ಮೊದಲ ಪಂದ್ಯಕ್ಕೆ ಟೀಮ್ ಇಂಡಿಯಾದ ಸ್ಟಾರ್ ಬ್ಯಾಟರ್ ಡೌಟ್!

ಭಾರತ ಮತ್ತು ಅಫ್ಘಾನಿಸ್ತಾನ್ ನಡುವಿನ ಮೂರು ಪಂದ್ಯಗಳ ಟಿ20 ಸರಣಿಯು ಸೆಪ್ಟೆಂಬರ್ 13, 2026 ರಿಂದ ಆರಂಭವಾಗಲಿದೆ. ಈ ಸರಣಿಯ ದ್ವಿತೀಯ ಪಂದ್ಯ ಸೆಪ್ಟೆಂಬರ್ 15 ರಂದು ಹಾಗೂ ತೃತೀಯ ಪಂದ್ಯ ಸೆಪ್ಟೆಂಬರ್ 17 ರಂದು ಜರುಗಲಿದೆ. ಇನ್ನು ಈ ಸರಣಿಯ ಎಲ್ಲಾ ಪಂದ್ಯಗಳಿಗೂ ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂ ಆತಿಥ್ಯ ವಹಿಸಲಿದೆ.

ಮೊದಲ ಪಂದ್ಯಕ್ಕೆ ಟೀಮ್ ಇಂಡಿಯಾದ ಸ್ಟಾರ್ ಬ್ಯಾಟರ್ ಡೌಟ್!
ಟೀಮ್ ಇಂಡಿಯಾ
Image Credit source: BCCI

Updated on: Sep 12, 2026 | 8:51 AM

ಭಾರತ ಮತ್ತು ಅಪ್ಘಾನಿಸ್ತಾನ್ ನಡುವಣ ಟಿ20 ಸರಣಿಯು ಭಾನುವಾರದಿಂದ (ಸೆ.13) ಶುರುವಾಗಲಿದೆ. ಈ ಸರಣಿ ಆರಂಭಕ್ಕೂ ಮುನ್ನವೇ ಟೀಮ್ ಇಂಡಿಯಾಗೆ ಆಘಾತ ಎದುರಾಗಿದೆ. ತಂಡದ ಪ್ರಮುಖ ವಿಕೆಟ್ ಕೀಪರ್ ಬ್ಯಾಟರ್​ ಇಶಾನ್ ಕಿಶನ್ ಬೆನ್ನು ನೋವಿನ ಸಮಸ್ಯೆಗೆ ಒಳಗಾಗಿದ್ದು, ಹೀಗಾಗಿ ಮೊದಲ ಮ್ಯಾಚ್​ಗೆ ಅಲಭ್ಯರಾಗುವ ಸಾಧ್ಯತೆಯಿದೆ.

ನೆಟ್ಸ್‌ನಲ್ಲಿ ನಡೆದಿದ್ದೇನು?

ನವದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ನೆಟ್ ಪ್ರ್ಯಾಕ್ಟೀಸ್ ವೇಳೆ ಇಶಾನ್ ಕಿಶನ್ 45 ನಿಮಿಷಗಳ ಕಾಲ ಅಭ್ಯಾಸ ನಡೆಸಿದ್ದರು. ಇದೇ ವೇಳೆ ನೆಟ್ ಬೌಲರ್ ನವದೀಪ್ ಸೈನಿ ಎಸೆದ ತೀಕ್ಷ್ಣವಾದ ಶಾರ್ಟ್ ಡೆಲಿವರಿಯಿಂದ ತಪ್ಪಿಸಿಕೊಳ್ಳಲು ಹೋಗಿ ಬ್ಯಾಲೆನ್ಸ್ ಕಳೆದುಕೊಂಡರು. ಈ ವೇಳೆ ಸ್ನಾಯು ಸೆಳೆತಕ್ಕೆ ಒಳಗಾದ ಇಶಾನ್,  ನೋವಿನಿಂದ ಮೈದಾನದಲ್ಲೇ ಕುಸಿದರು. ತಕ್ಷಣವೇ ಧಾವಿಸಿದ ತಂಡದ ಫಿಸಿಯೋ ಕಮಲೇಶ್ ಜೈನ್ ಪ್ರಾಥಮಿಕ ಚಿಕಿತ್ಸೆ ನೀಡಿದರೂ, ನೋವು ಕಡಿಮೆಯಾಗದ ಕಾರಣ ಕಿಶನ್ ತಕ್ಷಣವೇ ಬ್ಯಾಟಿಂಗ್ ನಿಲ್ಲಿಸಿ ನೆಟ್ಸ್‌ನಿಂದ ಹೊರನಡೆದರು.

ವೈದ್ಯಕೀಯ ವರದಿ:

ಗಾಯದ ತೀವ್ರತೆ: ಪ್ರಸ್ತುತ ಮಾಹಿತಿ ಪ್ರಕಾರ, ಇದು ಗಂಭೀರವಾದ ಗಾಯವಲ್ಲ. ಕೇವಲ ಸಣ್ಣ ಪ್ರಮಾಣದ ಬೆನ್ನುನೋವು ಎಂದು ತಿಳಿದುಬಂದಿದೆ.

ಪ್ಲೇಯಿಂಗ್ ಇಲೆವೆನ್​ನಿಂದ ಔಟ್: ಇಶಾನ್ ಕಿಶನ್ ಅವರನ್ನು ಸದ್ಯ 24 ಗಂಟೆಗಳ ಕಾಲ ವೈದ್ಯಕೀಯ ನಿಗಾದಲ್ಲಿ ಇರಿಸಲಾಗಿದ್ದು, ಶನಿವಾರ ಸಂಜೆಯ ವೇಳೆಗೆ ಅವರ ಫಿಟ್‌ನೆಸ್ ಟೆಸ್ಟ್ ನಡೆಸಿ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ. ಹೀಗಾಗಿ ಮೊದಲ ಟಿ20 ಪಂದ್ಯದಿಂದ ಹೊರಗುಳಿಯುವ ಸಾಧ್ಯತೆಯಿದೆ.

ಬದಲಿ ಆಟಗಾರ ಯಾರು?: ಒಂದು ವೇಳೆ ಮೊದಲ ಪಂದ್ಯದಿಂದ ಇಶಾನ್ ಕಿಶನ್ ಹೊರಗುಳಿದರೆ, ಅವರ ಸ್ಥಾನದಲ್ಲಿ ಸ್ಫೋಟಕ ಬ್ಯಾಟರ್ ಸಂಜು ಸ್ಯಾಮ್ಸನ್ ವಿಕೆಟ್ ಕೀಪರ್ ಹಾಗೂ ಮಿಡಲ್ ಆರ್ಡರ್ ಬ್ಯಾಟರ್ ಆಗಿ ಕಣಕ್ಕಿಳಿಯುವುದು ಬಹುತೇಕ ಖಚಿತವಾಗಿದೆ.

ಇದನ್ನೂ ಓದಿ: ವೈಭವ್​ನ ಉದಾಹರಣೆ ನೀಡಿ, ಪಿಸಿಬಿಯ ಬೆಂಡೆತ್ತಿದ ವಾಸಿಂ ಅಕ್ರಮ್!

ಭಾರತ ಟಿ20 ತಂಡ: ಶ್ರೇಯಸ್ ಅಯ್ಯರ್ (ನಾಯಕ), ಅಭಿಷೇಕ್ ಶರ್ಮಾ, ವೈಭವ್ ಸೂರ್ಯವಂಶಿ, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಇಶಾನ್ ಕಿಶನ್ (ವಿಕೆಟ್ ಕೀಪರ್), ತಿಲಕ್ ವರ್ಮಾ (ಉಪನಾಯಕ), ಶಿವಂ ದುಬೆ, ನಿತೀಶ್ ಕುಮಾರ್ ರೆಡ್ಡಿ, ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್, ವರುಣ್ ಚಕ್ರವರ್ತಿ, ಅರ್ಷದೀಪ್ ಸಿಂಗ್, ರವಿ ಬಿಷ್ಣೋಯ್, ಜಸ್​ಪ್ರೀತ್ ಬುಮ್ರಾ.

 

Published On - 8:49 am, Sat, 12 September 26

Loading...
Unable to load recommendations.
Follow Us