ಕೆಣಕಿದ ಪಾಕ್ ಆಟಗಾರ:​ ಮಾರಕ ಬೌನ್ಸರ್​ ಎಸೆದು ಔಟ್ ಮಾಡಿದ ಕಮಿನ್ಸ್

|

Updated on: Nov 04, 2024 | 2:30 PM

Australia vs Pakistan: ಆಸ್ಟ್ರೇಲಿಯಾ ಮತ್ತು ಪಾಕಿಸ್ತಾನ್ ನಡುವಣ ಮೂರು ಪಂದ್ಯಗಳ ಏಕದಿನ ಸರಣಿ ಶುರುವಾಗಿದೆ. ಈ ಸರಣಿಯ ಮೊದಲ ಪಂದ್ಯದಲ್ಲಿ ಪಾಕಿಸ್ತಾನ್ ತಂಡವು 46.4 ಓವರ್​ಗಳಲ್ಲಿ 203 ರನ್​ಗಳಿಸಿ ಆಲೌಟ್ ಆಗಿದೆ.

ಮೆಲ್ಬೋರ್ನ್​ನಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಪಾಕಿಸ್ತಾನ್ ತಂಡ ಕೇವಲ 203 ರನ್​ಗಳಿಗೆ ಆಲೌಟ್ ಆಗಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಆಸ್ಟ್ರೇಲಿಯಾ ತಂಡದ ನಾಯಕ ಪ್ಯಾಟ್ ಕಮಿನ್ಸ್ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಇನಿಂಗ್ಸ್ ಆರಂಭಿಸಿದ ಪಾಕಿಸ್ತಾನ್ ತಂಡವು 63 ರನ್​ಗಳಿಗೆ 3 ವಿಕೆಟ್ ಕಳೆದುಕೊಂಡಿತು.

ಈ ಹಂತದಲ್ಲಿ ಕಣಕ್ಕಿಳಿದ ಕಮ್ರಾನ್ ಗುಲಾಮ್ ಎಚ್ಚರಿಕೆಯ ಬ್ಯಾಟಿಂಗ್ ಪ್ರದರ್ಶಿಸಿದರು. ಅದರಲ್ಲೂ ಪ್ಯಾಟ್ ಕಮಿನ್ಸ್ ಎಸೆದ 19ನೇ ಓವರ್​ನಲ್ಲಿ ಸ್ಟೀವ್ ಸ್ಮಿತ್ ಸ್ಟೈಲ್​ನಲ್ಲಿ ಬ್ಯಾಟ್ ತೋರಿಸಿ ಕಿರುಚಾಡುತ್ತಾ ಕೆಣಕುವ ಪ್ರಯತ್ನ ಮಾಡಿದ್ದರು.

ಕಮ್ರಾನ್​ನ ಈ ಕೆಣಕುವಿಕೆಯನ್ನು ನಗುವಿನೊಂದಿಗೆ ಸ್ವೀಕರಿಸಿದ ಕಮಿನ್ಸ್ ಕೊನೆಯ ಎಸೆತದಲ್ಲಿ ಮಾರಕ ಬೌನ್ಸರ್ ಎಸೆದರು. ಅನಿರೀಕ್ಷಿತವಾಗಿ ಮೂಡಿಬಂದ ಈ ಎಸೆತವನ್ನು ಎದುರಿಸುವಲ್ಲಿ ಎಡವಿದ ಕಮ್ರಾನ್ ಗುಲಾಮ್ (5) ವಿಕೆಟ್ ಕೀಪರ್​ಗೆ ಕ್ಯಾಚಿತ್ತು ನಿರ್ಗಮಿಸಿದರು. ಇದೀಗ ಕಮಿನ್ಸ್​ನನ್ನು ಕೆಣಕಿ ಔಟಾಗಿರುವ ಕಮ್ರಾನ್​ನ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಆಸ್ಟ್ರೇಲಿಯಾ ಪ್ಲೇಯಿಂಗ್ 11: ಮ್ಯಾಥ್ಯೂ ಶಾರ್ಟ್ , ಜೇಕ್ ಫ್ರೇಸರ್-ಮೆಕ್​ಗುರ್ಕ್​ , ಸ್ಟೀವನ್ ಸ್ಮಿತ್ , ಜೋಶ್ ಇಂಗ್ಲಿಸ್ (ವಿಕೆಟ್ ಕೀಪರ್) , ಮಾರ್ನಸ್ ಲಾಬುಶೇನ್ , ಗ್ಲೆನ್ ಮ್ಯಾಕ್ಸ್‌ವೆಲ್ , ಆರನ್ ಹಾರ್ಡಿ , ಪ್ಯಾಟ್ ಕಮ್ಮಿನ್ಸ್ (ನಾಯಕ) , ಶಾನ್ ಅಬಾಟ್ , ಮಿಚೆಲ್ ಸ್ಟಾರ್ಕ್, ಆ್ಯಡಂ ಝಂಪಾ.

ಪಾಕಿಸ್ತಾನ್ ಪ್ಲೇಯಿಂಗ್ 11: ಅಬ್ದುಲ್ಲಾ ಶಫೀಕ್ , ಸೈಮ್ ಅಯ್ಯೂಬ್ , ಬಾಬರ್ ಆಝಂ , ಮೊಹಮ್ಮದ್ ರಿಝ್ವಾನ್ (ನಾಯಕ) , ಕಮ್ರಾನ್ ಗುಲಾಮ್ , ಅಘಾ ಸಲ್ಮಾನ್ , ಇರ್ಫಾನ್ ಖಾನ್ , ಶಾಹೀನ್ ಅಫ್ರಿದಿ , ನಸೀಮ್ ಶಾ , ಹ್ಯಾರಿಸ್ ರೌಫ್ , ಮೊಹಮ್ಮದ್ ಹಸ್ನೈನ್.