ಭಾರತ ಅಂಡರ್ 19 ತಂಡಕ್ಕೆ ಸಮಿತ್ ದ್ರಾವಿಡ್ ಆಯ್ಕೆ

| Updated By: ಝಾಹಿರ್ ಯೂಸುಫ್

Updated on: Aug 31, 2024 | 11:01 AM

India's U19 Squad: ಭಾರತದಲ್ಲಿ ನಡೆಯಲಿರುವ ಆಸ್ಟ್ರೇಲಿಯಾ ಕಿರಿಯರ ತಂಡದ ವಿರುದ್ಧದ ಸರಣಿಗಾಗಿ ಟೀಮ್ ಇಂಡಿಯಾ ಕಿರಿಯರ ಬಳಗವನ್ನು ಹೆಸರಿಸಲಾಗಿದೆ. ಈ ತಂಡಗಳಲ್ಲಿ ಕರ್ನಾಟಕದ ನಾಲ್ವರು ಆಟಗಾರರು ಸ್ಥಾನ ಪಡೆದಿದ್ದಾರೆ. ಇವರಲ್ಲಿ ಲೆಜೆಂಡ್ ರಾಹುಲ್ ದ್ರಾವಿಡ್ ಅವರ ಪುತ್ರ ಸಮಿತ್ ದ್ರಾವಿಡ್ ಕೂಡ ಕಾಣಿಸಿಕೊಂಡಿದ್ದಾರೆ.

ಭಾರತ ಅಂಡರ್ 19 ತಂಡಕ್ಕೆ ಸಮಿತ್ ದ್ರಾವಿಡ್ ಆಯ್ಕೆ
Samit Dravid
Follow us on

ಆಸ್ಟ್ರೇಲಿಯಾ ಕಿರಿಯರ ತಂಡದ ವಿರುದ್ಧದ ಸರಣಿಗಾಗಿ ಭಾರತ ಅಂಡರ್ 19 ತಂಡವನ್ನು ಪ್ರಕಟಿಸಲಾಗಿದೆ. ಏಕದಿನ ಹಾಗೂ ಟೆಸ್ಟ್ (4 ದಿನದಾಟ) ಸರಣಿಗಾಗಿ ಆಯ್ಕೆ ಮಾಡಲಾದ ಈ ತಂಡಗಳಲ್ಲಿ ಟೀಮ್ ಇಂಡಿಯಾದ ಮಾಜಿ ಕೋಚ್ ರಾಹುಲ್ ದ್ರಾವಿಡ್ ಅವರ ಸುಪುತ್ರ ಸಮಿತ್ ದ್ರಾವಿಡ್ ಸ್ಥಾನ ಪಡೆದಿದ್ದಾರೆ. ಸಮಿತ್ ಅವರಲ್ಲದೆ ಕರ್ನಾಟಕದ ಯುವ ಆಟಗಾರರಾದ ಕಾರ್ತಿಕೇಯ ಕೆಪಿ, ಸಮರ್ಥ್ ಎನ್ ಹಾಗೂ ಹಾರ್ದಿಕ್ ರಾಜ್ ಕೂಡ ಕಿರಿಯರ ಟೀಮ್​ ಇಂಡಿಯಾಗೆ ಆಯ್ಕೆಯಾಗಿರುವುದು ವಿಶೇಷ.

15 ಸದಸ್ಯರ ಏಕದಿನ ತಂಡದ ನಾಯಕರಾಗಿ ಉತ್ತರ ಪ್ರದೇಶದ ಯುವ ಆಟಗಾರ ಮೊಹಮ್ಮದ್ ಅಮಾನ್ ಆಯ್ಕೆಯಾಗಿದ್ದು, ಇನ್ನು ಉಪನಾಯಕನಾಗಿ ಗುಜರಾತ್​ನ ರುದ್ರ ಪಟೇಲ್ ಕಾಣಿಸಿಕೊಳ್ಳಲಿದ್ದಾರೆ. ಹಾಗೆಯೇ ಟೆಸ್ಟ್ ತಂಡದ ನಾಯಕತ್ವವನ್ನು ಮಧ್ಯ ಪ್ರದೇಶದ ಸೋಹಮ್ ಪಟವರ್ಧನ್​ಗೆ ನೀಡಲಾಗಿದ್ದು, ಉಪನಾಯಕನಾಗಿ ಪಂಜಾಬ್​ನ ವಿಹಾನ್ ಮಲ್ಹೋತ್ರಾ ಆಯ್ಕೆಯಾಗಿದ್ದಾರೆ. ಅದರಂತೆ ಭಾರತ ಅಂಡರ್ 19 ತಂಡಗಳು ಈ ಕೆಳಗಿನಂತಿವೆ…

ಭಾರತ ಅಂಡರ್ 19 ಏಕದಿನ ತಂಡ:

  • ರುದ್ರ ಪಟೇಲ್ (ಗುಜರಾತ್)
  • ಸಾಹಿಲ್ ಪರಾಖ್ (ಮಹಾರಾಷ್ಟ್ರ)
  • ಕಾರ್ತಿಕೇಯ ಕೆಪಿ (ಕರ್ನಾಟಕ)
  • ಮೊಹಮ್ಮದ್ ಅಮಾನ್- ನಾಯಕ (ಉತ್ತರ ಪ್ರದೇಶ)
  • ಕಿರಣ್ ಚೋರ್ಮಲೆ (ಮಹಾರಾಷ್ಟ್ರ)
  • ಅಭಿಗ್ಯಾನ್ ಕುಂದು- ವಿಕೆಟ್ ಕೀಪರ್ (ಮುಂಬೈ)
  • ಹರ್ವಂಶ್ ಸಿಂಗ್ ಪಂಗಾಲಿಯಾ- ವಿಕೆಟ್ ಕೀಪರ್ (ಸೌರಾಷ್ಟ್ರ)
  • ಸಮಿತ್ ದ್ರಾವಿಡ್ (ಕರ್ನಾಟಕ)
  • ಯುಧಾಜಿತ್ ಗುಹಾ (ಪಶ್ಚಿಮ ಬಂಗಾಳ)
  • ಸಮರ್ಥ ಎನ್ (ಕರ್ನಾಟಕ)
  • ನಿಖಿಲ್ ಕುಮಾರ್ (ಚಂಡೀಗಢ)
  • ಚೇತನ್ ಶರ್ಮಾ (ರಾಜಸ್ಥಾನ್)
  • ಹಾರ್ದಿಕ್ ರಾಜ್ (ಕರ್ನಾಟಕ)
  • ರೋಹಿತ್ ರಾಜಾವತ್ (ಮಧ್ಯ ಪ್ರದೇಶ)
  • ಮೊಹಮ್ಮದ್ ಇನಾನ್ (ಕೇರಳ)

ಇದನ್ನೂ ಓದಿ: Joe Root: ಜೋ ರೂಟ್ ಸೆಂಚುರಿಗೆ ಹಿಟ್​ಮ್ಯಾನ್ ದಾಖಲೆ ಬ್ರೇಕ್

ಭಾರತ ಅಂಡರ್ 19 ಟೆಸ್ಟ್ (4 ದಿನದಾಟ) ತಂಡ:

  • ವೈಭವ್ ಸೂರ್ಯವಂಶಿ (ಬಿಹಾರ)
  • ನಿತ್ಯ ಪಾಂಡ್ಯ (ಬಿಹಾರ)
  • ವಿಹಾನ್ ಮಲ್ಹೋತ್ರಾ (ಪಂಜಾಬ್)
  • ಸೋಹಮ್ ಪಟವರ್ಧನ್- ನಾಯಕ (ಮಧ್ಯ ಪ್ರದೇಶ)
  • ಕಾರ್ತಿಕೇಯ ಕೆಪಿ (ಕರ್ನಾಟಕ)
  • ಸಮಿತ್ ದ್ರಾವಿಡ್ (ಕರ್ನಾಟಕ)
  • ಅಭಿಗ್ಯಾನ್ ಕುಂದು- ವಿಕೆಟ್ ಕೋಪರ್ (ಮುಂಬೈ)
  • ಹರ್ವಂಶ್ ಸಿಂಗ್ ಪಂಗಾಲಿಯಾ- ವಿಕೆಟ್ ಕೀಪರ್ (ಸೌರಾಷ್ಟ್ರ)
  • ಚೇತನ್ ಶರ್ಮಾ (ರಾಜಸ್ಥಾನ್),
  • ಸಮರ್ಥ್ ಎನ್ (ಕರ್ನಾಟಕ)
  • ಆದಿತ್ಯ ರಾವತ್ (ಉತ್ತರಾಖಂಡ್)
  • ನಿಖಿಲ್ ಕುಮಾರ್ (ಚಂಡೀಗಢ್)
  • ಅನ್ಮೋಲ್ಜೀತ್ ಸಿಂಗ್ (ಪಂಜಾಬ್)
  • ಆದಿತ್ಯ ಸಿಂಗ್ (ಉತ್ತರ ಪ್ರದೇಶ)
  • ಮೊಹಮ್ಮದ್ ಇನಾನ್ (ಕೇರಳ).

ಭಾರತ-ಆಸ್ಟ್ರೇಲಿಯಾ ಅಂಡರ್-19 ಸರಣಿಯ ವೇಳಾಪಟ್ಟಿ

ದಿನಾಂಕ  ಪಂದ್ಯ ಸ್ಥಳ ಸಮಯ
ಸೆಪ್ಟೆಂಬರ್ 21 ಮೊದಲ ಏಕದಿನ ಪುದುಚೇರಿ 9:30 AM
ಸೆಪ್ಟೆಂಬರ್ 23 ಎರಡನೇ ಏಕದಿನ ಪುದುಚೇರಿ 9:30 AM
ಸೆಪ್ಟೆಂಬರ್ 26 ಮೂರನೇ ಏಕದಿನ ಪುದುಚೇರಿ 9:30 AM
ಸೆಪ್ಟೆಂಬರ್ 30- ಅಕ್ಟೋಬರ್ 3 ಮೊದಲ ಟೆಸ್ಟ್ (4 ದಿನ) ಚೆನ್ನೈ 9:30 AM
ಅಕ್ಟೋಬರ್ 3 – ಅಕ್ಟೋಬರ್ 10 ಎರಡನೇ ಟೆಸ್ಟ್ (4 ದಿನ) ಚೆನ್ನೈ 9:30 AM