
ಟೀಂ ಇಂಡಿಯಾವನ್ನು ಎದುರಿಸಲು ಸಕಲ ತಯಾರಿ ಮಾಡಿಕೊಳ್ಳಲಾಗಿದೆ ಎಂದು ಆತಿಥೇಯ ನ್ಯೂಜಿಲೆಂಡ್ ತಂಡದ ನಾಯಕ ಮಿಚೆಲ್ ಸ್ಯಾಂಟ್ನರ್ ಈ ಸರಣಿ ಆರಂಭಕ್ಕೂ ಮುನ್ನವೇ ಹೇಳಿದ್ದರು. ಆದರೆ ಭಾರತದ ಅಬ್ಬರದ ಬ್ಯಾಟಿಂಗ್ಗೆ ಸ್ಯಾಂಟ್ನರ್ ಪಡೆಯ ಬಳಿ ಉತ್ತರವೇ ಇಲ್ಲದಂತ್ತಾಗಿದೆ. ಸತತ ಮೂರು ಪಂದ್ಯಗಳನ್ನು ಸೋತು ಸರಣ ಕಳೆದುಕೊಂಡ ಬಳಿಕ ಮಾತನಾಡಿದ ಮಿಚೆಲ್ ಸ್ಯಾಂಟ್ನರ್, ಭಾರತದ ಆರಂಭಿಕ ಬ್ಯಾಟರ್ಗಳಾದ ಅಭಿಷೇಕ್ ಶರ್ಮಾ ಮತ್ತು ವೈಭವ್ ಸೂರ್ಯವಂಶಿ ಅವರ ಆಟವನ್ನು ಮನಸಾರೆ ಹೊಗಳಿದ್ದಾರೆ. ಪವರ್ಪ್ಲೇನಲ್ಲಿ ಹೇಗೆ ಬ್ಯಾಟಿಂಗ್ ಮಾಡಬೇಕು ಎಂಬುದನ್ನು ಈ ಜೋಡಿ ತೋರಿಸಿಕೊಟ್ಟಿದೆ ಎಂದು ಅವರು ಹೇಳಿದ್ದಾರೆ.
ಭಾರತದ ಈ ಸ್ಫೋಟಕ ಆರಂಭಿಕ ಜೋಡಿ ಕೇವಲ ಆರು ಓವರ್ಗಳಲ್ಲೇ 118 ರನ್ ಗಳಿಸಿ, ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಪವರ್ಪ್ಲೇನಲ್ಲಿ ದಾಖಲಾದ ಅತಿ ಹೆಚ್ಚು ರನ್ಗಳ ವಿಶ್ವದಾಖಲೆ ನಿರ್ಮಿಸಿತು. ಅಭಿಷೇಕ್ ಶರ್ಮಾ ಕೇವಲ 38 ಎಸೆತಗಳಲ್ಲಿ 11 ಸಿಕ್ಸರ್ ಮತ್ತು 9 ಬೌಂಡರಿಗಳ ನೆರವಿನಿಂದ 113 ರನ್ ಸಿಡಿಸಿದರು. ಈ ಸ್ಫೋಟಕ ಇನ್ನಿಂಗ್ಸ್ ನೆರವಿನಿಂದ ಭಾರತ 199 ರನ್ಗಳ ಗುರಿಯನ್ನು ಆರು ಓವರ್ಗಳಿಗೂ ಮುನ್ನವೇ ಬೆನ್ನಟ್ಟಿತು.
ಪಂದ್ಯದ ಬಳಿಕ ಮಾತನಾಡಿದ ಸ್ಯಾಂಟ್ನರ್, ‘ಅಭಿಷೇಕ್ ಮತ್ತು ವೈಭವ್ ಬ್ಯಾಟಿಂಗ್ಗೆ ಇಳಿದು ಅಬ್ಬರಿಸಲು ಶುರು ಮಾಡಿದರೆ ಅವರನ್ನು ತಡೆಯುವುದು ತುಂಬಾ ಕಷ್ಟ. ಐಪಿಎಲ್ನಲ್ಲೂ ಅವರ ಆಟವನ್ನು ನೋಡಿದ್ದೇವೆ. ಈಗ ನ್ಯೂಜಿಲೆಂಡ್ನಲ್ಲೂ ಅವರ ಅಬ್ಬರವನ್ನು ಕಣ್ಣಾರೆ ಕಂಡಿದ್ದೇವೆ ಎಂದರು.
ಇನ್ನು ಅಭಿಷೇಕ್ ಮತ್ತು ವೈಭವ್ ಇಬ್ಬರೂ ಎಡಗೈ ಬ್ಯಾಟರ್ಗಳಾಗಿರುವುದರಿಂದ ತಾವು ಬೌಲಿಂಗ್ಗೆ ಬರುವುದನ್ನು ತಡಮಾಡಿದ್ದೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಸ್ಯಾಂಟ್ನರ್, ‘ಮೊದಲ ಇನ್ನಿಂಗ್ಸ್ನಲ್ಲಿ ಅಕ್ಷರ್ ಪಟೇಲ್ ಬೌಲಿಂಗ್ ಮಾಡುವುದನ್ನು ಗಮನಿಸಿದ್ದೆ. ಪಿಚ್ನಲ್ಲಿ ಸ್ಪಿನ್ನರ್ಗಳಿಗೆ ಹೆಚ್ಚು ನೆರವು ಸಿಗುತ್ತಿರಲಿಲ್ಲ. ವೇಗದ ಬೌಲರ್ಗಳಿಗೆ ಸ್ವಲ್ಪ ಸೀಮ್ ಚಲನೆ ಸಿಗುತ್ತಿತ್ತು. ಹೀಗಾಗಿ ಆರಂಭದಲ್ಲಿ ಇಬ್ಬರು ಎಡಗೈ ಬ್ಯಾಟರ್ಗಳ ವಿರುದ್ಧ ಮೈಕಲ್ ಬ್ರೇಸ್ವೆಲ್ ಅವರನ್ನು ಬೌಲಿಂಗ್ಗೆ ಕರೆತಂದೆವು. ಆದರೆ ಅವರು ಸ್ಪಿನ್ ಬೌಲಿಂಗ್ ಅನ್ನು ಚೆನ್ನಾಗಿ ಎದುರಿಸಿದರು.
ಅದಾದ ಬಳಿಕ ನಾವು ಬೇರೆ ಬೇರೆ ಪ್ರಯತ್ನಗಳನ್ನು ಮಾಡಿದೆವು. ಆದರೂ ಅವರನ್ನು ಹೇಗೆ ತಡೆಯಬೇಕು ಎಂಬುದನ್ನು ಕಂಡುಕೊಳ್ಳಬೇಕಿದೆ. ಈ ಜೋಡಿಯನ್ನು ನಿಯಂತ್ರಿಸುವುದು ಕಷ್ಟ ಎಂಬುದು ನಮಗೆ ಈಗಾಗಲೇ ಗೊತ್ತಿದೆ. ಮುಂದಿನ ಪಂದ್ಯ ಆಕ್ಲೆಂಡ್ನ ಈಡನ್ ಪಾರ್ಕ್ನಲ್ಲಿ ನಡೆಯಲಿದೆ. ಅಲ್ಲಿ ಮೈದಾನದ ಗಾತ್ರ ಇನ್ನೂ ಚಿಕ್ಕದಾಗಿರುವ ಸಾಧ್ಯತೆಯಿದೆ. ಹೀಗಾಗಿ ಅವರನ್ನು ತಡೆಯಲು ಹೊಸ ತಂತ್ರಗಳನ್ನು ರೂಪಿಸಬೇಕಿದೆ ಎಂದು ಸ್ಯಾಂಟ್ನರ್ ಹೇಳಿದರು.
‘ಅದು ಅಷ್ಟು ಸುಲಭವಲ್ಲ’; ಯುವರಾಜ್ ಸವಾಲನ್ನು ನಯವಾಗಿಯೇ ತಿರಸ್ಕರಿಸಿದ ಅಭಿಷೇಕ್
ಇದರ ಜೊತೆಗೆ ನ್ಯೂಜಿಲೆಂಡ್ ತಂಡದ ಬ್ಯಾಟಿಂಗ್ ಮತ್ತು ಮೊದಲ ಇನ್ನಿಂಗ್ಸ್ನಲ್ಲಿ ಗಳಿಸಿದ ಮೊತ್ತದ ಬಗ್ಗೆ ಮಾತನಾಡಿದ ಸ್ಯಾಂಟ್ನರ್, ‘ಡ್ಯಾರಿಲ್ ಮಿಚೆಲ್ ಮತ್ತು ಬೆವನ್ ಜೇಕಬ್ಸ್ ಅವರ ಜೊತೆಯಾಟದಿಂದ ತಂಡ 200 ರನ್ಗಳ ಗುರಿ ತಲುಪುವ ನಿರೀಕ್ಷೆಯಲ್ಲಿತ್ತು. ನಾವು 200 ರನ್ಗಳತ್ತ ಸಾಗುತ್ತಿದ್ದೆವು. ಇಂತಹ ಪಿಚ್ನಲ್ಲಿ 200 ರನ್ಗಳು ಉತ್ತಮ ಮೊತ್ತವೇ ಆಗಿತ್ತು. ಆದರೆ ಕೊನೆಯ ಕೆಲವು ಓವರ್ಗಳಲ್ಲಿ ಭಾರತದ ಬೌಲರ್ಗಳು ಅದ್ಭುತವಾಗಿ ಬೌಲಿಂಗ್ ಮಾಡಿದರು. ಯಾರ್ಕರ್ಗಳನ್ನು ಸರಿಯಾಗಿ ಎಸೆದು ನಮಗೆ ರನ್ ಗಳಿಸಲು ಕಷ್ಟವಾಗುವಂತೆ ಮಾಡಿದರು.
ಪಿಚ್ ಬ್ಯಾಟಿಂಗ್ಗೆ ಉತ್ತಮವಾಗಿತ್ತು ಎಂಬುದು ನಮಗೆ ಗೊತ್ತಿತ್ತು. ಇಬ್ಬನಿ ಬಿದ್ದಾಗ ಬ್ಯಾಟರ್ಗಳನ್ನು ನಿಯಂತ್ರಿಸುವುದು ಇನ್ನಷ್ಟು ಕಷ್ಟವಾಗುತ್ತದೆ. ಈ ಆಟದಲ್ಲಿ ಪವರ್ಪ್ಲೇ ಬಹಳ ಮುಖ್ಯ. ಅದನ್ನು ಹೇಗೆ ಬಳಸಿಕೊಳ್ಳಬೇಕು ಎಂಬುದನ್ನು ಭಾರತದ ಬ್ಯಾಟರ್ಗಳು ತೋರಿಸಿಕೊಟ್ಟಿದ್ದಾರೆ ಎಂದು ಸ್ಯಾಂಟ್ನರ್ ಮೆಚ್ಚುಗೆ ವ್ಯಕ್ತಪಡಿಸಿದರು.
Published On - 9:47 pm, Tue, 27 October 26