Samir Rizvi: 13 ಬೌಂಡರಿ, 20 ಸಿಕ್ಸರ್..! ವೇಗದ ದ್ವಿಶತಕ ಬಾರಿಸಿದ ಸಮೀರ್ ರಿಜ್ವಿ

|

Updated on: Dec 21, 2024 | 9:04 PM

Samir Rizvi: ಅಂಡರ್-23 ರಾಜ್ಯ ಎ ಟ್ರೋಫಿಯಲ್ಲಿ ಉತ್ತರ ಪ್ರದೇಶದ ಸಮೀರ್ ರಿಜ್ವಿ ಅವರು ತ್ರಿಪುರಾ ವಿರುದ್ಧ ಅದ್ಭುತ ದ್ವಿಶತಕ ಸಿಡಿಸಿದ್ದಾರೆ. ಕೇವಲ 97 ಎಸೆತಗಳಲ್ಲಿ 201 ರನ್ ಗಳಿಸಿದ ಅವರು 13 ಬೌಂಡರಿ ಮತ್ತು 20 ಸಿಕ್ಸರ್‌ಗಳನ್ನು ಬಾರಿಸಿದ್ದಾರೆ. ಈ ಅದ್ಭುತ ಪ್ರದರ್ಶನದಿಂದ ಉತ್ತರ ಪ್ರದೇಶ 405 ರನ್‌ಗಳನ್ನು ಗಳಿಸಿ 152 ರನ್‌ಗಳ ಭರ್ಜರಿ ಜಯ ಸಾಧಿಸಿದೆ. ನಾಲ್ಕು ಪಂದ್ಯಗಳಲ್ಲಿ 518 ರನ್ ಗಳಿಸಿರುವ ಸಮೀರ್ ಈ ಟೂರ್ನಿಯ ಅಗ್ರ ಸ್ಕೋರರ್ ಆಗಿದ್ದಾರೆ.

Samir Rizvi: 13 ಬೌಂಡರಿ, 20 ಸಿಕ್ಸರ್..! ವೇಗದ ದ್ವಿಶತಕ ಬಾರಿಸಿದ ಸಮೀರ್ ರಿಜ್ವಿ
ಸಮೀರ್ ರಿಜ್ವಿ, ಎಂಎಸ್ ಧೋನಿ
Follow us on

ಭಾರತದ ದೇಶೀಯ ಕ್ರಿಕೆಟ್‌ನಲ್ಲಿ ಪ್ರಸ್ತುತ ಹಲವು ವಿಭಿನ್ನ ಪಂದ್ಯಾವಳಿಗಳನ್ನು ಆಡಲಾಗುತ್ತಿದೆ. ಇಂದಿನಿಂದ ವಿಜಯ್ ಹಜಾರೆ ಟ್ರೋಫಿ ಕೂಡ ಆರಂಭವಾಗಿದ್ದು, ಮೊದಲ ದಿನವೇ ಅಭಿಮಾನಿಗಳು ಅಚ್ಚರಿಗೊಳ್ಳುತವಂತಹ ಹಲವು ಪ್ರದರ್ಶನಗಳು ಹೊರಬಿದ್ದಿವೆ. ಮತ್ತೊಂದೆಡೆ, ಅಂಡರ್ 23 ರಾಜ್ಯ ಎ ಟ್ರೋಫಿ ಆರಂಭವಾಗಿದ್ದು, ಈ ಟೂರ್ನಿಯಲ್ಲಿ ಉತ್ತರ ಪ್ರದೇಶ ಪರ ಆಡುತ್ತಿರುವ ಸಮೀರ್ ರಿಜ್ವಿ ತಮ್ಮ ಸ್ಫೋಟಕ ಬ್ಯಾಟಿಂಗ್‌ ಮೂಲಕ ಇತಿಹಾಸ ನಿರ್ಮಿಸಿದ್ದಾರೆ. ಈ ಟೂರ್ನಿಯಲ್ಲಿ ಉತ್ತರ ಪ್ರದೇಶ ತಂಡದ ನಾಯಕರೂ ಆಗಿರುವ ಸಮೀರ್ ರಿಜ್ವಿ, ಇಂದು ನಡೆದ ತ್ರಿಪುರಾ ವಿರುದ್ಧದ ಪಂದ್ಯದಲ್ಲಿ ದಾಖಲೆಯ ಇನ್ನಿಂಗ್ಸ್ ಆಡಿದ್ದಾರೆ.

ವೇಗದ ದ್ವಿಶತಕ ಸಿಡಿಸಿದ ಸಮೀರ್ ರಿಜ್ವಿ

21 ವರ್ಷದ ಸಮೀರ್ ರಿಜ್ವಿ ತ್ರಿಪುರಾ ವಿರುದ್ಧದ ಪಂದ್ಯದಲ್ಲಿ ಕೇವಲ 97 ಎಸೆತಗಳಲ್ಲಿ ದ್ವಿಶತಕ ಸಿಡಿಸುವ ಮೂಲಕ ಇತಿಹಾಸ ನಿರ್ಮಿಸಿದ್ದಾರೆ. ತಮ್ಮ ಇನ್ನಿಂಗ್ಸ್​ನಲ್ಲಿ 97 ಎಸೆತಗಳನ್ನು ಎದುರಿಸಿದ ಸಮೀರ್ ರಿಜ್ವಿ 201 ರನ್​ಗಳ ಅಜೇಯ ಇನ್ನಿಂಗ್ಸ್ ಆಡಿದರು. ಈ ವೇಳೆ ಸಮೀರ್ ರಿಜ್ವಿ ಅವರ ಬ್ಯಾಟ್​ನಿಂದ 13 ಬೌಂಡರಿ ಹಾಗೂ 20 ಸಿಕ್ಸರ್ ಸಿಡಿದವು. ಈ ಪಂದ್ಯದಲ್ಲಿ 23 ನೇ ಓವರ್‌ನಲ್ಲಿ ಬ್ಯಾಟಿಂಗ್ ಇಳಿದ ಸಮೀರ್ ರಿಜ್ವಿ 207.22 ಸ್ಟ್ರೈಕ್ ರೇಟ್‌ನಲ್ಲಿ ಬ್ಯಾಟ್ ಬೀಸಿ ಪಂದ್ಯದ ದಿಕ್ಕನ್ನೇ ಬದಲಾಯಿಸಿದರು.

405 ರನ್‌ ಕಲೆಹಾಕಿದ ಉತ್ತರ ಪ್ರದೇಶ

ಸಮೀರ್ ರಿಜ್ವಿ ಅವರ ಈ ಬಲಿಷ್ಠ ಇನ್ನಿಂಗ್ಸ್‌ನ ಆಧಾರದ ಮೇಲೆ ಉತ್ತರ ಪ್ರದೇಶ ತಂಡ 50 ಓವರ್‌ಗಳಲ್ಲಿ 405 ರನ್‌ಗಳ ಬೃಹತ್ ಸ್ಕೋರ್ ಗಳಿಸುವಲ್ಲಿ ಯಶಸ್ವಿಯಾಯಿತು. ಇದಕ್ಕುತ್ತರವಾಗಿ ತ್ರಿಪುರಾ ತಂಡ 253 ರನ್ ಗಳಿಸಲಷ್ಟೇ ಶಕ್ತವಾಗಿದ್ದು, ಉತ್ತರ ಪ್ರದೇಶ 152 ರನ್ ಗಳಿಂದ ಜಯ ಸಾಧಿಸಿತು. ಅಂಡರ್-23 ಸ್ಟೇಟ್ ಎ ಟ್ರೋಫಿಯಲ್ಲಿ ಉತ್ತಮವಾಗಿ ಬ್ಯಾಟಿಂಗ್ ಮಾಡುತ್ತಿರುವ ಸಮೀರ್ ರಿಜ್ವಿ ಈಗಾಗಲೇ ಎರಡು ಶತಕಗಳನ್ನು ಬಾರಿಸಿದ್ದು, ಪ್ರಸ್ತುತ ಈ ಪಂದ್ಯಾವಳಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರನೆನಿಸಿಕೊಂಡಿದ್ದಾರೆ.

ಕೇವಲ 4 ಪಂದ್ಯಗಳಲ್ಲಿ 518 ರನ್

ಸಮೀರ್ ರಿಜ್ವಿ ಪ್ರಸ್ತುತ ಅಂಡರ್-23 ಸ್ಟೇಟ್ ಎ ಟ್ರೋಫಿಯಲ್ಲಿ ನಾಲ್ಕು ಪಂದ್ಯಗಳನ್ನಾಡಿದ್ದು 518 ರನ್ ಗಳಿಸುವ ಮೂಲಕ ಅತಿ ಹೆಚ್ಚು ರನ್ ಗಳಿಸಿದ ಆಟಗಾರನಾಗಿದ್ದಾರೆ. ಈ ಪಂದ್ಯಕ್ಕೂ ಮುನ್ನ ಸಮೀರ್ ರಿಜ್ವಿ ಒಂದು ಪಂದ್ಯದಲ್ಲಿ 153 ರನ್ ಹಾಗೂ ಇನ್ನೊಂದು ಪಂದ್ಯದಲ್ಲಿ ಔಟಾಗದೆ 137 ರನ್ ಸಿಡಿಸಿದ್ದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ