‘ಭಾರತ ವಿರುದ್ಧದ ಗೆಲುವೆ ಪಾಕ್ ತಂಡದ ಕ್ರಿಕೆಟ್ ಕಾರಣ’; ಮೊಹಮ್ಮದ್ ಯೂಸುಫ್

ಪಾಕಿಸ್ತಾನ ಕ್ರಿಕೆಟ್ ತಂಡದ ಪ್ರದರ್ಶನ ಇತ್ತೀಚೆಗೆ ಕಳಪೆಯಾಗಿದ್ದು, ಇದಕ್ಕೆ ಹಲವು ಕಾರಣಗಳಿವೆ. 2021ರ ಟಿ20 ವಿಶ್ವಕಪ್‌ನಲ್ಲಿ ಭಾರತದ ವಿರುದ್ಧ ಗಳಿಸಿದ ಗೆಲುವೇ ತಂಡದ ಕುಸಿತಕ್ಕೆ ಕಾರಣ ಎಂದು ಮಾಜಿ ಆಟಗಾರ ಮೊಹಮ್ಮದ್ ಯೂಸುಫ್ ಹೇಳಿದ್ದಾರೆ. ಆ ಗೆಲುವಿನ ನಂತರ ಆಟಗಾರರು ಅತಿಯಾದ ಆತ್ಮವಿಶ್ವಾಸದಿಂದ ನಡೆದುಕೊಂಡರು, ವಿನಮ್ರತೆ ಕಳೆದುಕೊಂಡರು. ನಾಯಕತ್ವದ ಸಮಸ್ಯೆ ಮತ್ತು ಜವಾಬ್ದಾರಿಯ ಕೊರತೆಯೂ ಪಾಕ್ ಕ್ರಿಕೆಟ್‌ನ ದುಃಸ್ಥಿತಿಗೆ ಕಾರಣವಾಗಿದೆ.

‘ಭಾರತ ವಿರುದ್ಧದ ಗೆಲುವೆ ಪಾಕ್ ತಂಡದ ಕ್ರಿಕೆಟ್ ಕಾರಣ’; ಮೊಹಮ್ಮದ್ ಯೂಸುಫ್
ಪಾಕಿಸ್ತಾನ ತಂಡ

Updated on: Sep 06, 2026 | 7:19 PM

ಪಾಕಿಸ್ತಾನ ಕ್ರಿಕೆಟ್ ತಂಡದ ಪ್ರದರ್ಶನ ವರ್ಷದಿಂದ ವರ್ಷಕ್ಕೆ ಕುಸಿಯಲಾರಂಭಿಸಿದೆ. ಅದು ಪುರುಷರ ತಂಡವಾಗಿರಲಿ ಅಥವಾ ಮಹಿಳಾ ತಂಡವಾಗಿರಲಿ ಎರಡೂ ತಂಡಗಳ ಪ್ರದರ್ಶನ ತೀರ ಕಳಪೆಯಾಗಿದೆ. ಐದಾರು ವರ್ಷಗಳ ಹಿಂದೆ ಅತ್ಯಂತ ಬಲಿಷ್ಠ ತಂಡಗಳಲ್ಲಿ ಒಂದಾಗಿದ್ದ ಪಾಕಿಸ್ತಾನ ತಂಡ ಇಂದು ಅತ್ಯಂತ ದುರ್ಬಲ ತಂಡಗಳ ಎದುರು ಸೋಲುತ್ತಿದೆ. ತಂಡದ ಈ ಕಳಪೆ ಪ್ರದರ್ಶನಕ್ಕೆ ನೂರಾರು ಕಾರಣಗಳಿವೆ. ಸರಿಯಾದ ಮ್ಯಾನೇಜ್​ಮೆಂಟ್ ಇಲ್ಲದಿರುವುದು, ನಾಯಕರನ್ನು ಆಗಾಗ್ಗೆ ಬದಲಾಯಿಸುವುದು, ಕೆಲವು ಕಳಪೆ ಪ್ರದರ್ಶನಗಳ ಬಳಿಕ ಆಟಗಾರರನ್ನು ತಂಡದಿಂದ ಕೈಬಿಡುವುದು. ಇತ್ಯಾದಿ ಕಾರಣಗಳು ಪಾಕ್ ತಂಡದ ಅಧಃಪತನಕ್ಕೆ ಕಾರಣವಾಗಿದೆ. ಆದಾಗ್ಯೂ ಪಾಕ್ ತಂಡದ ಈ ಹೀನಾಯ ಸ್ಥಿತಿಗೆ ಟೀಂ ಇಂಡಿಯಾ ವಿರುದ್ಧದ ಅದೊಂದು ಗೆಲವೇ ಕಾರಣವೆಂಬ ಅಚ್ಚರಿಯ ಹೇಳಿಕೆಯನ್ನು ಪಾಕ್ ತಂಡದ ಮಾಜಿ ಆಟಗಾರ ಮೊಹಮ್ಮದ್ ಯೂಸುಫ್ ನೀಡಿದ್ದಾರೆ.

ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ

ಪಾಕಿಸ್ತಾನದ ಸಾಮಾ ಟಿವಿಯಲ್ಲಿ ಮಾತನಾಡಿರುವ ಮೊಹಮ್ಮದ್ ಯೂಸುಫ್,‘ 2021 ರಲ್ಲಿ ನಾವು ಭಾರತದ ವಿರುದ್ಧ ಗೆದ್ದ ಪಂದ್ಯ ನಮಗೆ ಭಾರಿ ನಷ್ಟವನ್ನುಂಟು ಮಾಡಿದೆ. ಆ ಗೆಲುವಿನ ನಂತರ, ಆಟಗಾರರು ತಾವು ಏನೋ ದೊಡ್ಡ ಸಾಧನೆ ಮಾಡಿದ್ದೇವೆ ಎಂದು ಭಾವಿಸಿದರು. ಮುಂದೆ ಏನು ಮಾಡಬೇಕೆಂದು ಅವರಿಗೆ ತಿಳಿದಿರಲಿಲ್ಲ. ನೀವು ಉತ್ತಮ ಪ್ರದರ್ಶನ ನೀಡುತ್ತಿರುವಾಗ, ನೀವು ವಿನಮ್ರರಾಗಿರಬೇಕು. ನೀವು ನಿಮ್ಮ ಕಾಲರ್ ಅನ್ನು ಎತ್ತಿ ಅಸಭ್ಯವಾಗಿ ವರ್ತಿಸಿದರೆ, ನೀವು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಪಾಕಿಸ್ತಾನ ಕ್ರಿಕೆಟ್ ಇಂತಹ ಹಲವು ಸಮಸ್ಯೆಗಳನ್ನು ಎದುರಿಸಿದೆ.

ತಂಡದ ಪ್ರದರ್ಶನ ಭಯಾನಕವಾಗಿದೆ

ತಂಡದಲ್ಲಿರುವ ಎಲ್ಲರೂ ಪಾಕಿಸ್ತಾನದ ನಾಯಕರಾಗಲು ಪ್ರಯತ್ನಿಸುತ್ತಿದ್ದರು. ಹೀಗಾಗಿ ಪಾಕಿಸ್ತಾನ ಕ್ರಿಕೆಟ್ ಈಗಲೂ ಅದರ ಪರಿಣಾಮಗಳನ್ನು ಅನುಭವಿಸುತ್ತಿದೆ. ಕಳೆದ ನಾಲ್ಕು ಅಥವಾ ಐದು ವರ್ಷಗಳಲ್ಲಿ ಪಾಕಿಸ್ತಾನ ಆಡಿದ ಎಲ್ಲಾ ಕ್ರಿಕೆಟ್‌ಗಳನ್ನು ನೋಡಿ, ಏಕದಿನ ವಿಶ್ವಕಪ್​ನಿಂದ ಹಿಡಿದು, ಟಿ20 ವಿಶ್ವಕಪ್‌, ಏಷ್ಯಾಕಪ್ ಮತ್ತು ಚಾಂಪಿಯನ್ಸ್ ಟ್ರೋಫಿಯವರೆಗೆ ತಂಡದ ಪ್ರದರ್ಶನ ಭಯಾನಕವಾಗಿದೆ.

ಪಿಸಿಬಿಯ ಕೆಲಸವನ್ನು ಬೆಂಬಲಿಸುತ್ತೇನೆ

ಪಿಸಿಬಿ ಯಾವಾಗಲೂ ಆಟಗಾರರನ್ನು ಬೆಂಬಲಿಸಿದೆ. ಅನೇಕ ತರಬೇತುದಾರರು ಬಂದು ಹೋಗಿದ್ದಾರೆ. ಅಲ್ಲದೆ ಪಾಕಿಸ್ತಾನ ತಂಡಕ್ಕೆ ಸಹಾಯ ಮಾಡಲು ಹಲವು ವಿಷಯಗಳು ಬದಲಾಗಿವೆ, ಆದರೆ ಯಾವುದೇ ಆಟಗಾರ ಎದ್ದು ನಿಂತು ಜವಾಬ್ದಾರಿಯನ್ನು ತೆಗೆದುಕೊಂಡಿಲ್ಲ. ಅಂತಿಮವಾಗಿ, ಪಿಸಿಬಿಯೇ ಹಲವು ಕ್ರಮಗಳನ್ನು ತೆಗೆದುಕೊಳ್ಳಬೇಕಾಯಿತು. ಆದ್ದರಿಂದ ನಾನು ಪಿಸಿಬಿಯ ಕೆಲಸವನ್ನು ಬೆಂಬಲಿಸುತ್ತೇನೆ’.

ಎಲ್ಲಾ ಮಾದರಿಯ ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿದ ಟೀಂ ಇಂಡಿಯಾ ಆಟಗಾರ

ಒಂಬತ್ತನೇ ಸ್ಥಾನದಲ್ಲಿದೆ

ಇದೀಗ ತಂಡ ಇಂಗ್ಲೆಂಡ್‌ ಪ್ರವಾಸದಲ್ಲೂ ಅತ್ಯಂತ ಕಳಪೆ ಪ್ರದರ್ಶನ ನೀಡಿದೆ. ಹೀಗಾಗಿಯೇ ಮೂರನೇ ಟೆಸ್ಟ್​ಗೂ ಮುನ್ನ ತಂಡದಲ್ಲಿ ಹಲವಾರು ಬದಲಾವಣೆಗಳನ್ನು ಮಾಡಿದೆ. ಆ ಬಗ್ಗೆಯೂ ಮಾತನಾಡಿರುವ ಮೊಹಮ್ಮದ್ ಯೂಸುಫ್,‘ಪಿಸಿಬಿ ತೆಗೆದುಕೊಂಡಿರುವ ನಿರ್ಧಾರದಲ್ಲಿ ಯಾವುದೇ ತಪ್ಪಿಲ್ಲ. ಪಾಕಿಸ್ತಾನ ತಂಡ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಶ್ರೇಯಾಂಕದಲ್ಲಿ ಒಂಬತ್ತನೇ ಸ್ಥಾನದಲ್ಲಿದೆ. ಪಟ್ಟಿಯಲ್ಲಿ ಕೇವಲ ಒಂಬತ್ತು ತಂಡಗಳು ಇರುವುದರಿಂದ ತಂಡ ಒಂಬತ್ತನೇ ಸ್ಥಾನದಲ್ಲಿದೆ. ಪಾಕಿಸ್ತಾನದ ಖ್ಯಾತಿಗೆ ಕಳಂಕ ಬರುತ್ತಿದೆ. ಆದ್ದರಿಂದ ಪರಿಸ್ಥಿತಿಯನ್ನು ಸುಧಾರಿಸಲು ಮಂಡಳಿಯು ಕೆಲವು ಕ್ರಮಗಳನ್ನು ತೆಗೆದುಕೊಳ್ಳಬೇಕಾಗುತ್ತದೆ’ ಎಂದಿದ್ದಾರೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:11 pm, Sun, 6 September 26

Loading...
Unable to load recommendations.
Follow Us