
ವೆಸ್ಟ್ ಇಂಡೀಸ್ ವಿರುದ್ಧ ನಡೆಯುತ್ತಿರುವ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಟೀಂ ಇಂಡಿಯಾ ನಾಯಕ ಶುಭ್ಮನ್ ಗಿಲ್ ಸತತ ಎರಡನೇ ಶತಕ ಸಿಡಿಸಿದ್ದಾರೆ. ತಿರುವನಂತಪುರಂನಲ್ಲಿ ನಡೆದ ಸರಣಿಯ ಮೊದಲ ಪಂದ್ಯದಲ್ಲಿ ಶತಕದ ಇನ್ನಿಂಗ್ಸ್ ಆಡಿದ್ದ ಗಿಲ್, ಇದೀಗ ಗುವಾಹಟಿಯಲ್ಲಿ ನಡೆಯುತ್ತಿರುವ ಎರಡನೇ ಪಂದ್ಯದಲ್ಲೂ ನೂರು ರನ್ಗಳ ಗಡಿ ದಾಟಿದ್ದಾರೆ. ಇದು ಏಕದಿನ ವೃತ್ತಿಜೀವನದಲ್ಲಿ ಗಿಲ್ ಅವರ 11ನೇ ಏಕದಿನ ಶತಕವಾಗಿದೆ. ಎರಡನೇ ಏಕದಿನ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ನೀಡಿದ 405 ರನ್ಗಳ ಗುರಿ ಬೆನ್ನಟ್ಟಿದ ಭಾರತಕ್ಕೆ ನಾಯಕ ಶುಭ್ಮನ್ ಗಿಲ್ ಹಾಗೂ ಮಾಜಿ ನಾಯಕ ರೋಹಿತ್ ಶರ್ಮಾ ಉತ್ತಮ ಆರಂಭ ಒದಗಿಸಿಕೊಟ್ಟರು. ಇವರಿಬ್ಬರು 20 ಓವರ್ಗಳಲ್ಲಿ ತಂಡವನ್ನು 200 ರನ್ಗಳ ಸನಿಹಕ್ಕೆ ತಂದರು.
ಕೇವಲ 62 ಎಸೆತಗಳಲ್ಲಿ ಶತಕ ಪೂರೈಸಿದ ಶುಭ್ಮನ್ ಗಿಲ್ಗೆ ಇದು ಅವರ ಏಕದಿನ ವೃತ್ತಿಜೀವನದ ಅತ್ಯಂತ ವೇಗದ ಶತಕವಾಗಿದೆ. ಹಾಗೆಯೇ ಏಕದಿನ ಇತಿಹಾಸದಲ್ಲಿ ಭಾರತದ ಪರ ದಾಖಲಾದ ನಾಲ್ಕನೇ ವೇಗದ ಶತಕವೂ ಇದಾಗಿದೆ. ತಿರುವನಂತಪುರದಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲಿ 110 ರನ್ಗಳ ಇನ್ನಿಂಗ್ಸ್ ಆಡಿದ ಗಿಲ್ಗೆ ಇದು ಭಾರತೀಯ ನೆಲದಲ್ಲಿ ಸತತ ಮೂರನೇ ಏಕದಿನ ಶತಕವಾಗಿದೆ.
A 6⃣2⃣-ball CENTURY 🙇♂️
Shubman Gill in his element…once again ✌️
Updates ▶️ https://t.co/6XCYRtZLAi#TeamIndia | #INDvWI | @mflone_ | @ShubmanGill pic.twitter.com/wYTBLhlzTV
— BCCI (@BCCI) September 30, 2026
ಹಾಗೆಯೇ ಶುಭ್ಮನ್ ಗಿಲ್ ಅತಿ ಕಡಿಮೆ ಇನ್ನಿಂಗ್ಸ್‌ಗಳಲ್ಲಿ 11 ಏಕದಿನ ಶತಕಗಳನ್ನು ಬಾರಿಸಿದ ಭಾರತೀಯ ಬ್ಯಾಟರ್ಗಳ ಪಟ್ಟಿಯಲ್ಲಿ ವಿರಾಟ್ ಕೊಹ್ಲಿಯನ್ನು ಹಿಂದಿಕ್ಕಿದರು. ಇದಲ್ಲದೆ ಅತಿ ಕಡಿಮೆ ಏಕದಿನ ಇನ್ನಿಂಗ್ಸ್‌ಗಳಲ್ಲಿ 11 ಶತಕಗಳನ್ನು ಬಾರಿಸಿದ ಬ್ಯಾಟ್ಸ್ಮನ್ಗಳ ಪಟ್ಟಿಯಲ್ಲಿ ಬಾಬರ್ ಆಝಂ ಮತ್ತು ಇಂಗ್ಲೆಂಡ್‌ನ ಜಾನಿ ಬೈರ್‌ಸ್ಟೋವ್ ಅವರನ್ನು ಹಿಂದಿಕ್ಕಿದರು. ಶುಭ್ಮನ್ ಗಿಲ್ ಕೇವಲ 68 ನೇ ಏಕದಿನ ಇನ್ನಿಂಗ್ಸ್‌ಗಳಲ್ಲಿ ಈ ಸಾಧನೆ ಮಾಡಿದರು. ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಹಾಶಿಮ್ ಆಮ್ಲಾ ಕೇವಲ 64 ಇನ್ನಿಂಗ್ಸ್‌ಗಳಲ್ಲಿ 11 ಏಕದಿನ ಶತಕಗಳನ್ನು ಬಾರಿಸಿದ್ದರು. ಇನ್ನು ವಿರಾಟ್ ಕೊಹ್ಲಿ 82 ಇನ್ನಿಂಗ್ಸ್‌ಗಳಲ್ಲಿ ಈ ಸಾಧನೆ ಮಾಡಿದ್ದಾರೆ.
Published On - 8:26 pm, Wed, 30 September 26