IND vs SA: ಆಫ್ರಿಕಾ ಪ್ರವಾಸದಲ್ಲಿರುವ ಟೀಂ ಇಂಡಿಯಾ ಆಟಗಾರರಿಗೆ ಜನರಲ್ ನಾಲೆಡ್ಜ್ ಟೆಸ್ಟ್
IND vs SA: ಸೂರ್ಯಕುಮಾರ್ ಯಾದವ್ ನೇತೃತ್ವದ ಟೀಂ ಇಂಡಿಯಾ ದಕ್ಷಿಣ ಆಫ್ರಿಕಾದ ವಿರುದ್ಧ ನವೆಂಬರ್ 8 ರಿಂದ 4 ಪಂದ್ಯಗಳ ಟಿ20 ಸರಣಿ ಆಡಲಿದೆ. ಗೌತಮ್ ಗಂಭೀರ್ ಬದಲಿಗೆ ವಿವಿಎಸ್ ಲಕ್ಷ್ಮಣ್ ಕೋಚ್ ಆಗಿದ್ದಾರೆ. ಆಫ್ರಿಕಾ ಪ್ರವಾಸಕ್ಕೂ ಮುನ್ನ ತಂಡದ ಆಟಗಾರರು ದಕ್ಷಿಣ ಆಫ್ರಿಕಾ ಕುರಿತು ಜ್ಞಾನ ಪರೀಕ್ಷೆ ನಡೆಸಿದ್ದಾರೆ. ಅದರ ವಿಡಿಯೋ ಈಗ ಎಲ್ಲೆಡೆ ವೈರಲ್ ಆಗಿದೆ.
ದಕ್ಷಿಣ ಆಫ್ರಿಕಾ ವಿರುದ್ಧದ 4 ಪಂದ್ಯಗಳ ಟಿ20 ಸರಣಿಗಾಗಿ ಸೂರ್ಯಕುಮಾರ್ ಯಾದವ್ ನೇತೃತ್ವದ ಟೀಂ ಇಂಡಿಯಾ ಡರ್ಬನ್ ತಲುಪಿದೆ. ಇದೀಗ ಉಭಯ ತಂಡಗಳ ನಡುವೆ ನವೆಂಬರ್ 8 ರಿಂದ 4 ಪಂದ್ಯಗಳ ಸರಣಿ ಆರಂಭವಾಗಲಿದೆ. ಈ ಪ್ರವಾಸದಲ್ಲಿ ಗೌತಮ್ ಗಂಭೀರ್ ಬದಲಿಗೆ ವಿವಿಎಸ್ ಲಕ್ಷ್ಮಣ್ ಟೀಂ ಇಂಡಿಯಾದ ಮುಖ್ಯ ಕೋಚ್ ಆಗಿದ್ದಾರೆ. ಇದಲ್ಲದೆ ತಂಡದ ಭಾಗಶಃ ಆಟಗಾರರಿಗೆ ಇದು ಚೊಚ್ಚಲ ಆಫ್ರಿಕಾ ಪ್ರವಾಸವಾಗಿದೆ. ಹೀಗಾಗಿ ಹರಿಣಗಳನ್ನು ಅವರ ನಾಡಲ್ಲೇ ಮಣಿಸುವುದು ಸೂರ್ಯಕುಮಾರ್ ಪಡೆಗೆ ಅಷ್ಟು ಸುಲಭದ ಮಾತಲ್ಲ. ಆದಾಗ್ಯೂ ಯುವ ಆಟಗಾರರ ಈ ಹೊಸ ತಂಡ ಆಫ್ರಿಕಾ ತಂಡವನ್ನು ಮಣಿಸುವ ಇರಾದೆಯಲ್ಲಿದೆ. ಆದರೆ, ಸರಣಿ ಆರಂಭಕ್ಕೂ ಮುನ್ನ ಆಫ್ರಿಕಾ ನೆಲಕ್ಕೆ ಬಂದಿಳಿದ ಟೀಂ ಇಂಡಿಯಾ ಆಟಗಾರರ ನಡುವೆಯೇ ಜನರಲ್ ನಾಲೆಡ್ಜ್ ಟೆಸ್ಟ್ ನಡೆದಿದ್ದೂ, ತಂಡದ ಆಟಗಾರರು ಎಷ್ಟು ನಿಪುಣರು ಎಂಬುದು ಬಹಿರಂಗಗೊಂಡಿದೆ.
ಟೀಂ ಇಂಡಿಯಾದ ಜಿಕೆ ಟೆಸ್ಟ್!
ವಾಸ್ತವವಾಗಿ ಆಫ್ರಿಕಾ ಪ್ರಯಾಣದ ಸಮಯದಲ್ಲಿ ಭಾರತದ ಆಟಗಾರರು ತಮ್ಮ ತಮ್ಮ ನಡುವೆಯೇ ಜನರಲ್ ನಾಲೆಡ್ಜ್ ಪರೀಕ್ಷೆ ಮಾಡಿಕೊಂಡಿದ್ದಾರೆ. ದಕ್ಷಿಣ ಆಫ್ರಿಕಾಕ್ಕೆ ಸಂಬಂಧಿಸಿದ ಪ್ರಶ್ನೆಗಳನ್ನು ಇಲ್ಲಿ ಕೇಳಲಾಗಿದ್ದು, ಪ್ರವಾಸಿ ದೇಶದ ಬಗ್ಗೆ ಟೀಂ ಇಂಡಿಯಾ ಆಟಗಾರರು ಎಷ್ಟು ತಿಳಿದುಕೊಂಡಿದ್ದಾರೆ ಎಂಬುದನ್ನು ಇಲ್ಲಿ ಗಮನಿಸಬಹುದಾಗಿದೆ.
ಈ ರಸಪ್ರಶ್ನೆ ಕಾರ್ಯಕ್ರಮದಲ್ಲಿ ಭಾರತದ ಆಟಗಾರರು ಪರಸ್ಪರ ಹಲವು ಪ್ರಶ್ನೆಗಳನ್ನು ಕೇಳಿಕೊಂಡಿದ್ದಾರೆ. ಇದರಲ್ಲಿ, ದಕ್ಷಿಣ ಆಫ್ರಿಕಾದ ರಾಷ್ಟ್ರೀಯ ಪ್ರಾಣಿ ಆಫ್ರಿಕನ್ ಆನೆ – ನಿಜವೋ ಸುಳ್ಳೋ?, ದಕ್ಷಿಣ ಆಫ್ರಿಕಾದ 11 ಅಧಿಕೃತ ಭಾಷೆಗಳಿವೆ – ನಿಜವೋ ಸುಳ್ಳೋ? ಟೇಬಲ್ ಮೌಂಟೇನ್ ಜೋಹಾನ್ಸ್‌ಬರ್ಗ್‌ನಲ್ಲಿದೆ – ನಿಜವೋ ಸುಳ್ಳೋ? ಎಂಬಿತ್ಯಾಧಿ ಪ್ರಶ್ನೆಗಳು ಸೇರಿದ್ದವು.
ಸರಣಿ ವಿವರ ಹೀಗಿದೆ
ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಟಿ20 ಸರಣಿಯ ಮೊದಲ ಪಂದ್ಯ ನವೆಂಬರ್ 8 ರಂದು ನಡೆಯಲಿದೆ. ಎರಡನೇ ಟಿ20 ನವೆಂಬರ್ 10 ರಂದು ನಡೆಯಲಿದೆ. ಇದಾದ ನಂತರ ಮೂರನೇ ಟಿ20 ನವೆಂಬರ್ 13 ರಂದು ನಡೆಯಲಿದೆ. ನವೆಂಬರ್ 15 ರಂದು ಜೋಹಾನ್ಸ್‌ಬರ್ಗ್‌ನಲ್ಲಿ ನಡೆಯಲಿರುವ ಕೊನೆಯ ಟಿ20 ಯೊಂದಿಗೆ ಈ ಪ್ರವಾಸವು ಕೊನೆಗೊಳ್ಳುತ್ತದೆ.
ಭಾರತ ತಂಡ: ಸೂರ್ಯ ಕುಮಾರ್ ಯಾದವ್ (ನಾಯಕ), ಅಭಿಷೇಕ್ ಶರ್ಮಾ, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ರಿಂಕು ಸಿಂಗ್, ತಿಲಕ್ ವರ್ಮಾ, ಜಿತೇಶ್ ಶರ್ಮಾ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ಅಕ್ಸರ್ ಪಟೇಲ್, ರಮಣದೀಪ್ ಸಿಂಗ್, ವರುಣ್ ಚಕ್ರವರ್ತಿ, ರವಿ ಬಿಷ್ಣೋಯ್, ಅರ್ಷದೀಪ್ ಸಿಂಗ್, ವೈಶಾಖ್ ವಿಜಯ್ ಕುಮಾರ್, ಅವೇಶ್ ಖಾನ್, ಯಶ್ ದಯಾಳ್.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ