ಸಚಿನ್ ತೆಂಡೂಲ್ಕರ್ ಮುಂದೆ ಅಸಹಾಯಕತೆ ತೋಡಿಕೊಂಡ ವಿನೋದ್ ಕಾಂಬ್ಳಿ
ಟೀಮ್ ಇಂಡಿಯಾ ಪರ 17 ಟೆಸ್ಟ್ ಪಂದ್ಯಗಳನ್ನಾಡಿರುವ ವಿನೋದ್ ಕಾಂಬ್ಳಿ 2 ದ್ವಿಶತಕ, 4 ಶತಕ ಹಾಗೂ 3 ಅರ್ಧಶತಕಗಳೊಂದಿಗೆ ಒಟ್ಟು 1084 ರನ್ ಕಲೆಹಾಕಿದ್ದಾರೆ. ಹಾಗೆಯೇ 104 ಏಕದಿನ ಪಂದ್ಯಗಳಲ್ಲಿ 2 ಶತಕ ಹಾಗೂ 14 ಅರ್ಧಶತಕಗಳೊಂದಿಗೆ 2477 ರನ್ಗಳಿಸಿದ್ದಾರೆ.
ಮುಂಬೈನಲ್ಲಿ ನಡೆದ ಲೆಜೆಂಡ್ ಕ್ರಿಕೆಟ್ ತರಬೇತುದಾರ ರಮಾಕಾಂತ್ ಅಚ್ರೇಕರ್ ಅವರ ಸ್ಮಾರಕದ ಅನಾವರಣ ಸಮಾರಂಭದಲ್ಲಿ ಸಚಿನ್ ತೆಂಡೂಲ್ಕರ್ ಅವರು ತಮ್ಮ ಬಾಲ್ಯದ ಗೆಳೆಯ ವಿನೋದ್ ಕಾಂಬ್ಳಿ ಅವರನ್ನು ಭೇಟಿಯಾಗಿದ್ದಾರೆ. ಈ ವೇಳೆ ಕಾಂಬ್ಳಿ ತಮ್ಮ ಅಸಹಾಯಕತೆಯನ್ನು ತೋಡಿಕೊಳ್ಳುತ್ತಿರುವ ಸನ್ನಿವೇಶಗಳು ಕ್ಯಾಮೆರಾದಲ್ಲಿ ಸೆರೆಯಾಗಿದೆ.
ವಿಶೇಷ ಎಂದರೆ ವಿನೋದ್ ಕಾಂಬ್ಳಿ ಹಾಗೂ ಸಚಿನ್ ತೆಂಡೂಲ್ಕರ್ ರಮಾಕಾಂತ್ ಅಚ್ರೇಕರ್ ಅವರ ವಿದ್ಯಾರ್ಥಿಗಳು. ಬಾಲ್ಯದಲ್ಲಿ ಇಬ್ಬರು ಜೊತೆಯಾಗಿ ಕ್ರಿಕೆಟ್ ಕೆರಿಯರ್ ಆರಂಭಿಸಿದ್ದರು. ಅದರಲ್ಲೂ ಶಾಲಾ ಕ್ರಿಕೆಟ್ನಲ್ಲಿ 664 ರನ್‌ಗಳ ಜೊತೆಯಾಟವಾಡುವ ಮೂಲಕ ದಾಖಲೆ ನಿರ್ಮಿಸಿದ್ದರು.
ಇದಾದ ಬಳಿಕ ಇಬ್ಬರು ಟೀಮ್ ಇಂಡಿಯಾ ಪರ ಕಣಕ್ಕಿಳಿದರು. ಆದರೆ ಸಚಿನ್ ತೆಂಡೂಲ್ಕರ್ ಕ್ರಿಕೆಟ್ ಅಂಗಳದ ಮಾಸ್ಟರ್ ಬ್ಲಾಸ್ಟರ್ ಆದರೆ, ವಿನೋದ್ ಕಾಂಬ್ಳಿ ಅವರ ಕೆರಿಯರ್ ಉತ್ತುಂಗದಿಂದ ಪಾತಾಳಕ್ಕೆ ಕುಸಿಯುತ್ತಾ ಸಾಗಿತು. ಇದರ ನಡುವೆ ಹಲವು ವಿವಾದಗಳೊಂದಿಗೆ ಕಾಂಬ್ಳಿ ಗುರುತಿಸಿಕೊಂಡರು.
ಇದೀಗ ಅನಾರೋಗ್ಯದ ಸಮಸ್ಯೆಯಿಂದ ಬಳಲುತ್ತಿರುವ ವಿನೋದ್ ಕಾಂಬ್ಳಿ ನಡೆದಾಡಲು ಬರೋಬ್ಬರನ್ನು ಆಶ್ರಯಿಸಬೇಕಾದ ಪರಿಸ್ಥಿತಿಯಲ್ಲಿದೆ. ಅಲ್ಲದೆ ಆರ್ಥಿಕವಾಗಿಯೂ ಸಂಕಷ್ಟದಲ್ಲಿದ್ದಾರೆ. ಇದರ ನಡುವೆ ತಮ್ಮ ಬಾಲ್ಯದ ಕೋಚ್ ರಮಾಕಾಂತ್ ಅಚ್ರೇಕರ್ ಅವರ ಸ್ಮಾರಕದ ಅನಾವರಣ ಸಮಾರಂಭದಲ್ಲಿ ಅವರು ಕಾಣಿಸಿಕೊಂಡಿದ್ದಾರೆ.
ಟೀಮ್ ಇಂಡಿಯಾ ಪರ 17 ಟೆಸ್ಟ್ ಪಂದ್ಯಗಳನ್ನಾಡಿರುವ ವಿನೋದ್ ಕಾಂಬ್ಳಿ 2 ದ್ವಿಶತಕ, 4 ಶತಕ ಹಾಗೂ 3 ಅರ್ಧಶತಕಗಳೊಂದಿಗೆ ಒಟ್ಟು 1084 ರನ್ ಕಲೆಹಾಕಿದ್ದಾರೆ. ಹಾಗೆಯೇ 104 ಏಕದಿನ ಪಂದ್ಯಗಳಲ್ಲಿ 2 ಶತಕ ಹಾಗೂ 14 ಅರ್ಧಶತಕಗಳೊಂದಿಗೆ 2477 ರನ್ಗಳಿಸಿದ್ದಾರೆ.
ಇನ್ನು ಈ ಸಮಾರಂಭದಲ್ಲಿ ಅಚ್ರೇಕರ್ ಅವರ ಶಿಷ್ಯರಾದ ಪರಸ್ ಮಾಂಬ್ರೆ, ಪ್ರವೀಣ್ ಆಮ್ರೆ, ಬಲ್ವಿಂದರ್ ಸಿಂಗ್ ಸಂಧು, ಸಂಜಯ್ ಬಂಗಾರ್ ಮತ್ತು ಸಮೀರ್ ದಿಘೆ ಕೂಡ ಭಾಗವಹಿಸಿದ್ದರು.