ಕನ್ನಡಿಗ ಮನೀಶ್ ಪಾಂಡೆ ದಾಂಪತ್ಯ ಜೀವನದಲ್ಲಿ ಬಿರುಕು? ಇನ್​​ಸ್ಟಾದಲ್ಲಿ ಫೋಟೋಸ್ ಡಿಲೀಟ್

|

Updated on: Jan 09, 2025 | 10:24 PM

Manish Pandey- Ashrita Shetty Divorce Rumors: ಟೀಂ ಇಂಡಿಯಾ ಕ್ರಿಕೆಟಿಗ ಮನೀಶ್ ಪಾಂಡೆ ಮತ್ತು ಅವರ ಮಟದಿ ಆಶ್ರಿತಾ ಶೆಟ್ಟಿ ಅವರ ದಾಂಪತ್ಯ ಜೀವನದಲ್ಲಿ ಬಿರುಗಾಳಿ ಎದ್ದಿದೆ ಎಂಬ ವದಂತಿ ಹಬ್ಬಲಾರಂಭಿಸಿದೆ. ಇದಕ್ಕೆ ಪೂರಕವಾಗಿ ಈ ಇಬ್ಬರೂ ಪರಸ್ಪರ ಇನ್ಸ್ಟಾಗ್ರಾಮ್‌ನಲ್ಲಿ ಅನ್‌ಫಾಲೋ ಮಾಡಿಕೊಂಡಿದ್ದು ಮತ್ತು ಜೊತೆಯಲ್ಲಿರುವ ಫೋಟೋಗಳನ್ನು ಡಿಲೀಟ್ ಮಾಡಿರುವುದು ಈ ವದಂತಿಗಳಿಗೆ ಕಾರಣವಾಗಿದೆ.

ಕನ್ನಡಿಗ ಮನೀಶ್ ಪಾಂಡೆ ದಾಂಪತ್ಯ ಜೀವನದಲ್ಲಿ ಬಿರುಕು? ಇನ್​​ಸ್ಟಾದಲ್ಲಿ ಫೋಟೋಸ್ ಡಿಲೀಟ್
ಮನೀಶ್ ಪಾಂಡೆ, ಆಶ್ರಿತಾ ಶೆಟ್ಟಿ
Follow us on

ಟೀಂ ಇಂಡಿಯಾ ಕ್ರಿಕೆಟಿಗ ಯುಜುವೇಂದ್ರ ಚಹಾಲ್ ಹಾಗೂ ಅವರ ಮಡದಿ ಧನಶ್ರೀ ವರ್ಮಾ ವಿಚ್ಛೇದನ ಪಡೆಯಲ್ಲಿದ್ದಾರೆ ಎಂಬ ಸುದ್ದಿಯ ನಡುವೆ ಮತ್ತೊಂದು ಸ್ಟಾರ್ ಜೋಡಿಯ ವೈಯಕ್ತಿಕ ಬದುಕಿನಲ್ಲಿ ಬಿರುಕು ಮೂಡಿದೆ ಎಂದು ವರದಿಯಾಗಿದೆ. ಆ ಸ್ಟಾರ್ ಕ್ರಿಕೆಟಿಗ ಬೇರ್ಯಾರು ಅಲ್ಲ, ನಮ್ಮ ಕನ್ನಡದ ಹುಡುಗ ಮನೀಶ್ ಪಾಂಡೆ. ಹೌದು,, ಮನೀಶ್ ಪಾಂಡೆ ಹಾಗೂ ಅವರ ಮಡದಿ ಆಶ್ರಿತಾ ಶೆಟ್ಟಿ ನಡುವೆ ವೈಮನಸ್ಸು ಮೂಡಿದ್ದು, ಈ ಇಬ್ಬರು ಕೂಡ ವಿಚ್ಛೇದನ ಪಡೆಯಲಿದ್ದಾರೆ ಎಂದು ಹೇಳಲಾಗುತ್ತಿದೆ.

ಫೋಟೋಸ್ ಡಿಲೀಟ್

ಈ ವದಂತಿ ಇಷ್ಟು ವೇಗವಾಗಿ ಎಲ್ಲೆಡೆ ಹಬ್ಬಲು ಕಾರಣವೂ ಇದ್ದು, ಈ ಸ್ಟಾರ್ ಜೋಡಿ ತಮ್ಮ ಅಧಿಕೃತ ಇನ್​ಸ್ಟಾಗ್ರಾಮ್ ಖಾತೆಯಲ್ಲಿ ಪರಸ್ಪರ ಅನ್​ಫಾಲೋ ಮಾಡಿದ್ದಾರೆ. ಇದರ ಜೊತೆಗೆ ಇಬ್ಬರ ಖಾತೆಯಿಂದಲೂ ಇಬ್ಬರು ಜೊತೆಗಿರುವ ಫೋಟೋಗಳನ್ನು ಡಿಲೀಟ್ ಮಾಡಲಾಗಿದೆ. ಹೀಗಾಗಿ ಈ ಇಬ್ಬರ ಸಂಬಂಧದಲ್ಲಿ ಬಿರುಕು ಮೂಡಿದೆ ಎಂದು ಹೇಳಲಾಗುತ್ತಿದೆ. ಆದಾಗ್ಯೂ ಈ ಇಬ್ಬರು ಕೂಡ ಈ ಬಗ್ಗೆ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ. ಹೀಗಾಗಿ ಮುಂಬರುವ ದಿನಗಳಲ್ಲಿ ಈಗ ಹಬ್ಬಿರುವ ವದಂತಿಗೆ ಈ ಸ್ಟಾರ್ ದಂಪತಿಗಳು ಯಾವ ರೀತಿಯ ಪ್ರತಿಕ್ರಿಯೆ ನೀಡುತ್ತಾರೆ ಎಂಬುದನ್ನು ಕಾದುನೋಡಬೇಕಿದೆ.

2019 ರಲ್ಲಿ ಮದುವೆ

ಕನ್ನಡಿಗ ಮನೀಶ್ ಪಾಂಡೆ ಹಾಗೂ ಆಶ್ರಿತಾ ಶೆಟ್ಟಿ 2019 ರಲ್ಲಿ ವೈವಾಹಿಕ ಜೀವನಕ್ಕೆ ಕಾಲಿರಿಸಿದ್ದರು. ಕರ್ನಾಟಕದವರೇ ಆಗಿರುವ ಆಶ್ರಿತಾ ತಮಿಳು ಚಿತ್ರಗಳಲ್ಲೂ ಕೆಲಸ ಮಾಡಿದ್ದಾರೆ. ಮದುವೆಯ ನಂತರ, ಅವರು ಅನೇಕ ಬಾರಿ ಐಪಿಎಲ್ ಪಂದ್ಯಗಳಲ್ಲಿ ತನ್ನ ಪತಿಯನ್ನು ಬೆಂಬಲಿಸಲು ಮೈದಾನಕ್ಕೆ ಬಂದಿದ್ದರು. ಆದರೆ ಐಪಿಎಲ್ 2024 ರ ಸಮಯದಲ್ಲಿ ಅವರು ಕ್ರೀಡಾಂಗಣದಲ್ಲಿ ಕಾಣಿಸಿಕೊಂಡಿರಲಿಲ್ಲ. ಮನೀಶ್ ಪಾಂಡೆ ಐಪಿಎಲ್ 2024 ರಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್‌ನ ಭಾಗವಾಗಿದ್ದರು. ಇದಲ್ಲದೆ, ಅವರ ತಂಡವು ಪ್ರಶಸ್ತಿಯನ್ನು ಗೆದ್ದುಕೊಂಡಿತು. ಇದಾದ ನಂತರವೂ ಆಶ್ರಿತಾ ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಪೋಸ್ಟ್ ಹಾಕಿರಲಿಲ್ಲ.

ಮನೀಶ್ ವೃತ್ತಿಜೀವನ

ಇನ್ನು ಮನೀಶ್ ಪಾಂಡೆ ಅವರ ವೃತ್ತಿಜೀವನದ ಬಗ್ಗೆ ಹೇಳುವುದಾದರೆ.. 2015 ರಲ್ಲಿ ಟೀಂ ಇಂಡಿಯಾ ಪರ ಅಂತರರಾಷ್ಟ್ರೀಯ ಕ್ರಿಕೆಟ್​ಗೆ ಪದಾರ್ಪಣೆ ಮಾಡಿದ ಮನೀಶ್​ಗೆ ತಂಡದಲ್ಲಿ ಖಾಯಂ ಸ್ಥಾನ ಗಿಟ್ಟಿಸಿಕೊಳ್ಳಲು ಸಾದ್ಯವಾಗಲಿಲ್ಲ. ಹೀಗಾಗಿ ಅವರ ಅಂತರರಾಷ್ಟ್ರೀಯ ವೃತ್ತಿಜೀವನ ಅಲ್ಪಾವಧಿಯಲ್ಲೇ ಕೊನೆಗೊಂಡಿತು. ಭಾರತದ ಪರ ಇದುವರೆಗೆ 29 ಏಕದಿನ ಪಂದ್ಯಗಳನ್ನಾಡಿರುವ ಮನೀಶ್ ಇದರಲ್ಲಿ 566 ರನ್ ಕಲೆಹಾಕಿದ್ದರೆ, 39 ಟಿ20ಪಂದ್ಯಗಳಲ್ಲಿ 709 ರನ್ ಗಳಿಸಿದ್ದಾರೆ. ದೇಶೀ ಕ್ರಿಕೆಟ್​ನಲ್ಲಿ ಕರ್ನಾಟಕ ತಂಡವನ್ನು ಪ್ರತಿನಿಧಿಸುವ ಮನೀಶ್ ಅವರನ್ನು ಪ್ರಸ್ತುತ ನಡೆಯುತ್ತಿರುವ ವಿಜಯ್ ಹಜಾರೆ ಟ್ರೋಫಿಗೆ ತಂಡದಿಂದ ಕೈಬಿಡಲಾಗಿತ್ತು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ