to load recommendations.
Follow Us