ಐಪಿಎಲ್ 2022 ರಲ್ಲಿ (IPL 2022) ಭಾನುವಾರ ನಡೆದ 46ನೇ ಪಂದ್ಯದಲ್ಲಿ ಎಂಎಸ್ ಧೋನಿ ನಾಯಕತ್ವದ ಮೂಲಕ ಚೆನ್ನೈ ಸೂಪರ್ ಕಿಂಗ್ಸ್ ಪುನಃ ಗೆಲುವಿನ ಹಳಿಗೆ ಮರಳಿದೆ. ಆರಂಭಿಕ ರುತುರಾಜ್ ಗಾಯಕ್ವಾಡ್ (Ruturaj Gaikwad) ಶತಕವಂಚಿತ ಬ್ಯಾಟಿಂಗ್ ಹಾಗೂ ಡೆವೊನ್ ಕಾನ್‌ವೇ ನೀಡಿದ ಸಮರ್ಥ ಬೆಂಬಲದಿಂದ ಚೆನ್ನೈ 20 ಓವರ್ಗೆ 2 ವಿಕೆಟ್ ನಷ್ಟಕ್ಕೆ 202 ರನ್ ಕಲೆಹಾಕಿತು. ಪ್ರತಿಯಾಗಿ ಮುಕೇಶ್ ಚೌಧರಿ ದಾಳಿಗೆ ನಲುಗಿದ ಸನ್‌ರೈಸರ್ಸ್ 6 ವಿಕೆಟ್‌ಗೆ 189 ರನ್‌ಗಳಿಸಲಷ್ಟೇ ಶಕ್ತವಾಯಿತು. ನಿಕೋಲಸ್ ಪೂರನ್ ಏಕಾಂಗಿ ಹೋರಾಟ ನಡೆಸಿದರೂ ತಂಡವನ್ನು ಗೆಲುವಿನ ದಡ ಸೇರಿಸಲು ಸಾಧ್ಯವಾಗಲಿಲ್ಲ. ಧೋನಿಯ ಚುರುಕಿನ ನಾಯಕತ್ವ ಚೆನ್ನೈಗೆ ಗೆಲುವಿನ ಸಿಹಿ ನೀಡಿತು. ರವೀಂದ್ರ ಜಡೇಜಾ (Ravindra Jadeja) ಅವರು ನಾಯಕತ್ವವನ್ನು ಎಂಎಸ್ ಧೋನಿ ಅವರಿಗೆ ಪುನಃ ನೀಡಿದ್ದು ಚೆನ್ನೈ ಸೂಪರ್ ಕಿಂಗ್ಸ್ ಅದೃಷ್ಟ ಬದಲಾದಂತಿದೆ. ಈ ಬಗ್ಗೆ ಟ್ವಿಟರ್ನಲ್ಲಿ ಅಭಿಮಾನಿಗಳು ಸಂಭ್ರಮ ಹಂಚಿಕೊಂಡಿದ್ದಾರೆ.
Csk under Csk under
Jadeja dhoni
captaincy captaincy pic.twitter.com/lW9vBDjvDb— Tweet Chor? (@Pagal_aurat) May 1, 2022
CSK after Dhoni resumed captaincy pic.twitter.com/pYmNmxr2bP
— Sagar (@sagarcasm) May 1, 2022
Captain Dhoni entering the stadium today pic.twitter.com/nvDHu7qD81
— Rajabets India??? (@smileandraja) May 1, 2022
*Dhoni returns as CSK captain*
Ruturaj: pic.twitter.com/avLAODO6xZ
— Silly Point (@FarziCricketer) May 1, 2022
Csk fans to Dhoni pic.twitter.com/0LNlRQj0O2
— ~RammY~ (@AlwaysRCever) May 2, 2022
* CSK wins as soon as Dhoni returns as Captain *
Jadeja to CSK : pic.twitter.com/CV5prS2Y95
— N I T I N (@theNitinWalke) May 1, 2022
CSK under CSK under
Jadeja Dhoni pic.twitter.com/Y2PoW9ZQak— Manoj Pareek (@mrpareekji) May 1, 2022
ಪಂದ್ಯ ಮುಗಿದ ಬಳಿಕ ನಾಯಕತ್ವದ ಬಗ್ಗೆ ಮಾತನಾಡಿದ ಎಂಎಸ್ ಧೋನಿ, “ಈ ವರ್ಷ ಸಿಎಸ್ಕೆ ತಂಡದ ನಾಯಕನ ಜವಬ್ದಾರಿ ರವೀಂದ್ರ ಜಡೇಜಾ ಅವರಿಗೆ ಎಂದು ಕಳೆದ ಸೀಸನ್ನಲ್ಲಿಯೇ ತೀರ್ಮಾನವಾಗಿತ್ತು. ಇದಕ್ಕಾಗಿ ಅವರು ಸಾಕಷ್ಟು ಸಮಯದಿಂದ ಸಜ್ಜಾಗುತ್ತಿದ್ದರು. ನನ್ನ ಆಶಯ ಕೂಡ ಅದೇ ಆಗಿತ್ತು. ಮೊದಲ ಎರಡು ಪಂದ್ಯಗಳಲ್ಲಿ ನಾವಿಬ್ಬರು ಮಾಹಿತಿ ಹಂಚಿಕೊಳ್ಳುತ್ತಿದ್ದೆವು. ನಂತರ ಬೌಲಿಂಗ್, ಫೀಲ್ಡಿಂಗ್ ಆಯ್ಕೆ ಎಲ್ಲವನ್ನು ಅವರಿಗೆ ಬಿಟ್ಟುಕೊಟ್ಟೆ. ಯಾಕೆಂದರೆ ನಾಯಕತ್ವ ಅವನು ಮಾಡಿದ, ನಾನು ಕೇವಲ ಟಾಸ್ಗೆ ಹೋಗಲು ಮಾತ್ರ ಎಂಬ ಭಾವನೆ ಕೊನೆಯಲ್ಲಿ ಅವರಿಗೆ ಮೂಡಬಾರದು. ಮೈದಾನದಲ್ಲಿ ನಾಯಕ ಕೆಲ ನಿರ್ಧಾರಗಳನ್ನು ತೆಗೆದುಕೊಳ್ಳಬೇಕು. ಮತ್ತು ಆ ನಿರ್ಧಾರಕ್ಕೆ ಆತನೇ ಜವಾಬ್ದಾರಿ ಆಗಿರಬೇಕು,” ಎಂಬುದು ಎಂಎಸ್ಡಿ ಮಾತು.
ಕ್ರೀಡಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ, ಪ್ರಮುಖ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 11:36 am, Mon, 2 May 22