ರೋ-ಕೊ ಅಭಿಮಾನಿಗಳಿಗೆ ಗುಡ್ ನ್ಯೂಸ್: ಐಪಿಎಲ್​ಗೂ ಮುನ್ನ 14 ಪಂದ್ಯಗಳು

ಟಿ20 ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ ಬಳಿಕ ಟೀಮ್ ಇಂಡಿಯಾದ ದಿಗ್ಗಜರಾದ 'ಹಿಟ್‌ಮ್ಯಾನ್' ರೋಹಿತ್ ಶರ್ಮಾ ಮತ್ತು 'ಕಿಂಗ್' ವಿರಾಟ್ ಕೊಹ್ಲಿ ಅವರನ್ನು ಜಂಟಿಯಾಗಿ ನೀಲಿ ಜೆರ್ಸಿಯಲ್ಲಿ ನೋಡಲು ಕಾತರರಾಗಿದ್ದ ಕೋಟ್ಯಂತರ ಅಭಿಮಾನಿಗಳಿಗೆ ಬಿಸಿಸಿಐ ಮತ್ತು ಐಸಿಸಿ ಜಂಟಿಯಾಗಿ ಗುಡ್ ನ್ಯೂಸ್​ವೊಂದನ್ನು ನೀಡಿದೆ.

ರೋ-ಕೊ ಅಭಿಮಾನಿಗಳಿಗೆ ಗುಡ್ ನ್ಯೂಸ್: ಐಪಿಎಲ್​ಗೂ ಮುನ್ನ 14 ಪಂದ್ಯಗಳು
ರೋಹಿತ್ ಶರ್ಮಾ - ವಿರಾಟ್ ಕೊಹ್ಲಿ
Image Credit source: GettyImages

Updated on: Sep 10, 2026 | 10:25 AM

2027ರ ಐಸಿಸಿ ಏಕದಿನ ವಿಶ್ವಕಪ್‌ಗೆ ಭರ್ಜರಿ ತಯಾರಿ ನಡೆಸುತ್ತಿರುವ ಟೀಮ್ ಇಂಡಿಯಾ, ಮುಂಬರುವ ಇಂಡಿಯನ್ ಪ್ರೀಮಿಯರ್ ಲೀಗ್ ಆರಂಭಕ್ಕೂ ಮುನ್ನ ಒಟ್ಟು 14 ಏಕದಿನ ಪಂದ್ಯಗಳನ್ನು ಆಡಲಿದೆ. ಬಿಸಿಸಿಐ ಮತ್ತು ಐಸಿಸಿಯ ಫ್ಯೂಚರ್ ಟೂರ್ ಪ್ರೋಗ್ರಾಮ್ಸ್​ ಪ್ರಕಾರ, ಭಾರತ ತಂಡವು ವಿಶ್ವದ ಪ್ರಮುಖ ನಾಲ್ಕು ದೇಶಗಳ ವಿರುದ್ಧ ಸರಣಿ ಆಡಲಿದ್ದು, ಇದು ವಿಶ್ವಕಪ್‌ಗೆ ಬಲಿಷ್ಠ ತಂಡವನ್ನು ಕಟ್ಟಲು ನೆರವಾಗಲಿದೆ.

ರೋಹಿತ್-ಕೊಹ್ಲಿ ಅಭಿಮಾನಿಗಳಿಗೆ ಗುಡ್​ ನ್ಯೂಸ್:

ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಟಿ20 ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಈಗಾಗಲೇ ನಿವೃತ್ತಿ ಘೋಷಿಸಿರುವುದರಿಂದ, ಐಪಿಎಲ್ 2027 ಕ್ಕೂ ಮುನ್ನ ನಡೆಯಲಿರುವ ಈ 14 ಏಕದಿನ ಪಂದ್ಯಗಳು ಇಬ್ಬರೂ ದಿಗ್ಗಜರನ್ನು ನೀಲಿ ಜೆರ್ಸಿಯಲ್ಲಿ ಒಟ್ಟಿಗೆ ನೋಡಲು ಅಭಿಮಾನಿಗಳಿಗೆ ಸಿಗಲಿರುವ ಸುವರ್ಣ ಅವಕಾಶವಾಗಿದೆ.

ಈ ಸುದೀರ್ಘ ಏಕದಿನ ಸರಣಿಗಳು 2027ರ ವಿಶ್ವಕಪ್‌ಗೆ ಇವರ ಫಾರ್ಮ್ ಹಾಗೂ ಲಯವನ್ನು ಬಲಿಷ್ಠಗೊಳಿಸಲು ನೆರವಾಗಲಿದೆ. ಹಾಗೆಯೇ ಈ ಸರಣಿಗಳ ಬಹುತೇಕ ಪಂದ್ಯಗಳು ತವರಿನ ಮೈದಾನಗಳಲ್ಲೇ ನಡೆಯುವುದರಿಂದ ಕಿಂಗ್ ಕೊಹ್ಲಿ ಮತ್ತು ಹಿಟ್‌ಮ್ಯಾನ್ ರೋಹಿತ್ ಅವರಿಂದ ರನ್ ಹಾಗೂ ಶತಕಗಳ ಸುರಿಮಳೆಯನ್ನೇ ಅಭಿಮಾನಿಗಳು ನಿರೀಕ್ಷಿಸಬಹುದಾಗಿದೆ.

ತವರಿನಲ್ಲಿ ಜಿದ್ದಾಜಿದ್ದಿ:

ಒಟ್ಟು 14 ಪಂದ್ಯಗಳ ಪೈಕಿ 9 ಪಂದ್ಯಗಳನ್ನು ಭಾರತವು ತನ್ನ ಸ್ವದೇಶಿ ಮೈದಾನಗಳಲ್ಲೇ ಆಡಲಿದೆ. ವೆಸ್ಟ್ ಇಂಡೀಸ್, ಶ್ರೀಲಂಕಾ ಮತ್ತು ಝಿಂಬಾಬ್ವೆ ತಂಡಗಳು ಭಾರತಕ್ಕೆ ಪ್ರವಾಸ ಕೈಗೊಳ್ಳಲಿವೆ.

ಈ ವೇಳಾಪಟ್ಟಿಯಲ್ಲಿರುವ ಏಕೈಕ ವಿದೇಶಿ ಪ್ರವಾಸವೆಂದರೆ ಅದು ನ್ಯೂಝಿಲೆಂಡ್ ವಿರುದ್ಧದ 5 ಪಂದ್ಯಗಳ ಸರಣಿ. ಕಿವೀಸ್ ನಾಡಿನ ಹಸಿರು ಹಾಗೂ ವೇಗದ ಪಿಚ್‌ಗಳಲ್ಲಿ ಭಾರತೀಯ ಬ್ಯಾಟರ್‌ಗಳಿಗೆ ಇದು ಅಗ್ನಿಪರೀಕ್ಷೆಯಾಗಲಿದೆ.

ಪಂದ್ಯಗಳ ಸಂಪೂರ್ಣ ವಿವರ ಹೀಗಿದೆ:

ಎದುರಾಳಿ ತಂಡ ಏಕದಿನ ಪಂದ್ಯಗಳ ಸಂಖ್ಯೆ ಸರಣಿಯ ವಿವರ
ವೆಸ್ಟ್ ಇಂಡೀಸ್ 3 ಭಾರತದಲ್ಲಿ ನಡೆಯಲಿರುವ ಸರಣಿ
ನ್ಯೂಝಿಲೆಂಡ್ 5 ನ್ಯೂಝಿಲೆಂಡ್ ಪ್ರವಾಸ (ವಿದೇಶಿ ಸರಣಿ)
ಶ್ರೀಲಂಕಾ 3 ಭಾರತದಲ್ಲಿ ನಡೆಯಲಿರುವ ಸರಣಿ
ಝಿಂಬಾಬ್ವೆ 3 ಭಾರತದಲ್ಲಿ ನಡೆಯಲಿರುವ ಸರಣಿ
ಒಟ್ಟು ಪಂದ್ಯಗಳು     14

ಇದನ್ನೂ ಓದಿ: 39 ವರ್ಷಗಳ ದಾಖಲೆ ಧೂಳೀಪಟ: ಹೊಸ ಇತಿಹಾಸ ಬರೆದ ಇಶಾನ್ ಕಿಶನ್

ವಿಶ್ವಕಪ್ 2027ಕ್ಕೆ ಭದ್ರ ಬುನಾದಿ:

2027ರ ಏಕದಿನ ವಿಶ್ವಕಪ್ ಸೌತ್ ಆಫ್ರಿಕಾ, ಝಿಂಬಾಬ್ವೆ ಮತ್ತು ನಮೀಬಿಯಾದಲ್ಲಿ ಜರುಗಲಿದ್ದು, ಅದಕ್ಕೂ ಮುನ್ನ ಯುವ ಆಟಗಾರರನ್ನು ಪರೀಕ್ಷಿಸಲು ಮತ್ತು ಪ್ರಮುಖ ತಂಡವನ್ನು ಅಂತಿಮಗೊಳಿಸಲು ಮ್ಯಾನೇಜ್‌ಮೆಂಟ್‌ಗೆ ಇದು ಸುವರ್ಣ ಅವಕಾಶವಾಗಿದೆ.

Loading...
Unable to load recommendations.
Follow Us