ಐಪಿಎಲ್ನ 69ನೇ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಮುಂಬೈ ಇಂಡಿಯನ್ಸ್ 8 ವಿಕೆಟ್‌ಗಳ ಜಯ ಸಾಧಿಸಿದೆ. ಇದರೊಂದಿಗೆ ಪ್ಲೇ ಆಫ್ ಭರವಸೆಯನ್ನು ಜೀವಂತವಾಗಿರಿಸಿದೆ. ಈಗ ಕೊನೆಯ ಪಂದ್ಯದಲ್ಲಿ ಆರ್ಸಿಬಿ, ಗುಜರಾತ್ ವಿರುದ್ಧ ಸೋತರೆ ಮುಂಬೈ ಸುಲಭವಾಗಿ ಪ್ಲೇ ಆಫ್ಗೇರಲಿದೆ. ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಎಸ್‌ಆರ್‌ಎಚ್ 20 ಓವರ್‌ಗಳಲ್ಲಿ 5 ವಿಕೆಟ್‌ಗೆ 200 ರನ್ ಗಳಿಸಿತು. ಇದಕ್ಕುತ್ತರವಾಗಿ ಗ್ರೀನ್ ಅವರ ಅಬ್ಬರದ ಶತಕ ಹಾಗೂ ರೋಹಿತ್ ಶರ್ಮಾ ಅವರ ಅರ್ಧಶತಕದ ನೆರವಿನಿಂದಾಗಿ 18ನೇ ಓವರ್ನಲ್ಲೇ ಗೆಲುವಿನ ದಡ ಸೇರಿತು.
ಮುಂಬೈ ಪರ ಅಬ್ಬರದ ಬ್ಯಾಟಿಂಗ್ ಮಾಡಿದ ಗ್ರೀನ್ ಚೊಚ್ಚಲ ಐಪಿಎಲ್ ಶತಕ ಸಿಡಿಸಿದ್ದಾರೆ
ಇದರೊಂದಿಗೆ ಮುಂಬೈ ಸುಲಭ ಜಯ ಸಾಧಿಸಿದೆ
ಈಗ ಆರ್ಸಿಬಿ ಪ್ಲೇ ಆಫ್ಗೇರಬೇಕೆಂದರೆ ಗುಜರಾತ್ ವಿರುದ್ಧದ ಪಂದ್ಯದಲ್ಲಿ ಆರ್ಸಿಬಿ ಗೆಲ್ಲಲೇಬೇಕಾಗಿದೆ.
17ನೇ ಓವರ್ನಲ್ಲಿ 13 ರನ್ ಬಂದವು
ಈ ಓವರ್ನಲ್ಲಿ ಸೂರ್ಯ ಹಾಗೂ ಗ್ರೀನ್ ತಲಾ ಒಂದೊಂದು ಬೌಂಡರಿ ಬಾರಿಸಿದರು
ಮುಂಬೈ 193/2
ಮಲಿಕ್ ಬೌಲ್ ಮಾಡಿದ 16ನೇ ಓವರ್ನಲ್ಲಿ 20 ರನ್ ಬಂದವು
ಈ ಓವರ್ನಲ್ಲಿ ಗ್ರೀನ್ 1 ಬೌಂಡರಿ ಹಾಗೂ 1 ಸಿಕ್ಸರ್ ಬಾರಿಸಿದರೆ
ಕೊನೆಯ 2 ಎಸೆತಗಳಲ್ಲಿ ಸೂರ್ಯ 1 ಬೌಂಡರಿ ಹಾಗೂ 1 ಸಿಕ್ಸರ್ ಸಿಡಿಸಿದರು
14ನೇ ಓವರ್‌ನ ಮೊದಲ ಎಸೆತದಲ್ಲೇ ರೋಹಿತ್ ವಿಕೆಟ್ ಒಪ್ಪಿಸಿದರು
ಮಯಾಂಕ್ ಎಸೆತದಲ್ಲಿ ರೋಹಿತ್ ನಿತೀಶ್ಗೆ ಕ್ಯಾಚಿತ್ತು ಔಟಾದರು
ರೋಹಿತ್ ಶರ್ಮಾ 56 (37)
13ನೇ ಓವರ್‌ನ ಮೊದಲ ಎಸೆತವನ್ನು ಲೆಗ್ ಬ್ಯಾಕ್ ಇನ್ಸೈಡ್ನಲ್ಲಿ ಸಿಕ್ಸರ್ಗಟ್ಟಿದ ಗ್ರೀನ್, ಕೊನೆಯ ಎಸೆತವನ್ನು ಮಿಡ್ ವಿಕೆಟ್ನಲ್ಲಿ ಸಿಕ್ಸರ್ಗಟ್ಟಿದರು.
ಮುಂಬೈ 148/1
12ನೇ ಓವರ್‌ನ 2ನೇ ಎಸೆತವನ್ನು ಎಕ್ಸ್ಟ್ರಾ ಕವರ್ನಲ್ಲಿ ಬೌಂಡರಿ ಬಾರಿಸಿದ ರೋಹಿತ್ ತಮ್ಮ ಅರ್ಧಶತಕ ಪೂರೈಸಿದರು.
12 ಓವರ್ ಅಂತ್ಯಕ್ಕೆ 132/1
ರೋಹಿತ್ ಶರ್ಮಾ 55* (35)
ಕ್ಯಾಮರೂನ್ ಗ್ರೀನ್58* (28)
11ನೇ ಓವರ್ನಲ್ಲಿ ಬೌಂಡರಿ ಬಾರಿಸಿದ ಗ್ರೀನ್ ಇಬ್ಬರ ನಡುವಿನ ಶತಕದ ಜೊತೆಯಾಟವನ್ನು ಪೂರ್ಣಗೊಳಿಸಿದರು.
11 ಓವರ್ ಅಂತ್ಯಕ್ಕೆ 121/1
10ನೇ ಓವರ್ನಲ್ಲಿ 14 ರನ್ ಬಂದವು
ಈ ಓವರ್ನಲ್ಲಿ ಗ್ರೀನ್ 3 ಬೌಂಡರಿ ಬಾರಿಸಿದರು
10 ಓವರ್ ಅಂತ್ಯಕ್ಕೆ 114/1
ಕ್ಯಾಮರೂನ್ ಗ್ರೀನ್ ಕೇವಲ 20 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ್ದಾರೆ. ಮೂರನೇ ಕ್ರಮಾಂಕದಲ್ಲಿ ಬಂದ ಗ್ರೀನ್ ಅದ್ಭುತ ಅರ್ಧಶತಕ ಗಳಿಸಿದರು. ಗ್ರೀನ್ 9ನೇ ಓವರ್ನಲ್ಲಿ ಸಿಕ್ಸರ್ನೊಂದಿಗೆ ಅರ್ಧಶತಕ ಪೂರೈಸಿದರು.
ಮುಂಬೈ ಇನ್ನಿಂಗ್ಸ್ನ 6 ಓವರ್ ಮುಗಿದಿದೆ
ಈ ಪವರ್ ಪ್ಲೇ ನಲ್ಲಿ ಮುಂಬೈ 1 ವಿಕೆಟ್ ಕಳೆದುಕೊಂಡು 60 ರನ್ ಕಲೆಹಾಕಿದೆ
6ನೇ ಓವರ್ನಲ್ಲೂ 1 ಸಿಕ್ಸರ್ ಹಾಗೂ 2 ಬೌಂಡರಿ ಬಂದವು
ಕ್ಯಾಮರೂನ್ ಗ್ರೀನ್30* (10)
ರೋಹಿತ್ ಶರ್ಮಾ 15* (15)
4ನೇ ಓವರ್‌ನ 2ನೇ ಎಸೆತವನ್ನು ರೋಹಿತ್ ಪಾಯಿಂಟ್ ದಿಕ್ಕಿನಲ್ಲಿ ಬೌಂಡರಿ ಬಾರಿಸಿದರೆ, ಕೊನೆಯ ಎಸೆತವನ್ನು ಗ್ರೀನ್ ಬೌಂಡರಿಗಟ್ಟಿದರು.
ಭುವನೇಶ್ವರ್ ಕುಮಾರ್ ಅವರ ಮೂರನೇ ಓವರ್‌ನ 5ನೇ ಎಸೆತದಲ್ಲಿ ಇಶಾನ್ ಕಿಶನ್ 14 ರನ್‌ಗಳಿಸಿ ವಿಕೆಟ್ ಒಪ್ಪಿಸಿದರು. ಹ್ಯಾರಿ ಬ್ರೂಕ್ ಮಿಡ್‌ವಿಕೆಟ್‌ನಲ್ಲಿ ಡೈವಿಂಗ್ ಕ್ಯಾಚ್ ಪಡೆದರು.
ಮುಂಬೈ ಪರ ಕಿಶನ್ ಹಾಗೂ ರೋಹಿತ್ ಇನ್ನಿಂಗ್ಸ್ ಆರಂಭಿಸಿದ್ದಾರೆ.
ಮೊದಲನೇ ಓವರ್‌ನ ಕೊನೆಯ ಎಸೆತದಲ್ಲಿ ಬೌಂಡರಿ ಬಂದರೆ
2ನೇ ಓವರ್‌ನ ಮೊದಲ ಎಸೆತದಲ್ಲಿ ಸಿಕ್ಸ್, 2ನೇ ಎಸೆತದಲ್ಲಿ ಫೋರ್ ಬಂತು
2 ಓವರ್ ಅಂತ್ಯಕ್ಕೆ 17/0
ಹೈದರಾಬಾದ್ ಆರಂಭಿಕರ ಅರ್ಧಶತಕದ ನೆರವಿನಿಂದ ಹೈದರಾಬಾದ್ 200 ರನ್ ಕಲೆಹಾಕಿದೆ
20ನೇ ಓವರ್‌ನ ಕೊನೆಯ ಎಸೆತವನ್ನು ಸಿಕ್ಸರ್ಗಟ್ಟಿದ ಮಾರ್ಕಾಮ್ ತಂಡವನ್ನು 200ರ ಗಡಿ ದಾಟಿಸಿದರು.
ಹೈದರಾಬಾದ್ 201/5
19ನೇ ಓವರ್ ಬೌಲ್ ಮಾಡಿದ ಆಕಾಶ್ 2 ವಿಕೆಟ್ ಉರುಳಿಸಿದರು
ಈ 2 ವಿಕೆಟ್ಗಳೊಂದಿಗೆ ಆಕಾಶ್ ಖಾತೆಗೆ 4 ವಿಕೆಟ್ ಬಿದ್ದಿವೆ
19 ಓವರ್ ಅಂತ್ಯಕ್ಕೆ 186/5
ಕಾರ್ತಿಕೇಯ ಬೌಲ್ ಮಾಡಿದ 18ನೇ ಓವರ್ನಲ್ಲಿ ಫಿಲಿಪ್ಸ್ ಕೇವಲ 1 ರನ್ಗಳಿಗೆ ವಿಕೆಟ್ ಒಪ್ಪಿಸಿದರು.
18 ಓವರ್ ಅಂತ್ಯಕ್ಕೆ 180/3
17ನೇ ಓವರ್‌ನ 2ನೇ ಎಸೆತವನ್ನು ಬೌಂಡರಿಗಟ್ಟಿದ ಮಯಾಂಕ್ 4ನೇ ಎಸೆತದಲ್ಲಿ ಕೀಪರ್ ಕೈಗೆ ಕ್ಯಾಚಿತ್ತು ಔಟಾದರು
17 ಓವರ್ ಅಂತ್ಯಕ್ಕೆ 174/2
ಮಯಾಂಕ್ ಅಗರ್ವಾಲ್ 83 (46)
15ನೇ ಓವರ್‌ನ 3ನೇ ಎಸೆತವನ್ನು ಸಿಕ್ಸರ್ಗಟ್ಟಿದ ಮಯಾಂಕ್ ತಂಡವನ್ನು 150ರ ಗಡಿ ದಾಟಿಸಿದರು
ಈ ಓವರ್ನಲ್ಲಿ 13 ರನ್ ಬಂತು
ಹೆನ್ರಿಕ್ ಕ್ಲಾಸೆನ್6* (3)
ಮಯಾಂಕ್ ಅಗರ್ವಾಲ್ 73* (40)
ಹೈದರಾಬಾದ್ ಮೊದಲ ವಿಕೆಟ್ ಪತನವಾಗಿದೆ
14ನೇ ಓವರ್‌ನ 5ನೇ ಎಸೆತದಲ್ಲಿ ವಿವ್ರಾಂತ್ ಶರ್ಮಾ ಕ್ಯಾಚಿತ್ತು ಔಟಾದರು
14 ಓವರ್ ಅಂತ್ಯಕ್ಕೆ 144/1
13ನೇ ಓವರ್‌ನ 2ನೇ ಎಸೆತವನ್ನು ಬೌಂಡರಿಗಟ್ಟಿದ ಮಯಾಂಕ್ ತಮ್ಮ ಅರ್ಧಶತಕ ಪೂರೈಸಿದರು.
1 ಬೌಂಡರಿ ಹಾಗೂ 2 ಸಿಕ್ಸರ್ ಸೇರಿದಂತೆ 19 ರನ್ ಬಂದವು
13 ಓವರ್ ಅಂತ್ಯಕ್ಕೆ 130/0
11ನೇ ಓವರ್ನಲ್ಲಿ 10 ರನ್ ಬಂದವು
ಈ ಓವರ್ನಲ್ಲಿ 2 ಬೌಂಡರಿ ಬಂದವು
ಇದರೊಂದಿಗೆ ಹೈದರಾಬಾದ್ ಶತಕ ಕೂಡ ಪೂರೈಸಿತು.
11 ಓವರ್ ಅಂತ್ಯಕ್ಕೆ 103/0
ಹೈದರಾಬಾದ್ ಇನ್ನಿಂಗ್ಸ್ನ 10 ಓವರ್ ಮುಗಿದಿದೆ
ತಂಡ ಈ 10 ಓವರ್‌ಗಳಲ್ಲಿ ಯಾವುದೇ ವಿಕೆಟ್ ಕಳೆದುಕೊಳ್ಳದೆ 93 ರನ್ ಬಾರಿಸಿದೆ.
ಓವರ್‌ನ 5ನೇ ಎಸೆತದಲ್ಲಿ ಸಿಂಗಲ್ ತೆಗೆದ ವಿವ್ರಾಂತ್ ಶರ್ಮ ತಮ್ಮ ಅರ್ಧಶತಕ ಪೂರೈಸಿದರು.
ಮಯಾಂಕ್ ಅಗರ್ವಾಲ್ 35* (24)
ವಿವ್ರಾಂತ್ ಶರ್ಮಾ 50* (36)
ಚಾವ್ಲಾ ಬೌಲ್ ಮಾಡಿದ 8ನೇ ಓವರ್ನಲ್ಲಿ 10 ರನ್ ಬಂದವು
ಓವರ್‌ನ ಮೊದಲ ಎಸೆತವನ್ನು ವಿವ್ರಾಂತ್ ಶರ್ಮಾ ಮಿಡ್ ವಿಕೆಟ್ನಲ್ಲಿ ಸಿಕ್ಸರ್ಗಟ್ಟಿದರು
8 ಓವರ್ ಅಂತ್ಯಕ್ಕೆ 74/0
ಚಾವ್ಲಾ ಬೌಲ್ ಮಾಡಿದ 6ನೇ ಓವರ್ನಲ್ಲಿ 10 ರನ್ ಬಂದವು
ಓವರ್‌ನ ಮೊದಲ ಮತ್ತು ಕೊನೆಯ ಎಸೆತದಲ್ಲಿ ಬೌಂಡರಿ ಬಂತು.
ಹಾಗೆಯೇ ಈ ಓವರ್ನಲ್ಲಿ ತಂಡದ ಅರ್ಧಶತಕ ಕೂಡ ಪೂರ್ಣಗೊಂಡಿತು
ಹೈದರಾಬಾದ್ 53/0
ಆಕಾಶ್ ಬೌಲ್ ಮಾಡಿದ 5ನೇ ಓವರ್ನಲ್ಲಿ 11 ರನ್ ಬಂದವು
ಓವರ್‌ನ 2ನೇ ಮತ್ತು ಕೊನೆಯ ಎಸೆತವನ್ನು ಮಯಾಂಕ್ ಮಿಡ್ ಆನ್ನಲ್ಲಿ ಬೌಂಡರಿಗಟ್ಟಿದರು.
ಜೋರ್ಡಾನ್ ಬೌಲ್ ಮಾಡಿದ 4ನೇ ಓವರ್ನಲ್ಲಿ 10 ರನ್ ಬಂದವು
ಓವರ್‌ನ 2 ಮತ್ತು 3ನೇ ಎಸೆತವನ್ನು ವಿವ್ರಾಂತ್ ಶರ್ಮಾ ಬೌಂಡರಿಗಟ್ಟಿದರು.
ಹೈದರಾಬಾದ್ 32/0
ಜೇಸನ್ ಬೆಹ್ರೆನ್ಡಾರ್ಫ್ ಬೌಲ್ ಮಾಡಿದ 3ನೇ ಓವರ್ನಲ್ಲಿ ಮಯಾಂಕ್ 2 ಬೌಂಡರಿ ಬಾರಿಸಿದರು.
3 ಓವರ್ ಅಂತ್ಯಕ್ಕೆ ಹೈದರಾಬಾದ್ 22/0
ಹೈದರಾಬಾದ್ ತಂಡದ ಬ್ಯಾಟಿಂಗ್ ಆರಂಭವಾಗಿದೆ. ಬೆಹ್ರೆಂಡಾರ್ಫ್ ಅವರ ಓವರ್‌ನ ಮೂರನೇ ಎಸೆತದಲ್ಲಿ ಬೌಂಡರಿ ಬಾರಿಸುವ ಮೂಲಕ ವಿವ್ರಾಂತ್ ಹೈದರಾಬಾದ್ ಖಾತೆ ತೆರೆದರು.
ಮಯಾಂಕ್ ಅಗರ್ವಾಲ್, ವಿವ್ರಾಂತ್ ಶರ್ಮಾ, ಐಡೆನ್ ಮಾರ್ಕ್ರಾಮ್, ಹೆನ್ರಿಚ್ ಕ್ಲಾಸೆನ್, ಹ್ಯಾರಿ ಬ್ರೂಕ್, ನಿತೀಶ್ ರೆಡ್ಡಿ, ಗ್ಲೆನ್ ಫಿಲಿಪ್ಸ್, ಸನ್ವೀರ್ ಸಿಂಗ್, ಮಯಾಂಕ್ ದಾಗರ್, ಭುವನೇಶ್ವರ್ ಕುಮಾರ್, ಉಮ್ರಾನ್ ಮಲಿಕ್
ರೋಹಿತ್ ಶರ್ಮಾ, ಇಶಾನ್ ಕಿಶನ್, ಕ್ಯಾಮೆರಾನ್ ಗ್ರೀನ್, ಸೂರ್ಯಕುಮಾರ್ ಯಾದವ್, ಟಿಮ್ ಡೇವಿಡ್, ನೆಹಾಲ್ ವಧೇರಾ, ಕ್ರಿಸ್ ಜೋರ್ಡಾನ್, ಪಿಯೂಷ್ ಚಾವ್ಲಾ, ಜೇಸನ್ ಬೆಹ್ರೆಂಡಾರ್ಫ್, ಕುಮಾರ್ ಕಾರ್ತಿಕೇಯ, ಆಕಾಶ್ ಮಧ್ವಲ್
ಇದು ಗುಂಪು ಹಂತದ ಕೊನೆಯ ದಿನ. ಮೊದಲ ಪಂದ್ಯ ಮುಂಬೈ ಇಂಡಿಯನ್ಸ್ ಮತ್ತು ಸನ್ ರೈಸರ್ಸ್ ಹೈದರಾಬಾದ್ ನಡುವೆ ನಡೆಯಲಿದೆ. ಪ್ಲೇ ಆಫ್‌ಗೆ ಹೋಗುವ ಭರವಸೆಯನ್ನು ಉಳಿಸಿಕೊಳ್ಳಲು, ಮುಂಬೈ ಇಂದು ದೊಡ್ಡ ಅಂತರದಿಂದ ಗೆಲ್ಲಲೇಬೇಕು.
ಟಾಸ್ ಗೆದ್ದ ಮುಂಬೈ ನಾಯಕ ರೋಹಿತ್ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದ್ದಾರೆ.
Published On - 3:02 pm, Sun, 21 May 23