16ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ (IPL 2023) ಇಂದು ನಡೆದ ಮೊದಲ ಮ್ಯಾಚ್ನಲ್ಲಿ ನಿತೀಶ್ ರಾಣ ನಾಯಕತ್ವದ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಹಾರ್ದಿಕ್ ಪಾಂಡ್ಯ (Hardik Pandya) ನೇತೃತ್ವದ ಗುಜರಾತ್ ಟೈಟಾನ್ಸ್ (KKR vs GT) ಭರ್ಜರಿ ಜಯ ಸಾಧಿಸಿದೆ. ಕೋಲ್ಕತ್ತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಶುಭ್ಮನ್ ಗಿಲ್ ಅರ್ಧಶತಕ ಹಾಗೂ ವಿಜಯ್ ಶಂಕರ್ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಜಿಟಿ ತಂಡ 7 ವಿಕೆಟ್ಗಳ ಅಮೋಘ ಗೆಲುವು ಕಂಡಿತು. ಈ ಮೂಲಕ ಹಾರ್ದಿಕ್ ಪಡೆ ಪಾಯಿಂಟ್ ಟೇಬಲ್ನಲ್ಲಿ ಅಗ್ರಸ್ಥಾನಕ್ಕೇರಿದೆ. ಮೊದಲು ಬ್ಯಾಟಿಂಗ್ ಮಾಡಿದ ಕೆಕೆಆರ್ ನಿಗದಿತ 20 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 179 ರನ್ ಕಲೆಹಾಕಿತು. ರಹಮಾನುಲ್ಲಾ ಗುರ್ಬಾಜ್ 39 ಎಸೆತಗಳಲ್ಲಿ 5 ಫೋರ್, 7 ಸಿಕ್ಸರ್ ಸಿಡಿಸಿ 81 ರನ್ ಗಳಿಸಿದರು.
ಕೋಲ್ಕತ್ತಾ ನೈಟ್ ರೈಡರ್ಸ್ ತಂಡ: ಎನ್ ಜಗದೀಸನ್ (ವಿಕೆಟ್ ಕೀಪರ್), ಜೇಸನ್ ರಾಯ್, ವೆಂಕಟೇಶ್ ಅಯ್ಯರ್, ನಿತೀಶ್ ರಾಣಾ (ನಾಯಕ), ರಿಂಕು ಸಿಂಗ್, ಆಂಡ್ರೆ ರಸೆಲ್, ಸುನಿಲ್ ನರೈನ್, ಡೇವಿಡ್ ವೈಸ್, ವೈಭವ್ ಅರೋರಾ, ಉಮೇಶ್ ಯಾದವ್, ವರುಣ್ ಚಕ್ರವರ್ತಿ, ಸುಯಶ್ ಶರ್ಮಾ, ಮನದೀಪ್ ಸಿಂಗ್, ಲಿಟ್ಟನ್ ದಾಸ್, ಅನುಕುಲ್ ರಾಯ್, ಕುಲ್ವಂತ್ ಖೆಜ್ರೋಲಿಯಾ, ಟಿಮ್ ಸೌಥಿ, ಲಾಕಿ ಫರ್ಗುಸನ್, ಶಾರ್ದೂಲ್ ಠಾಕೂರ್, ರಹಮಾನುಲ್ಲಾ ಗುರ್ಬಾಜ್, ಹರ್ಷಿತ್ ರಾಣಾ, ಆರ್ಯ ದೇಸಾಯಿ.
ಗುಜರಾತ್ ಟೈಟಾನ್ಸ್ ತಂಡ: ವೃದ್ಧಿಮಾನ್ ಸಾಹ, ಶುಭ್ಮನ್ ಗಿಲ್, ಸಾಯಿ ಸುದರ್ಶನ್, ಹಾರ್ದಿಕ್ ಪಾಂಡ್ಯ (ನಾಯಕ), ವಿಜಯ್ ಶಂಕರ್, ರಾಹುಲ್ ತೇವಾಟಿಯಾ, ರಶೀದ್ ಖಾನ್, ಮೊಹಮ್ಮದ್ ಶಮಿ, ಜೋಶ್ವಾ ಲಿಟಲ್, ಯಶ್ ದಯಾಳ್, ಅಲ್ಜರಿ ಜೋಸೆಫ್, ಜಯಂತ್ ಯಾದವ್, ಮೋಹಿತ್ ಶರ್ಮಾ, ಶ್ರೀಕರ್ ಭರತ್, ಅಭಿನವ್ ಮನೋಹರ್, ಪ್ರದೀಪ್ ಸಾಂಗ್ವಾನ್, ಮ್ಯಾಥ್ಯೂ ವೇಡ್, ಒಡಿಯನ್ ಸ್ಮಿತ್, ಡೇವಿಡ್ ಮಿಲ್ಲರ್, ರವಿಶ್ರೀನಿವಾಸನ್ ಸಾಯಿ ಕಿಶೋರ್, ಶಿವಂ ಮಾವಿ, ದರ್ಶನ್ ನಲ್ಕಂಡೆ, ಉರ್ವಿಲ್ ಪಟೇಲ್.
ಗುಜರಾತ್ಗೆ 7 ವಿಕೆಟ್ಗಳ ಭರ್ಜರಿ ಜಯ
ವಿಜಯ್ ಶಂಕರ್ ಕೇವಲ 24 ಎಸೆತಗಳಲ್ಲಿ 2 ಫೋರ್, 5 ಸಿಕ್ಸರ್ ಸಿಡಿಸಿ 51 ರನ್ ಚಚ್ಚಿ ಜಯಕ್ಕೆ ಕಾರಣರಾದರು
ಗುಜರಾತ್ ಟೈಟಾನ್ಸ್: 180-3 (17.5 ಓವರ್)
ಇದೀಗ ಗುಜರಾತ್ ಪಾಯಿಂಟ್ ಟೇಬಲ್ನಲ್ಲಿ ಅಗ್ರಸ್ಥಾನಕ್ಕೇರಿದೆ
ಗುಜರಾತ್ ಟೈಟಾನ್ಸ್ ತಂಡ ಗೆಲುವಿನತ್ತ ಲಗ್ಗೆಯಿಡುತ್ತಿದೆ
ಜಿಟಿ ಗೆಲುವಿಗೆ 18 ಎಸೆತಗಳಲ್ಲಿ 14 ರನ್ ಬೇಕಾಗಿದೆ
17 ಓವರ್ ಅಂತ್ಯಕ್ಕೆ ಗುಜರಾತ್ 166-3
ವಿಜಯ್ ಶಂಕರ್ ಸ್ಪೋಟಕ ಬ್ಯಾಟಿಂಗ್
17ನೇ ಓವರ್ನ ವರುಣ್ ಚಕ್ರವರ್ತಿ ಬೌಲಿಂಗ್ನಲ್ಲಿ ಸತತ 2 ಸಿಕ್ಸರ್ ಸಿಡಿಸಿದ ಶಂಕರ್
16.3 ಓವರ್ ಅಂತ್ಯಕ್ಕೆ ಗುಜರಾತ್ 155-3
ಜಿಟಿ ಗೆಲುವಿಗೆ 21 ಎಸೆತಗಳಲ್ಲಿ 25 ರನ್ ಬೇಕಾಗಿದೆ
ರೋಚಕ ಘಟ್ಟದತ್ತ ಕೆಕೆಆರ್-ಜಿಟಿ ಪಂದ್ಯ
16 ಓವರ್ ಅಂತ್ಯಕ್ಕೆ ಗುಜರಾತ್ 3 ವಿಕೆಟ್ ನಷ್ಟಕ್ಕೆ 142 ರನ್ ಗಳಿಸಿದೆ
ಜಿಟಿ ಗೆಲುವಿಗೆ 24 ಎಸೆತಗಳಲ್ಲಿ 38 ರನ್ ಬೇಕಾಗಿದೆ
ಡೇವಿಡ್ ಮಿಲ್ಲರ್ ಸ್ಫೋಟಕ ಬ್ಯಾಟಿಂಗ್
15ನೇ ಓವರ್ನ ಸುಯೇಶ್ ಬೌಲಿಂಗ್ನಲ್ಲಿ ಸತತ 2 ಸಿಕ್ಸರ್ ಸಿಡಿಸಿದ ಮಿಲ್ಲರ್
14.3 ಓವರ್ ಅಂತ್ಯಕ್ಕೆ ಗುಜರಾತ್ 124-3
ಅರ್ಧಶತಕದ ಅಂಚಿನಲ್ಲಿ ಗಿಲ್ ಔಟ್
ಸಿಕ್ಸ್ ಸಿಡಿಸಲು ಹೋಗಿ ರಸೆಲ್ ಕ್ಯಾಚಿತ್ತು ಔಟಾದ ಗಿಲ್ (49 ರನ್)
11.3 ಓವರ್ ಅಂತ್ಯಕ್ಕೆ ಗುಜರಾತ್ 93-3
ಹಾರ್ದಿಕ್-ಗಿಲ್ ಅರ್ಧಶತಕದ ಜೊತೆಯಾಟಕ್ಕೆ ಬ್ರೇಕ್
ಹರ್ಶಿತ್ ಬೌಲಿಂಗ್ನಲ್ಲಿ ಎಲ್ಬಿ ಬಲೆಗೆ ಬಿದ್ದ ಹಾರ್ದಿಕ್ ಪಾಂಡ್ಯ (26)
10.4 ಓವರ್ ಅಂತ್ಯಕ್ಕೆ ಗುಜರಾತ್ 91-2
9 ಓವರ್ ಅಂತ್ಯಕ್ಕೆ ಗುಜರಾತ್ 1 ವಿಕೆಟ್ ಕಳೆದುಕೊಂಡು 78 ರನ್ ಗಳಿಸಿದೆ
ಹಾರ್ದಿಕ್ ಪಾಂಡ್ಯ (16), ಶುಭ್ಮನ್ ಗಿಲ್ (46) ಕ್ರೀಸ್ನಲ್ಲಿದ್ದಾರೆ
ಜಿಟಿ ಗೆಲುವಿಗೆ 66 ಎಸೆತಗಳಲ್ಲಿ 102 ರನ್ ಬೇಕಾಗಿದೆ
1 ವಿಕೆಟ್ ಕಳೆದುಕೊಂಡ ಜಿಟಿಗೆ ಗಿಲ್-ಹಾರ್ದಿಕ್ ಆಸರೆ
6ನೇ ಓವರ್ನ ವರುಣ್ ಚಕ್ರವರ್ತಿ ಬೌಲಿಂಗ್ನಲ್ಲಿ ಕೇವಲ 5 ರನ್
6 ಓವರ್ ಅಂತ್ಯಕ್ಕೆ ಗುಜರಾತ್ 52-1
ಗುಜರಾತ್ ತಂಡ ಮೊದಲ ವಿಕೆಟ್ ಕಳೆದುಕೊಂಡಿದೆ
5ನೇ ಓವರ್ನ ರಸೆಲ್ ಬೌಲಿಂಗ್ನಲ್ಲಿ ಸಾಹ (10) ಔಟ್
4.1 ಓವರ್ ಅಂತ್ಯಕ್ಕೆ ಗುಜರಾತ್ 41-1
3ನೇ ಒವರ್ನ ಹರ್ಶಿತ್ ಬೌಲಿಂಗ್ನಲ್ಲಿ 4 ಫೋರ್ ಸಿಡಿಸಿದ ಗಿಲ್
13 ಬಾಲ್ನಲ್ಲಿ 27 ರನ್ ಕಲೆಹಾಕಿದ ಗಿಲ್
3 ಓವರ್ ಅಂತ್ಯಕ್ಕೆ ಗುಜರಾತ್ 32-0
ಜಿಟಿ ಪರ ಮೊದಲ ಫೋರ್ ಬಾರಿಸಿದ ಗಿಲ್
2ನೇ ಓವರ್ನ ಆಂಡ್ರೆ ರಸೆಲ್ ಬೌಲಿಂಗ್ನಲ್ಲಿ 2 ಫೋರ್ ಸಿಡಿಸಿದ ಗಿಲ್
2 ಓವರ್ ಅಂತ್ಯಕ್ಕೆ ಗುಜರಾತ್ 13-0
ಜಿಟಿ ಪರ ಇನ್ನಿಂಗ್ಸ್ ಆರಂಭಿಸಿದ ಶುಭ್ಮನ್ ಗಿಲ್ ಹಾಗೂ ವೃದ್ದಿಮಾನ್ ಸಾಹ
ಮೊದಲ ಓವರ್ನ ಹರ್ಶಿತ್ ರಾಣ ಬೌಲಿಂಗ್ನಲ್ಲಿ 3 ರನ್
1 ಓವರ್ ಅಂತ್ಯಕ್ಕೆ ಗುಜರಾತ್ 3-0
ನಿಗದಿತ 20 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 179 ರನ್ ಕಲೆಹಾಕಿದ ಕೆಕೆಆರ್
ಕೊನೆಯ 20 ಓವರ್ನ ಶಮಿ ಬೌಲಿಂಗ್ನಲ್ಲಿ ಕೋಲ್ಕತ್ತಾ 12 ರನ್ ಗಳಿಸಿತು
4ನೇ ಎಸೆತದಲ್ಲಿ ರಸೆಲ್ (34) ಮಿಡ್ ವಿಕೆಟ್ನಲ್ಲಿ ಸಿಕ್ಸ್ ಸಿಡಿಸಿದರೆ, ಕೊನೆಯ ಎಸೆತದಲ್ಲಿ ಔಟಾದರು
ಈ ಬಾರಿ ಜಿಟಿ ವಿರುದ್ಧ ನಡೆಯದ ರಿಂಕು ಆಟ
ನೂರ್ ಅಹ್ಮದ್ ಬೌಲಿಂಗ್ನಲ್ಲಿ ರಿಂಕು ಸಿಂಗ್(19) ಔಟ್
18 ಓವರ್ ಅಂತ್ಯಕ್ಕೆ ಕೆಕೆಆರ್ 156-6
ರಶೀದ್ ಖಾನ್ ಬೌಲಿಂಗ್ನ 2ನೇ ಹಾಗೂ 5 ಎಸೆತದಲ್ಲಿ ಸಿಕ್ಸ್
ಡೀಪ್ ಮಿಡ್ ವಿಕೆಟ್ನಲ್ಲಿ ಎರಡು ಸಿಕ್ಸರ್ ಸಿಡಿಸಿ ಆಂಡ್ರೆ ರಸೆಲ್
17ನೇ ಓವರ್ನಲ್ಲಿ 14 ರನ್ ಬಂತು
17 ಓವರ್ ಅಂತ್ಯಕ್ಕೆ ಕೆಕೆಆರ್ 151-5
ಗುರ್ಬಾಜ್ ಸ್ಫೋಟಕ ಆಟಕ್ಕೆ ಬ್ರೇಕ್ ಹಾಕಿದ ನೂರ್ ಅಹ್ಮದ್
ರಶೀದ್ ಖಾನ್ಗೆ ಕ್ಯಾಚಿತ್ತು ನಿರ್ಗಮಿಸಿದ ಗುರ್ಬಾಜ್
39 ಎಸೆತಗಳಲ್ಲಿ 5 ಫೋರ್, 7 ಸಿಕ್ಸರ್ ಸಿಡಿಸಿ 81 ರನ್ಗೆ ಗುರ್ಬಾಜ್ ಔಟ್
15.2 ಓವರ್ ಅಂತ್ಯಕ್ಕೆ ಕೆಕೆಆರ್ 135-5
15ನೇ ಓವರ್ನ ರಶೀದ್ ಖಾನ್ ಬೌಲಿಂಗ್ನಲ್ಲಿ 17 ರನ್
ರಹಮಾನುಲ್ಲಾ ಗುರ್ಬಾಜ್ (81) ಒಂದು ಸಿಕ್ಸರ್, ಫೋರ್ ಸಿಡಿಸಿ ಮಿಂಚಿದರು
15 ಓವರ್ ಅಂತ್ಯಕ್ಕೆ ಕೆಕೆಆರ್ 134-4
ಮೋಹಿತ್ ಶರ್ಮಾ ಮೊದಲ ಓವರ್ನ ಮೊದಲ ಎಸೆತದಲ್ಲೇ ಸಿಕ್ಸರ್
ಶಾರ್ಟ್ ಬಾಲ್ ಅನ್ನು ಸಿಕ್ಸ್ ಆಗಿ ಪರಿವರ್ತಿಸಿದ ರಿಂಕು ಸಿಂಗ್
13.3 ಓವರ್ ಅಂತ್ಯಕ್ಕೆ ಕೆಕೆಆರ್ 113-4
13ನೇ ಓವರ್ನಲ್ಲಿ 8 ರನ್ ಕಲೆಹಾಕಿದ ಕೋಲ್ಕತ್ತಾ
ದುಬಾರಿಯಾದ ಹಾರ್ದಿಕ್ ಪಾಂಡ್ಯ ಬೌಲಿಂಗ್ (3 ಓವರ್ಗೆ 34 ರನ್)
13 ಓವರ್ ಅಂತ್ಯಕ್ಕೆ ಕೆಕೆಆರ್ 105-4
ನೂರ್ ಅಹ್ಮದ್ ಓವರ್ನ ಮೊದಲ ಎಸೆತದಲ್ಲೇ ಸಿಕ್ಸ್
ಲಾಂಗ್ಆಫ್ನಲ್ಲಿ ಚೆಂಡನ್ನು ಸಿಕ್ಸರ್ಗೆ ಅಟ್ಟಿದ ಗುರ್ಬಾಜ್
11.4 ಓವರ್ ಅಂತ್ಯಕ್ಕೆ ಕೆಕೆಆರ್ 96-4
ಒಂದೇ ಓವರ್ನಲ್ಲಿ ಎರಡು ವಿಕೆಟ್ ಕಿತ್ತ ಜೋಶ್ವಾ ಲಿಟಲ್
ರಾಹುಲ್ ತೆವಾಟಿಯಾಗೆ ಕ್ಯಾಚ್ ನೀಡಿ ಔಟಾದ ನಾಯಕ ನಿತೀಶ್ ರಾಣ(4)
10.4 ಓವರ್ ಅಂತ್ಯಕ್ಕೆ ಕೆಕೆಆರ್ 88-4
ಕೆಕೆಆರ್ 3ನೇ ವಿಕೆಟ್ ಪತನಗೊಂಡಿದೆ. 11ನೇ ಓವರ್ನ ಜೋಶ್ವಾ ಲಿಟನ್ ಮೊದಲ ಎಸೆತದಲ್ಲೇ ವೆಂಕಟೇಶ್ ಅಯ್ಯರ್ (11) ಎಲ್ಬಿ ಬಲೆಗೆ ಸಿಲುಕಿ ಔಟಾದರು.
10.1 ಓವರ್ ಅಂತ್ಯಕ್ಕೆ ಕೆಕೆಆರ್ 84-3
27 ಎಸೆತಗಳಲ್ಲಿ ಆಕರ್ಷಕ ಅರ್ಧಶತಕ ಸಿಡಿಸಿದ ರಹಮಾನುಲ್ಲಾ ಗುರ್ಬಾಜ್. ಇವರ ಖಾತೆಯಿಂದ 4 ಫೋರ್ ಹಾಗೂ 4 ಸಿಕ್ಸರ್ಗಳು ಮೂಡಿಬಂದಿವೆ.
9 ಓವರ್ ಅಂತ್ಯಕ್ಕೆ ಕೆಕೆಆರ್ 80-2
2 ವಿಕೆಟ್ ಪತನಗೊಂಡರೂ ಗುರ್ಬಾಜ್ (39) ಸ್ಫೋಟಕ ಬ್ಯಾಟಿಂಗ್ ಮುಂದುವರೆದಿದೆ.
ರಶೀದ್ ಖಾನ್ ಓವರ್ನಲ್ಲಿ ಒಂದು ಫೋರ್, ಒಂದು ಸಿಕ್ಸ್ ಸಿಡಿಸಿದ ಗುರ್ಬಾಜ್.
6 ಓವರ್ ಅಂತ್ಯಕ್ಕೆ ಕೆಕೆಆರ್ 61-2
ಗುರ್ಬಾಜ್ (27) ಸ್ಫೋಟಕ ಬ್ಯಾಟಿಂಗ್ 5ನೇ ಓವರ್ನಲ್ಲೂ ಮುಂದುವರೆದಿದೆ. ಶಮಿ ಬೌಲಿಂಗ್ನಲ್ಲಿ ತಲಾ ಒಂದು ಫೋನ್ ಸಿಕ್ಸರ್ ಸಿಡಿಸಿದರು. ಆದರೆ, ಕೊನೆಯ ಎಸೆತದಲ್ಲಿ ಶಾರ್ದೂಲ್ ಠಾಕೂರ್ (0) ಸಿಕ್ಸ್ ಸಿಡಿಸಲು ಹೋಗಿ ಔಟಾಗಿದ್ದಾರೆ.
5 ಓವರ್ ಅಂತ್ಯಕ್ಕೆ ಕೆಕೆಆರ್ 47-2
ಕೆಕೆಆರ್ನಿಂದ ಅಚ್ಚರಿ ನಿರ್ದಾರ. 3ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಶಾರ್ದೂಲ್ ಠಾಕೂರ್.
4ನೇ ಓವರ್ನ ಹಾರ್ದಿಕ್ ಪಾಂಡ್ಯ ಬೌಲಿಂಗ್ನಲ್ಲಿ 13 ರನ್ ಕಲೆಹಾಕಿದ ಕೆಕೆಆರ್. ಗುರ್ಬಾಜ್ರಿಂದ 2 ಮನಮೋಹಕ ಸಿಕ್ಸರ್ ಕೂಡ ಮೂಡಿಬಂತು.
4 ಓವರ್ ಅಂತ್ಯಕ್ಕೆ ಕೆಕೆಆರ್ 36-1
3ನೇ ಓವರ್ನಲ್ಲಿ ಕೆಕೆಆರ್ ಮೊದಲ ವಿಕೆಟ್ ಪತನಗೊಂಡಿದೆ. ಮೊಹಮ್ಮದ್ ಶಮಿ ಬೌಲಿಂಗ್ನಲ್ಲಿ 19 ರನ್ ಗಳಿಸಿದ್ದ ಜಗದೀಶನ್ ಎಲ್ಬಿ ಬಲೆಗೆ ಬಿದ್ದರು.
2.5 ಓವರ್ ಅಂತ್ಯಕ್ಕೆ ಕೆಕೆಆರ್ 23-1
ಪಂದ್ಯದ 2ನೇ ಓವರ್ ಬೌಲಿಂಗ್ ಮಾಡಿದ ಹಾರ್ದಿಕ್ ಪಾಂಡ್ಯ ಬರೋಬ್ಬರಿ 13 ರನ್ ನೀಡಿದ್ದಾರೆ. ಜಗದೀಶನ್ ಈ ಓವರ್ನಲ್ಲಿ 3 ಫೋರ್ ಚಚ್ಚಿದರು.
2 ಓವರ್ ಅಂತ್ಯಕ್ಕೆ ಕೆಕೆಆರ್ 16-0
2ನೇ ಓವರ್ನ ಹಾರ್ದಿಕ್ ಪಾಂಡ್ಯ ಅವರ 2ನೇ ಎಸೆತದಲ್ಲಿ ಜಗದೀಶನ್ ಥರ್ಡ್ ಮ್ಯಾನ್ ಕಡೆ ಫೋರ್ ಬಾರಿಸಿದರು.
ಕೆಕೆಆರ್ ಪರ ಇನ್ನಿಂಗ್ಸ್ ಆರಂಭಿಸಿದ ಜಗದೀಶನ್ ಹಾಗೂ ರಹಮಾನುಲ್ಲಾ ಗುರ್ಬಾಜ್
ಮೊದಲ ಓವರ್ನಲ್ಲಿ ಕೇವಲ3 ರನ್ ನೀಡಿದ ಶಮಿ
1 ಓವರ್ ಅಂತ್ಯಕ್ಕೆ ಕೆಕೆಆರ್ 3-0
ಯಾವುದೇ ಓವರ್ ಕಡಿತಗೊಳ್ಳದೆ 4:15ಕ್ಕೆ ಕೆಕೆಆರ್-ಜಿಟಿ ಪಂದ್ಯ ಶುರುವಾಗಲಿದೆ.
? Update from Kolkata ?
Play to start at 4:15 PM IST, no overs lost ✅
Follow the match ▶️ https://t.co/SZJorCvgb8 #TATAIPL | #KKRvGT
— IndianPremierLeague (@IPL) April 29, 2023
ಈಡನ್ ಗಾರ್ಡನ್ಸ್ನಲ್ಲಿ ಮಳೆಯ ಪ್ರಮಾಣ ಕಡಿಮೆ ಆಗಿದೆ. ಅಂಪೈರ್ಗಳು ಮೈದಾನಕ್ಕೆ ಬಂದು ಪರಿಶೀಲನೆ ನಡೆಸುತ್ತಿದ್ದಾರೆ. ಸದ್ಯದಲ್ಲೇ ಪಂದ್ಯ ಆರಂಭವಾಗುವ ನಿರೀಕ್ಷೆಯಿದೆ.
ಈಡನ್ ಗಾರ್ಡನ್ಸ್ ಮೈದಾನದಲ್ಲಿ ಜೋರಾಗಿ ಮಳೆ ಸುರಿಯುತ್ತಿದೆ. ಪಿಚ್ ಅನ್ನು ಕವರ್ ಮಾಡಲಾಗಿದ್ದು, ಪಂದ್ಯ ಆರಂಭ ವಿಳಂಬವಾಗುವ ಸಾಧ್ಯತೆ ಇದೆ.
KKR ? GT: Match start delayed due to the rain?️
(? – JIO Cinema) #IPL #IPL2023 #KKRvGT #Nitishrana #HardikPandya #Kolkata #CricketTwitter pic.twitter.com/ML2S7cxxyk
— Khel Cricket (@Khelnowcricket) April 29, 2023
ಗುಜರಾತ್: ಶುಭ್ಮನ್ ಗಿಲ್, ಶ್ರೀಕರ್ ಭರತ್, ಸಾಯಿ ಕಿಶೋರ್, ಶಿವಂ ಮಾವಿ, ಜಯಂತ್ ಯಾದವ್.
ಕೆಕೆಆರ್: ಸುಯೇಶ್ ಪ್ರಭುದೇಸಾಯಿ, ಮಂದೀಪ್ ಸಿಂಗ್, ಅನುಕುಲ್ ರಾಯ್, ಟಿಮ್ ಸೌಥೀ, ಕೆಜ್ರೋಲಿಯಾ.
ಇಂದಿನ ಪಂದ್ಯಕ್ಕೆ ಗುಜರಾತ್ ತಂಡದಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ.
ಗುಜರಾತ್ ಪ್ಲೇಯಿಂಗ್ XI: ವೃದ್ಧಿಮಾನ್ ಸಾಹ (ವಿಕೆಟ್ ಕೀಪರ್), ಅಭಿನವ್ ಮನೋಹರ್, ಹಾರ್ದಿಕ್ ಪಾಂಡ್ಯ (ನಾಯಕ), ವಿಜಯ್ ಶಂಕರ್, ಡೇವಿಡ್ ಮಿಲ್ಲರ್, ರಾಹುಲ್ ತೆವಾಟಿಯಾ, ರಶೀದ್ ಖಾನ್, ಮೊಹಮ್ಮದ್ ಶಮಿ, ನೂರ್ ಅಹ್ಮದ್, ಮೋಹಿತ್ ಶರ್ಮಾ, ಜೋಶ್ವಾ ಲಿಟಲ್.
ಇಂದಿನ ಪಂದ್ಯಕ್ಕೆ ಕೋಲ್ಕತ್ತಾ ತಂಡದಲ್ಲಿ ಎರಡು ಬದಲಾವಣೆ ಮಾಡಲಾಗಿದೆ. ಇಂಜುರಿಗೆ ತುತ್ತಾಗಿರುವ ಜೇಸನ್ ರಾಯ್ ಬದಲು ರಹಮಾನುಲ್ಲಾ ಗುರ್ಬಾಜ್ ಆಯ್ಕೆ ಆಗಿದ್ದಾರೆ. ಅಂತೆಯೆ ಉಮೇಶ್ ಯಾದವ್ ಬದಲು ಹರ್ಶಿತ್ ರಾಣ ಕಣಕ್ಕಿಳಿಯುತ್ತಿದ್ದಾರೆ.
ಕೆಕೆಆರ್ ಪ್ಲೇಯಿಂಗ್ XI: ಎನ್ ಜಗದೀಸನ್ (ವಿಕೆಟ್ ಕೀಪರ್), ರಹಮಾನುಲ್ಲಾ ಗುರ್ಬಾಜ್, ವೆಂಕಟೇಶ್ ಅಯ್ಯರ್, ನಿತೀಶ್ ರಾಣಾ (ನಾಯಕ), ರಿಂಕು ಸಿಂಗ್, ಆಂಡ್ರೆ ರಸೆಲ್, ಸುನಿಲ್ ನರೈನ್, ಡೇವಿಡ್ ವೈಸ್, ಶಾರ್ದೂಲ್ ಠಾಕೂರ್, ಹರ್ಶಿತ್ ರಾಣ, ವರುಣ್ ಚಕ್ರವರ್ತಿ.
ಟಾಸ್ ಗೆದ್ದ ಜಿಟಿ ತಂಡದ ನಾಯಕ ಹಾರ್ದಿಕ್ ಪಾಂಡ್ಯ ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ.
ಐಪಿಎಲ್ 2023 ರಲ್ಲಿ ಮಧ್ಯಾಹ್ನ 3:30ಕ್ಕೆ ಆರಂಭವಾಗಲಿರುವ ಮೊದಲ ಮ್ಯಾಚ್ನಲ್ಲಿ ನಿತೀಶ್ ರಾಣ ನಾಯಕತ್ವದ ಕೋಲ್ಕತ್ತಾ ನೈಟ್ ರೈಡರ್ಸ್ ಹಾಗೂ ಹಾರ್ದಿಕ್ ಪಾಂಡ್ಯ ನೇತೃತ್ವದ ಗುಜರಾತ್ ಟೈಟಾನ್ಸ್ ತಂಡ ಮುಖಾಮುಖಿ ಆಗುತ್ತಿದೆ.
Published On - 2:56 pm, Sat, 29 April 23